*ಇನ್ನು ಮುಂದೆ ಫಾರ್ವರ್ಡ್ ಮೆಸೆಜ್‌ಗಳನ್ನು ಒಂದಕ್ಕಿಂತ ಹೆಚ್ಚು ಗ್ರೂಪ್ ಷೇರ್ ಮಾಡಲಾಗಲ್ಲ
*ಫೇಕ್ ನ್ಯೂಸ್, ತಪ್ಪು ಮಾಹಿತಿ ಹರಡವುದನ್ನು ತಡೆಯಲು ಈ ಅಪ್‌ಡೇಟ್ ಮಾಡಲಾಗುತ್ತಿದೆ
*ಈ ಮಿತಿ ಕೇವಲ ಫಾರ್ವರ್ಡ್ ಮೆಸೆಜ್‌ಗಳಿ ಮಾತ್ರವೇ ಅನ್ವಯವಾಗುತ್ತದೆ.
ಯಾರಾದರೂ ಅತಿ ಬುದ್ಧಿವಂತಿಕೆ ತೋರಿಸಿದರೆ, ಸುಳ್ಳು ಸುಳ್ಳಾದ ಮಾಹಿತಿಯನ್ನು ನೀಡಿದರೆ ಓಹೋ ವಾಟ್ಸಾಪ್ ಯುನಿವರ್ಸಿಟಿಯವನು ಎಂದು ಮೂದಲಿಸುವುದನ್ನು ಕೇಳಿದ್ದೀರಿ ಅಲ್ಲವಾ? ಅದಕ್ಕೂ ಕಾರಣವಿದೆ, ವಾಟ್ಸಾಪ್(Whatsapp)ನಲ್ಲಿ ಸಾಕಷ್ಟು ವಿಷಯಗಳು ಯಾವುದೇ ಖಚಿತತೆ ಇಲ್ಲದೇ ಷೇರ್ ಆಗುತ್ತವೆ, ಬಹಳಷ್ಟು ಮೆಸೇಜ್‌ಗಳಿಗೆ ಅಧಿಕೃತತೆ ಇರುವುದಿಲ್ಲ. ಹಾಗಾಗಿ, ವಾಟ್ಸಾಪ್‌ನಲ್ಲಿ ಷೇರ್ ಆಗುವ ಯಾವುದೇ ಮಾಹಿತಿಯನ್ನು ತುಂಬ ಅನುಮಾನದಿಂದಲೇ ನೋಡಬೇಕು ಎಂಬ ಮಾತು ಚಾಲ್ತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಸುಳ್ಳು ಸುದ್ದಿ (Fake News) ಹರಡುವುದನ್ನು ತಪ್ಪಿಸಲು, ನಕಲಿ ಸುದ್ದಿ ಷೇರ್ ಆಗುವುದನ್ನು ತಪ್ಪಿಸಲು ವಾಟ್ಸಾಪ್ ಹಲವು ಕ್ರಮಗಳನ್ನು ಕೈಗೊಳ್ಳುತ್ತಲೇ ಬಂದಿದೆ. ಈ ಮೊದಲು ಯಾವುದೇ ಮೆಸೇಜ್ ಅನ್ನು ಕೇವಲ ಐದು ನಂಬರ್‌ಗಳಿಗೆ ಕಳುಹಿಸಲು ಅನುಮತಿ ನೀಡುತ್ತಿದ್ದ ವಾಟ್ಸಾಪ್ ಇದೀಗ ಗ್ರೂಪ್ (Whatsapp Group)ಗಳಿಗೆ ಷೇರಿಂಗ್ ಮಿತಿ ಹೇರುವ ಫೀಚರ್ ಅನ್ನು ಪರಿಚಯಿಸಲು ಹೊರಟಿದೆ ಎನ್ನಲಾಗುತ್ತಿದೆ. ಗ್ರೂಪ್‌ಗಳಿಗೆ ಫಾರ್ವರ್ಡ್ ಮೆಸೆಜ್ ಷೇರ್ ಮೇಲೆ ಮಿತಿ ಹೇರುವ ಫೀಚರ್ ಅನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಲ್ಲಿ ಟೆಸ್ಟಿಂಗ್ ಮಾಡಲಾಗುತ್ತಿದೆ. ಏಕ ಕಾಲಕ್ಕೆ ಒಂದು ಗ್ರೂಪಿಗಿಂತ ಹೆಚ್ಚಿನ ಗ್ರೂಪ್‌ಗೆ ಫಾರ್ವರ್ಡ್ ಮೆಸೆಜ್ ಕಳುಹಿಸದಂತೆ ನಿರ್ಭಂದಿಸಲಾಗುತ್ತಿದೆ.
ಮತ್ತೊಂದೆಡೆ, iOSನಲ್ಲಿ ಅಸ್ತಿತ್ವದಲ್ಲಿರುವ ಕ್ಯಾಮರಾ ಟ್ಯಾಬ್ ಅನ್ನು ಬದಲಿಸುವ ಮೀಸಲಾದ ಸಮುದಾಯಗಳ ಟ್ಯಾಬ್ ಅನ್ನು WhatsApp ಪರಿಚಯಿಸುತ್ತಿದೆ. ಮೆಸೇಜಿಂಗ್ ಅಪ್ಲಿಕೇಶನ್ ಆಂಡ್ರಾಯ್ಡ್ (Whatsapp messaging interface for android) ಬಳಕೆದಾರರಿಗೆ ನವೀಕರಿಸಿದ ಕ್ಯಾಮೆರಾ ಇಂಟರ್ಫೇಸ್ ಅನ್ನು ಪರೀಕ್ಷಿಸುತ್ತಿದೆ ಎಂದು ತಿಳಿದು ಬಂದಿದೆ.
undefined
WABetaInfo ವರದಿಯ ಪ್ರಕಾರ, iOS ಬೀಟಾ ಆವೃತ್ತಿ 22.7.0.76 ಗಾಗಿ WhatsApp ಬಳಕೆದಾರರಿಗೆ ಒಂದು ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಗ್ರೂಪ್‌ಗಳಿಗೆ ಚಾಟ್‌ಗಳಿಗೆ ಫಾರ್ವರ್ಡ್ ಮಾಡಿದ ಸಂದೇಶಗಳನ್ನು ಕಳುಹಿಸುವುದನ್ನು ತಡೆಯುವ ಮಿತಿಯನ್ನು ಹೊಂದಿದೆ. iOS ಜೊತೆಗೆ, WhatsApp Android ನಲ್ಲಿ ಹೊಸ ಫಾರ್ವರ್ಡ್ ಮಾಡಿದ ಸಂದೇಶದ ಮಿತಿಯನ್ನು ಪರೀಕ್ಷಿಸುತ್ತಿದೆ ಎಂದು ಹೇಳಲಾಗುತ್ತದೆ. ಫಾರ್ವರ್ಡ್ ಮೆಸೇಜ್‌ಗಳನ್ನು ಫೇಕ್ ನ್ಯೂಸ್ ಮತ್ತು ತಪ್ಪು ಮಾಹಿತಿಯ ಮೂಲಗಳು ಎಂದು ಭಾವಿಸಲಾಗುತ್ತದೆ. ಹಾಗಾಗಿ, ಈ ಹೊಸ ಅಪ್‌ಡೇಟ್ ಈ ಸುಳ್ಳು ಮಾಹಿತಿಯನ್ನು ತಡೆಯಲು ನೆರವು ಒದಗಿಸಲಿದೆ.
ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ, ಈಗಾಗಲೇ ಹಲವು ಬಳಕೆದಾರರಿಂದ ಫಾರ್ವರ್ಡ್ ಆದ ಮೆಸೇಜ್‌ಗಳಿಗೆ ಮಾತ್ರವೇ ಈ ಮಿತಿ ಅನ್ವಯವಾಗಲಿದೆ. ಅಂದರೆ, ನೀವು ಸ್ವಂತ ರಚಿಸಿ ಕಳುಹಿಸಿದ ಮೆಸೇಜ್‌ಗೆ ಇದರಿಂದ ಯಾವುದೇ ಪರಿಣಾಮವಾಗುವುದಿಲ್ಲ. ಬಹಳಷ್ಟು ಜನರಿಂದ ಫಾರ್ವರ್ಡ್ ಆದ ಮೆಸೆಜ್‌ಗಳ್ನು ಇದು ಗುರುತಿಸಿ ಅಂಥ ಮೆಸೇಜ್ ಗ್ರೂಪ್‌ಗಳಿಗೆ ಫಾರ್ವರ್ಡ್ ಆಗುವುದನ್ನು ತಡೆಯುತ್ತದೆ.
ಇದನ್ನೂ ಓದಿ: WhatsApp Compliance Report: ಫೆಬ್ರವರಿಯಲ್ಲಿ 14 ಲಕ್ಷ ಭಾರತೀಯ ವಾಟ್ಸಾಪ್ ಖಾತೆ ಬ್ಯಾನ್
ಕೆಲವು ಸಂಶೋಧನೆಗಳ ಪ್ರಕಾರ ನಡೆಯುತ್ತಿರುವ ಈ ಕ್ರಮಗಳು ಸ್ವಲ್ಪ ಮಟ್ಟಿಗೆ ತಪ್ಪು ಮಾಹಿತಿಯನ್ನು ನಿಧಾನಗೊಳಿಸಲು ಸಹಾಯ ಮಾಡಿದೆ. ಆದಾಗ್ಯೂ, WhatsApp ನಲ್ಲಿ ಫಾರ್ವರ್ಡ್ ಮಾಡಿದ ಸಂದೇಶ ಹಂಚಿಕೆಯನ್ನು ನಿರ್ಬಂಧಿಸುವ ಕಾರ್ಯವಿಧಾನವು ಫೂಲ್‌ಫ್ರೂಫ್ ಅಲ್ಲ. ಏಕೆಂದರೆ ಬಳಕೆದಾರರು ತಮ್ಮ ಪಠ್ಯವನ್ನು ನಕಲಿಸುವ ಮತ್ತು ಅಂಟಿಸುವ ಮೂಲಕ ಆಗಾಗ್ಗೆ ಫಾರ್ವರ್ಡ್ ಮಾಡಿದ ಸಂದೇಶಗಳನ್ನು ಫಾರ್ವರ್ಡ್ ಮಾಡಲು ಸಾಧ್ಯವಾಗುತ್ತದೆ ಎಂಬುದನ್ನು ಮರೆಯಬಾರದು.
ಏತನ್ಮಧ್ಯೆ, ವಾಟ್ಸಾಪ್ ತನ್ನ ಮಾಸಿಕ ವರದಿಯನ್ನು ಬಿಡುಗಡೆ ಮಾಡಿದ್ದು ಫೆಬ್ರವರಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಭಾರತೀಯ ವಾಟ್ಸಾಪ್ ಖಾತೆ ನಿಷೇಧಿಸಿದೆ. ಐಟಿ ನಿಯಮಗಳು 2021 ರ ಅನುಸಾರವಾಗಿ, ಮೆಟಾ-ಮಾಲೀಕತ್ವದ ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ (Meta owned instant messaging platform) ಫೆಬ್ರವರಿ 2022 ರ ತಿಂಗಳಿಗೆ ತನ್ನ ಒಂಬತ್ತನೇ ಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ, ಇದು ಫೆಬ್ರವರಿ 1 ಮತ್ತು 28 ರ ನಡುವೆ 10 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳನ್ನು (ನಿರ್ದಿಷ್ಟವಾಗಿ 1.4 ಮಿಲಿಯನ್ ) ನಿಷೇಧಿಸಿದೆ.
ಇದನ್ನೂ ಓದಿ: ಅಬ್ಬಾ... ನಿತ್ಯ 7 ಶತಕೋಟಿ Whatsapp Voice Message ರವಾನೆ!
ಇತರ ಬಳಕೆದಾರರಿಗೆ ಕಿರುಕುಳ ನೀಡುವುದು, ನಕಲಿ ಸುದ್ದಿಗಳನ್ನು (Fake News) ಫಾರ್ವರ್ಡ್ ಮಾಡುವುದು ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ಹಾನಿಕಾರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಈ ಖಾತೆಗಳನ್ನು ಬಹುಶಃ ನಿಷೇಧಿಸಲಾಗಿದೆ. ಹೊಸ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ನಿಯಮಗಳು, 2021 (IT ನಿಯಮಗಳು, 2021) ಗೆ ಅನುಗುಣವಾಗಿ ವಾಟ್ಸಾಪ್ ತನ್ನ ಇತ್ತೀಚಿನ ಅನುಸರಣೆ ವರದಿಯನ್ನು (Compliance Report) ಪ್ರಕಟಿಸಿದೆ.