PUBG ಪ್ರತಿಸ್ಪರ್ಧಿ ಭಾರತದ FAU-G ಗೇಮಿಂಗ್ ಆ್ಯಪ್ ಲಾಂಚ್ ಡೇಟ್ ಬಹಿರಂಗ!

Published : Jan 03, 2021, 08:50 PM IST
PUBG ಪ್ರತಿಸ್ಪರ್ಧಿ ಭಾರತದ FAU-G ಗೇಮಿಂಗ್ ಆ್ಯಪ್ ಲಾಂಚ್ ಡೇಟ್ ಬಹಿರಂಗ!

ಸಾರಾಂಶ

ಚೀನಾ ಆ್ಯಪ್ ಬ್ಯಾನ್ ಬಳಿಕ ದೇಶದಲ್ಲಿ ಹಲವು ಸ್ವದೇಶಿ ಆ್ಯಪ್‌ಗಳು ಲಾಂಚ್ ಆಗಿದೆ. ಇನ್ನು ಪಬ್‌ಜಿ ಗೇಮಿಂಗ್ ಆ್ಯಪ್‌ಗೆ ಪ್ರತಿಸ್ಪರ್ಧಿಯಾಗಿ ಬೆಂಗಳೂರು ಮೂಲಕ ಸ್ಟಾರ್ಟ್ ಅಪ್ ಕಂಪನಿ ಹಾಗೂ ನಟ ಅಕ್ಷಯ್ ಕುಮಾರ್ ಜಂಟಿಯಾಗಿ ಫೌಜಿ ಗೇಮಿಂಗ್ ಆ್ಯಪ್ ಅಭಿವೃದ್ಧಿ ಮಾಡಿದೆ. ಇದೀಗ ಭಾರತದ ಫೌಜಿ ಗೇಮಿಂಗ್ ಆ್ಯಪ್ ಬಿಡುಗಡೆ ದಿನಾಂಕ ಬಹಿರಂಗಗೊಂಡಿದೆ.  

ಬೆಂಗಳೂರು(ಜ.03): ಜನಪ್ರಿಯ ಗೇಮಿಂಗ್ ಆ್ಯಪ್ ಪಬ್‌ಜಿಗೆ ಪ್ರತಿಸ್ಪರ್ಧಿಯಾಗಿ ಭಾರತ ಅಭಿವೃದ್ಧಿ ಪಡಿಸಿದ ಫೌಜಿ ಗೇಮಿಂಗ್ ಆ್ಯಪ್ ಬಿಡುಗಡೆ ಸಜ್ಜಾಗಿದೆ. ಲಡಾಖ್ ಗಡಿಯಲ್ಲಿ ಚೀನಾ ಅತಿಕ್ರಮಣದ ಬಳಿಕ ಭಾರತ ಚೀನಾ ಸೇರಿದಂತೆ ಹಲವು ಆ್ಯಪ್ ಬ್ಯಾನ್ ಮಾಡಿದೆ. ಹೀಗಾಗಿ ಭಾರತ ಸ್ವದೇಶಿ ಆ್ಯಪ್ ಬಳಕೆಗೆ ಮುಂದಾಗಿದೆ. ಹೀಗಾಗಿ ಪಬ್‌ಜಿ ಆ್ಯಪ್ ಪ್ರತಿಸ್ಪರ್ಧಿಯಾಗಿರುವ ಫೌಜಿ ಆ್ಯಪ್ ಜನವರಿ 26ರ ಗಣರಾಜೋತ್ಸವ ದಿನ ಬಿಡುಗಡೆಯಾಗಲಿದೆ.

ಗಲ್ವಾನ್ ಹೋರಾಟದ ಎಪಿಸೋಡ್ ಒಳಗೊಂಡ FAU-G ಗೇಮ್ ಟೀಸರ್ ಬಿಡುಗಡೆ!

ಬೆಂಗಳೂರು ಮೂಲದ ಎನ್‌ಕೋರ್ ಗೇಮಿಂಗ್ ಕಂಪನಿ ನೂತನ ಆ್ಯಪ್ ಅಭಿವೃದ್ಧಿ ಪಡಿಸಿದೆ. ಇದರಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಬಂಡವಾಳ ಹೂಡಿಕೆ ಮಾಡಿದ್ದಾರೆ. ಅಕ್ಷಯ್ ಬ್ರಾಂಡ್ ಅಂಬಾಸಿಡರ್ ಆಗಿರುವ ಫೌಜಿ ಆ್ಯಪ್ ಈಗಾಗಲೇ ಟೀಸರ್ ಬಿಡುಗಡೆ ಮಾಡಿ ಸದ್ದು ಮಾಡಿತ್ತು. ಲಡಾಖ್‌ನ ಗಲ್ವಾಣ್ ಕಣಿವೆಯಲ್ಲಿನ ಘರ್ಷಣೆ ಎಪಿಸೋಡ್ ಈ ಆ್ಯಪ್‌ನಲ್ಲಿದೆ.

ಗೇಮ್ ರಿಜಿಸ್ಟ್ರೇಶನ್ ಈಗಾಗಲೇ ಆರಂಭಗೊಂಡಿದೆ. 24 ಗಂಟೆಯಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಜನವರಿ 26ರಿಂದ ಗೂಗಲ್ ಪ್ಲೇ ಸ್ಟೋರ್, ಆ್ಯಪಲ್ ಸ್ಟೋರ್‌ನಲ್ಲಿ ಲಭ್ಯವಾಗಲಿದೆ. 
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಬೇಕಾ? ವಿಶ್ವವಿದ್ಯಾಲಯದಲ್ಲಿ ಡಿಗ್ರಿ ಕೋರ್ಸ್ ಶುರು
Google Pixel Fold: ಭಾರತಕ್ಕೆ ಕಾಲಿಟ್ಟ ಗೂಗಲ್ ಫೋಲ್ಡಬಲ್ ಫೋನ್! ಹೊಸ ಫೀಚರ್ಸ್ ಏನು? ಬೆಲೆ ಎಷ್ಟು? ಇಲ್ಲಿದೆ ಫುಲ್ ಡಿಟೇಲ್ಸ್