Password in India; ಭಾರತೀಯರು ಸಾಮಾನ್ಯವಾಗಿ ಬಳಸುವ ಪಾಸ್‌ವರ್ಡ್ password,ಅಧ್ಯಯನ ವರದಿ!

Published : Nov 18, 2021, 09:41 PM ISTUpdated : Nov 18, 2021, 10:03 PM IST
Password in India; ಭಾರತೀಯರು ಸಾಮಾನ್ಯವಾಗಿ ಬಳಸುವ ಪಾಸ್‌ವರ್ಡ್ password,ಅಧ್ಯಯನ ವರದಿ!

ಸಾರಾಂಶ

ಇ ಮೇಲ್, ಫೇಸ್‌ಬುಕ್ ಸೇರಿ ಹಲವು ಆನ್‌ಲೈನ್ ಖಾತೆಗಳ ಪಾಸ್‌ವರ್ಡ್ ಸೀಕ್ರೆಟ್ Nordpass ನಡೆಸಿದ ಅಧ್ಯಯನ ವರದಿಯಲ್ಲಿ ಕುತೂಹಲ ಮಾಹಿತಿ ಬಹಿರಂಗ ಭಾರತೀಯರು ಸಾಮಾನ್ಯವಾಗಿ ಬಳಸುವ ಪಾಸ್‌ವರ್ಡ್ ಯಾವುದು? ನಿಮ್ಮ ಖಾತೆಗಳಿಗೂ ನೀವು ಇದೇ ಪಾಸ್‌ವರ್ಡ್ ಬಳಸಿದ್ದೀರಾ?

ನವದೆಹಲಿ(ನ.18): ಭಾರತ ಡಿಜಿಟಲೀಕರಣವಾಗಿದೆ(Digital India). ಈಗ ಎಲ್ಲವೂ ಆನ್‌ಲೈನ್(Online) ಮೂಲಕವೇ ನಡೆಯುತ್ತಿದೆ. ಬಹುತೇಕ ಎಲ್ಲಾ ವ್ಯವಾಹಾರ, ಬ್ಯಾಕಿಂಗ್, ಶಾಪಿಂಗ್, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳು ಆನ್‌ಲೈನ್ ಮೂಲಕ ಸೇವೆ ನೀಡುತ್ತಿದೆ. ಇತ್ತ ಸಾಮಾಜಿಕ ಮಾಧ್ಯಮ ಬಳಕೆ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ. ಹೀಗಾಗಿ ಭಾರತೀಯರು ಇ ಮೇಲ್‌, ಫೇಸ್‌ಬುಕ್‌ನಿಂದ ಹಿಡಿದು ಆನ್‌ಲೈನ್ ಶಾಪಿಂಗ್ ಸೇರಿ ಹಲವು ಆನ್‌ಲೈನ್ ಖಾತೆಗಳನ್ನು(Online Account) ಹೊಂದಿದ್ದಾರೆ. ಈ ಖಾತೆಗಳಿಗೆ ಭಾರತೀಯರು ಬಳಸುವ ಪಾಸ್‌ವರ್ಡ್ ಮತ್ತಷ್ಟು ರೋಚಕ. ಕಾರಣ ಸಾಮಾನ್ಯವಾಗಿ ಭಾರತೀಯರು ತಮ್ಮ ಖಾತೆಗಳಿಗೆ ಬಳಸುವ ಸೀಕ್ರೆಟ್ ಪಾಸ್‌ವರ್ಡ್ ಅದು password ಆಗಿದೆ. 

Nordpass ನಡೆಸಿದ ಅಧ್ಯಯನ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಪಾಸ್‌ವರ್ಡ್‌ಗೆ ಹಲವು ಭಾರತೀಯರು ಕೊಟ್ಟಿರುವುದು ಪಾಸ್‌ವರ್ಡ್(password) ಸ್ಪೆಲ್ಲಿಂಗ್.  ಇದು ಭಾರತೀಯರ ಕತೆಯಾಗಿದ್ದರೆ, ಭಾರತ ಹೊರತು ಪಡಿಸಿ ಇತರ 50 ರಾಷ್ಟ್ರಗಳ ಪೈಕಿ 43 ರಾಷ್ಟ್ರಗಳಲ್ಲಿ ಬಳಸುವ ಸಾಮಾನ್ಯ ಪಾಸ್‌ವರ್ಡ್ 123456. ಈ ರೀತಿಯ ಪಾಸ್‌ವರ್ಡ್ ಬಳಕೆಯಿಂದ ಸುಲಭವಾಗಿ ಹ್ಯಾಕ್ ಮಾಡಬಹುದು. ಇದಕ್ಕೆ ತಾಂತ್ರಿಕಜ್ಞಾನ ಬೇಕಿಲ್ಲ. ಕೇವಲ ಗೆಸ್ಸಿಂಗ್ ಸಾಕು ಎಂದು ಅಧ್ಯಯನ ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ. ಜಪಾನ್ ದೇಶದಲ್ಲೂ ಹೆಚ್ಚಿನವರು ತಮ್ಮ ಸೀಕ್ರೆಟ್ ಪಾಸ್‌ವರ್ಡ್‌ನ್ನು password ಎಂದೇ ನಮೂದಿಸಿದ್ದಾರೆ.

Cybercrime; ಬಿಟ್ ಕಾಯಿನ್ ನಡುವೆ ಟಿಬೇಟಿಯನ್ ವಂಚಕರ ಬಂಧನ

ಭಾರತದಲ್ಲಿ password ಜೊತೆಗೆ ಐ ಲವ್ ಯು(iloveyou), ಕೃಷ್ಣ(krishna), ಸಾಯಿರಾಮ್(sairam) ಹಾಗೂ ಓಮ್‌ ಸಾಯಿರಾ(omsaira)ಪಾಸ್‌ವರ್ಡ್ ಕೂಡ ಹೆಚ್ಚಿನವರು ಬಳಸುತ್ತಿದ್ದಾರೆ. ಇನ್ನು ಇಂಡಿಯಾ123(india123), ಭಾರತ್123(Bharat123)ಸೇರಿದಂತೆ ಇತರ ಕೆಲ ಪಾಸ್‌ವರ್ಡ್ ಕೂಡ ಹೆಚ್ಚು ಬಳಕೆಯಲ್ಲಿದೆ

ಡಿಜಿಟಲೀಕರಣದಿಂದ ಸದ್ಯ ಒಬ್ಬ ವ್ಯಕ್ತಿ ಸರಾಸರಿ ಪ್ರಕಾರ 100 ಆನ್‌ಲೈನ್ ಖಾತೆಗಳನ್ನು ಹೊಂದಿದ್ದಾನೆ. ಒಂದೆರೆಡು ಇ ಮೇಲ್, ಫೇಸ್‌ಬುಕ್, ಇ ಕಾಮರ್ಸ್ ಖಾತೆ, ಆಹಾರ ಡೆಲಿವರಿಗಾಗಿ ಖಾತೆ, ಹಣ ಪಾವತಿ ಖಾತೆ ಸೇರಿದಂತೆ 100 ಖಾತೆಗಳನ್ನು ಹೊಂದಿರುತ್ತಾರೆ. ಎಲ್ಲಾ ಖಾತೆಗಳಿಗೆ ಬೇರೆ ಬೇರೆ ಪಾಸ್‌ವರ್ಡ್ ನೀಡಲು ಅಸಾಧ್ಯ. ಹೀಗಾಗಿ ಬಹುತೇಕರು ಎಲ್ಲಾ ಖಾತೆಗೆ ಒಂದೇ ರೀತಿಯ ಪಾಸ್‌ವರ್ಡ್ ನೀಡುತ್ತಾರೆ. ಇದರಿಂದ ನೆನೆಪಿನಲ್ಲಿಡಲು ಸುಲಭವಾಗುತ್ತದೆ ಅನ್ನೋದು ಅಧ್ಯಯನ ವರದಿಯಿಂದ ಬಹಿರಂಗವಾಗಿದೆ.

ಮನೆ ಮಾಲೀಕರೇ ಎಚ್ಚರ: ಬಾಡಿಗೆದಾರರ ನೆಪದಲ್ಲಿ ಆನ್‌ಲೈನ್‌ನಲ್ಲಿ ಧೋಖಾ..!

ಭಾರತದಲ್ಲಿ ಇನ್ನೊಂದು ವರ್ಗ ತಮ್ಮ ಹೆಸರನ್ನೇ ಪಾಸ್‌ವರ್ಡ್ ಆಗಿ ಬಳಕೆ ಮಾಡುತ್ತಾರೆ. ತಮ್ಮ ಹೆಸರಿನ ಬಳಿಕ@123 ಪಾಸ್‌ವರ್ಡ್ ಬಳಕೆ ಮಾಡುವವರ ಸಂಖ್ಯೆಕೂಡ ಹೆಚ್ಚಾಗಿದೆ. ವಿಶ್ವದಲ್ಲಿ ಹೆಚ್ಚು ಬಳಕೆ ಮಾಡುತ್ತಿರುವ ಪಾಸ್‌ವರ್ಡ್ 123456, 12345678, 654321 ಸೇರಿದಂತೆ ನಂಬರ್ ಪಾಸ್‌ವರ್ಡ್‌ಗಳನ್ನೇ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಇನ್ನು ತಮ್ಮ ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆಯನ್ನು ಪಾಸ್‌ವರ್ಡ್ ಆಗಿ ಬಳಕೆ ಮಾಡುತ್ತಾರೆ. ಇವೆಲ್ಲವೂ ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂದು Nordpass ಹೇಳಿದೆ.

ಶಂಕರ್ ಬಿದರಿಗೆ ಸೈಬರ್ ವಂಚಕರ ಗಾಳ.. 89 ಸಾವಿರ ಕಳಕೊಂಡ ನಿವೃತ್ತ ಅಧಿಕಾರಿ

Nordpass ಸಂಸ್ಥೆಯ ಅಧ್ಯಯನ ವರದಿಯಲ್ಲಿ ಮತ್ತೊಂದು ಮಹತ್ವದ ಸೂಚನೆಯನ್ನು ನೀಡಿದ್ದಾರೆ.  ಈ ರೀತಿಯ ಪಾಸ್‌ವರ್ಡ್ ಬಳಕೆ ಮಾಡುತ್ತಿರುವವರು ತಕ್ಷಣವೇ ಬದಲಿಸಬೇಕು. ಯಾವತ್ತೂ ಪಾಸ್‌ಪಾಸ್‌ವರ್ಡ್ ಹೈಜಿನ್, ಲೆಟರ್, ನಂಬರ್ ಹಾಗೂ ಸ್ಪೆಷಲ್ ಕ್ಯಾರೆಕ್ಟರ್ ಹೊಂದಿರಬೇಕು. ಹೀಗಾಗಿ ಈ ಅಂಶಗಳ ಕುರಿತು ಗಮನಹರಿಸಬೇಕು. ಕಾರಣ ಸದ್ಯ ಸೈಬರ್ ಸೆಕ್ಯೂರಿಟಿ ಅತೀ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಅದೆಷ್ಟೇ ಎಚ್ಚರಿಕೆ, ಜಾಗೃತೆ ವಹಿಸಿದರೂ ಆನ್‌ಲೈನ್ ಕಳ್ಳತನ ಹೆಚ್ಚಾಗುತ್ತಿದೆ.. 

ಸೈಬರ್ ಸೆಕ್ಯೂರಿಟಿ ಕುರಿತು ಭಾರತ ತನ್ನ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸುತ್ತಿದೆ. ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ನಿಯಮ ಮತ್ತಷ್ಟು ಬಿಗಿಯಾಗುವುದರಲ್ಲಿ ಅನುಮಾನವಿಲ್ಲ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?