ಗೂಗಲ್‌ ಕ್ರೋಮ್‌, ಮೊಝಿಲ್ಲಾಗೆ ಸಡ್ಡು: ಸರ್ಕಾರದಿಂದ ಹೊಸ ವೆಬ್‌ ಬ್ರೌಸರ್‌!

By Kannadaprabha News  |  First Published Aug 10, 2023, 10:55 AM IST

ಆತ್ಮನಿರ್ಭರ ಭಾರತ ಪರಿಕಲ್ಪನೆಯ ಭಾಗವಾಗಿ ದೇಶೀಯವಾಗಿ ವೆಬ್‌ ಬ್ರೌಸರ್‌ ಅಭಿವೃದ್ಧಿ ಪಡಿಸಲು ಸರ್ಕಾರ ಮುಂದಾಗಿದ್ದು, ಇಂತಹ ಕಂಪನಿಗಳಿಗೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ. ಇದು ಭಾರತೀಯರ ಡಿಜಿಟಲ್‌ ಮಾಹಿತಿಯನ್ನು ಸಂರಕ್ಷಿಸಲು ಸಹಾಯ ಮಾಡಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.


ನವದೆಹಲಿ: ಆತ್ಮನಿರ್ಭರ ಭಾರತ ಪರಿಕಲ್ಪನೆಯ ಭಾಗವಾಗಿ ದೇಶೀಯವಾಗಿ ವೆಬ್‌ ಬ್ರೌಸರ್‌ ಅಭಿವೃದ್ಧಿ ಪಡಿಸಲು ಸರ್ಕಾರ ಮುಂದಾಗಿದ್ದು, ಇಂತಹ ಕಂಪನಿಗಳಿಗೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ. ಇದು ಭಾರತೀಯರ ಡಿಜಿಟಲ್‌ ಮಾಹಿತಿಯನ್ನು ಸಂರಕ್ಷಿಸಲು ಸಹಾಯ ಮಾಡಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಮೂಲಕ ಗೂಗಲ್‌ ಕ್ರೋಮ್‌ (Google Chrome), ಮೊಝಿಲ್ಲಾ ಫೈರ್‌ ಫಾಕ್ಸ್‌, ಮೈಕ್ರೋಸಾಫ್ಟ್ ಎಡ್ಜ್‌ (Microsoft Edge), ಒಪೆರಾ ಮತ್ತು ಇತರ ಬ್ರೌಸರ್‌ಗಳಿಗೆ ಸಡ್ಡು ಹೊಡೆಯಲು ಭಾರತ ಸರ್ಕಾರ ಮುಂದಾಗಿದೆ. 2024ರ ಅಂತ್ಯದ ವೇಳೆಗೆ ಭಾರತ ತನ್ನದೇ ಆದ ಬ್ರೌಸರ್‌ ಹೊಂದಲು ತೀರ್ಮಾನ ಮಾಡಿದ್ದು, ಬ್ರೌಸರ್‌ ಅಭಿವೃದ್ಧಿಪಡಿಸಲು ದೇಶೀಯ ಸ್ಟಾರ್ಟ್‌ ಅಪ್‌ (Startup), ಶೈಕ್ಷಣಿಕ ಸಂಸ್ಥೆಗಳಿಗೆ ಸರ್ಕಾರ ಆಹ್ವಾನ ನೀಡಿದ್ದು, ಸಂಪೂರ್ಣವಾಗಿ ಆರ್ಥಿಕ ಬೆಂಬಲ ಒದಗಿಸುವ ಭರವಸೆ ನೀಡಿದೆ. ಈ ಬ್ರೌಸರ್‌ಗಳು ಡಿಜಿಟಲ್‌ ಸಿಗ್ನೇಚರ್‌ಗಳನ್ನು (Digital Signature) ಒದಗಿಸುವುದರ ಜೊತೆಗೆ, ದೇಶೀಯ ಭಾಷೆಗಳಿಗೆ ಬೆಂಬಲ ನೀಡಬೇಕು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Latest Videos

undefined

ಕೂಡಲೇ ಗೂಗಲ್ ಕ್ರೋಮ್ ಅಪ್‌ಡೇಟ್ ಮಾಡಿ, ಇಲ್ಲದಿದ್ದರೆ ಅಪಾಯ ಗ್ಯಾರಂಟಿ

ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ಮುಂದಡಿ ಇಟ್ಟಿರುವ ಭಾರತ ತನ್ನ ಡಿಜಿಟಲ್‌ ಭವಿಷ್ಯವನ್ನು ಭದ್ರಗೊಳಿಸಸಬೇಕಾಗಿದೆ. ಹೀಗಾಗಿ ನಾವು ವಿದೇಶಗಳ ವೆಬ್‌ ಬ್ರೌಸರ್‌ (web Browser) ಮೇಲೆ ಅವಲಂಬನೆಯಾಗುವುದು ನಮ್ಮ ಭದ್ರತೆ ಮತ್ತು ನಮ್ಮ ನಾಗರಿಕರ ಸುರಕ್ಷತೆಗೆ ಮುಳುವಾಗಬಹುದು. ಆತ್ಮನಿರ್ಭರತೆ ತನ್ನದೇ ಆದ ವೆಬ್‌ ಬ್ರೌಸರ್‌ ಸಹ ಹೊಂದಿರಬೇಕು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಸ್ತುತ ಇಂಟರ್ನೆಟ್‌ ಬಳಕೆದಾರರಲ್ಲಿ ಶೇ.88.47ರಷ್ಟು ಮಂದಿ ಕ್ರೋಮ್‌, ಶೇ.5.22ರಷ್ಟು ಮಂದಿ ಸಫಾರಿ, ಶೇ.2ರಷ್ಟು ಮಂದಿ ಮೈಕ್ರೋಸಾಫ್ಟ್‌ ಎಡ್ಜ್‌  ಶೇ.1.5ರಷ್ಟು ಮಂದಿ ಸ್ಯಾಮ್‌ಸಂಗ್‌ ಇಂಟರ್ನೆಟ್‌ (Samsung), ಶೇ.1.28ರಷ್ಟು ಮಂದಿ ಮೊಝಿಲ್ಲಾ ಫೈರ್‌ಫಾಕ್ಸ್‌ ಮತ್ತು ಶೇ.1.53ರಷ್ಟು ಮಂದಿ ಇತರ ಬ್ರೌಸರ್‌ಗಳನ್ನು ಬಳಕೆ ಮಾಡುತ್ತಿದ್ದಾರೆ.

Password Safety: ಇಂಟರ್ನೆಟ್ ಬ್ರೌಸರ್‌ಗಳಲ್ಲಿ ನಿಮ್ಮ ಪಾಸ್‌ವರ್ಡ್‌ ಸೇವ್‌ ಮಾಡುವುದು ಎಷ್ಟು ಸೇಫ್?

click me!