ಚಾಟ್‌ಜಿಪಿಟಿ ಬಳಸಿ ಹೋಮ್‌ವರ್ಕ್: ಶಿಕ್ಷಕರಿಗೆ ಸಿಕ್ಕಿಬಿದ್ದ ವಿದ್ಯಾರ್ಥಿ : ಪೋಸ್ಟ್ ವೈರಲ್

By Anusha KbFirst Published Jun 8, 2023, 3:26 PM IST
Highlights

ಈಗ ಚಾಟ್ ಜಿಪಿಟಿಯನ್ನು ಬಳಸಿ ಪುಟ್ಟ ಬಾಲಕನೋರ್ವ ಶಾಲೆಯಲ್ಲಿ ನೀಡಿದ ಹೋಮ್‌ವರ್ಕ್‌ನ್ನು ಮುಗಿಸಿದ್ದು, ಈ ವಿಚಾರ ಈಗ  ಇಂಟರ್‌ನೆಟ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ನವದೆಹಲಿ: ಇಂದು ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಕುಳಿತಲ್ಲಿಂದಲೇ ನಾವು ಜಗತ್ತಿನ ಇನ್ಯಾವುದು ಮೂಲೆಯಲ್ಲಿ ನಡೆಯುತ್ತಿರುವುದನ್ನು ಗಮನಿಸಬಹುದು, ಮೇಸೇಜ್ ವೀಡಿಯೊ ಕಾಲ್‌ಗಳ ಮೂಲಕ ಎಲ್ಲರನ್ನು ನೋಡಬಹುದು ಮಾತನಾಡಿಸಬಹುದು. ಇದರಿಂದ ಇಂದು ಜಗತ್ತು ಬಹಳ ಪುಟ್ಟದಾಗಿ ಗೋಚರಿಸುತ್ತಿದೆ. ತಂತ್ರಜ್ಞಾನದಿಂದ ಜೀವ ಬಹಳ ಸರಳ ಎನಿಸಿದೆ. ಪ್ರತಿಯೊಂದು ಕೆಲಸಕ್ಕೂ ಹೊಸ ಹೊಸ ಕೌಶಲ್ಯಗಳು ಬಂದಿದ್ದು, ಕೆಲಸಗಳನ್ನು ಕಡಿಮೆ ಮಾಡುತ್ತಿವೆ. ಮಾನವನ ಸುಖಕ್ಕೆ ಬುನಾದಿ ಹಾಡುತ್ತಿವೆ. ಆದರೆ ಈ ರೀತಿಯ ತಂತ್ರಜ್ಞಾನದಿಂದ ಸಾಕಷ್ಟು ಅಡ್ಡಪರಿಣಾಮಗಳು ಇವೆ. ಇದು ಬಹುತೇಕರ ಗಮನಕ್ಕೂ ಬಂದಿರಬಹುದು, ಪ್ರತಿಯೊಂದು ವ್ಯವಸ್ಥೆ ಅಥವಾ ತಂತ್ರಜ್ಞಾನವಿರಲಿ ಎಲ್ಲದ್ದಕ್ಕೂ ಪಾಸಿಟಿವ್ ನೆಗೆಟಿವ್ ಮುಖಗಳಿರುತ್ತವೆ. ಅದೇ ರೀತಿ ತಂತ್ರಜ್ಞಾನಕ್ಕೂ ನ್ಯೂನ್ಯತೆಗಳಿವೆ ಎಂಬುದಕ್ಕೆ ಈಗ ನಡೆದಿರುವ ಘಟನೆಯೊಂದು ಸಾಕ್ಷಿಯಾಗಿದೆ. 

ಕೆಲ ದಿನಗಳ ಹಿಂದಷ್ಟೇ ಚಾಟ್ ಜಿಪಿಟಿ ಬಳಸಿ ತೆಲಂಗಾಣದ (Telangana) ಲೋಕಸೇವಾ ಆಯೋಗದ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವೆಸಗಿದ್ದು, ದೊಡ್ಡ ಸುದ್ದಿಯಾಗಿತ್ತು. ಈ ಪ್ರಕರಣ ಮಾಸುವ ಮೊದಲೇ ಈಗ ಚಾಟ್ ಜಿಪಿಟಿಯನ್ನು ಬಳಸಿ ಪುಟ್ಟ ಬಾಲಕನೋರ್ವ ಶಾಲೆಯಲ್ಲಿ ನೀಡಿದ ಹೋಮ್‌ವರ್ಕ್‌ನ್ನು ಮುಗಿಸಿದ್ದು, ಈ ವಿಚಾರ ಈಗ  ಇಂಟರ್‌ನೆಟ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಕೃತಕ ಬುದ್ಧಿಮತ್ತೆ ಇಂದು ಸಾಕಷ್ಟು ಕ್ಷೇತ್ರಗಳಲ್ಲಿ ಭಾರಿ ಪ್ರಭಾವ ಬೀರುತ್ತಿದೆ. ಆರ್ಟಿಫಿಶೀಯಲ್ ಇಂಟೆಲಿಜಿನ್ಸಿಯನ್ನೇ ಆಧರಿಸಿ ಬಂದಿರುವ ಚಾಟ್‌ ಜಿಪಿಟಿ (ChatGPT) ಆಪ್‌ಗಳು ಈಗಾಗಲೇ ದೊಡ್ಡ ದೊಡ್ಡ ಪ್ರಬಂಧಗಳನ್ನು ನಿರಾಯಾಸವಾಗಿ ಬರೆಯುತ್ತಿರುವುದರ ಜೊತೆಗೆ ಅಸಾಧಾರಣ ಗ್ರಾಫಿಕ್ಸ್ ಮಾಡಲು ಸಮರ್ಥವಾಗಿರುವ ಕಾರಣಕ್ಕೆ ಫೇಮಸ್ ಆಗಿವೆ. ಇವುಗಳಿಂದ ಅನೇಕರು ಉದ್ಯೋಗ ಕಡಿತದ ಭೀತಿ ಎದುರಿಸುತ್ತಿದ್ದಾರೆ. 

ಚಾಟ್‌ಜಿಪಿಟಿ ಬಳಸಿ ಪರೀಕ್ಷೆ ವೇಳೆ ಅಕ್ರಮ: ಪಿಎಸ್‌ಐ ನೇಮಕಾತಿ ಮಾದರಿ ಅಕ್ರಮ ಬೆಳಕಿಗೆ

ಹೀಗಿರುವಾಗ 7ನೇ ತರಗತಿಯ ಬಾಲಕನ ಈ ಅತೀ ಬುದ್ಧಿವಂತಿಕೆ ಎಲ್ಲರನ್ನೂ ಚಿಂತೆಗೀಡು ಮಾಡಿದೆ. ಆದರೆ ತಪ್ಪು ಆತನದಲ್ಲ ಬಿಡಿ,  ತಪ್ಪೇನಿದ್ದರೂ ಈ ಬದಲಾದ ವೇಗವಾಗಿ ಎಲ್ಲವನ್ನು ಬದಲಿಸುತ್ತಿರುವ ತಂತ್ರಜ್ಞಾನದ್ದು, ಶಾಲೆಯಲ್ಲಿ ನೀಡಿದ ಹೋಮ್‌ವರ್ಕ್ ಮಾಡಿ ಬರೆದು ಬರೆದು ಕೈ ನೋಯಿಕೊಳ್ಳೋದು ಯಾರು ಎಂದು ಬೇಸರಿಸಿದ ಆ ಬಾಲಕ ಚಾಟ್ ಜಿಪಿಟಿ ಮೂಲಕ ತನ್ನ ಹೋಮ್‌ವರ್ಕ್‌ ಮಾಡಿಸಿಕೊಂಡಿದ್ದಾನೆ. ಈತ ಹೋಮ್‌ವರ್ಕ್‌ ಮಾಡುವ ವೇಳೆ ಸಂಬಂಧಿ ಮುಂದೆ ತಗಲಾಕೊಂಡಿದ್ದು, ಅವರು ಫೋಟೋ ಸಮೇತ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 

ಚಾಟ್ ಜಿಪಿಟಿ ಬಗ್ಗೆ ತರಗತಿ ನೀಡಿ 3 ತಿಂಗಳಲ್ಲಿ 28 ಲಕ್ಷ ಹಣ ಗಳಿಸಿದ 23 ವರ್ಷದ ಯುವಕ

ರೋಶನ್ ಪಟೇಲ್ (oshan Patel) ಎಂಬುವವರು ಟ್ವಿಟ್ಟರ್‌ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ತನ್ನ ಕಿರಿಯ  ಕಸಿನ್ ಅರ್ಜುನ್‌, ಚಾಟ್ ಬೋಟ್ ಬಳಸಿ ತನ್ನ 7ನೇ ತರಗತಿಯ ಇಂಗ್ಲೀಷ್ ಹೋಮ್‌ವರ್ಕ್‌ (English homework) ಮಾಡಿ ಸಿಕ್ಕಿಬಿದ್ದಿದ್ದಾನೆ. ಆತ ಚಾಟ್‌ಬಾಟ್‌ನ (chatbot) ಮೊದಲೇ ಸೇವ್ ಆಗಿದ್ದ ಪ್ರಾಂಪ್ಟ್‌ನ್ನು ಅಳಿಸಲು ಮರೆತ ಕಾರಣ ಶಿಕ್ಷಕರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ರೋಶನ್ ಹೇಳಿದ್ದಾರೆ. ಆತ ಹೋಮ್‌ವರ್ಕ್‌ನಲ್ಲಿ ಮೋಸ ಮಾಡಿದ್ದಕ್ಕೆ ಆತನನ್ನು ದೂರಲು ಸಾಧ್ಯವಿಲ್ಲ, ಇದಕ್ಕೆ ನಾವು ಇದಕ್ಕೆ ತಂತ್ರಜ್ಞಾನವನ್ನು ದೂರಬೇಕಿದೆ ಎಂದು ಅವರು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಅನ್ನು 1.2 ಮಿಲಿಯನ್ ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. 

My little cousin Arjun got caught using ChatGPT on his 7th grade English homework. pic.twitter.com/Enh0ZkeD4P

— Roshan Patel (@roshanpateI)

 

click me!