ಯಾವುದೇ ಹಬ್ಬ, ವಿಶೇಷ ದಿನಗಳ ಬಂದಾಗ ನಿಮ್ಮ ಸ್ನೇಹಿತರು, ಕುಟಂಬದ ಸದಸ್ಯರು ನಿಮಗೆ ವಾಟ್ಸಾಪ್‌ನಲ್ಲಿ ವಿಶಿಷ್ಟ ಸ್ಟಿಕರ್‌ಗಳನ್ನು ಕಳುಹಿಸಿ ಶುಭಾಶಯ ಕೋರುತ್ತಾರೆ. ಆದರೆ, ಆ ಸ್ಟಿಕರ್‌ಗಳನ್ನು ಪಡೆಯುತ್ತಾರೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ನಾವು ನಿಮಗೆ ವಾಟ್ಸಾಪ್ ಸ್ಟಿಕರ್‌ಗಳನ್ನು ಹೇಗೆ ಕಳುಹಿಸಬೇಕು ಎಂಬುದನ್ನು ಇಲ್ಲಿ ತಿಳಿಸಿದ್ದೇವೆ.
ಇದೀಗ 2020 ವರ್ಷ ಮುಕ್ತಾಯ ಹಂತಕ್ಕೆಬಂದಿದೆ. ಇನ್ನೆರಡು ದಿನಗಳಲ್ಲಿ ಹೊಸ ವರ್ಷ 2021ಕ್ಕೆ ಸ್ವಾಗತ ಕೋರಲಿದ್ದೇವೆ. 2020 ವರ್ಷವನ್ನು ಬಹುಶಃ ಯಾರೂ ತಮ್ಮ ಜೀವಿತಾವಧಿಯವರೆಗೂ ಮರೆಯಲಾರರು. ಕೋವಿಡ್ -19 ಸೋಂಕಿನಿಂದಾಗಿ 2020 ಬಹಳಷ್ಟು ದುಃಖದಾಯಕ ವರ್ಷವಾಗಿ ಇತಿಹಾಸದಲ್ಲಿ ದಾಖಲಾಗಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ಕೋವಿಡ್ -19 ಸೋಂಕು ಹರಡುವುದನ್ನು ತಪ್ಪಿಸಲು ಹೇರಲಾದ ಲಾಕ್‌ಡೌನ್‌ನಿಂದ ಸಾಕಷ್ಟು ನಷ್ಟವೂ ಆಯಿತು. ಆರ್ಥಿಕವಾಗಿ ತುಂಬ ಕುಸಿತ ಕಂಡಿದ್ದರಿಂದ ಬಹಳಷ್ಟು ಜನರು ತೊಂದರೆಗೆ ಸಿಲುಕಿದರೆ. ಹಾಗಾಗಿ, 2020 ವರ್ಷ ಜಗತ್ತಿನ ಬಹಳಷ್ಟು ಮುಂದಿಗೆ ದುಸ್ವಪ್ನವಾಗಿ ಕಾಡಲಿದೆ.
undefined
ಈ ವರ್ಷ 1 ಲಕ್ಷ ಕೋಟಿ ನಿಮಿಷ ವಿಡಿಯೋ ಕಾಲ್‌ಗಳನ್ನು ಕಂಡ ಗೂಗಲ್!
ಕೋವಿಡ್-19 ವೈರಸ್‌ಗೆ ಇನ್ನೂ ಪರಿಣಾಮಕಾರಿಯಾದ ಲಸಿಕೆಗಳು ಸಿಕ್ಕಿಲ್ಲ. ಈಗಷ್ಟೇ ಕೆಲವು ಲಸಿಕೆಗಳನ್ನು ಪ್ರಯೋಗಾತ್ಮಕವಾಗಿ ನೀಡಲಾಗುತ್ತಿದೆಯಾದರೂ ಶೇ.100ರಷ್ಟು ಫಲಿತಾಂಶದ ಬಗ್ಗೆ ಯಾರಿಗೂ ನಂಬಿಕೆ ಇಲ್ಲ. ಹಾಗಾಗಿ, 2020ರಲ್ಲಿ ಆರಂಭವಾದ ಕೋವಿಡ್ ಸೋಂಕಿನ ಸಂಕಟ 2021ರಲ್ಲೂ ಮುಂದುವರಿಯುವ ಸಾಧ್ಯತೆಗಳಿವೆ. ಆದರೂ ನಾವು ಮುಂಬರುವ ವರ್ಷ ಎಲ್ಲ ಸಂಕಟಗಳನ್ನು ದೂರ ಮಾಡಲಿ ಎಂಬ ಆಶಯದಿಂದಲೇ ಹೊಸ ವರ್ಷವನ್ನು ಬರಮಾಡಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ವಾಟ್ಸಾಪ್ ಸ್ಟಿಕರ್‌ಗಳು ನಿಮಗೆ ಹೊಸತನದ ಅನುಭವವನ್ನು ನೀಡಲಿವೆ. ಹೊಸ ವರ್ಷದ ಸ್ವಾಗತಕ್ಕೆ ನೀವು ಅನನ್ಯವಾದ, ಆಪ್ತವಾದ ವಾಟ್ಸಾಪ್ ಸ್ಟಿಕರ್‌ಗಳನ್ನು ನಿಮ್ಮ ಬಂಧು ಬಾಂಧವರು, ಸ್ನೇಹಿತರು, ಕುಟುಂಬದ ಸದಸ್ಯರಿಗೆ ಕಳುಹಿಸಿ, ಹೊಸ ವರ್ಷದ ಶುಭಾಶಯ ಕೋರಬಹುದು.
2020 ಮುಕ್ತಾಯವಾಗುತ್ತಿರುವ ಹಿನ್ನಲೆಯಲ್ಲಿ ಬಹಳಷ್ಟು ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗೆ ಹೊಸ ವರ್ಷದ ಶುಭಾಶಯವನ್ನು ಯಾವ ರೀತಿ ಕೋರಬೇಕೆಂದು ಯೋಚಿಸುತ್ತಿರುತ್ತಾರೆ. ಇದಕ್ಕೆ ವಾಟ್ಸಾಪ್ ಸ್ಟಿಕರ್‌ಗಳು ನಿಮ್ಮ ದಾರಿಯನ್ನು ಇನ್ನಷ್ಟು ಸುಲಭಗೊಳಿಸಬಹುದು. ಹಾಗಾದರೆ, ವಾಟ್ಸಾಪ್ ಸ್ಟಿಕರ್‌ಗಳನ್ನು ಹೇಗೆ ಕಳುಹಿಸಬೇಕು ಎಂಬುದನ್ನು ನೋಡೋಣ ಬನ್ನಿ.
Realme Watch S ಮತ್ತು Watch S Pro ಬಿಡುಗಡೆ, ಮಾರಾಟ ಶುರು
ವಾಟ್ಸಾಪ್ ನ್ಯೂಇಯರ್ ಸ್ಟಿಕರ್ ಹೀಗೆ ಡೌನ್‌ಲೋಡ್ ಮಾಡಿಕೊಳ್ಳಿ
ಮೊದಲ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಲೆಟೆಸ್ಟ್ ವರ್ಷನ್ ಡೌನ್‌ಲೋಡ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಮೊದಲಿಗೆ ಗೂಗಲ್ ಪ್ಲೇ ತೆಗೆಯಿರಿ. ನ್ಯೂಇಯರ್ ವಾಟ್ಸಾಪ್ ಸ್ಟಿಕರ್ ಎಂದು ಶೋಧಿಸಿ. ಬಳಿಕ ನಿಮ್ಮ ಇಚ್ಛೆಯ ಯಾವುದೇ ಸ್ಟಿಕರ್ ಆಯ್ಕೆ ಮಾಡಿಕೊಳ್ಳಿ ಮತ್ತು ಇನ್ಸ್‌ಟಾಲ್ ಆಗೋವರೆಗೆ ಕಾಯಿರಿ. ಬಳಿಕ ಡೌನ್‌ಲೋಡ್ ಆದ ಸ್ಟಿಕರ್ ಆಪ್ ತೆರೆಯಿರಿ. ಆಡ್ /+ ಬಟನ್ ಮೇಲೆ ಟ್ಯಾಪ್ ಮಾಡಿ. ಆಗ ಅದು ಆಡ್ ಆಗುತ್ತದೆ ಮತ್ತು ಯಾವುದೇ ವಾಟ್ಸಾಪ್ ಚಾಟ್ ವಿಂಡೋಗೆ ಸೇರಿಸಬಹುದು. ಜೊತೆಗೆ ಪಠ್ಯ ಬಾಕ್ಸ್ ಜಾಗದಲ್ಲಿ ಎಮೋಜಿಗಾಗಿ ಟ್ಯಾಪ್ ಮಾಡಿ.
ಅದೇ ಜಾಗದ ಕೆಳಗಡೆ ಇರುವ ಸ್ಟಿಕರ್ಸ್ ಐಕಾನ್ ಮೇಲೆ ಟ್ಯಾಪ್ ಮಾಡಿ. ಆಗ ಆಗಷ್ಟೇ ಆಡ್ ಮಾಡಿದ ಸ್ಟಿಕರ್ ಪ್ಯಾಕ್ ಕಾಣಿಸಿಕೊಳ್ಳುತ್ತದೆ. ನಿಮಗೆ ಬೇಕಿರುವ ಸ್ಟಿಕರ್ ಟ್ಯಾ ಮಾಡಿ ನಿಮಗೆ ಬೇಕಾದವರಿಗೂ ಅದನ್ನು ಸೆಂಡ್ ಮಾಡಿ.
ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ
ವಾಟ್ಸಾಪ್ ಸ್ಟಿಕರ್ಸ್ ಫೀಚರ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಲಭ್ಯವಿದೆ ಎಂಬುದನ್ನು ಬಳಕೆದಾರರು ಗಮನಿಸಬೇಕು. ಐಒಎಸ್ ಬಳಕೆದಾರರು, ಮತ್ತೊಂದು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಸ್ಟಿಕರ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು, ವಾಯಾ ವಾಟ್ಸಾಪ್ ಮೂಲಕವೇ ಐಒಎಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಬಹುದು ಮತ್ತು ಈ ಸ್ಟಿಕರ್‌ಗಳನ್ನು ಫೇವರೀಟಿಸ್ ಆಗಿ ಸೇವ್ ಮಾಡಿಟ್ಟುಕೊಳ್ಳಬಹುದು.
ಯಾವುದೇ ವಿಶೇಷ ದಿನ, ಹಬ್ಬ ಇದ್ದಾಗ ಈ ರೀತಿಯ ಸ್ಟಿಕರ್‌ಗಳನ್ನು ನಿಮ್ಮ ಸ್ನೇಹಿತರು, ಕುಟುಂಬದ ಸದಸ್ಯರಿಗೆ ಕಳುಹಿಸುವುದರಿಂದ ಸಂತೋಷದ ವಾತಾವರಣ ಇಮ್ಮಡಿಗೊಳ್ಳುತ್ತದೆ. ಹಾಗಾಗಿ, ಹೊಸ ವರ್ಷಕ್ಕೆ ಹೊಸ ತೆರನಾದ ವಾಟ್ಸಾಪ್ ಸ್ಟಿಕರ್‌ಗಳನ್ನು ಕಹಿಸಿ, ಶುಭಾಶಯ ಕೋರಿ.
8 ತಿಂಗಳ ಬಳಿಕ ಪ್ಲೇ ಸ್ಟೋರ್‌ನಲ್ಲಿ WHO Covid-19 Updates ಆ್ಯಪ್!