ತಂತ್ರಜ್ಞಾನದ ಸಹಾಯದಿಂದಾಗಿ ಮಹಿಳೆಯೊಬ್ಬರು ತಮ್ಮ ಕಳವಾಗಿದ್ದ ಮೊಬೈಲ್ ಫೋನ್ ಅನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಗುರುಗ್ರಾಮ್: ಇವತ್ತು ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಕೆಲವು ಕಷ್ಟದ ಸಮಯದಲ್ಲಿ ಈ ತಂತ್ರಜ್ಞಾನಗಳೇ ವರವಾಗಿ ಬಂದು ಕಾಪಾಡಿದ ಹಲವು ನಿದರ್ಶನಗಳಿವೆ. ಅದೇ ರೀತಿ ಈಗ ತಂತ್ರಜ್ಞಾನದ ಸಹಾಯದಿಂದಾಗಿ ಮಹಿಳೆಯೊಬ್ಬರು ತಮ್ಮ ಕಳವಾಗಿದ್ದ ಮೊಬೈಲ್ ಫೋನ್ ಅನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 28 ವರ್ಷದ ಪಲ್ಲವಿ ಕೌಶಿಕ್ (Pallavi Kaushik) ಎಂಬುವವರೇ ಹೀಗೆ ಕಳುವಾಗಿದ ಫೋನ್ ಅನ್ನು ಸ್ಮಾರ್ಟ್ ವಾಚ್ ಸಹಾಯದಿಂದ ವಾಪಸ್ ಪಡೆದವರು. ಗುರುಗ್ರಾಮದ (Gurgaon) ಪಲಂ ವಿಹಾರ್ ಸೆಕ್ಟರ್ 28ರ ನಿವಾಸಿಯಾದ ಪಲ್ಲವಿ ಕೌಶಿಕ್ ಅವರು ಮೊಬೈಲ್ ಕಳ್ಳನನ್ನು ಸ್ಮಾರ್ಟ್ ವಾಚ್ ಸಹಾಯದಿಂದ ಬೆನ್ನಟ್ಟಿದ್ದು, ಬಳಿಕ ಆತನೊಂದಿಗೆ ಹೊಡೆದಾಡಿ ಮೊಬೈಲ್ ಫೋನ್ ಅನ್ನು ವಾಪಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ಆಗಸ್ಟ್‌ನಲ್ಲಿಯೇ ನಡೆದಿದೆ ಎನ್ನಲಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ಈಗ ದಾಖಲಾಗಿದೆ. ಆದರೆ ಆರೋಪಿಯನ್ನು ಇನ್ನಷ್ಟೇ ಬಂಧಿಸಬೇಕಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ನಗರದ ಸಂಸ್ಥೆಯೊಂದರಲ್ಲಿ ಮರ್ಚಂಡೈಸರ್ (merchandiser) ಆಗಿ ಕೆಲಸ ಮಾಡುತ್ತಿರುವ ಪಲ್ಲವಿ ಅವರು ಆಗಸ್ಟ್ 28 ರಂದು ತಮ್ಮ ಮನೆ ಸಮೀಪವಿರುದ ಹುಡಾ ಮಾರ್ಕೆಟ್‌ಗೆ ಮನೆಗೆ ದಿನಸಿ ಸಾಮಾನುಗಳನ್ನು ಕೊಳ್ಳಲು ಹೋಗಿದ್ದಾಗ ಈ ಘಟನೆ ನಡೆದಿತ್ತು. ಎಫ್‌ಐಆರ್‌ನಲ್ಲಿ ದಾಖಲಾಗಿರುವಂತೆ ಆಕೆ ತಾನು ಖರೀದಿಸಿದ ಸಾಮಾಗ್ರಿಗಳ ಬಿಲ್ ಆನ್‌ಲೈನ್ ಪೇಮೆಂಟ್ ಮಾಡುತ್ತಿದ್ದಾಗ ಆಕೆಯ ಹಿಂದೆ ನಿಂತುಕೊಂಡು ಹೊಂಚು ಹಾಕುತ್ತಿದ್ದ ವ್ಯಕ್ತಿಯೊರ್ವ ಕ್ಷಣದಲ್ಲೇ ಆಕೆಯ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದ. ಈ ವೇಳೆ ಆಕೆ ಜೋರಾಗಿ ಕೂಗಿಕೊಂಡರು ಯಾರೊಬ್ಬರು ಸಹಾಯಕ್ಕೆ ಧಾವಿಸಿಲ್ಲ ಎಂದು ಆಕೆ ಹೇಳಿದ್ದಾರೆ. ಎಂದು ಪೊಲೀಸರು ಹೇಳಿದ್ದಾರೆ.
undefined
Asus ROG Phone 6, ROG Phone 6 Pro ಲಾಂಚ್, ಈ ಗೇಮಿಂಗ್ ಫೋನ್ ಬೆಲೆ ಎಷ್ಟು?
ಇದಾದ ಬಳಿಕ ಆಕೆ ಆತನನ್ನು ಸ್ವಲ್ಪ ದೂರದವರೆಗೆ ಬೆನ್ನಟ್ಟಿ ಹೋಗಿದ್ದಾರೆ. ಆದರೆ ಆತ ಅಂದು ಮೊಬೈಲ್ ಎತ್ತಿಕೊಂಡು ಸ್ಥಳದಿಂದ ಓಡಿ ಹೋಗಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ನಂತರ ಆಕೆ ತನ್ನ ಬಳಿ ಇದ್ದ ಸ್ಮಾರ್ಟ್‌ವಾಚ್ ಮೂಲಕ ತನ್ನ ಫೋನ್ ಇರುವ ಸ್ಥಳವನ್ನು ಟ್ರ್ಯಾಕ್ ಮಾಡಿದ್ದಾಳೆ. ಈ ವೇಳೆ ಫೋನ್ ಸಮೀಪದಲ್ಲಿಯೇ ಇದೆ ಎಂಬುದನ್ನು ಸ್ಮಾರ್ಟ್ ವಾಚ್ (smartwatch) ಬೀಪ್ ಸೌಂಡ್ ಮೂಲಕ ತೋರಿಸಿತ್ತು.
ಹೀಗಾಗಿ ಆಕೆ ತನ್ನ ಸ್ಮಾರ್ಟ್‌ವಾಚ್ ಹಿಡಿದುಕೊಂಡು ಸುಮಾರು ಮೂರು ಗಂಟೆಗಳ ಕಾಲ ಪಲಂ ವಿಹಾರ್ ಸೆಕ್ಟರ್ 23ರಲ್ಲಿ ಫೋನ್‌ಗಾಗಿ (mobile phone) ಅಲೆದಾಡಿದ್ದಾಳೆ. ಹೀಗೆ ಅಲೆದಾಡುತ್ತಾ ರಾತ್ರಿ 9 ಗಂಟೆ ಸುಮಾರಿಗೆ ತನ್ನ ಮೊಬೈಲ್ ಫೋನ್ ಇರುವ ನಿಖರವಾದ ಸ್ಥಳ ಪತ್ತೆ ಮಾಡುವಲ್ಲಿ ಆಕೆ ಯಶಸ್ವಿಯಾಗಿದ್ದಾಳೆ. ಹೀಗೆ ಸ್ಥಳ ಪತ್ತೆ ಮಾಡಿದಾಗ ಈಕೆಯ ಫೋನ್ ಕಸಿದ ವ್ಯಕ್ತಿ, ನಿಲ್ಲಿಸಿದ್ದ ಮೋಟಾರ್ ಸೈಕಲ್ (motorcycle) ಮೇಲೆ ಕುಳಿತುಕೊಂಡು ಈಕೆಯ ಮೊಬೈಲ್ ಫೋನ್ ಬಳಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕದ್ದ ಮೊಬೈಲ್ ಫೋನ್ ಅನ್ನು ಒತ್ತಿಕೊಂಡು ನಿಲ್ಲಿಸಿದ್ದ ಮೋಟಾರ್ ಸೈಕಲ್ ಮೇಲೆ ರಾಜಾರೋಷವಾಗಿ ಪೋಸ್ ಕೊಡುತ್ತಿದ್ದ ಕಳ್ಳನನ್ನು ನೋಡಿದ ಯುವತಿ, ಸೀದಾ ಆತನಿಗೆ ತಿಳಿಯದಂತೆ ತನ ಹಿಂಬದಿಯಿಂದ ಹೋಗಿ ಆತನ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದಿದ್ದಾಳೆ. ಅಚಾನಕ್ ಆಗಿ ಬಿದ್ದ ಏಟಿನಿಂದಾಗಿ ಆತನ ಕೈಯಲ್ಲಿದ್ದ ಫೋನ್ ಕೆಳಗೆ ಬಿದ್ದಿದೆ. ಈ ವೇಳೆ ಯುವತಿ ಮೊಬೈಲ್ ಎತ್ತಿಕೊಂಡರೆ ಆತ ಕಾಲಿಗೆ ಬುದ್ದಿ ಹೇಳಿದ್ದಾನೆ. ನಂತರ ಪಲ್ಲವಿ ಫೋನ್‌ನೊಂದಿಗೆ ಮನೆಗೆ ಬಂದಿದ್ದಾಳೆ. ಮರುದಿನ ಪಲಂ ವಿಹಾರ್‌ನ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾಳೆ.
ಭಾರತದಲ್ಲಿ OnePlus Nord 2T 5G ಲಾಂಚ್, ಏನೆಲ್ಲ ಫೀಚರ್ಸ್ ಇವೆ?
ಅವಳು ಹಿಂದಿನಿಂದ ಆ ವ್ಯಕ್ತಿಯ ಹತ್ತಿರ ಬಂದು ಅವನ ತಲೆಗೆ ಬಲವಾಗಿ ಹೊಡೆದಳು. ಆ ವ್ಯಕ್ತಿ ಬಿಡಿಸಿಕೊಳ್ಳಲು ಯತ್ನಿಸಿದ್ದು, ಆತನ ಕೈಯಿಂದ ಫೋನ್ ಬಿದ್ದಿದೆ. ಫೋನ್ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಪಲ್ಲವಿ ತನ್ನ ಫೋನ್ ತೆಗೆದುಕೊಂಡು ಮನೆಗೆ ಮರಳಿದಳು. ಮರುದಿನ ಪಾಲಂ ವಿಹಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಮೊಬೈಲ್ ಫೋನ್ ಪಲ್ಲವಿಗೆ ವಾಪಸ್ ಸಿಕ್ಕಿದ್ದರೂ ಆಕೆಯ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 50,865 ರೂಪಾಯಿ ನಗದನ್ನು ಮೊಬೈಲ್ ಕಳ್ಳ ಯುಪಿಐ ಪಿನ್ (UPI pin) ಬಳಸಿ ಬೇರೆಡೆಗೆ ವರ್ಗಾಯಿಸಿಕೊಂಡಿದ್ದಾನೆ. ಪೊಲೀಸರು ಈಗ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 379(ಕಳ್ಳತನ), 379A, 420(ಮೋಸ) ಅಡಿ ಪ್ರಕರಣ ದಾಖಲಾಗಿದೆ.