PhonePeಯಿಂದ ಭಾರತದ ಮೊದಲ ಆಟೋ ಟಾಪ್ ಅಪ್ ವ್ಯಾಲೆಟ್ ಬಿಡುಗಡೆ!

Published : Jun 22, 2021, 10:04 PM IST
PhonePeಯಿಂದ ಭಾರತದ ಮೊದಲ ಆಟೋ ಟಾಪ್ ಅಪ್ ವ್ಯಾಲೆಟ್ ಬಿಡುಗಡೆ!

ಸಾರಾಂಶ

PhonePeಯಿಂದ ಹೊಸ ಫೀಚರ್ ಸೇರ್ಪಡೆ ವ್ಯಾಲೆಟ್ ಆಟೋ ಟಾಪ್-ಅಪ್ ಫೀಚರ್‌ ಬಿಡುಗಡೆ ದೇಶದ ಅತ್ಯಂತ ಸುಲಭ ಡಿಜಿಟಲ್ ವ್ಯಾಲೆಟ್  

ನವದೆಹಲಿ(ಜೂ.22) : ಭಾರತದ ಅತಿ ದೊಡ್ಡ ಡಿಜಿಟಲ್‌ ಪೇಮೆಂಟ್‌ ಕಂಪನಿಯಾಗಿರುವ PhonePe ತನ್ನ ಗ್ರಾಹಕರಿಗೆ UPI e-ಮ್ಯಾಂಡೇಟ್‌ ಅನ್ನು ಬಳಸಿಕೊಂಡು ವ್ಯಾಲೆಟ್ ಆಟೋ ಟಾಪ್-ಅಪ್ ಫೀಚರ್‌ ಅನ್ನು ಬಿಡುಗಡೆ ಮಾಡಿದೆ. ಈ ಫೀಚರ್‌ PhonePe ಗ್ರಾಹಕರಿಗೆ ಒಮ್ಮೆ UPI ಇ-ಮ್ಯಾಂಡೇಟ್ ಹೊಂದಿಸಲು ಅನುವು ಮಾಡಿಕೊಡುತ್ತದೆ.  ಅದರ ನಂತರ PhonePe ಸ್ವಯಂಚಾಲಿತವಾಗಿ ವ್ಯಾಲೆಟ್‌ ಬ್ಯಾಲೆನ್ಸ್‌ ಕನಿಷ್ಠ ಮಟ್ಟಕ್ಕಿಂತ ಕಡಿಮೆಯಾದಾಗ ಸ್ವಯಂಚಾಲಿತವಾಗಿ ಮೇಲಕ್ಕೇರಿಸುತ್ತದೆ.

ಐಟಿ ರಿಟರ್ನ್ಸ್‌ಗೆ ಹೊಸ ಪೋರ್ಟಲ್: ತೆರಿಗೆದಾರರಿಗಿಲ್ಲ ಹೊರೆ: ಈ ಎಲ್ಲಾ ಆಯ್ಕೆ ಇರುತ್ತೆ!

PhonePe ಗ್ರಾಹಕರು ಪ್ರತಿ ಬಾರಿ ತಮ್ಮ ಬ್ಯಾಲೆನ್ಸ್‌ ಅನ್ನು ವ್ಯಾಲೆಟ್‌ಗೆ ಹಾಕುತ್ತಾ ಇರಬೇಕೆಂದಿಲ್ಲ, ಆದರೆ ವ್ಯಾಲೆಟ್ ಬಳಸಿ ಅನೇಕ ಪಾವತಿಗಳನ್ನು ಮಾಡಬಹುದು. ಇದು PhonePe ವ್ಯಾಲೆಟ್ ಗ್ರಾಹಕರಿಗೆ ಸಾಕಷ್ಟು ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ, ಜೊತೆಗೆ ಹೆಚ್ಚಿನ ವಹಿವಾಟಿನ ಯಶಸ್ಸಿನ ಪ್ರಮಾಣವನ್ನು (~ 99.99%) ಖಾತ್ರಿಗೊಳಿಸುತ್ತದೆ. UPI ಇ-ಮ್ಯಾಂಡೇಟ್‌ ಅನ್ನು ಒಮ್ಮೆ ಹೊಂದಿಸಿದ ನಂತರ, ಬಳಕೆದಾರರು ಯಾವುದೇ ಪಿನ್ ಅನ್ನು ನಮೂದಿಸುವ ಅಗತ್ಯವಿಲ್ಲ ಅಥವಾ ಪ್ರತಿ ಬಾರಿ ತಮ್ಮ ವ್ಯಾಲೆಟ್‌ ಲೋಡ್ ಮಾಡಲು ಅಥವಾ ಪಾವತಿ ಮಾಡಲು ಬಯಸಿದಾಗ ಒಟಿಪಿಗಾಗಿ ಕಾಯಬೇಕಾಗಿಲ್ಲ.

ಆಟೋ ಟಾಪ್‌ ಅಪ್‌ ಉಪಯೋಗಿಸುವುದರ ಪ್ರಯೋಜನಗಳು:
ಬ್ಯಾಲೆನ್ಸ್‌ ಕನಿಷ್ಠ ಮಟ್ಟಕ್ಕಿಂತ ಕಡಿಮೆ ಆದಾಗ PhonePe  ವ್ಯಾಲೆಟ್‌ ಸ್ವಯಂಚಾಲಿತವಾಗಿ ಆಟೋ ಟಾಪ್‌ ಅಪ್‌ ಆಗುತ್ತದೆ.
ಹೆಚ್ಚಿನ ವಹಿವಾಟಿನ ಯಶಸ್ಸಿನ ಪ್ರಮಾಣದಿಂದ ಪ್ರತಿ ಬಾರಿಯೂ ಬ್ಯಾಲೆನ್ಸ್‌ ಶೂನ್ಯಕ್ಕೆ ಇಳಿದಾಗ ಬಳಕೆದಾರರು ತಮ್ಮ ವ್ಯಾಲೆಟ್‌ ಲೋಡ್ ಮಾಡಬೇಕಾಗಿಲ್ಲ.

ಇ-ಮ್ಯಾಂಡೇಟ್‌ಗಳು UPI ಗೆ ಒಂದು ದೊಡ್ಡ ಹೆಜ್ಜೆಯಾಗಿದೆ. ದೊಡ್ಡ ಪ್ರಮಾಣದ ಪಾವತಿಗಳನ್ನು ಮಾಡುವ ಮುಂದಿನ ಹಂತಕ್ಕೆ ವ್ಯವಹಾರಗಳು ಸಾಗಲು ಇದು ಸಹಾಯ ಮಾಡುತ್ತದೆ, ಅದು ಹೆಚ್ಚಿನ ಸಂಖ್ಯೆಯ ಗ್ರಾಹಕ ಸನ್ನಿವೇಶಗಳಿಗೆ ಬಾಗಿಲು ತೆರೆಯುತ್ತದೆ. PhonePe ಗ್ರಾಹಕರಿಗೆ ವ್ಯಾಲೆಟ್ ಆಟೋ ಟಾಪ್-ಅಪ್ ಆರಂಭದೊಂದಿಗೆ ನಾವು ಈ ವೈಶಿಷ್ಟ್ಯವನ್ನು ಎಲ್ಲಾ ರೀತಿಯಿಂದಲೂ ಪರೀಕ್ಷಿಸುತ್ತಿದ್ದೇವೆ ಮತ್ತು ಮುಂಬರುವ ವಾರಗಳಲ್ಲಿ ಇದನ್ನು ವ್ಯಾಪಾರಿಗಳು, ಪಾವತಿ ಸಂಗ್ರಾಹಕರು ಹಾಗೂ ಇತರ ಅಪ್ಲಿಕೇಶನ್‌ಗಳಿಗೆ ಲಭ್ಯವಾಗುವಂತೆ ಕೆಲಸ ಮಾಡುತ್ತಿದ್ದೇವೆ. ಡಿಜಿಟಲ್ ಪಾವತಿ ವ್ಯವಸ್ಥೆಗೆ UPI ಇ-ಮ್ಯಾಂಡೇಟ್ ಮಹತ್ವದ್ದಾಗಿದೆ. ಏಕೆಂದರೆ ಇದು ಗ್ರಾಹಕರಿಗೆ ನಿರಂತರ ನಿಯಮಿತ ಪಾವತಿ ಅನುಭವವನ್ನು ಒದಗಿಸುವ ಆರ್‌ಬಿಐ ದೃಷ್ಟಿಯನ್ನು ಮುಂದಕ್ಕೆ ಸಾಗಿಸುತ್ತದೆ.

ವೇತನ ಪಡೆಯೋರಿಗೊಂದು ಗುಡ್‌ ನ್ಯೂಸ್, ನೂತನ ಬ್ಯಾಂಕಿಂಗ್ ವ್ಯವಸ್ಥೆ ಜಾರಿ!

PhonePe ಗ್ರಾಹಕರು ಕೆಲವು ಸರಳ ಹಂತಗಳಲ್ಲಿ ವ್ಯಾಲೆಟ್ ಆಟೋ ಟಾಪ್-ಅಪ್ ಅನ್ನು ಸಕ್ರಿಯಗೊಳಿಸಬಹುದು. ಅವರು ಮಾಡಬೇಕಾಗಿರುವುದು PhonePe ಅಪ್ಲಿಕೇಶನ್ ಮುಖಪುಟದಲ್ಲಿ ವ್ಯಾಲೆಟ್ ವಿಭಾಗದಲ್ಲಿರುವ ‘ಟಾಪ್-ಅಪ್’ ಐಕಾನ್ ಕ್ಲಿಕ್ ಮಾಡಿ. ನಂತರ ಗ್ರಾಹಕರು ತಮ್ಮ ಆಯ್ಕೆಯ ಮೊತ್ತವನ್ನು ಟಾಪ್‌ ಅಪ್‌ ನಲ್ಲಿ ನಮೂದಿಸಬೇಕಾಗುತ್ತದೆ. ಆಟೋ ಟಾಪ್-ಅಪ್ ಅನ್ನು ಸಕ್ರಿಯಗೊಳಿಸಲು ಗ್ರಾಹಕರಿಗೆ ಪಾಪ್-ಅಪ್ ಅನ್ನು ಸ್ವಯಂಚಾಲಿತವಾಗಿ ತೋರಿಸಲಾಗುತ್ತದೆ. ಗ್ರಾಹಕರು 1,000 ರಿಂದ 5,000 ರೂಗಳವರೆಗಿನ ಆಟೋ ಟಾಪ್-ಅಪ್ ಮೊತ್ತವನ್ನು ನಮೂದಿಸಬೇಕು ಮತ್ತು ಸ್ಕ್ರೀನ್‌ ಕೆಳಭಾಗದಲ್ಲಿರುವ ‘ಟಾಪ್-ಅಪ್ & ಸೆಟ್ ಆಟೋ ಟಾಪ್-ಅಪ್’ ವ್ಯಾಲೆಟ್ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು UPI ಪಿನ್ ನಮೂದಿಸಿ. ಗ್ರಾಹಕರ ಬ್ಯಾಂಕಿನಿಂದ ದೃಢೀಕರಣ ಯಶಸ್ವಿಯಾದ ಬಳಿಕ, ವ್ಯಾಲೆಟ್ ಆಯ್ಕೆಮಾಡಿದ ಮೊತ್ತಕ್ಕೆ ತಕ್ಷಣ ಮರುಚಾರ್ಜ್ ಆಗುತ್ತದೆ ಮತ್ತು ಸ್ವಯಂ-ಟಾಪ್ ಅಪ್ ಮ್ಯಾಂಡೇಟ್‌ ಅನ್ನು ರಚಿಸಲಾಗುತ್ತದೆ. 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?