ಯೂಸರ್‌ ಫ್ರೇಂಡ್ಲಿ ಮಾಡುವ ಟೆಲಿಗ್ರಾಮ್‌ನ ಈ ನಾಲ್ಕು ಫೀಚರ್ಸ್!

By Suvarna News  |  First Published Dec 12, 2022, 10:26 AM IST

*ವಾಟ್ಸಾಪ್ ಬಳಿಕ ಟೆಲಿಗ್ರಾಮ್ ಅತಿ ಹೆಚ್ಚು ಜನರು ಬಳಸುತ್ತಿರುವ ಮೆಸೇಜಿಂಗ್ ಆಪ್ ಆಗಿದೆ
*ಬಳಕೆದಾರರ ಬಳಕೆಯ ಅನುಭವವನ್ನು ಹೆಚ್ಚಿಸುವ ಹೊಸ  ಫೀಚರ್ಸ್ ಬಿಡುಗಡೆ ಮಾಡಿದೆ ಆಪ್
*ಸಿಮ್ ಕಾರ್ಡ್‌ ಇಲ್ಲದೇ ಸೈನ್‌ಅಪ್ ಮಾಡುವುದು ಸೇರಿದಂತೆ ಇನ್ನಿತರ ಫೀಚರ್ಸ್ ಚೆನ್ನಾಗಿವೆ
 


ವಾಟ್ಸಾಪ್‌ಗೆ (Whats App) ಪರ್ಯಾಯ ಎನಿಸಿಕೊಂಡಿರುವ ಟೆಲಿಗ್ರಾಮ್‌ಗೆ (Telegram) ಹೊಸ ಫೀಚರ್ಸ್ ಅಪ್‌ಡೇಟ್ (Features Update) ಪಡೆದುಕೊಂಡಿದೆ. ಈ ಹೊಸ ಅಪ್‌ಡೇಟ್‌ಗಳು ಬಳಕೆದಾರರಿಗೆ ಹೆಚ್ಚು ನೆರವು ಒದಗಿಸುತ್ತವೆ. ಬಳಕೆದಾರರು ಈಗ ಸಿಮ್ ಕಾರ್ಡ್ ಇಲ್ಲದೆಯೇ ತಮ್ಮ ಸ್ವಂತ ಟೆಲಿಗ್ರಾಮ್ ಖಾತೆಯನ್ನು ಹೊಂದಲು ಸಾಧ್ಯವಾಗುತ್ತದೆ. ಈ ಹಿಂದೆ ರೀತಿಯ ಉಪಯೋಗ ಬಳಕೆದರಾರರಿಗೆ ಇರಲೇ ಇಲ್ಲ. ಬಳಕೆಯ ವಿಶಿಷ್ಟ ಅನುಭವ ಇಷ್ಟಕ್ಕೆ ನಿಲ್ಲುವುದಿಲ್ಲ. ಸಂಭಾಷಣೆಯ ಯಾವುದೇ ಕುರುಹುಗಳನ್ನು ಉಳಿಸದೆ ಎಲ್ಲಾ ಚಾಟ್‌ಗಳನ್ನು ಸ್ವಯಂಚಾಲಿತವಾಗಿ ಅಳಿಸಲು ಬಳಕೆದಾರರಿಗೆ ಇನ್ನು ಸಾಧ್ಯವಾಗಲಿದೆ. ಅಪ್ಲಿಕೇಶನ್ ಅನ್ನು ಹೆಚ್ಚು ಬಳಕೆದಾರ ಸ್ನೇಹಿಯನ್ನಾಗಿ ಮಾಡಲು ನವೀಕರಣಗೊಳಿಸಲಾದ ಟೆಲಿಗ್ರಾಮ್‌ನ ಟಾಪ್ 4 ಫೀಚರ್ಸ್ ಬಗ್ಗೆ ಇಲ್ಲಿದೆ ಮಾಹಿತಿ....

SIM ಕಾರ್ಡ್ ಇಲ್ಲದೆ ಸೈನ್ ಅಪ್ ಮಾಡಿ
ಈ ಹಿಂದೆ ಟೆಲಿಗ್ರಾಮ್ ಬಳಕೆದಾರರು ತಮ್ಮ ಫೋನ್ ಸಂಖ್ಯೆಯನ್ನು ಯಾರು ನೋಡಬಹುದು ಎಂಬುದನ್ನು ಗೌಪ್ಯತೆ ಮತ್ತು ಸೆಟ್ಟಿಂಗ್‌ಗಳ ವಿಭಾಗಕ್ಕೆ ಹೋಗಿ ಮತ್ತು ಅಗತ್ಯ ಮಾರ್ಪಾಡುಗಳನ್ನು ಮಾಡುವ ಮೂಲಕ ಮಾರ್ಪಡಿಸಬಹುದಾಗಿತ್ತು. ಈಗ ಕಂಪನಿಯು ಈ ವಿಷಯದಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ.  ಸಿಮ್ ಕಾರ್ಡ್ ಇಲ್ಲದೆಯೂ ಪ್ಲಾಟ್‌ಫಾರ್ಮ್‌ಗೆ ಸೈನ್ ಅಪ್ ಮಾಡಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ. ಟೆಲಿಗ್ರಾಮ್‌ಗೆ ಸೈನ್ ಇನ್ ಮಾಡಲು ಬಳಕೆದಾರರು ಬಳಸಬಹುದಾದ ಬ್ಲಾಕ್‌ಚೈನ್-ಚಾಲಿತ ಅನಾಮಧೇಯ ಸಂಖ್ಯೆಗಳನ್ನು ಫ್ರಾಗ್‌ಮೆಂಟ್ ಪ್ಲಾಟ್‌ಫಾರ್ಮ್ ನೀಡುತ್ತದೆ.

ಹೊಸ ವರ್ಷದಲ್ಲಿ ಭಾರತಕ್ಕೆ ಎಂಟ್ರಿ ಕೊಡಲಿದೆ ರೆಡ್‌ಮಿ ನೋಟ್ 12 ಸಿರೀಸ್ ಫೋನ್!

Tap to resize

Latest Videos

undefined

QR ಕೋಡ್‌ ಅಕ್ಸೆಸ್
ಈ ಹಿಂದೆ ಸಾರ್ವಜನಿಕ ಪ್ರೊಫೈಲ್‌ಗಳನ್ನು ಹೊಂದಿರುವ ಎಲ್ಲಾ ಟೆಲಿಗ್ರಾಮ್ ಬಳಕೆದಾರರು ತಮ್ಮ ಸಮೀಪದಲ್ಲಿರುವ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು ತಮ್ಮದೇ ಆದ QR ಕೋಡ್‌ಗಳನ್ನು ರಚಿಸಬಹುದಾಗಿತ್ತು. ಈಗ ಬಳಕೆದಾರ ಹೆಸರು ಅಥವಾ ಸಾರ್ವಜನಿಕ ಪ್ರೊಫೈಲ್‌ಗಳನ್ನು ಹೊಂದಿಲ್ಲದಿದ್ದರೂ ಸಹ ಈ ಕಾರ್ಯವನ್ನು ಬಳಸಿಕೊಂಡು ತಾತ್ಕಾಲಿಕ QR ಕೋಡ್ ಅನ್ನು ರಚಿಸಲು ಅನುವು ಮಾಡಿಕೊಡುವ ಫೀಚರ್ಸ್ ಅನ್ನು ಟೆಲಿಗ್ರಾಮ್ ಅಳವಡಿಸಿದೆ. ಇತರರು ತಮ್ಮ ಫೋನ್ ಸಂಖ್ಯೆಗಳನ್ನು ಸಹ ತಿಳಿಯದೆ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ತಕ್ಷಣವೇ ಅವುಗಳನ್ನು ಸೇರಿಸಲು ಸಾಧ್ಯವಾಗುವಂತೆ ಫೀಚರ್ ರೂಪಿಸಲಾಗಿದೆ.

ಸ್ಪ್ಯಾಮ್‌ಗಳಿಂದ ದೂರ ಇರಿ
ಇದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ವಿಶ್ವದಾದ್ಯಂತ ಅತಿ ಹೆಚ್ಚು ಡೌನ್‌ಲೋಡ್ ಆಗುವ ಆ್ಯಪ್‌ಗಳ ಪೈಕಿ ಟೆಲಿಗ್ರಾಮ್ ಕೂಡ ಒಂದಾಗಿದೆ. ಹಾಗಾಗಿ, ಸ್ಪ್ಯಾಮರ್‌ ತುಸು ತೊಂದರೆಯೂ ಹೆಚ್ಚೇ ಇರುತ್ತದೆ. ಹಾಗಾಗಿ, ಈಗ ಬಳಕೆದಾರರು ಗ್ರೂಪ್‌ಗಳಿಗೆ ಸ್ಟೇ ಅವೇ ಫಾರ್ ಸ್ಪ್ಯಾಮ್ ಈ ಕಾರ್ಯವನ್ನು ಸಕ್ರಿಯಗೊಳಿಸಬಹುದು. ಈ ಕಾರ್ಯವನ್ನು ಆನ್ ಮಾಡುವ ಮೂಲಕ, ಸ್ಪ್ಯಾಮ್ ಮೇಲ್‌ಗಳನ್ನು ಗುರುತಿಸಲಾಗುತ್ತದೆ ಮತ್ತು ಸ್ವಯಂ ತೆಗೆದುಹಾಕಲಾಗುತ್ತದೆ. ಇದರಿಂದಾಗಿ, 200 ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಗುಂಪು ನಿರ್ವಾಹಕರು ತಮ್ಮ ಇತ್ತೀಚಿನ ಕ್ರಿಯೆಗಳ ಟ್ಯಾಬ್‌ನಿಂದ  ಫಾಲ್ಸ್ ಕ್ಲೇಮ್ಸ್ ವರದಿ ಮಾಡಲು ಸಾಧ್ಯವಾಗುತ್ತದೆ.

ಹುಡುಗೀರು Googleನಲ್ಲಿ ಯಾವ ವಿಷ್ಯಾನ ಹೆಚ್ಚು ಸರ್ಚ್ ಮಾಡ್ತಾರೆ?

ಆಟೋ ಡಿಲಿಟ್ ಫೀಚರ್
ಆಟೋ ಡಿಲಿಟ್ ಪ್ರಕ್ರಿಯೆಯನ್ನು ಸಕ್ರಿಯಗೊಳಿಸಲು  ಬಳಕೆದಾರರಿಗೆ ಈ ಹೊಸ ಫೀಚರ್ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಬಳಕೆದಾರರು ಯಾವುದೇ ಪ್ರೊಫೈಲ್ ಅನ್ನು ಕ್ಲಿಕ್ ಮಾಡಬಹುದು ಮತ್ತು ಈ ಸೆಟ್ಟಿಂಗ್ ಅನ್ನು ಪ್ರವೇಶಿಸಲು ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಬೇಕು. ಆಗ ಆಟೋ ಡಿಲಿಟ್ ಆಪ್ಷನ್ ಅನ್ನು ಆಯ್ಕೆಯನ್ನು ಮಾಡಬೇಕು. ನಂತರ ಬಳಕೆದಾರರಿಗೆ  1 ದಿನ, 1 ವಾರ, 1 ತಿಂಗಳು ಹೀಗೆ ನಿರ್ದಿಷ್ಟ ಸಮಯವನ್ನು ಕೇಳಲಾಗುತ್ತದೆ. ಆಗ ನಿಮ್ಮ ಅಗತ್ಯಕ್ಕೆ ತಕ್ಕಂತೆ ನಿರ್ದಿಷ್ಟ ಸಮಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಆಗ ಎಲ್ಲಾ ಚಾಟ್ ಸಂದೇಶಗಳನ್ನು ತಕ್ಷಣವೇ ಅಳಿಸಲಾಗುತ್ತದೆ. ಈ ವೈಶಿಷ್ಟ್ಯಗಳನ್ನು ಹೊರತುಪಡಿಸಿ, ಬಳಕೆದಾರರು ಐಒಎಸ್ ಸಾಧನದಲ್ಲಿ ಎಮೋಜಿಗಳನ್ನು ಹುಡುಕಲು ಮತ್ತು ಪ್ರತಿ ಚಾಟ್ ಎಷ್ಟು ಸಂಗ್ರಹಣೆಯನ್ನು ತೆಗೆದುಕೊಳ್ಳುತ್ತಿದೆ ಎಂಬುದನ್ನು ನೋಡಲು ಕೂಡ ಸಾಧ್ಯವಾಗುತ್ತದೆ.

click me!