ಕೇಂದ್ರದ ಎಚ್ಚರಿಕೆಗೆ ಫೇಸ್‌ಬುಕ್, ವ್ಯಾಟ್ಸ್ಆ್ಯಪ್ ಥಂಡಾ; ಹೊಸ ನಿಯಮಕ್ಕೆ ಸಮ್ಮತಿ!

By Suvarna News  |  First Published May 29, 2021, 2:53 PM IST
  • ಕೇಂದ್ರದ ಖಡಕ್ ವಾರ್ನಿಂಗ್‌ಗೆ ತಲೆಬಾಗಿದ ಫೇಸ್‌ಬುಕ್, ವ್ಯಾಟ್ಸ್ಆ್ಯಪ್ 
  • ಹೊಸ ಸೊಶಿಯಲ್ ಮೀಡಿಯಾ ನಿಯಮ ಪಾಲಿಸಲು ಸಮ್ಮತಿ 
  • ನೊಡೆಲ್ ಅಧಿಕಾರಿ ಸೇರಿದಂತೆ ಇತರೆ ಮಾಹಿತಿ ಹಂಚಿಕೊಂಡ ಸೋಶಿಯಲ್ ಮೀಡಿಯಾ

ನವದೆಹಲಿ(ಮೇ.29): ಕಳೆದ ಕೆಲ ದಿನಗಳಲ್ಲಿ ಕೇಂದ್ರ ಸರ್ಕಾರ ಹಾಗೂ ಸಾಮಾಜಿಕ ಜಾಲತಾಣಗಳ ನಡುವೆ ಜಟಾಪಟಿ ನಡೆಯುತ್ತಿದೆ. ಕೇಂದ್ರ ಸರ್ಕಾರದ ತಂದಿರುವ ಹೊಸ ಡಿಜಿಟಲ್ ನಿಯಮ ಅನುಸರಿಸಲು ಟ್ವಿಟರ್, ವ್ಯಾಟ್ಸ್ಆ್ಯಪ್ ಸೇರಿದಂತೆ ಕೆಲ ಸಾಮಾಜಿಕ ಮಾಧ್ಯಮಗಳು ನಿರಾಕರಿಸಿತ್ತು. ಖಡಕ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇದೀಗ ಫೇಸ್‌ಬುಕ್ ಹಾಗೂ ವ್ಯಾಟ್ಸ್ಆ್ಯಪ್ ಹೊಸ ನಿಯಮ ಅನುಸರಿಸಲು ಸಮ್ಮತಿಸಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯ ವಿದೇಶಿ ಕಂಪನಿಯ ಲಾಭಕ್ಕಲ್ಲ: ಟ್ವಿಟರ್‌ಗೆ ಖಡಕ್ ವಾರ್ನಿಂಗ್ ನೀಡಿದ ಭಾರತ!

Latest Videos

undefined

ಭಾರತ ಸರ್ಕಾರದ ಹೊಸ ನಿಯಮ ಪಾಲಿಸಲು ಗೂಗಲ್ ಈಗಾಲೇ ಸಮ್ಮತಿಸಿದೆ. ಇದೀಗ ಫೇಸ್‌ಬುಕ್ ಹಾಗೂ ವ್ಯಾಟ್ಸ್ಆ್ಯಪ್ ಕೂಡ ಐಟಿ ನಿಯಮ ಪಾಲಿಸುವುದಾಗಿ ಒಪ್ಪಿಕೊಂಡಿದೆ. ನೂತನ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ 2021 ಪ್ರಕಾರ ಫೇಸ್‌ಬುಕ್, ವ್ಯಾಟ್ಸ್ಆ್ಯಪ್, ಗೂಗಲ್  ನೂಡಲ್ ಅಧಿಕಾರಿಗಳನ್ನು ನೇಮಕ ಮಾಡಲು ಸಮ್ಮತಿಸಿದೆ. ಈ ಮೂಲಕ ಫೇಸ್‌ಬುಕ್, ವ್ಯಾಟ್ಸ್ಆ್ಯಪ್, ಕೂ, ಶೇರ್‌ಚಾಟ್, ಟೆಲಿಗ್ರಾಮ್, ಲಿಂಕ್ಡ್‌ಇನ್ ಸಾಮಾಜಿಕ ಮಾಧ್ಯಮಗಳು ನೊಡೆಲ್ ಅಧಿಕಾರಿಗಳ ವಿವರಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ.

ಆದರೆ ಟ್ವಿಟರ್ ಹಾಗೂ ಕೇಂದ್ರ ಸರ್ಕಾರದ ಜಟಾಪಟಿ ಮುಂದುವರಿದಿದೆ. ಟ್ವಿಟರ್ ಇನ್ನೂ ಕೂಡ ಹೊಸ ನಿಯಮ ಪಾಲಿಸುವುದಾಗಿ ಯಾವುದೇ ಸಮ್ಮತಿ ನೀಡಿಲ್ಲ. ನೊಡೆಲ್ ಅಧಿಕಾರಿಗಳ ನೇಮಕ ಕುರಿತು ಮಾಹಿತಿ ನೀಡಿಲ್ಲ. 

ಹೊಸ ನಿಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಎಂದು ಟ್ವಿಟರ್ ಬಣ್ಣಿಸಿತ್ತು. ಇದಕ್ಕೆ ತಿರುಗೇಟು ನೀಡಿದ ಕೇಂದ್ರ ಸರ್ಕಾರ,  ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಪಾಠ ಬೇಕಿಲ್ಲ. ಈ ದೇಶದ ಕಾನೂನು ಗೌರವಿಸುವುದು ಅತೀ ಮುಖ್ಯ ಎಂದಿದೆ. 

ಭಾರತದ ಕಾನೂನಿಗೆ ಗೂಗಲ್ ಬದ್ಧ; ನೂತನ ಡಿಜಿಟಲ್ ನಿಯಮ ಕುರಿತು ಸುಂದರ್ ಪಿಚೈ ಸ್ಪಷ್ಟನೆ!

ಕೂ, ಶೇರ್‌ಚಾಟ್, ಟೆಲಿಗ್ರಾಮ್, ಲಿಂಕ್ಡ್‌ಇನ್, ಗೂಗಲ್, ಫೇಸ್‌ಬುಕ್, ವಾಟ್ಸಾಪ್, ಸೇರಿದಂತೆ ಪ್ರಮುಖ ಸೋಶಿಯಲ್ ಮೀಡಿಯಾ  ಅನುಸರಣೆ ಅಧಿಕಾರಿ (CCO), ನೋಡಲ್ ಸಂಪರ್ಕ ವ್ಯಕ್ತಿ (NCP) ಮತ್ತು ಕುಂದುಕೊರತೆ ಅಧಿಕಾರಿ ವಿವರಣೆಗಳನ್ನು ( ಹೊಸ ಐಟಿ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳ ಪ್ರಕಾರ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದೊಂದಿಗೆ ಹಂಚಿಕೊಂಡಿದೆ. 

click me!