ಮಾಯವಾಗುತ್ತಿದ್ದಾರೆ Facebook ಹಿಂಬಾಲಕರು: ಮಾರ್ಕ್‌ ಜುಕರ್‌ಬರ್ಗ್‌ಗೂ 10 ಸಾವಿರ ಫಾಲೋವರ್ಸ್ ಇಲ್ಲ..!

By BK Ashwin  |  First Published Oct 12, 2022, 3:00 PM IST

ತಮ್ಮ ಫಾಲೋವರ್‌ಗಳು ಕಣ್ಮರೆಯಾಗುತ್ತಿರುವ ಬಗ್ಗೆ ಹಲವು ಫೇಸ್‌ಬುಕ್‌ ಬಳಕೆದಾರರು ಫೇಸ್‌ಬುಕ್‌, ಟ್ವಿಟ್ಟರ್‌ ಸೇರಿ ನಾನಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ಮಾರ್ಕ್‌ ಜುಕರ್‌ಬರ್ಗ್‌ಗೂ ಹಿಂಬಾಲಕರು ಕಣ್ಮರೆಯಾಗಿದ್ದಾರೆ. 


ಫೇಸ್‌ಬುಕ್‌ ನಾನಾ ಕಾರಣಗಳಿಂದ ಆಗಾಗ್ಗೆ ಸುದ್ದಿಯಾಗ್ತಿರುತ್ತದೆ. ಇತ್ತೀಚೆಗೆ ಬರೀ ಸೆಲೆಬ್ರಿಟಿಗಳಿಗೆ ಬಂದಿರುವ ಸಂದೇಶಗಳನ್ನು ತೋರಿಸಿ ವಿವಾದಕ್ಕೀಡಾಗಿದ್ದ ಫೇಸ್‌ಬುಕ್, ಈಗ ಮತ್ತೊಂದು ವಿವಾದಕ್ಕೀಡಾಗುತ್ತಿದೆ. ರಾತ್ರೋರಾತ್ರಿ ಫೇಸ್‌ಬುಕ್‌ ಹಿಂಬಾಲಕರು ಮಾಯವಾಗ್ತಿದ್ದಾರಂತೆ. ಅರ್ಧಕ್ಕೂ ಹೆಚ್ಚು ಫಾಲೋವರ್‌ಗಳು ಕಣ್ಮರೆಯಾಗ್ತಿದ್ದಾರೆ ಅಂತ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ದೂರುತ್ತಿದ್ದಾರೆ. ಸ್ವತ: ಮಾರ್ಕ್‌ ಜುಕರ್‌ಬರ್ಗ್‌ ಅವರಿಗೂ ಈ ಕಾಟ ತಪ್ಪಿಲ್ಲ. ಬರೋಬ್ಬರಿ 10 ಕೋಟಿ ಸನಿಹ ಫಾಲೋವರ್‌ಗಳನ್ನು ಹೊಂದಿದ್ದ ಜುಕರ್‌ಬರ್ಗ್‌ ಅವರನ್ನು ಈಗ ಕೇವಲ 9,995 ಜನರು ಹಿಂಬಾಲಿಸುತ್ತಿದ್ದಾರೆ. ಈ ಹಿನ್ನೆಲೆ ಫೇಸ್‌ಬುಕ್‌ ಹ್ಯಾಕ್‌ ಆಗಿರಬಹುದು, ಏನೋ ಬಗ್‌ ಉಂಟಾಗಿದೆ ಎಂದೂ ಹಲವರು ದೂರುತ್ತಿದ್ದಾರೆ .
 
ಕಳೆದ ಒಂದು ವಾರದಿಂದ ಅಮೆರಿಕದ ಪ್ರಖ್ಯಾತ ಸುದ್ದಿ ವಾಹಿನಿಗಳ ಫೇಸ್‌ಬುಕ್‌ ಅಕೌಂಟ್‌ಗಳ ಮೇಲೂ ಹೊಡೆತ ಬಿದ್ದಿದೆ ಎಂದು ಕ್ರೌಡ್‌ಟ್ಯಾಂಗಲ್‌ ಮಾಹಿತಿ ನೀಡಿದೆ. ನ್ಯೂಯಾರ್ಕ್‌ ಟೈಮ್ಸ್‌, ವಾಷಿಂಗ್ಟನ್‌ ಪೋಸ್ಟ್‌, ಹಫಿಂಗ್ಟನ್‌ ಪೋಸ್ಟ್‌, ದಿ ಹಿಲ್‌, ಯುಎಸ್‌ಎ ಟುಡೇ, ನ್ಯೂಯಾರ್ಕ್‌ ಪೋಸ್ಟ್ ಹಾಗೂ ನ್ಯೂಸ್‌ವೀಕ್‌ ಹಿಂಬಾಲಕರು ಸಹ ಅಕ್ಟೋಬರ್‌ 3 ರಿಂದ ಕಡಿಮೆಯಾಗ್ತಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.

ಇದನ್ನು ಓದಿ: ಫೇಸ್‌ಬುಕ್‌ನಿಂದ ಹಿಂದೆ ಸರಿಯುತ್ತಿರುವ ಮಹಿಳೆಯರು: ಕಾರಣ ಇಲ್ಲಿದೆ..

Tap to resize

Latest Videos

undefined

ಫೇಕ್‌ ಅಕೌಂಟ್‌ಗಳ ವಿರುದ್ಧ ಸಮರ..!
 
ಇನ್ನು, ಫೇಸ್‌ಬುಕ್‌ನಲ್ಲಿರುವ ಸಾಧ್ಯವಾದಷ್ಟು ಫೇಕ್‌ ಅಕೌಂಟ್‌ಗಳನ್ನು ಡಿಲೀಟ್‌ ಮಾಡುವುದು ನಮ್ಮ ಗುರಿ. ನಮ್ಮ ನೀತಿಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಲೆಂದೇ ಅಕೌಂಟ್‌ ಸೃಷ್ಟಿ ಮಾಡಿದವರು ಹಾಗೂ ಉದ್ಯಮ, ಸಂಸ್ಥೆಯ ಹೆಸರಲ್ಲಿ ಸೃಷ್ಟಿಯಾದ ವೈಯಕ್ತಿಕ ಖಾತೆಯನ್ನೂ ತೆಗೆದುಹಾಕುತ್ತೇವೆ ಎಂದು ಫೇಸ್‌ಬುಕ್‌ನ ಪಾರದರ್ಶಕ ನೀತಿ ಹೇಳುತ್ತದೆ. ಅಲ್ಲದೆ, ಇತರರ ಮೇಲೆ ಹಾನಿ ಉಂಟುಮಾಡುವ ಖಾತೆಗಳು, ಹಣ ಮಾಡುವ ಉದ್ದೇಶವುಳ್ಳ ಖಾತೆಗಳು ಹಾಗೂ ಸ್ಪ್ಯಾಮ್‌ ಕ್ಯಾಂಪೇನ್‌ಗಳಲ್ಲಿ ಭಾಗಿಯಾಗಿರುವ ಖಾತೆಗಳನ್ನು ತೆಗೆದುಹಾಕಲಾಗುತ್ತದೆ ಎಂದೂ ಹೇಳಿದೆ. 

ಇದರಿಂದಾಗೇ ಹಲವು ಖಾತೆದಾರರನ್ನು ಡಿಲೀಟ್‌ ಮಾಡಲಾಗುತ್ತಿದೆ ಎಂದು ಹೇಳಬಹುದು. ಆದರೂ, ಇದಕ್ಕೆ ಹಲವು ಫೇಸ್‌ಬುಕ್‌ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದು, ಹಾಗಾದ್ರೆ, ಜುಕರ್‌ಬರ್ಗ್‌ ಅವರನ್ನು ಫಾಲೋ ಮಾಡ್ತಿದ್ದವರೆಲ್ಲ ನಕಲಿಗಳಾ ಎಂದು ಪ್ರಶ್ನೆ ಮಾಡಿದ್ದಾರೆ. 

ಇದನ್ನೂ ಓದಿ: Facebook Hacked..? ಸೆಲೆಬ್ರಿಟಿ ಪೋಸ್ಟ್‌ಗಳನ್ನು ಮಾತ್ರ ತೋರಿಸುತ್ತಿದ್ದ ಮೆಟಾ..!

ತಮ್ಮ ಫಾಲೋವರ್‌ಗಳು ಕಣ್ಮರೆಯಾಗುತ್ತಿರುವ ಬಗ್ಗೆ ಹಲವು ಫೇಸ್‌ಬುಕ್‌ ಬಳಕೆದಾರರು ಫೇಸ್‌ಬುಕ್‌, ಟ್ವಿಟ್ಟರ್‌ ಸೇರಿ ನಾನಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುತ್ತಲೇ ಇದ್ದಾರೆ. ಇದು ಅಮೆರಿಕದಲ್ಲಿ ಮಾತ್ರವಲ್ಲ ಭಾರತ ಸೇರಿ ಜಗತ್ತಿನ ಹಲವು ದೇಶಗಳ ನೆಟ್ಟಿಗರು ಸಹ ಇದೇ ರೀತಿ ದೂರು ನೀಡುತ್ತಿದ್ದಾರೆ. ಫೇಸ್‌ಬುಕ್‌ ಹ್ಯಾಕ್‌ ಆಗಿರಬಹುದೆಂದೂ ಹೇಳುತ್ತಿದ್ದಾರೆ. 

ಆಗಸ್ಟ್‌ ತಿಂಗಳ ಕೊನೆಯ ವಾರದಲ್ಲಿ ಸಹ, ಪ್ರಪಂಚದಾದ್ಯಂತದ ಹಲವಾರು ಬಳಕೆದಾರರು ಸೆಲೆಬ್ರಿಟಿಗಳ ವಿಲಕ್ಷಣ ಪೋಸ್ಟ್‌ಗಳನ್ನು ಮಾತ್ರ ತೋರಿಸುತ್ತಿದೆ ಎಂದು ಅತಿದೊಡ್ಡ ಸಾಮಾಜಿಕ ಮಾಧ್ಯಮ ವೇದಿಕೆಯ ಬಗ್ಗೆ ದೂರು ನೀಡಿದ್ದರು. ಇನ್ನು, ವಿವಿಧ ಅಪ್ಲಿಕೇಶನ್‌ಗಳು ಮತ್ತು ಸೇವೆಗಳ ಡೌನ್‌ಟೈಮ್ ಅನ್ನು ಟ್ರ್ಯಾಕ್ ಮಾಡುವ ಪ್ಲಾಟ್‌ಫಾರ್ಮ್ ಡೌನ್‌ಡಿಕೆಕ್ಟರ್‌ (Downdetector) ಪ್ರಕಾರ - ಈ ಸಮಸ್ಯೆಯು ಭಾರತೀಯ ಕಾಲಮಾನ ಸುಮಾರು 11 ಗಂಟೆಗೆ ಪ್ರಾರಂಭವಾಯಿತು ಮತ್ತು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಹೆಚ್ಚಾಯಿತು ಎಂದು ತಿಳಿದುಬಂದಿದೆ. ಹಾಗೂ, ವೆಬ್‌ಸೈಟ್ ಪ್ರಕಾರ, 60% ಬಳಕೆದಾರರು ಫೇಸ್‌ಬುಕ್ ಅಪ್ಲಿಕೇಶನ್‌ನೊಂದಿಗೆ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಈ ಪೈಕಿ 26% ಮತ್ತು 14% ಬಳಕೆದಾರರು ಕ್ರಮವಾಗಿ Facebook ಫೀಡ್ ಮತ್ತು ವೆಬ್‌ಸೈಟ್‌ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

ಇನ್ನೊಂದೆಡೆ, ಸುರಕ್ಷಿತೆಯ ಭೀತಿಯಿಂದ ಫೇಸ್‌ಬುಕ್‌ನಿಂದ ಭಾರತದ ಮಹಿಳೆಯರು ಹಿಮದೆ ಸರಿಯುತ್ತಿದ್ದಾರೆ ಹಾಗೂ ದೈನಂದಿನ ಬಳಕೆದಾರರ ಸಂಖ್ಯೆ ಕಡಿಮೆಯಾಗಿರುವ ಬಗ್ಗೆಯೂ ಈ ಹಿಂದೆ ವರದಿ ಬಂದಿತ್ತು. ಒಟ್ಟಾರೆ, ಈ ಎಲ್ಲ ಕಾರಣಗಳಿಂದ ಫೇಸ್‌ಬುಕ್‌ ಹಿಂಬಾಲಕರ ಸಮಖ್ಯೆ ಕಡಿಮೆಯಾಗುತ್ತಿರಬಹುದು ಎಂದು ಹೇಳಬಹುದಾಗಿದೆ. 

click me!