Apple iOS 15.4.1 ಅಪ್‌ಡೇಟ್ ಲಭ್ಯ; ಏನೆಲ್ಲ ಇದೆ ಇದರಲ್ಲಿ?

By Suvarna News  |  First Published Apr 2, 2022, 7:26 PM IST

Apple MacOS 12.3.1 ಅಪ್ಡೇಟ್ ಅನ್ನು ಸಹ ಪ್ರಕಟಿಸಿದೆ, ಇದು Bluetooth ಮತ್ತು ಆಪಲ್ನ Mac ಯಂತ್ರಗಳಿಗೆ ಬಾಹ್ಯ ಸಾಧನದ ಸಮಸ್ಯೆಗಳಿಗೆ ದೋಷ ಪರಿಹಾರಗಳನ್ನು ಒಳಗೊಂಡಿದೆ. ಆಪಲ್ MacOS 12.3 ಅನ್ನು ಬಿಡುಗಡೆ ಮಾಡಿದ ಎರಡು ವಾರಗಳ ನಂತರ ಈ ಅಪ್ಗ್ರೇಡ್ ಕೂಡ ಬಂದಿದೆ.


Apple ನ iOS 15.4.1 ಮತ್ತು iPadOS 15.4.1 ಅಪ್‌ಡೇಟ್‌ಗಳು ಈಗ iPhone ಬಳಕೆದಾರರಿಗೆ ಲಭ್ಯವಿವೆ. ಈ ಅಪ್‌ಡೇಟ್‌ಗಳು ಅನೇಕ ಐಫೋನ್ (iPhone) ಮತ್ತು (iPad) ಮಾಲೀಕರು ವರದಿ ಮಾಡಿದ ಬ್ಯಾಟರಿ ಬೇಗ ಖಾಲಿಯಾಗುವ ಸಮಸ್ಯೆಯನ್ನು ಈ iOS 15.4 ಹೊಸ ನವೀಕರಣವು ಬಗೆಹರಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಆಪಲ್ ಮ್ಯಾಕೋಸ್ ಮಾಂಟೆರಿ (macOS Monterey), ವಾಚ್‌ಓಎಸ್ (WatchOS) ಮತ್ತು ಆಪಲ್ ಟಿವಿಯ ಟಿವಿಓಎಸ್‌ (Apple TV's tvOS) ಗಳಿಗೆ ಕಂಪನಿಯು ಈ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡಿದೆ. ಇತ್ತೀಚಿನ iOS 15.4.1 ಅಪ್‌ಡೇಟ್ ಬಿಲ್ಡ್ ಸಂಖ್ಯೆ 19E258 ಅನ್ನು ಹೊಂದಿದೆ ಮತ್ತು ಬಳಕೆದಾರರು ತಮ್ಮ iPhone ನ ಸೆಟ್ಟಿಂಗ್‌ಗಳ ಅಪ್ಲಿಕೇಶನ್‌ನಲ್ಲಿ ಅದನ್ನು ಪರಿಶೀಲಿಸಬಹುದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಕಾರ್ಯನಿರ್ವಹಣೆಯ ವಿಷಯದಲ್ಲಿ ಹೇಳುವುದಾದರೆ ಇದು ಗಮನಾರ್ಹವಾದ ಅಪ್‌ಗ್ರೇಡ್ ಆಗಿತ್ತು. ಆಪಲ್ iOS 15.4 ನವೀಕರಣವನ್ನು ದೊರೆಯಲು ಆರಂಭಿಸಿದ ನಂತರ ಈ ಕಾರ್ಯವೂ ಕೈಗೂಡಲಿದೆ. ಐಒಎಸ್ 15.4 ನಲ್ಲಿ ಹಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ, ಫೇಸ್ ಮಾಸ್ಕ್ ಧರಿಸಿರುವಾಗ ನಿಮ್ಮ ಐಫೋನ್ ಅನ್ನು ಫೇಸ್ ಐಡಿಯೊಂದಿಗೆ ಅನ್‌ಲಾಕ್ ಮಾಡುವ ಸಾಮರ್ಥ್ಯವೂ ಸೇರಿದೆ. iPhone ಬಳಕೆದಾರರಿಗೆ iOS 15.4 ನೀಡುವ ಇತರ ಬದಲಾವಣೆಗಳು ಹೊಸ Siri ಧ್ವನಿ, ನಿಮ್ಮ ವ್ಯಕ್ತಿಯ ಮೇಲೆ ಅಪರಿಚಿತ ಏರ್‌ಟ್ಯಾಗ್ ಅನ್ನು ಗುರುತಿಸುವ ಸಾಮರ್ಥ್ಯ, 37 ಹೊಸ ಎಮೋಜಿಗಳು ಮತ್ತು ಹೆಚ್ಚಿನದನ್ನು ಒಳಗೊಂಡಿವೆ.

Tap to resize

Latest Videos

undefined

6,000mAh ಬ್ಯಾಟರಿಯೊಂದಿಗೆ ಬಜೆಟ್‌ ಬೆಲೆಯಲ್ಲಿ Samsung Galaxy M33 5G ಭಾರತದಲ್ಲಿ ಲಾಂಚ್

Apple MacOS 12.3.1 ಅಪ್ಡೇಟ್ ಅನ್ನು ಸಹ ಪ್ರಕಟಿಸಿದೆ, ಇದು Bluetooth ಮತ್ತು ಆಪಲ್ನ Mac ಯಂತ್ರಗಳಿಗೆ ಬಾಹ್ಯ ಸಾಧನದ ಸಮಸ್ಯೆಗಳಿಗೆ ದೋಷ ಪರಿಹಾರಗಳನ್ನು ಒಳಗೊಂಡಿದೆ. ಆಪಲ್ MacOS 12.3 ಅನ್ನು ಬಿಡುಗಡೆ ಮಾಡಿದ ಎರಡು ವಾರಗಳ ನಂತರ ಈ ಅಪ್ಗ್ರೇಡ್ ಕೂಡ ಬಂದಿದೆ. ಇದರಲ್ಲಿ Universal Control to Mac ಯಂತ್ರಗಳು ಕೂಡ ಸೇರಿವೆ.

ಆಪಲ್ ಕಳದೆ ವಾರವಷ್ಟೇ ತನ್ನ ಗ್ರಾಹಕರಿಗಾಗಿ ಹೊಸ ವೈಶಿಷ್ಟ್ಯವೊಂದನ್ನ ಬಿಡುಗಡೆ ಮಾಡಿದ್ದು ವ್ಯಾಲೆಟ್‌ಗಳನ್ನು (Wallet) ರಿಪ್ಲೇಸ್‌ ಮಾಡುವತ್ತ ಪ್ರಮುಖ ಹೆಜ್ಚೆಯನ್ನಿಟ್ಟಿದೆ. ಪ್ರಸ್ತುತ ಅರಿಝೋನಾದಲ್ಲಿ ತನ್ನ ಡಿಜಿಟಲ್ ಚಾಲಕರ ಪರವಾನಗಿ ಮತ್ತು ರಾಜ್ಯದ ಐಡಿ ಪ್ರೋಗ್ರಾಂನ್ನು ಆಪಲ್  ಬಿಡುಗಡೆ ಮಾಡಿದೆ. ಲೇಟೆಸ್ಟ್ ಐಫೋನ್‌ಗಳಿಗೆ ಶಕ್ತಿ ನೀಡುವ ಆಪಲ್‌ನ iOS 15 ಸಾಫ್ಟ್‌ವೇರ್‌ನಲ್ಲಿ ನಿರ್ಮಿಸಲಾದ ಈ ವೈಶಿಷ್ಟ್ಯನ್ನು ಕಳೆದ ಬೇಸಿಗೆಯಲ್ಲಿ ಘೋಷಿಸಲಾಗಿತ್ತು. ಸದ್ಯಕ್ಕೆ ಈ ವೈಶಿಷ್ಟ್ಯವನ್ನು ಕೊಲೊರಾಡೋ, ಹವಾಯಿ, ಮಿಸ್ಸಿಸ್ಸಿಪ್ಪಿ, ಓಹಿಯೋ ಮತ್ತು ಪೋರ್ಟೊ ರಿಕೊ "ಶೀಘ್ರದಲ್ಲೇ" ವಿಸ್ತರಿಸಲಾಗುವುದು ಎಂದು ಕಂಪನಿ ತಿಳಿಸಿದೆ.

"ವಾಲೆಟ್‌ನಲ್ಲಿನ ಮೊದಲ ಚಾಲನಾ ಪರವಾನಗಿ ಮತ್ತು ಸ್ಟೇಟ್ ಐಡಿಯನ್ನು ಇಂದು ಅರಿಝೋನಾಗೆ ತರಲು ನಾವು ರೋಮಾಂಚನಗೊಂಡಿದ್ದೇವೆ ಮತ್ತು ಅರಿಜೋನನ್ನರಿಗೆ ಪ್ರಯಾಣಿಸುವಾಗ ಅವರ ಐಡಿಯನ್ನು ಪ್ರಸ್ತುತಪಡಿಸಲು ಸುಲಭ, ಸುರಕ್ಷಿತ ಮತ್ತು ಖಾಸಗಿ ಮಾರ್ಗವನ್ನು ಒದಗಿಸುತ್ತೇವೆ, ಅವರ ಐಫೋನ್ ಅಥವಾ ಆಪಲ್ ವಾಚ್‌ನ ಟ್ಯಾಪ್ ಮೂಲಕ ಈ ಸೇವೆಯನ್ನು ಬಳಸಬಹುದು, " ಎಂದು ಆಪಲ್ ಪೇ ಮತ್ತು ಆಪಲ್ ವಾಲೆಟ್‌ನ ಆಪಲ್‌ನ ಉಪಾಧ್ಯಕ್ಷ ಜೆನ್ನಿಫರ್ ಬೈಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

Xiaomi 12 Pro 5G ಸ್ಮಾರ್ಟ್‌ಫೋನ್ ಇದೇ ತಿಂಗಳು ಬಿಡುಗಡೆ, ಇಲ್ಲಿದೆ ಬೆಲೆ ಹಾಗೂ ವಿಶೇಷತೆ!

ಉತ್ಕೃಷ್ಟ ಉತ್ಪನ್ನಗಳ ಮೂಲಕ ಆಪಲ್ ಕಂಪನಿ ಜಗತ್ತಿನಲ್ಲೇ ಪ್ರಮುಖ ಕಂಪನಿಯಾಗಿ ಬೆಳೆಯುತ್ತಿದೆ. ಕಂಪನಿಯ ಎಲ್ಲ ತಂತ್ರಜ್ಞಾನವೂ ಒಂದ ಹೆಜ್ಜೆ ಮುಂದಿನದ್ದೇ ಆಗಿರುತ್ತದೆ. ಇದೇ ಕಾರಣಕ್ಕಾಗಿ ಕಂಪನಿ ಐಫೋನ್, ಐಪ್ಯಾಡ್ ಸೇರಿದಂತೆ ಇತರ ಎಲ್ಲ ಸಾಧನಗಳಿಗೂ ಬಹುದೊಡ ಗ್ರಾಹಕ ವಲಯವು ಸೃಷ್ಟಿಯಾಗಿದೆ ಎಂದು ಹೇಳಬಹುದು.

click me!