ವ್ಯಾಟ್ಸ್ಆ್ಯಪ್ ಪ್ರೈವಸಿ ಪಾಲಿಸಿ ಒಪ್ಪಿಕೊಳ್ಳದಿದ್ದರೆ ಖಾತೆ ಡಿಲೀಟ್ ಆಗಲ್ಲ; ಮಹತ್ವದ ಬದಲಾವಣೆ!

By Suvarna News  |  First Published May 7, 2021, 7:48 PM IST

ವ್ಯಾಟ್ಸ್ಆ್ಯಪ್ ಪ್ರವೈಸಿ ಪಾಲಿಸಿ ಸ್ವೀಕರಿಸಲು ಮೇ.15ರ ಡೆಡ್‌ಲೈನ್ ನೀಡಲಾಗಿತ್ತು. ಈ ನೀತಿಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಇದೀಗ ಗಡುವು ಸಮೀಪಿಸುತ್ತಿದ್ದಂತೆ ವ್ಯಾಟ್ಸ್‌ಆ್ಯಪ್ ತನ್ನ ನೀತಿಯಲ್ಲಿ ಬದಲಾವಣೆ ಮಾಡಿದೆ. ಹೆಚ್ಚಿನ ವಿವರ ಇಲ್ಲಿದೆ.


ನವದೆಹಲಿ(ಮೇ.07): ವ್ಯಾಟ್ಸಾಪ್ ತನ್ನ ವಿವಾದಾತ್ಮಕ ಗೌಪ್ಯತೆ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಬಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ವ್ಯಾಟ್ಸ್ಆ್ಯಪ್ ತನ್ನ ಪ್ರೈವಸಿ ನೀತಿ ಕುರಿತು ಮೌನವಾಗಿದೆ. ಇಷ್ಟೇ ಅಲ್ಲ ಮೇ.15ರಂದು ವ್ಯಾಟ್ಸ್ಆ್ಯಪ್ ಪ್ರೈವಸಿ ಪಾಲಿಸಿ ಒಪ್ಪಿಕೊಳ್ಳದಿದ್ದರೆ ಖಾತೆ ಡಿಲೀಟ್ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿಲ್ಲ.

ಫೇಸ್ಬು​ಕ್‌​ ಜತೆ ಬಳ​ಕೆ​ದಾ​ರ​ರ ಮಾಹಿತಿ ಹಂಚಿಕೆ ಪರಿ​ಶೀ​ಲಿ​ಸಿ: ವಾಟ್ಸಾಪ್‌ಗೆ‌ ಕೇಂದ್ರ ಸೂಚ​ನೆ!

Tap to resize

Latest Videos

undefined

ವ್ಯಾಟ್ಸ್ಆ್ಯಪ್ ಪ್ರೈವಸಿ ಪಾಲಿಸಿಯಲ್ಲಿ ಖಾತೆದಾರರ ಡೇಟಾವನ್ನು ಮೂಲ ಕಂಪನಿ ಫೇಸ್‌ಬುಕ್ ಜೊತೆ ಹಂಚಿಕೊಳ್ಳಲು ಬಯಸಿತ್ತು. ಆದರೆ ಖಾತೆದಾರರ ಮಾಹಿತಿಯನ್ನು ಫೇಸ್‌ಬುಕ್ ಜೊತೆ ಹಂಚುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಇಷ್ಟೇ ಅಲ್ಲ ಹಲವರು ವ್ಯಾಟ್ಸ್ಆ್ಯಪ್‌ನಿಂದ ಹೊರಬಂದಿದ್ದರು. ಇದೀಗ ವ್ಯಾಟ್ಸ್ಆ್ಯಪ್ ತನ್ನ ನೀತಿಯಲ್ಲಿ ಬದಲಾವಣೆ ಮಾಡಿ, ಮೇ.15ರೊಳಗೆ ಪ್ರವೈಸಿ ಪಾಲಿಸಿ ಸ್ವೀಕರಿಸಿದಿದ್ದರೆ ಖಾತೆ ಡಿಲೀಟ್ ಆಗಲ್ಲ ಎಂದು ವ್ಯಾಟ್ಸ್ಆ್ಯಪ್ ಹೇಳಿದೆ.

ವಾಟ್ಸಾಪ್ ಹೊಸ ನಿಯಮ, ಒಪ್ಪದಿದ್ರೆ App ಬ್ಲಾಕ್!

ವ್ಯಾಟ್ಸ್‌ಆ್ಯಪ್ ದಿಢೀರ್ ತನ್ನ ನೀತಿ ಬದಲಾವಣೆಗೆ ಕಾರಣವನ್ನು ಹೇಳಿಲ್ಲ. ಆದರೆ ಹಲವು ವ್ಯಾಟ್ಸ್‌ಆ್ಯಪ್ ಖಾತೆದಾರರು ಈಗಾಗಲೇ ಪ್ರೈವಸಿ ಪಾಲಿಸಿಯನ್ನು ಸ್ವೀಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರೈವಸಿ ಪಾಲಿಸಿ ಒಪ್ಪಿಕೊಳ್ಳಲು ಅವಕಾಶವಿದೆ ಎಂದು ಫೇಸ್‌ಬುಕ್ ಹೇಳಿದೆ.

ಜನವರಿ ತಿಂಗಳಲ್ಲಿ ವ್ಯಾಟ್ಸ್‌ಆ್ಯಪ್ ತನ್ನ ಪ್ರೈವಸಿ ಪಾಲಿಸಿ ಕುರಿತು ಮಾಹಿತಿ ನೀಡಿತ್ತು. ಇನ್ನು ಫೆಬ್ರವರಿ 8ರೊಳಗೆ ಪ್ರೈವಸಿ ಪಾಲಿಸಿ ಒಪ್ಪಿಕೊಳ್ಳಲು ಅಂತಿಮ ದಿನಾಂಕ ಸೂಚಿಸಿತ್ತು. ಆದರೆ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾದ ಕಾರಣ ಈ ಗಡುವನ್ನು ಮೇ.15ಕ್ಕೆ ವಿಸ್ತರಿಸಿತ್ತು. ವೈಯುಕ್ತಿ ಕರಾರು ಒಪ್ಪಂದ ಒಪ್ಪಿಕೊಳ್ಳದಿದ್ದರೆ, ಖಾತೆ ಸಕ್ರಿಯವಾಗಿರಲಿದೆ ಎಂದಿದೆ. ಪ್ರೈವಸಿ ಪಾಲಿಸಿ ಮುಂದಿನ ಗಡುವಿನ ಕುರಿತು ಯಾವುದೇ ಮಾಹಿತಿ ನೀಡಿಲ್ಲ. 

click me!