ಇನ್ಮುಂದೆ ಎಫ್‌ಬಿ, ಇನ್‌ಸ್ಟಾ ಬ್ಲೂಟಿಕ್‌ಗೂ ನೀಡಬೇಕು ಹಣ: ಮಾಸಿಕ 699 ರೂ. ಶುಲ್ಕ

By Kannadaprabha News  |  First Published Jun 9, 2023, 8:44 AM IST

ಟ್ವೀಟರ್‌ನಂತೆ ಇದೀಗ ಮೆಟಾ ಕಂಪನಿ ಕೂಡ ಭಾರತದಲ್ಲಿ ತನ್ನ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಬಳಕೆದಾರರಿಂದ ಹಣ ಪಡೆದು ವೆರಿಫಿಕೇಶನ್‌ ಸೌಲಭ್ಯ (ಬ್ಲೂಟಿಕ್‌) ನೀಡುವ ವ್ಯವಸ್ಥೆ ಆರಂಭಿಸಿದೆ.


ನವದೆಹಲಿ: ಟ್ವೀಟರ್‌ನಂತೆ ಇದೀಗ ಮೆಟಾ ಕಂಪನಿ ಕೂಡ ಭಾರತದಲ್ಲಿ ತನ್ನ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಬಳಕೆದಾರರಿಂದ ಹಣ ಪಡೆದು ವೆರಿಫಿಕೇಶನ್‌ ಸೌಲಭ್ಯ (ಬ್ಲೂಟಿಕ್‌) ನೀಡುವ ವ್ಯವಸ್ಥೆ ಆರಂಭಿಸಿದೆ. ಐಒಎಸ್‌ ಹಾಗೂ ಆ್ಯಂಡ್ರಾಯ್ಡ್‌ ಬಳಕೆದಾರರು ತಿಂಗಳಿಗೆ 699 ರು. ಹಾಗೂ ಕೇವಲ ವೆಬ್‌ನಲ್ಲಿ ಇದನ್ನು ಬಳಸುವವರು ತಿಂಗಳಿಗೆ 599 ರು. ನೀಡಿ ವೆರಿಫಿಕೇಶನ್‌ ಸೌಲಭ್ಯ ಪಡೆಯಬಹುದು. ವೆಬ್‌ ವೆರಿಫಿಕೇಶನ್‌ (Web Verification)ಇನ್ನೂ ಆರಂಭವಾಗಿಲ್ಲ. ಆದರೆ, ಮೊಬೈಲ್‌ನಲ್ಲಿ ಫೇಸ್‌ಬುಕ್‌ (Facebook) ಹಾಗೂ ಇನ್‌ಸ್ಟಾಗ್ರಾಂ (Instagram) ಬಳಸುವವರಿಗೆ ಪೇಯ್ಡ್‌ ವೆರಿಫಿಕೇಶನ್‌ (Paid Verification) ಸೌಲಭ್ಯ ಬುಧವಾರದಿಂದಲೇ ಆರಂಭವಾಗಿದೆ.

ಆದರೆ, ಟ್ವೀಟರ್‌ಗೂ (Twitter) ಇದಕ್ಕೂ ಇರುವ ವ್ಯತ್ಯಾಸವೇನೆಂದರೆ, ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಈಗಾಗಲೇ ಉಚಿತವಾಗಿ ವೆರಿಫಿಕೇಶನ್‌ ಬ್ಲೂಟಿಕ್‌ ಪಡೆದವರಿಗೆ ಆ ಸೌಲಭ್ಯ ಉಚಿತವಾಗಿಯೇ ಮುಂದುವರೆಯಲಿದೆ. ಇದನ್ನು ಮೆಟಾ ಸಿಇಒ ಮಾರ್ಕ್ ಜಕರ್‌ಬಗ್‌ರ್‍ ಅವರೇ ತಿಳಿಸಿದ್ದಾರೆ. ಆದರೆ, ಇನ್ನುಮುಂದೆ ವೆರಿಫಿಕೇಶನ್‌ ಸೌಲಭ್ಯ ಪಡೆಯುವವರಿಗೆ ಶುಲ್ಕ ವಿಧಿಸಲಾಗುತ್ತದೆ. ಸರ್ಕಾರಿ ಐಡಿ ಸೇರಿದಂತೆ ಬೇರೆ ಬೇರೆ ದಾಖಲೆಗಳನ್ನು ಪಡೆದು ವೈಯಕ್ತಿಕ ಖಾತೆಗಳನ್ನು ವೆರಿಫೈ ಮಾಡಲಾಗುತ್ತದೆ. ವೆರಿಫಿಕೇಶನ್‌ ಮಾಡಿಸಿಕೊಂಡವರಿಗೆ ಆ ಖಾತೆಯನ್ನು ಬೇರೆಯವರು ನಕಲು ಮಾಡುವುದರಿಂದ ರಕ್ಷಣೆ ಹಾಗೂ ಹೆಚ್ಚಿನ ಸೌಲಭ್ಯಗಳು ಸಿಗಲಿವೆ. ಸದ್ಯಕ್ಕೆ ವೈಯಕ್ತಿಕ ಖಾತೆದಾರರಿಗೆ ಮಾತ್ರ ಈ ಸೌಲಭ್ಯ ನೀಡಲಾಗುತ್ತಿದೆ. ಸಂಸ್ಥೆಗಳಿಗೆ ಪೇಯ್ಡ್‌ ವೆರಿಫಿಕೇಶನ್‌ ಇನ್ನೂ ಆರಂಭಿಸಿಲ್ಲ ಎಂದು ಮೆಟಾ (Meta) ತಿಳಿಸಿದೆ.

Latest Videos

undefined

ಹಲವರಿಗೆ ದಿಢೀರ್‌ ಬ್ಲೂಟಿಕ್‌ ಮಾರ್ಕ್‌ ಮರಳಿಸಿದ ಟ್ವಿಟ್ಟರ್‌: ಇವರಿಗೆ ಮಾತ್ರ ಉಚಿತ ವೆರಿಫೈಡ್‌ ಖಾತೆ!

ವೆರಿಫಿಕೇಶನ್‌ ಬಳಿಕ ಟ್ವೀಟರ್‌ನಲ್ಲಿ ಬೇರೆ ಬೇರೆ ಬಣ್ಣದ ಬ್ಯಾಡ್ಜ್‌ಗಳನ್ನು ನೀಡುತ್ತಿರುವಂತೆ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂನಲ್ಲೂ (Instagram) ಬ್ಲೂಟಿಕ್‌ ಬದಲು ಬೇರೆ ಬಣ್ಣದ ಬ್ಯಾಡ್ಜ್‌ಗಳನ್ನು ನೀಡಲಾಗುತ್ತದೆಯೇ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಟ್ವಿಟರ್ ಹೊಸ ನಿಯಮದಿಂದ ತಲೆ ಕೆಡಿಸಿಕೊಂಡ ಬಿಗ್ ಸ್ಟಾರ್ .. ಬ್ಲೂಟಿಕ್‌ ಬೇಕು ಅಂದ್ರೆ ಪಾವತಿಸಬೇಕು ದುಡ್ಡು.!

click me!