Whatsapp ಕಳೆದೆರಡು ತಿಂಗಳಲ್ಲಿ ಹತ್ತು ಹಲವು ಫೀಚರ್ಸ್ ಪರಿಚಯಿಸಿದೆ. ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮತ್ತೊಂದು ಫೀಚರ್ಸ್ ಪರಿಚಯ ಮಾಡಿದೆ. ಇನ್ನು ಮುಂದೆ ವ್ಯಾಟ್ಸ್ಆ್ಯಪ್ ಬಳಕೆದಾರರು ಹೈಕ್ವಾಲಿಟಿ ಇಮೇಜ್ ಕಳುಹಿಸಲು ಅವಕಾಶವಿದೆ.ಇದಕ್ಕೆ ಏನು ಮಾಡಬೇಕು?
ನವದೆಹಲಿ(ಜೂ.08): ಮೆಟಾ ಮಾಲೀಕತ್ವದ ವ್ಯಾಟ್ಸ್ಆ್ಯಪ್ ಇದೀಗ ಮತ್ತೊಂದು ಫೀಚರ್ಸ್ ಪರಿಚಯಿಸಿದೆ. ಇನ್ನು ಮುಂದ ವ್ಯಾಟ್ಸ್ಆ್ಯಪ್ ಬಳಕೆದಾರರು ಹೈಕ್ವಾಲಿಟಿ ಹೆಚ್‌ಡಿ ಫೋಟೋ ಕಳುಹಿಸಲು ಅವಕಾಶವಿದೆ. ಸದ್ಯ ಪ್ರಾಯೋಗಿಕವಾಗಿ ಈ ಪೀಚರ್ಸ್ ಪರಿಚಯ ಮಾಡಲಾಗಿದ್ದು, ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ. WABetaInfo ಪ್ರಕಾರ, ನೂತನ ಹೈಕ್ವಾಲಿಟಿ ಹೆಚ್‌ಡಿ ಇಮೇಜ್ ಕಳುಹಿಸುವ ಫೀಚರ್ಸ್ ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಬೀಟಾ ವರ್ಶನ್‌ನಲ್ಲಿ ಲಭ್ಯವಿದೆ.
ಈ ಫೀಚರ್ಸ್ ಮೂಲಕ ಲಾರ್ಜ್ ಫೈಲ್ ಇಮೇಜ್‌ಗಳನ್ನು ಕಳುಹಿಸಲು ಸಾಧ್ಯವಿದೆ. ಬಳಕೆದಾರರು ಇಮೇಜ್ ಕಳುಹಿಸುವಾಗ ಲಾರ್ಜ್ ಫೈಲ್ ಅಂದರೆ ಹೆಚ್‌ಡಿ ಕ್ವಾಲಿಟಿಯಲ್ಲೇ ಕಳುಹಿಸಬೇಕಾ ಅಥವಾ ಕಂಪ್ರೆಸ್ ಇಮೇಜ್ ಕಳುಹಿಸಬೇಕಾ ಅನ್ನೋ ಆಯ್ಕೆ ಲಭ್ಯವಾಗಲಿದೆ. ಬಳಕೆದಾರರು ಹೆಚ್‌ಡಿ ಕ್ವಾಲಿಟಿ ಇಮೇಜ್ ಕಳುಹಿಸುಲು ಬಯಸಿದರೆ ಸುಲಭವಾಗಿ ಕಳುಹಿಸಬಹುದು.
undefined
ವ್ಯಾಟ್ಸ್ಆ್ಯಪ್ ವಾಯ್ಸ್ ಸ್ಟೇಟಸ್, ಹೊಸ ಫೀಚರ್ ಈಗ ಎಲ್ಲಾ ಬಳಕೆದಾರರಿಗೆ ಲಭ್ಯ!
ಈ ಫೀಚರ್ಸ್ ಬಳಕೆದಾರರ ಬಹುದಿನಗಳ ಬೇಡಿಕೆಯಾಗಿತ್ತು. ವ್ಯಾಟ್ಸ್ಆ್ಯಪ್‌ನಲ್ಲಿ ಕಳುಹಿಸಿದ ಪಿಕ್ಟರ್ ಕ್ವಾಲಿಟಿ ಕಡಿಮೆಯಾಗಲಿದೆ ಅನ್ನೋ ಮಾತುಗಳು ನಾವು ಕೇಳಿದ್ದೇವೆ. ಹೀಗಾಗಿ ಹಲವರು ಡ್ಯಾಕ್ಯುಮೆಂಟ್ ಮೂಲಕ ಇಮೇಜ್ ಕಳುಹಿಸುತ್ತಿದ್ದರು. ಇದೀಗ ಹೈರೆಸಲ್ಯೂಶನ್‌ಗೆ ಯಾವುದೇ ಸಮಸ್ಯೆ ಬರದ ರೀತಿಯಲ್ಲಿ, ಮೂಲ ಫೋಟೋ ಇದ್ದಷ್ಟೇ ಕ್ವಾಲಿಟಿಯಲ್ಲಿ ವ್ಯಾಟ್ಸ್ಆ್ಯಪ್ ಮೂಲಕ ಇಮೇಜ್ ಕಳುಹಿಸಲು ಸಾಧ್ಯವಿದೆ.
ಇತ್ತೀಚೆಗೆ ವ್ಯಾಟ್ಸ್ಆ್ಯಪ್ ಹಲವು ಫೀಚರ್ಸ್ ಪರಿಚಯಿಸಿದೆ. ಇದರಲ್ಲಿ ಚಾಟ್ ಲಾಕ್ ಫೀಚರ್ಸ್ ಕೂಡ ಒಂದು. ಪರಸ್ಪರ ರವಾನಿಸಿದ ಸಂದೇಶಗಳನ್ನು ಯಾರ ಕಣ್ಣಿಗೂ ಬೀಳದಂತೆ ರಹಸ್ಯವಾಗಿ ಕಾಪಾಡುವ ಹೊಸ ಫೀಚರ್ ಒಂದನ್ನು ವಾಟ್ಸಪ್ ಅನಾವರಣಗೊಳಿತ್ತು. ಹೀಗಾಗಿ ಒಂದು ವೇಳೆ ಮೊಬೈಲ್‌ನಲ್ಲಿ ವಾಟ್ಸಪ್ ಆ್ಯಪ್ ಅನ್ನು ಯಾರೇ ವೀಕ್ಷಿಸಿದರೂ, ಚಾಟ್ ಲಾಕ್ ಆಗಿರುವ ಸಂದೇಶಗಳನ್ನು ಯಾರೂ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಈ ಫೀಚರ್ ಆಯ್ಕೆ ಮಾಡಿಕೊಂಡರೆ ಸಂದೇಶ ಬಂದಾಗ ನೋಟಿಫಿಕೇಷನ್‌ನಲ್ಲೂ ಅದು ಕಾಣದು.
WhatsApp ಹೊಸ ಫೀಚರ್, ಗ್ರೂಪ್ ಕಾಲ್‌ನಲ್ಲಿ ಮಹತ್ತರ ಬದಲಾವಣೆ!
ಇದು ವಾಟ್ಸಪ್‌ನ ಮಾತೃ ಸಂಸ್ಥೆ ಮೆಟಾ ಬಿಡುಗಡೆ ಮಾಡಿರುವ ಹೊಸ ಫೀಚರ್. ಈ ಆಪ್ಷನ್ ಅನ್ನು ಬಳಸಿಕೊಂಡರೆ ನಾವು ಇನ್ಯಾವುದೇ ವಾಟ್ಸಪ್ ಬಳಕೆದಾರರೊಂದಿಗೆ ನಡೆಸಿದ ಚಾಟ್ ಸಂಪೂರ್ಣ ರಹಸ್ಯವಾಗಿರುತ್ತದೆ. ಹೀಗೆ ವಿನಿಮಯ ಮಾಡಿಕೊಂಡ ಸಂದೇಶಗಳು ಬೇರೊಂದು ಫೋಲ್ಡರ್‌ನಲ್ಲಿ ಸಂಗ್ರಹವಾಗುವ ಕಾರಣ ಅದು ಯಾರಿಗೂ ಕಾಣಿಸದು. ಫಿಂಗರ್‌ಪ್ರಿಂಟ್ ಅಥವಾ ಪಾಸ್‌ವರ್ಡ್ ಬಳಸಿಕೊಂಡು ಈ ಚಾಟ್ ಲಾಕ್ ಓಪನ್ ಮತ್ತು ಲಾಕ್ ಮಾಡಬಹುದು. ಇದರಿಂದ ಬಳಕೆದಾರರಿಗೆ ತಮ್ಮ ಮಾಹಿತಿಯನ್ನು ಇನ್ನಷ್ಟುರಹಸ್ಯವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ.