Clubhouse app ಲೋಗೋದಲ್ಲಿರುವ ಆ ಮಹಿಳೆ ಯಾರು?

By Suvarna NewsFirst Published Jun 23, 2021, 4:49 PM IST
Highlights

ಸೋಷಿಯಲ್ ಮೀಡಿಯಾಗಳ ಪೈಕಿ ಇತ್ತೀಚಿನ ದಿನಗಳಲ್ಲಿ ಕ್ಲಬ್‌ಹೌಸ್ ಆಪ್‌ ಹೆಚ್ಚು ಸದ್ದು ಮಾಡುತ್ತಿದೆ. ಆಡಿಯೋ ಆಧರಿತ  ವೇದಿಕೆಯಾಗಿರುವ ಈ ಕ್ಲಬ್‌ಹೌಸ್ ಹೆಚ್ಚು ಪ್ರಚಲಿತದಲ್ಲಿದ್ದು, ಅತಿ ವೇಗದಲ್ಲಿ ಬೆಳವಣಿಗೆ ಕಾಣುತ್ತಿದೆ. ಹಾಗೆಯೇ, ಈ ಆಪ್‌ನ ಲೋಗೋದಲ್ಲಿರುವ ಮಹಿಳೆ ಯಾರೆಂಬ ಪ್ರಶ್ನೆ ಸಹಜ. ಆ ಬಗ್ಗೆ ಮಹಿಳೆ ನಿಮಗೆ ಏನು ತಿಳಿದಿದೆ?

ದಿನದಿಂದ ದಿನಕ್ಕೆ ವ್ಯಾಪಕತೆ ಹಾಗೂ ಪ್ರಖ್ಯಾತಿಯನ್ನು ಹೊಸ ಸನ್ಸೇಷನ್ ಕ್ಲಬ್‌ಹೌಸ್ ಆಪ್‌ ಪಡೆದುಕೊಳ್ಳುತ್ತಿದೆ. ಇನ್ವೈಟ್ ಓನ್ಲೀ ಆಪ್‌ ಆಗಿರುವ ಕ್ಲಬ್‌ಹೌಸ್, ಆಡಿಯೋ ಆಧರಿತ ಸೋಷಿಯಲ್ ಮೀಡಿಯಾ ಎನಿಸಿಕೊಂಡಿದೆ. 

ನೀವು ಕ್ಲಬ್‌ಹೌಸ್ ಆಪ್‌ನಲ್ಲಿ ಖಾತೆಯನ್ನು ಹೊಂದಿದ್ದರೆ, ಆಪ್‌ ಲೋಗೋದಲ್ಲಿರುವ ಮಹಿಳೆಯ ಚಿತ್ರವನ್ನು ಗಮನಿಸುತ್ತೀರಿ. ಆದರೆ ಯಾಕೆ ಯಾರೆಂದು ನಿಮಗೆ ಗೊತ್ತೆ? ಕ್ಲಬ್‌ಹೌಸ್‌ ಆಪ್‌ನ ಪ್ರಸಕ್ತ ಲೋಗೋದಲ್ಲಿರುವ ಮಹಿಳೆ ಒಬ್ಬಳ ಪ್ರಖ್ಯಾತ ಕಲಾವಿದೆ ಮತ್ತು ಹೋರಾಟಗಾರ್ತಿ.

ಹೌದು ನಿಜ, ಲೋಗೋದಲ್ಲಿರುವ ಮಹಿಳೆ ಹೆಸರು ಡ್ರು ಕಟವೋಕ. ಇವರು ಏಷ್ಯನ್ ಅಮೆರಿಕನ್ ಕಲಾವಿದೆ ಮತ್ತು ಕಾರ್ಯಕರ್ತೆಯೂ ಹೌದು. ಈ ಆಪ್‌ ಮೇಲೆ ಕಾಣಿಸಿಕೊಳ್ಳುತ್ತಿರುವ ಮೊದಲ ವಿಶುವಲ್ ಆರ್ಟಿಸ್ಟ್ ಹಾಗೂ ಏಷ್ಯನ್ ಅಮೆರಿಕನ್ ವ್ಯಕ್ತಿಯಾಗಿದ್ದಾರೆ. ಹಾಗೆಯೇ ಈ ಲೋಗೋದಲ್ಲಿ ಕಾಣಿಸಿಕೊಳ್ಳುತ್ತಿರುವ 8ನೇ ವ್ಯಕ್ತಿ ಇವರಾಗಿದ್ದಾರೆ. 

ಕನ್ನಡ, ಹಿಂದಿ ಬಳಿಕ ಬಂಗಾಳಿ, ಪಂಜಾಬಿ, ತೆಲುಗು ಭಾಷೆ ಸೇರಿಸಿದ ಸ್ನ್ಯಾಪ್‌ಚಾಟ್

ಕಟವೋಕ ಅವರು ಕ್ಲಬ್‌ಹೌಸ್‌ ಆರಂಭಿಕ ಸದಸ್ಯೆಯೂ ಹೌದು. 2020 ಮಾರ್ಚ್‌ನಲ್ಲಿ ಆರಂಭವಾದಾಗಿನಿಂದಲೂ ಅವರು ಸದಸ್ಯೆಯಾಗಿದ್ದಾರೆ. #StopAsianHate ಕ್ಯಾಂಪೇನ್‌ಗೆ ಕ್ಲಬ್‌ಹೌಸ್ ರೂಮ್ಸ್ ಮೂಲಕವೇ 100,000 ಡಾಲರ್ ನಿಧಿಯನ್ನು ಅವರು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜನಾಂಗೀಯ ನ್ಯಾಯಕ್ಕಾಗಿ ಕ್ಲಬ್‌ಹೌಸ್‌ನಲ್ಲಿ  #24HoursofLove ಇವೆಂಟ್ ಕೂಡ ನಡೆಸಿ ಯಶಸ್ವಿಯಾಗಿದ್ದರು.
 

ಕ್ಲಬ್‌ಹೌಸ್ ಬೆಳವಣಿಗೆಯಲ್ಲಿ ಕಟವೋಕ ಅವರ ಪಾತ್ರವೂ ಇದೆ. ಕಂಪನಿಯೊಳಗಿನ ನಾಯಕತ್ವದ ತಂಡವನ್ನು ಹೊಸ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸಲು ಮತ್ತು ಪ್ರಾರಂಭಿಸಲು ಮನವೊಲಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಇದರಿಂದಾಗಿ ಬಳಕೆದಾರರಿಗೆ ಅಪ್ಲಿಕೇಶನ್‌ನಲ್ಲಿಯೇ ಹಲವಾರು ಕಾರಣಗಳಿಗೆ ಹಣವನ್ನು ಕೊಡುಗೆ ನೀಡಲು ಅನುವು ಮಾಡಿಕೊಡುತ್ತದೆ.

ಏನಿದು ಕ್ಲಬ್‌ಹೌಸ್?
ಕ್ಲಬ್ ಹೌಸ್ ಎಂಬ ಆಫ್ ವಾಯ್ಸ್ ಆಧರಿತ ಸೋಷಿಯಲ್ ಮೀಡಿಯಾ ಆಪ್ ಆಗಿದೆ. ಈ ಮೊದಲು ಈ ಆಪ್ ಐಫೋನ್ ಬಳಕೆದಾರರಿಗೆ ಮಾತ್ರವೇ ಲಭ್ಯವಿತ್ತು. ಈಗ ಆಂಡ್ರಾಯ್ಡ್ ಬಳಕೆದಾರರಿಗೂ ಸಿಗುತ್ತಿದೆ.  ಕ್ಲಬ್‌ಹೌಸ್ ಎಂಬುದು ಆಡಿಯೋ ಸರ್ವರ್ ರೀತಿಯಂಥದ್ದು, ನೀವು 5,000 ಬಳಕೆದಾರರವರೆಗೂ ವಿಸ್ತರಿಸಬಹುದು. ಒಮ್ಮೆ ಬಳಕೆದಾರರು ಇದರೊಳಗೆ ಪ್ರವೇಶ ಪಡೆದುಕೊಂಡರೆ, ಬಳಕೆದಾರರು ರೂಮ್ಸ್‌  ಹೋಗಬಹುದು. ನಿಮ್ಮ ಆಸಕ್ತಿಗೆ ಅನುಗುಣವಾಗಿ ನೀವು ಯಾವುದೇ ರೂಮ್ಸ್‌ಗೆ ಹೋಗಿ ಅಲ್ಲಿ ನಡೆಯುವ ಚರ್ಚೆಯಲ್ಲಿ ಕೇಳಬಹುದು, ಇಲ್ಲವೇ ಭಾಗವಹಿಸಬುಹದು. 

ಆ್ಯಪ್ಸ್ ಸಹಾಯದಿಂದ ಹೋಮ್‌ವರ್ಕ್, ಸಮೀಕ್ಷೆಯಲ್ಲಿ ಬಹಿರಂಗವಾಯ್ತು ಮಾಹಿತಿ!

ಈ ಕ್ಲಬ್‌ಹೌಸ್‌ಗೆ ನೇರವಾಗಿ ಸೇರಲಾಗುವುದಿಲ್ಲ. ಈಗಾಗಲೇ ಕ್ಲಬ್ ಹೌಸ್ ಬಳಸುತ್ತಿರುವ ಬಳಕೆದಾರರು ನಿಮ್ಮನ್ನು ಇನ್ವೈಟ್‌ ಮಾಡಬೇಕು. ಆಗ ನೀವು ನಿಮ್ಮ ಖಾತೆಯನ್ನು ತೆರೆಯಬಹುದು. ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್‌ಗಳಿಂದ ಈ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು.  ನಿಮ್ಮ ಕತೆಗಳನ್ನು, ವಿಚಾರ ವಿನಿಮಯ, ಸ್ನೇಹ ಸಂಪಾದನೆ, ಹೊಸ ವ್ಯಕ್ತಿಗಳನ್ನು ಈ ಮೂಲಕ  ಭೇಟಿ ಮಾಡಬಹುದು.

ಒಮ್ಮೆ ನೀವು ಕ್ಲಬ್‌ಹೌಸ್‌ನಲ್ಲಿ ಖಾತೆ ತೆರೆದು ಪ್ರವೇಶ ಪಡೆಯಲು ಸಾಧ್ಯವಾದರೆ, ಈಗಾಗಲೇ ಅಲ್ಲಿರುವ ಜನರನ್ನು, ಸೆಲೆಬ್ರಿಟಿಗಳನ್ನು ನೀವು ಫಾಲೋ ಮಾಡಬಹುದು. ಅಥವಾ ಕ್ಲಬ್, ಅಥವಾ ನಿರ್ದಿಷ್ಟ ವಿಷಯಗಳ್ನು ಮಾತನಾಡುವವರನ್ನು ನೀವು ಫಾಲೋ ಮಾಡಬಹುದು. ನೀವು ಯಾವುದೇ ರೂಮ್ಸ್‌ಗೆ ಎಂಟ್ರಿ ಪಡೆದ ತಕ್ಷಣವೇ ಫೋನ್ ಆಡಿಯೋ ಆಟೋಮ್ಯಾಟಿಕ್ ಆಗಿ ಆನ್ ಆಗುತ್ತದೆ. ಆಗ ಈ ರೂಮ್‌ನಲ್ಲಿ ಮಾತನಾಡುತ್ತಿರುವವರ ಧ್ವನಿ ನಿಮಗೆ ಕೇಳಿಸುತ್ತದೆ. 

ಯಾರು ರೂಮ್ ಕ್ರಿಯೆಟ್ ಮಾಡಿರುತ್ತಾರೋ ಅವರೇ ಆ ರೂಮ್‌ ಅಂತಿಮ ನಿರ್ಧಾರ ಕೈಗೊಳ್ಳುವ ವ್ಯಕ್ತಿಯಾಗಿರುತ್ತಾರೆ. ಒಂದು ವೇಳೆ, ನೀವೇನಾದರೂ ಅಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಪಾಲ್ಗೊಳ್ಳಬೇಕಿದ್ದರೆ, ಹ್ಯಾಂಡ್ಸ್ ಅಪ್ ಐಕಾನ್ ಬಳಸಿಕೊಳ್ಳಬೇಕು.  ಹಾಗಿದ್ದೂ, ಯಾರು ಮಾತನಾಡಬೇಕು ಎಂಬ ನಿರ್ಧಾರವನ್ನು ರೂಮ್ ಕ್ರಿಯೇಟ್ ಮಾಡಿವರೇ ಕೈಗೊಳ್ಳುತ್ತಾರೆ.

ಹೊಸ ಸೆನ್ಸೇಷನ್, ಕ್ಲಬ್‌ಹೌಸ್ ಹೌಸ್‌ಫುಲ್; ಏನಿದು ಆ್ಯಪ್? ಹೇಗೆ ಕೆಲಸ ಮಾಡುತ್ತದೆ?

ಸದ್ಯಕ್ಕೆ ಭಾರತದಲ್ಲಂತೂ ಈ ಕ್ಲಬ್ ಹೌಸ್ ಆಫ್ ಹೆಚ್ಚು ಜನಪ್ರಿಯವಾಗುತ್ತದೆ. ಬಳಕೆದಾರರು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದಾರೆ. ಹೀಗಿದ್ದೂ, ಆ ಆಪ್ ಬಗ್ಗೆ ಒಂದಿಷ್ಟು ವಿವಾದಗಳಿವೆ, ಸುರಕ್ಷತೆಯ ಹಿನ್ನೆಲೆಯಲ್ಲಿ ಹಲವು ದೇಶಗಳು ಈ ಆಪ್ ಅನ್ನು ನಿಷೇಧಿಸಿವೆ. ಓಮನ್, ಜೋರ್ಡನ್ ಮತ್ತು ಚೀನಾ ಸೇರಿದಂತೆ ಹಲವು ರಾಷ್ಟ್ರಗಳು ಈ ಆಪ್ ಮೇಲೆ ಸಂಪೂರ್ಣವಾಗಿ ನಿಷೇಧ ಹೇರಿವೆ. 

click me!