ಸಾರ್ವಜನಿಕ ಪೋರ್ಟ್‌ನಲ್ಲಿ ಫೋನ್ ಚಾರ್ಜ್ ಮಾಡುತ್ತೀರಾ? ಎಚ್ಚರ ಎಗರಿಸುತ್ತಾರೆ ನಿಮ್ಮ ಖಾತೆ ಹಣ!

By Suvarna NewsFirst Published Jul 28, 2023, 5:06 PM IST
Highlights

ಬಸ್, ರೈಲು ನಿಲ್ದಾಣ, ವಿಮಾನ ನಿಲ್ದಾಣ, ಕಾಫಿ ಶಾಪ್, ಸ್ಟೋರ್ ಸೇರಿದಂತೆ ಹಲವು ಸಾರ್ವಜನಿಕ ಪ್ರದೇಶಗಳಲ್ಲಿ ಫೋನ್ ಚಾರ್ಜಿಂಗ್ ಮಾಡಲು ಅವಕಾಶಗಳಿದೆ. ಆದರೆ ಹೀಗೆ ಚಾರ್ಜಿಂಗ್ ಅತ್ಯಂತ ಅಪಾಯಕಾರಿ. ಚಾರ್ಜ್ ಫುಲ್ ಆಗುವಷ್ಟರೊಳಗೆ ನಿಮ್ಮ ಖಾತೆಯ ಹಣ ಎಗರಿಸುತ್ತಿದ್ದಾರೆ. ಭಾರತದ ಹಲವೆಡೆ ಜ್ಯೂಸ್ ಜ್ಯಾಕಿಂಗ್ ಪ್ರಕರಣ ವರದಿಯಾಗಿದೆ.
 

ನವದೆಹಲಿ(ಜು.28) ಫೋನ್ ಚಾರ್ಜ್ ಖಾಲಿ. ಮೊಬೈಲ್ ಶಾಪ್, ಕಾಫಿ ಶಾಪ್, ಬಸ್ ನಿಲ್ದಾಣ ಸೇರಿದಂತೆ ಇತರೆ ಸಾರ್ವಜನಿಕ ಪ್ರದೇಶದಲ್ಲಿ ಫೋನ್ ಚಾರ್ಜ್ ಮಾಡುವುದು ಸಾಮಾನ್ಯವಾಗಿದೆ. ಹಲವೆಡೆ ಫೋನ್ ಚಾರ್ಜಿಂಗ್ ನೀಡಲು ಕೆಲವರು ಚಾರ್ಜಿಂಗ್ ಪೋರ್ಟ್ ಸ್ಥಾಪಿಸಿ ನೆರವು ನೀಡುತ್ತಾರೆ. ಆದರೆ ಇದು ಅತ್ಯಂತ ಅಪಾಯಕಾರಿ ಅನ್ನೋದು ಸಾಬೀತಾಗಿದೆ. ಸಾರ್ವಜನಿಕ ಪ್ರದೇಶ, ಕಾಫಿ ಶಾಪ್ ಸೇರಿದಂತೆ ಹಲವೆಡೆ ಇಟ್ಟಿರುವ ಚಾರ್ಜಿಂಗ್ ಪೋರ್ಟ್‌ಗಳಲ್ಲಿ ಮೊಬೈಲ್ ಚಾರ್ಜ್ ಮಾಡಿದರೆ ನಿಮ್ಮ ಖಾತೆಯ ಹಣ ಎಗರಿಸುತ್ತಾರೆ. ಇದರ ಜೊತೆಗೆ ಹಲವು ಮಾಹಿತಿಗಳನ್ನು ಕದಿಯುವ ದಂಧೆಯೊಂದು ಪತ್ತೆಯಾಗಿದೆ.

ದಂಧೆಕೋರರು ಸಾರ್ವಜನಿಕ ಪ್ರದೇಶಗಳಲ್ಲಿ ಮೊಬೈಲ್ ಚಾರ್ಜಿಂಗ್ ಪೋರ್ಟ್ ಸ್ಥಾಪಿಸುತ್ತಾರೆ. ಈ ಪೋರ್ಟ್‌ಗಳಲ್ಲಿ ಚಾರ್ಜಿಂಗ್ ಮಾಡುವವರ ಮೊಬೈಲ್‌ಗೆ ಖನ್ನ ಹಾಕಿ ಹಣ ಎಗರಿಸುತ್ತಾರೆ. ಫೋನ್ ಚಾರ್ಜ್ ಆದ ಖುಷಿಯಲ್ಲಿದ್ದವರಿಗೆ ಆಘಾತ ಎದುರಾಗುವುಗು ಖಚಿತ. ಈ ಚಾರ್ಜಿಂಗ್ ಪೋರ್ಟ್‌ಗಳಲ್ಲಿ ಕೆಲ ಹಾರ್ಡ್‌ವೇರ್ ಹಾಗೂ ಸಾಫ್ಟ್‌ವೇರ್ ಹಾಕಿರುತ್ತಾರೆ. ಈ ಮೂಲಕ ನಿಮ್ಮ ಫೋನ್‌ನಲ್ಲಿರುವ ಬ್ಯಾಂಕ್ ಮಾಹಿತಿ ಸೇರಿದಂತೆ ಮಹತ್ವದ ಮಾಹಿತಿಗಳನ್ನು ಕದಿಯುತ್ತಾರೆ.  ಮರುಕ್ಷಣದಲ್ಲೇ ಖಾತೆಯಲ್ಲಿನ ಹಣವನ್ನೂ ಎಗರಿಸುತ್ತಾರೆ.

ಇನ್‌ಸ್ಟಾ ಪೋಸ್ಟ್ ಲೈಕ್ ಮಾಡಿ ಆದಾಯ ಗಳಿಸಿ, ಮೆಸೇಜ್‌ಗೆ ಮರುಳಾಗಿ 37 ಲಕ್ಷ ಕಳೆದುಕೊಂಡ ಯುವಕ!

ಈ ದಂಧೆಗೆ ಜ್ಯೂಸ್ ಜ್ಯಾಕಿಂಗ್ ಎಂದು ಕರೆಯುತ್ತಾರೆ. ಈ ದಂಧೆ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ನಡೆಯುತ್ತಿದೆ. ಇತ್ತೀಚೆಗೆ ಅಮೆರಿಕದ ಎಫ್‌ಬಿಐ ಈ ಕುರಿತು ಎಚ್ಚರಿಕೆ ನೀಡಿತ್ತು. ಸಾರ್ವಜನಿಕ ಪ್ರದೇಶದಲ್ಲಿರುವ ಅಥವಾ ಅಪರಿಚಿತ ಶಾಪ್, ಕೆಫೆಗಳಲ್ಲಿರುವ ಚಾರ್ಜಿಂಗ್ ಪೋರ್ಟ್ ಬಳಸುವಾಗ ಎಚ್ಚರ ವಹಿಸಿ ಎಂದಿತ್ತು. ಇದೀಗ ಭಾರತದಲ್ಲೂ ಈ ರೀತಿಯ ಪ್ರಕರಣಗಳು ದಾಖಲಾಗುತ್ತಿದೆ. 

ಏನಿದು ಜ್ಯೂಸ್ ಜ್ಯಾಕಿಂಗ್ ದಂಧೆ?
ದಂಧೆಕೋರರು ಸಾರ್ವಜನಿಕ ಪ್ರದೇಶದಲ್ಲಿ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಪೋರ್ಟ್ ಸ್ಥಾಪಿಸುತ್ತಾರೆ. ಈ ಪೋರ್ಟ್‌ಗಳಲ್ಲಿ ಮೊಬೈಲ್‌ನಿಂದ ಡೇಟಾ ಕದಿಯುವ ಸಾಫ್ಟ್‌ವೇರ್ ಹಾಗೂ ಹಾರ್ಡ್‌ವೇರ್ ಇನ್‌ಸ್ಟಾಲ್ ಮಾಡಿರುತ್ತಾರೆ. ಸಾರ್ವಜನಿಕರು ಇಂತಹ ಜಾರ್ಜಿಂಗ್ ಪೋರ್ಟ್‌ನಲ್ಲಿ ಮೊಬೈಲ್ ಫೋನ್ ಚಾರ್ಜ್ ಮಾಡುವಾಗ ಮಾಹಿತಿಗಳನ್ನು ಕದಿಯಲಾಗುತ್ತದೆ. ಬ್ಯಾಂಕ್ ಮಾಹಿತಿ, ಕ್ರೆಡಿಟ್ ಕಾರ್ಡ್ ಡೇಟಾ, ಪಾಸ್‌ವರ್ಡ್ ಸೇರಿದಂತೆ ಇತರ ಮಹತ್ವದ ಮಾಹಿತಿಗಳನ್ನು ಕದಿಯುತ್ತಾರೆ. ತಮ್ಮ ಚಾರ್ಜಿಂಗ್ ಪೋರ್ಟ್ ಮೂಲಕ ಚಾರ್ಜಿಂಗ್ ಮಾಡುತ್ತಿರುವ ಸಾರ್ವಜನಿಕರ ಮೊಬೈಲ್‌ಗೆ ಮಾಲ್ವೇರ್ ಇಂಜೆಕ್ಟ್ ಮಾಡಲಾಗುತ್ತದೆ. ಬಳಿಕ ಸಾರ್ವಜನಿಕ ಮೊಬೈಲ್‌ನ್ನು ರಹಸ್ಯವಾಗಿ ಕಂಟ್ರೋಲ್ ಮಾಡಿ, ಅದರಿಂದ ಮಾಹಿತಿಗಳನ್ನು ಕದಿಯಲಾಗುತ್ತದೆ. 

ನಿಮ್ಮ ವೈಯಕ್ತಿಕ ಡೇಟಾ ಕದ್ದು, ಹಣ ಸುಲಿಗೆ ಮಾಡಲು ಅಕಿರಾ ಬರ್ತಾಳೆ ಹುಷಾರ್: ಇಂಟರ್ನೆಟ್‌ ಬಳಕೆದಾರರಿಗೆ ವಾರ್ನಿಂಗ್!

ಈ ದಂಧೆಯಿಂದ ದೂರವಿರಲಿ ಕೆಲ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಎಲ್ಲೆಂದರಲ್ಲಿ ಚಾರ್ಜಿಂಗ್ ಮಾಡುವುದು ಅಪಾಯ. ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಚಾರ್ಜಿಂಗ್ ಮಾಡುವುದು ನಿಲ್ಲಿಸಿ. ಚಾರ್ಜಿಂಗ್ ಅವಶ್ಯಕತೆ ಇದ್ದರೆ ಅತ್ಯುತ್ತಮ ಗುಣಮಟ್ಟದ ಪವರ್ ಬ್ಯಾಂಕ್ ಬಳಸಿ. ಇನ್ನು ಯುಎಸ್‌ಬಿ ಡೇಟಾ ಬ್ಲಾಕರ್ಸ್ ಬಳಕೆ ಮಾಡುವುದರಿಂದ ಮೊಬೈಲ್‌ನಿಂದ ಅನುಮತಿ ಇಲ್ಲದೆ ಯಾವುದೇ ಫೈಲ್ ಟ್ರಾನ್ಸ್‌ಫರ್ ಮಾಡಲು ಸಾಧ್ಯವಿಲ್ಲ. ಸಾರ್ವಜನಿಕ ಪ್ರದೇಶದಲ್ಲಿ ಅನಿವಾರ್ಯವಾಗಿ ಮೊಬೈಲ್ ಚಾರ್ಜಿಂಗ್ ಇಟ್ಟಿದ್ದರೆ, ಚಾರ್ಜಿಂಗ್ ವೇಳೆ ಮೊಬೈಲ್ ಅನ್‌ಲಾಕ್ ಮಾಡಲು ಹೋಗಬೇಡಿ. ಇನ್ನು ಆಟೋಮ್ಯಾಟಿಕ್ ಕನೆಕ್ಟ್ ಫೀಚರ್ಸ್‌ಗಳಾದ ವೈಫೈ ಸೇರಿದಂತೆ ಹಲವು ಆಟೋಮ್ಯಾಟಿಕ್ ಕನೆಕ್ಟ್ ಆಫ್ ಮಾಡಿ.  ಇನ್ನು ಸುರಕ್ಷತೆಯುಳ್ಳು ವೈಫೈ ಮಾತ್ರ ಬಳಕೆ ಮಾಡಿ.ಸಾರ್ವಜನಿಕ ಪ್ರದೇಶದಲ್ಲಿ ಉಚಿತ ವೈಫೈ ಇದ ಎಂದು ಬಳಕೆ ಮಾಡಬೇಡಿ. ನಿಮ್ಮ ಮೊಬೈಲ್‌ನಲ್ಲಿರುವ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿಟ್ಚುಕೊಳ್ಳಿ. 
 

click me!