Viನಿಂದ 1,499 ಪ್ರೀಪೇಡ್ ಪ್ಲ್ಯಾನ್‌ ಮೇಲೆ 50 ಜಿಬಿ ಎಕ್ಸಟ್ರಾ ಡೇಟಾ?

Suvarna News   | Asianet News
Published : Dec 30, 2020, 04:02 PM IST
Viನಿಂದ 1,499 ಪ್ರೀಪೇಡ್ ಪ್ಲ್ಯಾನ್‌ ಮೇಲೆ 50 ಜಿಬಿ ಎಕ್ಸಟ್ರಾ ಡೇಟಾ?

ಸಾರಾಂಶ

ವೋಡಾಫೋನ್-ಐಡಿಯಾ(ವಿಐ) ಕಂಪನಿಯು 1,499 ರೂ. ಪ್ರೀಪೇಡ್ ಪ್ಲ್ಯಾನ್ ಖರೀದಿಸಿದ ಚಂದಾದಾರರಿಗೆ ಎಕ್ಸಟ್ರಾ 50 ಜಿಬಿ ಡೇಟಾ ಒದಗಿಸುತ್ತಿದೆ ಎಂದು ಹಲವು ವೆಬ್‌ಸೈಟ್‌ಗಳು ವರದಿ ಮಾಡಿವೆ. ಆದರೆ, ಈ ಆಫರ್ ಕೆಲವು ಸಮಯದವರಿಗೆ ಮಾತ್ರವೇ ಇದೆಯಾ, ಇತ್ತಾ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಂಪನಿಯೂ ಕೂಡ ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.  

ತನ್ನ ಪ್ರತಿಸ್ಪರ್ಧಿ ಕಂಪನಿಗಳಾದ ಜಿಯೋ  ಮತ್ತು ಏರ್‌ಟೆಲ್‌ನಿಂದ ತೀವ್ರ ಸ್ಪರ್ಧೆ ಎದುರಿಸುತ್ತಿರುವ ವಿಐ(Vi) ಅಂದರೆ, ವೋಡಾಫೋನ್ ಮತ್ತು ಐಡಿಯಾ ಟೆಲಿಕಾಂ ಕಂಪನಿ ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಮತ್ತು ಹೊಸ ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಪ್ಲ್ಯಾನ್‌ಗಳನ್ನು ಘೋಷಣೆ ಮಾಡುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ರೂ.399 ಡಿಜಿಟಲ್ ಎಕ್ಸ್‌ಕ್ಲೂಸಿವ್ ಪ್ಲಾನ್ ಆರಂಭಿಸಿತ್ತು.

WhatsApp Stickers: ಹೊಸ ವರ್ಷಕ್ಕೆ ವಾಟ್ಸಾಪ್ ಸ್ಟಿಕರ್ಸ್ ಕಳುಹಿಸುವುದು ಹೇಗೆ?

ಈಗ ಮತ್ತೆ ವಿಐ ಕೆಲವು ಚಂದಾದಾರಿಗೆ ಹೆಚ್ಚುವರಿ ಡೇಟಾ ಪೂರೈಕೆಯನ್ನು ಮಾಡುತ್ತಿದೆ ಎಂದು ಗ್ಯಾಜೆಟ್ಸ್ ನೌ ವರದಿ ಮಾಡಿದೆ. ಈ ವರದಿಯ ಪ್ರಕಾರ,  1,499  ರೂ. ರಿಚಾರ್ಜ್ ಪ್ಲ್ಯಾನ್‌ ಖರೀದಿಸಿದ, ಪ್ರೀಪೇಡ್ ಚಂದಾದಾರರಿಗೆ ಎಕ್ಟಟ್ರಾ 50 ಜಿಬಿ ಡೇಟಾ ಒದಗಿಸುತ್ತಿದೆ. ಹೀಗಿದ್ದಾಗ್ಯೂ, 24 ಜಿಬಿಗೆ ಬದಲಾಗಿ 74 ಜಿಬಿ ಡೇಟಾವನ್ನು ಒದಗಿಸುತ್ತಿರುವ ವಿಶೇಷ ಕೊಡುಗೆಯ ಬಗ್ಗೆ ತಿಳಿಸಲು ವಿಐ ಆಯ್ದ ಬಳಕೆದಾರರಿಗೆ ಎಸ್‌ಎಂಎಸ್ ಕಳುಹಿಸುತ್ತಿದೆ. ಈ ಯೋಜನೆಯು 3,600 ಎಸ್‌ಎಂಎಸ್, ಅನಿಯಮಿತ ಕರೆಗಳು ಮತ್ತು ವಿಐ ಮೂವೀಸ್ ಆಫರ್ ಒದಗಿಸುತ್ತಿದೆ.

ಈ ಬಗ್ಗೆ ಒನ್ಲೀ ಟೆಕ್ ಮೊದಲು ವರದಿ ಮಾಡಿತ್ತು. ಆ ಬಳಿಕ ಬಹುತೇಕ ಜಾಲತಾಣಗಳು ಈ ಬಗ್ಗೆ ಮಾಹಿತಿ ನೀಡಿವೆ. ಈ ಆಫರ್ ಅನ್ನು ವಿಐ ಆಪ್ ಮೂಲಕವೂ ಒದಗಿಸಲಾಗುತ್ತಿದೆ.  ಆದರೆ, ಕಂಪನಿ 50 ಜಿಬಿ ಎಕ್ಸಟ್ರಾ ಡೇಟಾ ಒದಗಿಸುವುದಕ್ಕೆ ತನ್ನ ಗ್ರಾಹಕರನ್ನು ಹೇಗೆ ಸೆಳೆಯುತ್ತಿದೆ ಮತ್ತು ಈ ಆಫರ್ ಇಡೀ ದೇಶಾದ್ಯಂತ ಇದೆಯೇ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹಾಗಾಗಿ ನೀವು ಈ ಬಗ್ಗೆ ವಿಐ ಅಧಿಕೃತ ವೆಬ್‌ಸೈಟ್‌ಲ್ಲಿ ಈ ಬಗ್ಗೆ ಪರೀಕ್ಷಿಸಿಕೊಳ್ಳಬಹುದು ಮತ್ತು ಈ ವಿಶೇಷ ಆಫರ್‌ಗೆ ನೀವು ಅರ್ಹರೇ ಎಂಬುದನ್ನು ನಿಮ್ಮ ಫೋನ್ ‌ನಂಬರ್ ದಾಖಲಿಸುವ ಮೂಲಕ ತಿಳಿದುಕೊಳ್ಳಬಹುದು.

3,99 ರೂ. ಡಿಜಿಟಲ್ ಎಕ್ಸ್‌ಕ್ಲೂಸಿವ್ ಪ್ಲ್ಯಾನ್
ವಿಐ(ವೋಡಾಫೋನ್ ಐಡಿಯಾ) ಟೆಲಿಕಾಂ ಕಂಪನಿ ಗ್ರಾಹಕರನ್ನು ಸೆಳೆಯಲು ಹೊಸ ಪ್ಲ್ಯಾನ್ ಘೋಷಿಸಿದೆ. ವೆಬ್‌ಸೈಟ್ ಮೂಲಕ ಸಿಮ್ ಖರೀದಿಗೆ ಈ ಫ್ಲ್ಯಾನ್ ಅನ್ವಯವಾಗಲಿದೆ. 399 ರೂ. ಪ್ಲ್ಯಾನ್ ಪ್ರೀಪೇಡ್ ಮತ್ತು ಪೋಸ್ಟ್‌ಪೇಡ್ ಆರ್ಡರ್‌ಗಳಿಗೂ ಅನ್ವಯವಾಗಲಿದೆ.

ಈ ವರ್ಷ 1 ಲಕ್ಷ ಕೋಟಿ ನಿಮಿಷ ವಿಡಿಯೋ ಕಾಲ್‌ಗಳನ್ನು ಕಂಡ ಗೂಗಲ್!

ಈ ಬಗ್ಗೆ ಅನೇಕ ವೆಬ್‌ಸೈಟ್‌ಗಳ ವರದಿ ಮಾಡಿದ್ದು, ಹೊಸ ಪ್ಲ್ಯಾನ್ ಪ್ರಕಾರ ತನ್ನ ವಿಐ ವೆಬ್‌ಸೈಟ್ ಮೂಲಕ ಯಾರು ಹೊಸ ಸಿಮ್‌ ಖರೀದಿಸುತ್ತಾರೆ ಅವರಿಗೆ ಈ 399 ರೂ. ಅನ್ವಯವಾಗುತ್ತದೆ. ಈ ಪ್ಲ್ಯಾನ್ ಪೋಸ್ಟ್‌ಪೇಡ್ ಮತ್ತು ಪ್ರೀಪೇಡ್ ಎರಡಕ್ಕೂ ಅನ್ವಯವಾಗುತ್ತದೆ. ಪ್ರೀಪೇಡ್ ಪ್ಲ್ಯಾನ್‌ನಲ್ಲಿ ನಿಮಗೆ ಡೇಟಾ ಜೊತೆಗೆ ಎಸ್ಎಂಎಸ್ ‌ಸೇವೆಯೂ ದೊರೆಯಲಿದ್ದು, 297 ರೂ. ಪ್ಲ್ಯಾನ್‌ನಲ್ಲಿ ಇದೆಲ್ಲ ದೊರೆಯುತ್ತದೆ ಮತ್ತು ಹೆಚ್ಚುವರಿಯಾಗಿ ವಿಐ ಮೂವೀಸ್ ಮತ್ತು ಟಿವಿ ಅಕ್ಸೆಸ್ ಬೆನೆಫಿಟ್ ಕೂಡ ಇದೆ. ಪೋಸ್ಟ್‌ಪೇಡ್ 399 ರೂ. ಡಿಜಿಟಲ್ ಎಕ್ಸ್‌ಕ್ಲೂಸಿವ್ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ ಎಕ್ಸಟ್ರಾ 150 ಜಿಬಿ ಡೇಟಾ ಜೊತೆಗೆ ಎಸ್‌ಎಂಎಸ್ ಬೆನೆಫಿಟ್ಸ್ ಸಿಗುತ್ತದೆ.

ವೆಬ್‌ಸೈಟ್ ಮೂಲಕ ಗ್ರಾಹಕರು ಸಿಮ್ ಖರೀದಿಸುವಾಗ 399 ರೂ. ಪ್ಲ್ಯಾನ್ ಆಯ್ಕೆ ಮಾಡಿಕೊಳ್ಳಬಹುದು. ಪ್ರೀಪೇಡ್ 399 ರೂ. ಪ್ಲ್ಯಾನ್‌ ಆಯ್ಕೆ ಮಾಡಿಕೊಂಡರೆ ಗ್ರಾಹಕರಿಗೆ ನಿತ್ಯ 1.5ಜಿಬಿ ಡೇಟಾ ಮತ್ತು ದಿನಕ್ಕೆ 100 ಎಸ್ಎಂಎಸ್ ಉಚಿತವಾಗಿ ಸಿಗಲಿವೆ. ಇದು 56 ದಿನಗಳವರೆಗೂ ವ್ಯಾಲಿಡಿಟಿ ಹೊಂದಿದ್ದು ವಿಐ ಮೂವೀಸ್ ಮತ್ತು ಟಿವಿ ಅಕ್ಸೆಸ್ ಕೂಡ ಪಡೆದುಕೊಳ್ಳಬಹುದು.

ಪೋಸ್ಟ್‌ಪೇಡ್ 399 ರೂ. ಡಿಜಿಟಲ್ ಎಕ್ಸ್‌ಕ್ಲೂಸಿವ್ ಪ್ಲ್ಯಾನ್‌ನಲ್ಲಿ ಗ್ರಾಹಕರು ತಿಂಗಳಿಗೆ 40 ಜಿಬಿ ಡೇಟಾ ಮತ್ತು 100 ಎಸ್ಎಂಎಸ್ ಉಚಿತವಾಗಿ ಪಡೆದುಕೊಳ್ಳಬಹುದು. ಇದಕ್ಕೆ ಹೆಚ್ಚುವರಿಯಾಗಿ 6 ತಿಂಗಳಿಗೆ 150 ಜಿಬಿ ಡೇಟಾ ಕೂಡ ಲಭ್ಯವಿದೆ. ಇಷ್ಟು ಮಾತ್ರವಲ್ಲದೇ ವಿಐ ಮೂವೀಸ್ ಮತ್ತು ಟಿವಿ ಸಬ್ಸಕ್ರಿಪ್ಷನ್ ಪಡೆದುಕೊಳ್ಳಬಹುದು. ಇತ್ತೀಚೆಗಷ್ಟೇ ವಿಐ ವೈ ಫೈ ಕಾಲಿಂಗ್ ಸೇವೆಯನ್ನು ಭಾರತದ ಕೆಲವು ನಿರ್ದಿಷ್ಟ ವೃತ್ತಗಳಲ್ಲಿ ಆರಂಭಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ವೃತ್ತಗಳ(ಸರ್ಕಲ್) ಆಯ್ಕೆ ಸಂಬಂಧ ಕಂಪನಿ ಹೊಸ 59 ಮತ್ತು 65 ರೂ. ಪ್ರೀಪೇಡ್ ರಿಚಾರ್ಜ್ ಪ್ಲ್ಯಾನ್‌ಗಳನ್ನೂ ಜಾರಿಗೆ ತಂದಿದೆ ಎನ್ನಲಾಗಿದೆ.

Realme Watch S ಮತ್ತು Watch S Pro ಬಿಡುಗಡೆ, ಮಾರಾಟ ಶುರು

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್