ಇನ್ಸುಲಿನ್‌ ತಂಪಾಗಿಡಲು ಪುಟ್ಟಫ್ರಿಜ್‌, ಗೋದ್ರೆಜ್‌ ಇನ್‌ಸುಲಿಕೂಲ್‌ ಪೋರ್ಟೆಬಲ್‌ ರೆಫ್ರಿಜರೇಟರ್‌!

By Suvarna NewsFirst Published Jan 17, 2023, 5:51 PM IST
Highlights

ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಮುಖ್ಯ. ಸಣ್ಣ ಸಮಸ್ಯೆಯೂ ಮುಂದೆ ಅತೀ ದೊಡ್ಡ ಅಪಾಯಕ್ಕೆ ಕಾರಣವಾಗಲಿದೆ. ಅದರಲ್ಲೂ ಸಕ್ಕರೆ ಕಾಯಿಲೆ ಸೇರಿದಂತೆ ಇತರ ಕೆಲ ಸಮಸ್ಯೆಗೆ ಇನ್ಸುಲಿನ್ ಅಗತ್ಯ. ಆಫೀಸ್, ಪ್ರವಾಸದ ಸಂದರ್ಭದಲ್ಲಿ ಇನ್ಸುಲಿನ್ ತೆಗೆದುಕೊಳ್ಳುವ ಸಮಸ್ಯೆ ನಿವಾರಿಸಲು ಗೊದ್ರೆಜ್  ಪೋರ್ಟೆಬಲ್‌ ರೆಫ್ರಿಜರೇಟರ್‌ ಬಿಡುಗಡೆ ಮಾಡಿದೆ. 

ಸಕ್ಕರೆ ಕಾಯಿಲೆ ಜಾಸ್ತಿಯಾದರೆ, ಮಾತ್ರೆ ನಡೆಯೋದಿಲ್ಲ, ಇನ್ಸುಲಿನ್‌ ತಗೊಳ್ಳಿ ಅನ್ನುತ್ತಾರೆ. ಇನ್ಸುಲಿನ್‌ ದಿನಕ್ಕೆ ಮೂರು ಸಲ ತಗೋಬೇಕಾಗುತ್ತೆ ಅನ್ನುತ್ತಾರೆ. ಆದರೆ ಇನ್ಸುಲಿನ್‌ ಬಾಟಲಿಯನ್ನು ಜೇಬಲ್ಲಿಟ್ಟುಕೊಂಡು ಓಡಾಡಲು ಆಗುವುದಿಲ್ಲ. ಅದನ್ನು 2-8 ಡಿಗ್ರಿ ಸೆಲ್ಸಿಯಸ್‌ ವಾತಾವರಣದಲ್ಲಿ ಇಡಬೇಕು ಅನ್ನುತ್ತಾರೆ. ಆದರೆ ಆಫೀಸಿಗೆ ಹೋಗುವಾಗ, ಪ್ರವಾಸ ಹೋಗುವಾಗ ಇನ್ಸುಲಿನ್‌ ಒಯ್ಯುವುದಾದರೂ ಹೇಗೆ?

ಅದಕ್ಕಾಗಿಯೇ ಗೋದ್ರೆಜ್‌ ಈಗ ಇನ್‌ಸುಲಿಕೂಲ್‌ ಎಂಬ ಪೋರ್ಟೆಬಲ್‌ ರೆಫ್ರಿಜರೇಟರ್‌ ಹೊರತಂದಿದೆ. ಇದೊಂದು ಹೆಗಲಿಗೆ ಹಾಕಿಕೊಂಡು ಒಯ್ಯಬಹುದಾದ ಲಂಚ್‌ಬಾಕ್ಸ್‌ ಸೈಜಿನ ಫ್ರಿಜ್‌. ನೀವು ಇದರಲ್ಲಿ ಇನ್ಸುಲಿನ್‌ ಸೀಸೆಗಳನ್ನು ಇಡಬಹುದು. ಸುಮಾರು ಒಂದೂವರೆ ಕಿಲೋ ಭಾರದ ಈ ತಂಪು ಪೆಟ್ಟಿಗೆಯನ್ನು ಹೆಗಲಿಗೆ ಹಾಕಿಕೊಳ್ಳಲು ಸ್ಟ್ರಾಪ್‌ ಕೂಡ ಇದೆ. ಇನ್ಸುಲಿನ್‌ ಸೀಸೆಯ ಜತೆ ಇನ್ಸುಲಿನ್‌ ಪೆನ್‌ ಕೂಡ ಇದರೊಳಗೆ ಇಡಲು ಜಾಗವಿದೆ.

ಸೋಪಿನ ಬೆಲೆಯಲ್ಲಿ ಶೇ.15ರಷ್ಟು ಇಳಿಕೆ;ಲಕ್ಸ್, ಲೈಫ್ ಬಾಯ್, ಗೋದ್ರೇಜ್ ಸೋಪುಗಳು ಅಗ್ಗ

ಇದನ್ನು ಪವರ್‌ಗೆ ಕನೆಕ್ಟ್ ಮಾಡಿದ ತಕ್ಷಣವೇ ಒಳಗಿನ ಉಷ್ಣಾಂಶ ಎಷ್ಟಿದೆ ಎಂದು ತೋರಿಸುತ್ತದೆ. ಕಾರ್‌ ಚಾರ್ಜರ್‌ ಮೂಲಕವೂ ಚಾಜ್‌ರ್‍ ಮಾಡಬಹುದಾದ ಇದನ್ನು ನೀವು ಪವರ್‌ ಬ್ಯಾಂಕ್‌ ಮೂಲಕವೂ ಚಾಜ್‌ರ್‍ ಮಾಡಬಹುದು. ಈ ಉಪಕರಣದ ಜತೆಗೇ 20000 ಎಂಎಎಚ್‌ ಪವರ್‌ ಬ್ಯಾಂಕ್‌ ಕೂಡ ಸಿಗುತ್ತದೆ. ಅದರ ಮೂಲಕ ನಾಲ್ಕು ಗಂಟೆಯ ಕಾಲ ಫ್ರಿಜ್‌ ತಣ್ಣಗಿಡಬಹುದು. ಇದರ ಬೆಲೆ .8,499. ಒಂದು ವರುಷದ ವಾರಂಟಿಯೂ ಇದೆ.

ಗೋದ್ರೆಜ್ ಈಗಾಗಲೇ ಹಲವು ಗೃಹಪಯೋಗಿ ಉತ್ಪನ್ನಗಳಲ್ಲಿ ಮನೆ ಮಾತಾಗಿದೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಗೋದ್ರೆಜ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇತ್ತೀಚೆಗೆ ಗೋದ್ರೆಜ್  ಇಯಾನ್‌ ವೆಲ್ವೆಟ್‌ ಸರಣಿಯ ವಾಶಿಂಗ್‌ ಮೆಶಿನ್‌ಗಳನ್ನು ಮಾರುಕಟ್ಟೆಗೆ ಅರ್ಪಿಸಿದೆ. 6.5 ಕೆಜಿ, 7 ಕೆಜಿ, 7.5 ಕೆಜಿ ಸಾಮರ್ಥ್ಯದ ವಾಶಿಂಗ್‌ ಮೆಶಿನ್‌ಗಳು ಲಭ್ಯವಿದೆ. ಇವುಗಳ ಆರಂಭಿಕ ಬೆಲೆ  31,000 ರೂಪಾಯಿ. 
 

click me!