Govt blocks channels ಸುಳ್ಳು ಹರಡುತ್ತಿದ್ದ ಭಾರತದ 18, ಪಾಕಿಸ್ತಾನದ 4 YouTube ಚಾನೆಲ್ ಬ್ಲಾಕ್!

Published : Apr 05, 2022, 05:36 PM IST
Govt blocks channels ಸುಳ್ಳು ಹರಡುತ್ತಿದ್ದ ಭಾರತದ 18, ಪಾಕಿಸ್ತಾನದ 4 YouTube ಚಾನೆಲ್ ಬ್ಲಾಕ್!

ಸಾರಾಂಶ

ರಾಷ್ಟ್ಪೀಯ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಕುರಿತು ಸುಳ್ಳು ಮಾಹಿತಿ ಬಿತ್ತರ ನಕಲಿ ಸುದ್ಧಿ, ದಾರಿ ತಪ್ಪಿಸುವ ಸುದ್ದಿ ಹರಡುತ್ತಿದ್ದವರ ವಿರುದ್ಧದ ಕೇಂದ್ರದ ಸಮರ ಹಲವು ಯೂಟ್ಯೂಬ್ ಚಾನೆಲ್, ನಕಲಿ ಟ್ವಿಟರ್ ಖಾತೆ ಬ್ಲಾಕ್

ನವೆದೆಹಲಿ(ಏ.05): ದೇಶದ ರಾಷ್ಟ್ರೀಯ ಭದ್ರತೆಗೆ ಸವಾಲೆಸೆಯುವ, ನಕಲಿ ಸುದ್ದಿಗಳನ್ನು ಬಿತ್ತರಿಸುವ ಸಾಮಾಜಿಕ ಜಾಲತಾಣಗಳಲ್ಲಿನ ಖಾತೆಗಳ ಮೇಲೆ ಭಾರತ ಸರ್ಕಾರದ ಸಮರ ಮುಂದುವರಿದಿದೆ. ವೀಕ್ಷಕರನ್ನು ದಾರಿ ತಪ್ಪಿಸುವ, ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟದಾಗಿ ಚಿತ್ರಿಸುವ ಹಾಗೂ ನಕಲಿ ಸುದ್ಧಿಗಳನ್ನು ಬಿತ್ತರಿಸುತ್ತಿದ್ದ ಭಾರತೀಯ ಮೂಲದ 18 ಹಾಗೂ ಪಾಕಿಸ್ದಾನದ 4 ಯೂಟ್ಯೂಬ್ ಚಾನೆಲ್‌ನ್ನು ಕೇಂದ್ರ ಬ್ಲಾಕ್ ಮಾಡಿದೆ.

ಮಾಹಿತಿ ಮತ್ತು ಪ್ರಸಾರ ಇಲಾಖೆ ಈ ಮಾಹಿತಿಯನ್ನು ಬಹಿರಂಗ ಪಡಿಸೆದೆ. ಬ್ಲಾಕ್ ಮಾಡಿರುವ ಯೂಟ್ಯೂಬ್ ಚಾಲೆನ್ ಟಿವಿ ರೀತಿಯಲ್ಲಿ ಲೋಗೋ, ನಕಲಿ ಮಾಹಿತಿಗಳನ್ನ ನೀಡುತ್ತಿತ್ತು. ಹೀಗಾಗಿ ದೇಶದ ಭದ್ರತೆಯಲ್ಲಿ ಯಾವುದೇ ರಾಜೀ ಇಲ್ಲ. ಹೀಗಾಗಿ ಈ ಯೂಟ್ಯೂಬ್ ಚಾನೆಲ್ ಬ್ಲಾಕ್ ಮಾಡಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಇಲಾಖೆ ಹೇಳಿದೆ. ಇದರ ಜೊತೆ ಮೂರು ನಕಲಿ ಟ್ವಿಟರ್ ಖಾತೆ, 1 ಫೇಸ್‌ಬುಕ್ ಖಾತೆ ಹಾಗೂ ಒಂದು ಸುದ್ಧಿ ವೆಬ್‌ಸೈಟ್ ಕೂಡ ಬ್ಲಾಕ್ ಮಾಡಲಾಗಿದೆ

WhatsApp Accounts Ban: ಅಕ್ಟೋಬರ್‌ನಲ್ಲಿ 20 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದ ವಾಟ್ಸಪ್‌!

ಬ್ಲಾಕ್ ಮಾಡಿರುವ ಯೂಟ್ಯೂಬ್ ಚಾನೆಲ್‌ಗಳು ರಾಷ್ಟ್ರೀಯ ಭದ್ರತೆ, ಭಾರತದ ವಿದೇಶಾಂಗ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆ ವಿಷಗಳನ್ನು ತಪ್ಪಾಗಿ ನೀಡುತ್ತಿತ್ತು. ಹಲವು ನಕಲಿ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಪಡಿಸಲಾಗುತ್ತಿತ್ತು. ಸದ್ಯ ಬ್ಲಾಕ್ ಮಾಡಿರುವ ಯೂಟ್ಯೂಬ್ ಚಾಲೆನ್ ಒಟ್ಟಿ 260 ಕೋಟಿ ವೀಕ್ಷಕರನ್ನು ಹೊಂದಿತ್ತು ಎಂದು ಕೇಂದ್ರ ಸರ್ಕಾರ ಹೇಳಿದೆ.

2021ರ ಹೊಸ ಐಟಿ ನೀತಿ ಜಾರಿಯಾದ ಬಳಿಕ ಇದೇ ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದ ಭಾರತೀಯ ಯೂಟ್ಯೂಬ್ ಚಾನೆಲ್ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಭಾರತೀಯ ಮೂಲದ ಯೂಟ್ಯೂಬ್ ಚಾನೆಲ್‌ಗಳು ಭಾರತದಲ್ಲಿ ಜನಪ್ರಿಯವಾಗಿರುವ ಟಿವಿ ಸುದ್ದಿ ವಾಹಿನಿಗಳ ಲೋಗೋವನ್ನು ಬಳಸಿಕೊಂಡಿತ್ತು. ಬಳಿಕ ಜನಪ್ರಿಯ ಚಾನೆಲ್ ಹೆಸರಲ್ಲಿ ನಕಲಿ ಸುದ್ದಿಗಳನ್ನು ಪ್ರಸಾರ ಮಾಡಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿತ್ತು. ಜನರು ಈ ಸುದ್ದಿಗಳು ಸತ್ಯ ಎಂಬು ಬಾವಿಸಿ ಸಾಮಾಜಿಕ ಮಾಧ್ಯಮಗಳ ಮೂಲಕ ಇತರರಿಗೆ ತಲುಪಿಸುತ್ತಿದ್ದರು ಎಂದು ಕೇಂದ್ರ ಪ್ರಸಾರ ಮತ್ತು ಮಾಹಿತಿ ಸಚಿವಾಲಯ ಹೇಳಿದೆ.

ಸಿಖ್ಸ್ ಫಾರ್‌ ಜಸ್ಟೀಸ್‌ ನಂಟಿರುವ ಆ್ಯಪ್‌, ವೆಬ್‌, ಸಾಮಾಜಿಕ ಜಾಲತಾಣ ನಿಷೇಧ‌!

ಪಾಕಿಸ್ತಾನ ಮೂಲದ ನಾಲ್ಕು ಯೂಟ್ಯೂಬ್ ಚಾನೆಲ್‌ಗಳು ಭಾರತ ವಿರೋಧಿ ಸುದ್ದಿಗಳನ್ನು ಬಿತ್ತರಿಸುತ್ತಿತ್ತು. ಕೇಂದ್ರ ಸರ್ಕಾರದ ವಿರುದ್ಧ, ಭಾರತದಲ್ಲಿ ಆಚರಣೆ, ಸಂಪ್ರದಾಯ, ಸಂಸ್ಕೃತಿ ವಿರುದ್ಧ ವಿಡಿಯೋಗಳನ್ನು ಹರಿಬಿಡಲಾಗುತ್ತಿತ್ತು.ಅಚ್ಚರಿ ಅಂದರೆ ಈ ಭಾರತ ವಿರೋಧಿ ಯೂಟ್ಯೂಬ್ ಚಾನೆಲ್‌ಗಳಿಗೆ ಮೂಲ ಪಾಕಿಸ್ತಾನಕ್ಕಿಂತ ಭಾರತದಲ್ಲಿ ಹೆಚ್ಚು ಚಂದಾದಾರರು ಹಾಗೂ ವೀಕ್ಷಕರಿದ್ದರು. ಹೆಚ್ಚಿನ ಭಾರತೀಯರೇ ಭಾರತ ವಿರೋಧಿ, ನಕಲಿ ವಿಷಗಳಿಗೆ ಲೈಕ್ಸ್ ಕೊಟ್ಟಿದ್ದಾರೆ.  ರಷ್ಯಾ ಉಕ್ರೇನ್ ಯುದ್ಧ ಹಾಗೂ ಭಾರತದ ವಿದೇಶಾಂಗ ನೀತಿಗಳ ಕುರಿತು ತಪ್ಪು ಮಾಹಿತಿಯನ್ನು  ನೀಡಲಾಗಿದೆ. ಇದಕ್ಕೂ ಭಾರತೀಯರು ಕಮೆಂಟ್ ಮಾಡಿದ್ದಾರೆ.

2021ರ ಡಿಸೆಂಬರ್ ತಿಂಗಳಿಂದ ಇಲ್ಲೀವರೆಗೆ 78 ಯೂಟ್ಯೂಬ್ ಚಾನೆಲ್ ಬ್ಲಾಕ್ ಮಾಡಲಾಗಿದೆ. ಇದರ ಜೊತೆಗೆ ಟ್ವಿಟರ್, ಫೇಸ್‌ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ.

ನವೆಂಬರ್‌ನಲ್ಲಿ ಭಾರತದ 17.5 ಲಕ್ಷ ವಾಟ್ಸಾಪ್‌ ಖಾತೆಗಳು ಬ್ಯಾನ್‌
ಐಟಿ ನಿಯಮ 2021ರ ಅನುಸಾರವಾಗಿ 2021ರ ನವೆಂಬರ್‌ ತಿಂಗಳಿನಲ್ಲಿ ಭಾರತದಲ್ಲಿ 17.5 ಲಕ್ಷ ವಾಟ್ಸಾಪ್‌ ಖಾತೆಗಳನ್ನು ನಿಷೇಧಿಸಲಾಗಿದೆ. ಅಲ್ಲದೇ 602 ಕುಂದುಕೊರತೆಗಳ ವರದಿ ಸ್ವೀಕರಿಸಿದ್ದು, ಅವುಗಳಲ್ಲಿ 36 ವಿಷಯಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಜನಪ್ರಿಯ ಸಾಮಾಜಿಕ ಮಾಧ್ಯಮ ವಾಟ್ಸಾಪ್‌ ತಿಳಿಸಿದೆ.ಭಾರತದಲ್ಲಿ 40 ಕೋಟಿಗೂ ಅಧಿಕ ವಾಟ್ಸಾಪ್‌ ಬಳಕೆದಾರರಿದ್ದಾರೆ. ಹೀಗಾಗಿ ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಾಟ್ಸಾಪ್‌ ಮಾಧ್ಯಮದ ದುರ್ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?