Work from home ಮಾಡುತ್ತಿದ್ದೀರಾ? ಹ್ಯಾಕರ್ಸ್ ಬಗ್ಗೆ ಇರಲಿ ಎಚ್ಚರ

By Suvarna News  |  First Published Oct 10, 2020, 4:31 PM IST

ಅಕ್ಟೋಬರ್ ತಿಂಗಳನ್ನು ನ್ಯಾಷನಲ್ ಸೈಬರ್ ಸೆಕ್ಯೂರಿಟಿ ಜಾಗೃತಿ ಮಾಸವಾಗಿ ಆಚರಿಸಲಾಗುತ್ತದೆ. ವರ್ಕ್ ಫ್ರಮ್ ಹೋಮ್ ಕೆಲಸ ಮಾಡುವವರು ಕೈಗೊಳ್ಳಬೇಕಾದ ಎಚ್ಚರಿಕೆಗಳೇನು?


ಕೊರೋನಾ ಸಾಂಕ್ರಾಮಿಕದಿಂದಾಗಿ ಎಲ್ಲವೂ ಬದಲಾಗಿದೆ. ನಮ್ಮ ಲೈಫು, ವರ್ಕಿಂಗ್ ಸ್ಟೈಲು ಎಲ್ಲವೂ ಮೊದಲಿನಂತಿಲ್ಲ. ದಿನದ ಹತ್ತನ್ನೆರಡು ಗಂಟೆ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದವರೆಲ್ಲ ಇದೀಗ ಮನೆಯಲ್ಲೇ ಕುಳಿತು ಕೆಲಸ ಮಾಡಬೇಕಾದ ಅನಿವಾರ್ಯ  ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿದ್ದೂ ಕೆಲಸ ಮಾಡಲು ಸಾಧ್ಯವಾಗುತ್ತಿದೆ ಎಂದು ನಾವು ತಂತ್ರಜ್ಞಾನಕ್ಕೆ ಧನ್ಯವಾದ ಹೇಳಲೇಬೇಕು. ಇಂಟರ್ನೆಟ್, ಫೋನು, ಲ್ಯಾಪ್‌ಟ್ಯಾಪ್, ಕಂಪ್ಯೂಟರ್‌ಗಳು ಇಲ್ಲದೇ ಹೋಗಿದ್ದರೆ ಇದೆಲ್ಲವೂ ಸಾಧ್ಯವಾಗುತ್ತಿರಲಿಲ್ಲ. ಇದೆಲ್ಲವೂ ತಂತ್ರಜ್ಞಾನ ನಮಗೆ ನೀಡಿರುವ ವರ.

ಗ್ರಾಹಕರ ಅನುಕೂಲಕ್ಕಾಗಿ ಪೇಟಿಎಂ ಜೊತೆ ಒಪ್ಪಂದ ಮಾಡಿಕೊಂಡ ಫ್ಲಿಪ್‌ಕಾರ್ಟ್

Tap to resize

Latest Videos

undefined

ಯಾವುದೇ ತಂತ್ರಜ್ಞಾನ ಎಷ್ಟು ಉಪಯೋಗಕಾರಿಯಾಗಿರುತ್ತದೆಯೋ ಅಷ್ಟೇ ಅಪಾಯಕಾರಿಯಾಗಿರುತ್ತದೆ. ವಾಸ್ತವದಲ್ಲಿ ಯಾವುದೇ ಟೆಕ್ನಾಲಜಿ ಕೆಟ್ಟದ್ದಲ್ಲ. ಆದರೆ, ಅದನ್ನು ಬಳಸುವವರ ಮೇಲೆ ನಿರ್ಧಾರವಾಗುತ್ತದೆ ತಂತ್ರಜ್ಞಾನದ ಅಪಾಯ ಮತ್ತು ಉಪಾಯಗಳೆರಡೂ. ಇದೀಗ, ಮನೆಯಲ್ಲೇ ಎಲ್ಲರು ಕೆಲಸ ಮಾಡುತ್ತಿರುವುದರಿಂದ ಸಹಜವಾಗಿಯೇ ಸೈಬರ್ ಖದೀಮರಿಗೆ ತಮ್ಮ ಕರಾಮತ್ತು ತೋರಿಸಲು ಸಾಧ್ಯವಾಗುತ್ತಿದೆ. ಹಾಗಾಗಿ, ನಾವು ತುಂಬ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಸೈಬರ್ ಖದೀಮರಿಗೆ ಯಾವುದೇ ರೀತಿಯಲ್ಲಿ ಅವಕಾಶ ದೊರೆಯದಂತೆ ನಮ್ಮ ಸುರಕ್ಷಿತಾ ವಲಯವನ್ನು ಸೃಷ್ಟಿಸಿಕೊಳ್ಳಬೇಕು.

ಅಕ್ಟೋಬರ್ ತಿಂಗಳನ್ನು ನ್ಯಾಷನಲ್ ಸೈಬರ್ ಸೆಕ್ಯೂರಿಟಿ ಜಾಗೃತಿ ಮಾಸ ಎಂದು ಆಚರಿಸಲಾಗುತ್ತಿದೆ. 

ಹೇಗೆ ಸುರಕ್ಷಿತ?
ಇಂಟರ್ನೆಟ್ ಜಗತ್ತಿನಲ್ಲಿ ಎಲ್ಲವೂ ಖುಲ್ಲಂಖುಲ್ಲಾ ಇಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಹಾಗಾಗಿ, ಎಷ್ಟು ಸಾಧ್ಯವೋ ಅಷ್ಟು ನಾವು ತಂತ್ರಜ್ಞಾನ  ಬಳಸಿಕೊಂಡೇ ನಮ್ಮ ಎಲ್ಲ ಕೆಲಸಗಳನ್ನು ಸುರಕ್ಷಿತವಾಗಿ ಮಾಡಿಕೊಳ್ಳಬಹುದು. ಸೈಬರ್ ಕ್ರೈಮ್ ನಿವಾರಿಸುವ ಬಗ್ಗೆ ಬೆಂಗಳೂರು ಪೊಲೀಸರು ಕೂಡ ಆಗಾಗ ಟ್ವಿಟರ್ ಮೂಲಕ  ಎಚ್ಚರಿಕೆ ನೀಡುತ್ತಿರುತ್ತಾರೆ. ವಿಶೇಷವಾಗಿ ವರ್ಕ್ ಫ್ರಮ್ ಹೋಮ್‌ ಯಾರು ಕೆಲಸ ಮಾಡುತ್ತಾರೋ ಅವರು ಹೆಚ್ಚು ಸುರಕ್ಷತೆಯನ್ನು ವಹಿಸಬೇಕಾಗುತ್ತದೆ. ನಾವು ಈ  ಬಗ್ಗೆ ಅಗತ್ಯವಿರುವ ಮುಂಜಾಗೃತೆಗಳನ್ನು ವಹಿಸಬೇಕಾಗುತ್ತದೆ. ಹಾಗಾದರೆ ಆ ಮುಂಜಾಗ್ರತೆಗಳೇನು ?

E ಮಾರ್ಟ್‌ನಿಂದ ಗ್ರಾಹಕರಿಗೆ LV ಮೋಟಾರ್‌; ಎಬಿಬಿಯಿಂದ ಆನ್‌ಲೈನ್ ಸೇವೆ!

1. ಸಾಫ್ಟ್‌ವೇರ್ ಅಪ್ ಡೇಟ್ ಮತ್ತು ಬ್ರೌಸರ್ ಅಪ್‌ಡೇಟ್: ಇದು ತುಂಬ ಮುಖ್ಯವಾದ ಸಂಗತಿ. ನೀವು ಬಳಸುವ ಸಾಫ್ಟ್‌ವೇರ್ ಮತ್ತು ಬ್ರೌಸರ್‌ಗಳನ್ನು ಆಗಾಗ ಅಪ್‌ಡೇಟ್ ಮಾಡುತ್ತಿರಬೇಕು. ಹೀಗೆ ಮಾಡುವುದರಿಂದ ಸೈಬರ್ ಖನ್ನ ಸಾಧ್ಯವಾಗುವುದಿಲ್ಲ. ಅಪ್‌ಡೇಟ್‌ನಿಂದಾಗಿ ಸೆಕ್ಯುರಿಟಿ ಪ್ಯಾಚಸ್ ದೊರೆಯುತ್ತವೆ.

2. ಎಚ್‌ಟಿಟಿಪಿ ವೆಬ್‌ಸೈಟ್‌ಗಳಿಗೆ ಮಾತ್ರ ಭೇಟಿ ಮಾಡಿ: ಕಚೇರಿಯಲ್ಲಿ ಕೆಲಸ ಮಾಡುವಾಗ ಅಲ್ಲಿನ ಐಟಿ ಟೀಮ್, ಕೆಲವು ಸಂಭಾವ್ಯ ಅಪಾಯಕಾರಿ ವೆಬ್‌ಸೈಟ್‌ ಅಕ್ಸೆಸ್ ನಿರಾಕರಿಸಿರುತ್ತಾರೆ. ಆದರೆ, ಕೆಲವೊಂದು ಸಾರಿ ಮನೆಯಿಂದ ಕೆಲಸ ಮಾಡುವಾಗ ಇದು ಸಾಧ್ಯವಾಗುವುದಿಲ್ಲ. ಹಾಗಾಗಿ, ನಾವು ಅಧಿಕೃತ ವೆಬ್‌ಸೈಟ್‌ಗಳನ್ನು ಮಾತ್ರ ಬಳಸಬೇಕು. ಇಲ್ಲದಿದ್ದರೆ, ನಮ್ಮ ಮಾಹಿತಿಯನ್ನು ಕದಿಯುವ ಸಾಧ್ಯತೆ ಹೆಚ್ಚಿರುತ್ತದೆ.

ವರ್ಕ್ ಫ್ರಂ ಹೋಮ್ ಗುಟ್ಟು ಬಿಟ್ಟು ಕೊಟ್ಟ ಬಿಲ್ ಗೇಟ್ಸ್

3. ಇ ಮೇಲ್ ಮತ್ತು ಆನ್ ಲೈನ್‌ ಖಾತೆಗಳು ಸುರಕ್ಷಿತವಾಗಿರಲಿ: ನಮ್ಮ ವೈಯಕ್ತಿಕ ಹಾಗೂ ಕಚೇರಿ ಇಮೇಲ್‌ಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು. ಜೊತೆಗೆ, ಆನ್‌ಲೈನ್‌ನಲ್ಲಿ ನಾವು ಹೊಂದಿರುವ ಇತರ ಎಲ್ಲ ಖಾತೆಗಳನ್ನು ಪಾಸ್ವರ್ಡ್‌ಗಳ ಮೂಲಕ ಸುರಕ್ಷಿತವಾಗಿರುವ ಹಾಗೆ ನೋಡಿಕೊಳ್ಳಬೇಕು. 

4. ಆಗಾಗ ಸೋಷಿಯಲ್ ಮೀಡಿಯಾ ಪ್ರೈವಸಿ ಸೆಟ್ಟಿಂಗ್ ಪರೀಕ್ಷಿಸಿಕೊಳ್ಳಿ: ಸಾಮಾನ್ಯವಾಗಿ ಎಲ್ಲರೂ ಸೋಷಿಯಲ್ ಮೀಡಿಯಾ ಖಾತೆಗಳನ್ನು ಹೊಂದಿರುತ್ತಾರೆ. ಆದರೆ, ಅಂಥ ವೆಬ್‌ಸೈಟ್ ಒದಗಿಸುವ ಪ್ರೈವಸಿ ಸೆಟ್ಟಿಂಗ್‌ಗಳ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ. ಇದು ತುಂಬ ತಪ್ಪು. ನಾವು ಮೊದಲು ಇಂಥ ಸೆಟ್ಟಿಂಗ್ಸ್ ಏನಿದು ಎಂದು ತಿಳಿದುಕೊಂಡು, ಅದನ್ನು ಅನ್ವಯಿಸಿಕೊಳ್ಳಬೇಕು ಮತ್ತು ಕಾಲ ಕಾಲಕ್ಕೆ ಅದನ್ನು ಪರೀಕ್ಷಿಸುತ್ತಾ ಇರಬೇಕು. ಹೀಗೆ ಮಾಡಿದರೆ, ಯಾರೂ ಕೂಡ ನಿಮ್ಮ ಖಾತೆ ಕನ್ನ ಹಾಕಲಾರರು.

5. ಸದೃಢ ಪಾಸ್ವರ್ಡ್ ಹಾಕಿಕೊಳ್ಳಿ: ನಿಮ್ಮ ಇ ಮೇಲ್ ಮತ್ತು ಇತರ ಯಾವುದೇ ಆನ್‌ಲೈನ್ ಖಾತೆಗಳ ಪಾಸ್‌ವರ್ಡ್‌ಗಳು ತುಂಬ ಸ್ಟ್ರಾಂಗ್ ಆಗಿರುವಂತೆ ನೋಡಿಕೊಳ್ಳಬೇಕು. ದುರ್ಬಲ ಪಾಸ್ವರ್ಡ್ ಇದ್ದರೆ ಸೈಬರ್ ಖದೀಮರು ತುಂಬ ಸುಲಭವಾಗಿ ನಿಮ್ಮ ಖಾತೆಗಳನ್ನು ಹ್ಯಾಕ್ ಮಾಡಬಹುದು.

6. ಅಸುರಕ್ಷಿತ ವೈ ಫೈ ಬಳಸಬೇಡಿ: ಸಾರ್ವಜನಿಕವಾಗಿ ದೊರೆಯುವ ವೈ ಫೈ  ಬಳಸುವಾಗ ತುಂಬ ಹುಷಾರಾಗಿರಬೇಕು. ಇಂಥ ವೈ ಪೈಗಳನ್ನು ಭೇದಿಸುವುದು ಸೈಬರ್ ಖದೀಮರಿಗೆ ತುಂಬ ಸುಲಭ. ಜೊತೆಗೆ, ಕೆಲವೊಮ್ಮೆ ಈ ವೈ ಫೈಗಳ ಮೂಲಕ ನಮ್ಮ ಖಾಸಗಿ ಮಾಹಿತಿಗೆ ಹಾಕುವ ಸಾಧ್ಯತೆ ಇದ್ದೇ ಇರುತ್ತದೆ. ವೈಯಕ್ತಿಕ ಕೆಲಸ ಇರಲಿ ಅಥವಾ ಕಚೇರಿಯ ಕೆಲಸ ಇರಲಿ, ಅಸುರಕ್ಷಿತ ವೈ ಫೈ ಬಳಸುವ ಮುನ್ನ ಯೋಚಿಸಿ.

7. ಹಣ ವರ್ಗಾವಣೆ ವಿಷಯದಲ್ಲಿ ಹುಷಾರಾಗಿ: ಇದು ತುಂಬ ಮಹತ್ವದ ಟಿಪ್ಸ್. ಯಾಕೆಂದರೆ, ಸಾಮಾನ್ಯವಾಗಿ ಸೈಬರ್ ಕನ್ನ ಹಾಕುವವರ ಉದ್ದೇಶವೇ ದುಡ್ಡು ಹೊಡೆಯುವುದು ಆಗಿರುತ್ತದೆ. ಹಾಗಾಗಿ, ಆನ್‌ಲೈನ್ ಹಣ ವರ್ಗಾವಣೆ ಮಾಡುವಾಗ ನಾವು ತುಂಬ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಧಿಕೃತ ಹಣ ವರ್ಗಾವಣೆ ವೆಬ್‍‌ಸೈಟ್ ಗಳ ಮೂಲಕವೇ ವರ್ಗಾವಣೆ ಮಾಡಿ. ನಿಮ್ಮ ಪಾಸ್ವರ್ಡ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಹೋಗಬೇಡಿ. ಮನೆಯಿಂದ ಕೆಲಸ ಮಾಡುವಾಗಲೇ ಇದೇ ರೀತಿಯ ನಿಯಮಗಳನ್ನು ಪಾಲಿಸಬೇಕು. 

ವಂಶವಾಹಿ ತಿದ್ದುವ ತಂತ್ರಜ್ಞಾನ ಶೋಧಿಸಿದ ಇಬ್ಬರಿಗೆ ನೊಬೆಲ್

click me!