2026ರಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಆ್ಯಪಲ್ ಕಾರ್, ಬೆಲೆ ಎಷ್ಟು ಗೊತ್ತಾ?

Published : Dec 08, 2022, 05:11 PM IST
2026ರಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಆ್ಯಪಲ್ ಕಾರ್, ಬೆಲೆ ಎಷ್ಟು ಗೊತ್ತಾ?

ಸಾರಾಂಶ

*ಕಳೆದ ಕೆಲವು ವರ್ಷಗಳಿಂದಲೂ ಆಪಲ್ ತನ್ನ ಎಲೆಕ್ಟ್ರಿಕಲ್ ಕಾರ್ ಅಭಿವೃದ್ಧಿಪಡಿಸುತ್ತಿದೆ *ಮಾರುಕಟ್ಟೆಯಲ್ಲಿ ಆಪಲ್ ಕಂಪನಿಯು ಟೆಸ್ಲಾ ಕಂಪನಿ ಕಾರುಗಳಿಗೆ ಪ್ರತಿಸ್ಪರ್ಧೆ ಒಡ್ಡಲಿದೆ *ಟೆಸ್ಲಾ ಕಾರುಗಳಿಗಿಂತಲೂ ಆಪಲ್ ಕಂಪನಿ ಉತ್ಪಾದಿಸುವ ಕಾರು ದುಬಾರಿಯಾಗಿರಲಿವೆ  

ಜಗತ್ತಿನ ಅತಿದೊಡ್ಡ ಟೆಕ್ ಕಂಪನಿಯಾಗಿರುವ ಆ್ಯಪಲ್(Apple) ತನ್ನಪ್ರೀಮಿಯಂ ಸ್ಮಾರ್ಟ್ಫೋನ್ (Smartphone), ಟ್ಯಾಬ್(Tablet), ವೀಯರಬಲ್ ಹಾಗೂ ಇತರ ಗ್ಯಾಜೆಟ್ಗಳ ಮೂಲಕ ಜನಪ್ರಿಯವಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡ ಗ್ರಾಹಕರಿಗೆ ವಿಶಿಷ್ಟ ಅನುಭವ ಹಾಗೂ ಪ್ರಯೋಜನಗಳನ್ನು ಒದಗಿಸುವುದು ಆ್ಯಪಲ್ ಕಂಪನಿಯ ಹೆಗ್ಗಳಿಕೆಯಾಗಿದೆ. ಈಗ ಆ್ಯಪಲ್ ಕಂಪನಿಯು ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಕಳೆದ ಕೆಲವು ವರ್ಷಗಳಿಂದ ಆ್ಯಪಲ್ ಕಂಪನಿಯು ಕಾರ್ (Apple Car) ತಯಾರಿಸಲಿದೆ ಎಂದು ಹೇಳಲಾಗುತ್ತಿತ್ತು. ಈಗ ಈ ವಿಷಯಕ್ಕೆ ಸಂಬಂಧಿಸಿದಂತೆ ಹೊಸ ಸುದ್ದಿ ಬಂದಿದ್ದು, ಆ್ಯಪಲ್ 2026ರಲ್ಲಿ ಮಾರುಕಟ್ಟೆಗೆ ಆ್ಯಪಲ್ ಕಾರ್ ಲಾಂಚ್ ಮಾಡಲಿದೆ! ಈ ಕಾರಿನ ಬೆಲೆಯನ್ನು ವಿಶ್ಲೇಷಿಸಿದರೆ, ಇದೊಂದು ಪ್ರೀಮಿಯಂ ಕಾರ್ (Premium Car) ಆಗಿರುತ್ತದೆ. ಯಾಕೆಂದರೆ ಈ ಕಾರಿನ ಬೆಲೆ ಬರೋಬ್ಬರೀ 80 ಲಕ್ಷ ರೂಪಾಯಿ ಆಗಿರಲಿದೆ!

ಸ್ಮಾರ್ಟ್ಫೋನ್ಗಳ ರೀತಿಯಲ್ಲಿ ಆ್ಯಪಲ್ ಕಾರ್ ಕೂಡ ವಿಶಿಷ್ಟ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುತ್ತದೆ ಎಂಬದರಲ್ಲಿ ಯಾವುದೇ ಅನುಮಾನಗಳಿಲ್ಲ.50 ಲಕ್ಷಕ್ಕೂ ಹೆಚ್ಚು ಬೆಲೆಯ ಟಾಪ್-ಆಫ್-ಲೈನ್ ಮ್ಯಾಕ್ ಪ್ರೊ ಪ್ರಸ್ತುತ ಆಪಲ್ನ ಅತ್ಯಂತ ದುಬಾರಿ ಉತ್ಪನ್ನವಾಗಿದೆ. ಆದರೆ ಇತ್ತೀಚಿನ ಬ್ಲೂಮ್ಬರ್ಗ್ ವರದಿಯ ಪ್ರಕಾರ, ಕಂಪನಿಯು ಬಹು ನಿರೀಕ್ಷಿತ  ಆಪಲ್ ವಾಹನವನ್ನು 2026 ರಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.  ಕಂಪನಿಯ  ಇಲ್ಲಿಯವರೆಗಿನ ಬ್ರ್ಯಾಂಡ್ನ ಅತ್ಯಂತ ದುಬಾರಿ ಉತ್ಪನ್ನ ಈ ಕಾರ್ ಆಗಿರಲಿದೆ ಎಂದು ಹೇಳಬಹುದು.

ಡಿ.12ಕ್ಕೆ ಭಾರತೀಯ ಮಾರುಕಟ್ಟೆಗೆ OnePlus X27 ಮತ್ತು E24 ಮಾನಿಟರ್ ಲಾಂಚ್!

ಕಳೆದ ಕೆಲವು ವರ್ಷಗಳಿಂದ ಆ್ಯಪಲ್ ಕಂಪನಿ ತನ್ನ ಕಾರನ್ನು ಅಭಿವೃದ್ಧಿ ಮಾಡುತ್ತಿದೆ. ಕೆಲವು ಮೂಲಗಳ ಪ್ರಕಾರ, ಸ್ವಾಯತ್ತ ಕಾರು ಉಪಕ್ರಮವು ವಿಭಿನ್ನ ನಾಯಕತ್ವದಲ್ಲಿ ವರ್ಷಗಳಲ್ಲಿ ಡೆವಲಪ್ ಆಗುತ್ತಾ ಬಂದಿದೆ ಎಂದು ಹೇಳಬಹುದು.ಈ ಕಾರು ಹಿಂದೆ ಸ್ಟೀರಿಂಗ್ ವೀಲ್ ಅಥವಾ ಪೆಡಲ್ ಇಲ್ಲದೆ ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದೆ ಎಂದು ನಂಬಲಾಗಿತ್ತು. ಆದರೆ ಇತ್ತೀಚಿನ ಕೆಲವು ವರದಿಗಳ ಪ್ರಕಾರ, ಆ್ಯಪಲ್ ಎಲೆಕ್ಟ್ರಿಕ್ ಕಾರ್ ಹೆಚ್ಚು ಸಾಂಪ್ರದಾಯಿಕ ರೀತಿಯಲ್ಲೇ ವಿನ್ಯಾಸಗೊಳಿಸಲಾಗುತ್ತಿದೆ ಎನ್ನಲಾಗಿದೆ.

ಬ್ಲೂಮ್‌ಬರ್ಗ್ ಪ್ರಕಾರ, ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಸದ್ಯಕ್ಕೆ ಎಲಾನ್ ಮಸ್ಕ್ ಅತಿ ದೊಡ್ಡ ಉದ್ಯಮಿಯಾಗಿದ್ದಾರೆ. ಹಾಗಾಗಿ, ಆ್ಯಪಲ್ ಕಾರುಗಳಿಗೆ ಮಾರುಕಟ್ಟೆಗೆ ಅತಿದೊಡ್ಡ ಸ್ಪರ್ಧೆ ಎಂದರೆ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಾರುಗಳು ಎಂದು ಹೇಳಬಹುದು. ಹಾಗಾಗಿ, ಆ್ಯಪಲ್ ನವೀನ ರೀತಿಯಲ್ಲಿ ಮಾರುಕಟ್ಟೆಗೆ ಅಡಿ ಇಡಬೇಕಾದ ಅಗತ್ಯವಿದೆ. ಟೆಸ್ಲಾ ವಾಹನಗಳ ಬೆಲೆ ವ್ಯಾಪ್ತಿಯು 47,000 ಡಾಲರ್‌ಗಳಿಂದ ರಿಂದ 100,000 ಡಾಲರ್‌ಗಳ ವರೆಗೆ ಇರುತ್ತದೆ. ಆಪಲ್ ಬೇಸ್ ಕಾರ್ ಬೆಲೆ ಅಂದಾಜು ಟೆಸ್ಲಾ ಕಂಪನಿ ಪ್ರೀಮಿಯಂ ಬ್ರ್ಯಾಂಡ್ ಕಾರಿನೊಂದಿಗೆ ಸ್ಪರ್ಧೆ ಮಾಡಲಿದೆ. ಅಂದರೆ, ಆ್ಯಪಲ್‌ನ ಎಂಟ್ರಿ ಲೇವಲ್ ಕಾರು ಟೆಸ್ಲಾ ಕಂಪನಿಯ ಹೈಎಂಡ್ ಕಾರಿನ ಬೆಲೆಗೆಸಮವಾಗಿರುತ್ತದೆ ಎಂದು ಹೇಳಲಾಗುತ್ತಿದೆ. ಅದರರ್ಥ ಆ್ಯಪಲ್ ಕಾರ್ ಬೆಲೆ 100,000 ಡಾಲರ್‌ಗಳಿಂದ ಶುರುವಾಗುತ್ತದೆ ಎಂದು ಹೇಳಬಹುದು.

ಭಾರತದಲ್ಲಿ ಡಿಜಿಟಲ್ ಸರ್ಕಾರಿ ಡೈರೆಕ್ಟರಿ ಆರಂಭಿಸಿದ Truecaller

ವರದಿಗಳ ಪ್ರಕಾರ, ಆಪಲ್ ಕಾರ್ ಅನ್ನು 120,000 ಡಾಲರ್‌ಕ್ಕಿಂತ ಹೆಚ್ಚು ದುಬಾರಿಯಾಗಿರುತ್ತದೆ ಎಂದು ಹೇಳಲಾಗಿತ್ತು. ಆದರೆ ವ್ಯಾಪಾರವು ವೃದ್ಧಿಯ ಕಾರಾಣಕ್ಕಾಗಿ ಕಂಪನಿಯು ಕಾರಿನ ಬೆಲೆಯನ್ನು ತಗ್ಗಿಸಿದೆ ಎಂದು ಹೇಳಲಾಗುತ್ತಿದೆ.  ತುಂಬಾ ದುಬಾರಿಯಾದರೂ ಯಾರು ಖರೀದಿಸಲು ಮುಂದೆ ಬರಲಿಕ್ಕಿಲ್ಲ ಎಂಬ ಕಾರಣಕ್ಕೆ ಬೆಲೆಯನ್ನು ತಗ್ಗಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಕಂಪನಿಯು ಮುಂದಿನ ವರ್ಷದ ವೇಳೆಗೆ ಕಾರಿನ ವಿನ್ಯಾಸವನ್ನು ಪೂರ್ಣಗೊಳಿಸಲಿದೆ ಎಂದು ವರದಿಗಳು ಹೇಳುತ್ತಿವೆ. ಆ್ಯಪಲ್ ತನ್ನ ಕಾರನ್ನು ಮಾರುಕಟ್ಟೆಗೆ 2026ರಲ್ಲಿ ಪರಿಚಯಿಸಲಿದೆ. ಆದರೆ ಅದಕ್ಕೂ ಮೊದಲು ಅಂದರೆ 2025ರಲ್ಲಿ ಆ್ಯಪಲ್ ಕಾರಿನ ಪರೀಕ್ಷೆ ನಡೆಯಲಿದೆ ಎನ್ನಲಾಗುತ್ತಿದೆ. 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?