ಬೆಂಗಳೂರು(ಅ.09): ಭಾರತದ ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಮುಂಬರುವ ಹಬ್ಬದ ಸೀಸನ್ ನ ಬಿಗ್ ಬಿಲಿಯನ್ ಡೇಸ್ ಗೆ ಸಜ್ಜುಗೊಂಡಿದೆ. ಈ ಬಿಗ್ ಬಿಲಿಯನ್ ಡೇಸ್ ಅಕ್ಟೋಬರ್ 16 ರಿಂದ ಆರಂಭವಾಗಲಿದೆ. ಈ ಫ್ಲ್ಯಾಗ್ ಶಿಪ್ ಮಾರಾಟ ಉತ್ಸವವು ದೇಶಾದ್ಯಂತ ಇರುವ ಲಕ್ಷಾಂತರ ಮಾರಾಟಗಾರರು, ಕುಶಲಕರ್ಮಿಗಳು ಮತ್ತು ಬ್ರ್ಯಾಂಡ್ ಗಳನ್ನು ಒಂದೇ ಸೂರಿನಡಿ ತರಲಿದೆ. 250 ದಶಲಕ್ಷಕ್ಕೂ ಅಧಿಕ ಗ್ರಾಹಕರಿಗೆ ವಿಸ್ತಾರವಾದ ಶ್ರೇಣಿಗಳ ಉತ್ಪನ್ನಗಳನ್ನು ಪೂರೈಸಲಿದೆ. ಈ ಮಾರಾಟ ಉತ್ಸವ ಎದುರಾಗುತ್ತಿರುವ ಈ ಸಂದರ್ಭದಲ್ಲಿ ಫ್ಲಿಪ್ ಕಾರ್ಟ್ ತನ್ನ ಗ್ರಾಹಕರಿಗೆ ತಮಗಿಷ್ಟವಾದ ಉತ್ಪನ್ನಗಳನ್ನು ಮೊದಲೇ ಬುಕ್ ಮಾಡಲು ಮತ್ತು ಶಾಪಿಂಗ್ ಕಾರ್ಟ್ ಅನ್ನು ರಚಿಸಿಕೊಳ್ಳುವ ಅನನ್ಯವಾದ ಅವಕಾಶವನ್ನು ಕಲ್ಪಿಸುತ್ತಿದೆ.
ಬಿಗ್ ಬಿಲಿಯನ್ ಡೇ ಪ್ರಯುಕ್ತ, ಮ್ಯಾಕ್ಸ್ ಫ್ಯಾಷನ್ ಜೊತೆ ಫ್ಲಿಪ್‌ಕಾರ್ಟ್ ಒಪ್ಪಂದ!...
ಈ ಪ್ರೀ-ಬುಕ್ ಸ್ಟೋರ್ ಅಕ್ಟೋಬರ್ 11 ರಿಂದ ಅಕ್ಟೋಬರ್ 14 ರವರೆಗೆ ಚಾಲ್ತಿಯಲ್ಲಿರಲಿದ್ದು, ಗ್ರಾಹಕರು ಈ ಸಂದರ್ಭದಲ್ಲಿ ಕನಿಷ್ಠ 1 ರೂಪಾಯಿಯನ್ನು ಪಾವತಿ ಮಾಡಿ ಆರ್ಡರ್ ಗಳನ್ನು ಮಾಡಬಹುದಾಗಿದೆ. ಈ ಅವಕಾಶದ ಮೂಲಕ ಗ್ರಾಹಕರಿಗೆ ಸ್ಟಾಕ್ ಮುಗಿದು ಹೋಗುವ ಮುನ್ನ ಅವರ ನೆಚ್ಚಿನ ಉತ್ಪನ್ನಗಳು ಲಭ್ಯವಾಗಲಿವೆ. ಒಮ್ಮೆ ಬುಕಿಂಗ್ ಖಾತರಿಯಾದ ನಂತರ ಗ್ರಾಹಕರು ಬಿಗ್ ಬಿಲಿಯನ್ ಡೇಸ್ ಆರಂಭವಾಗುವ ಅಂದರೆ ಅಕ್ಟೋಬರ್ 16 ರಂದು ಆನ್ ಲೈನ್ ಪ್ಲಾಟ್ ಫಾರ್ಮ್ ಗೆ ಹೋಗಿ ವಿವಿಧ ಪಾವತಿ ವಿಧಾನಗಳಲ್ಲಿ ಆನ್ ಲೈನ್ ಮೂಲಕ ಬಾಕಿ ಹಣವನ್ನು ಪಾವತಿ ಮಾಡಿ ಅಥವಾ ಕ್ಯಾಶ್ ಆನ್ ಡೆಲಿವರಿ ಮಾಡಿ ಉತ್ಪನ್ನದ ಖರೀದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬಹುದು.
ಈ ಬಾರಿಯ ಬಿಗ್ ಬಿಲಿಯನ್ ಡೇಸ್ ನಲ್ಲಿ ಭಾರತೀಯ ಗ್ರಾಹಕರಿಗೆ ಹಲವಾರು ಮೊದಲನ್ನು ಪರಿಚಯಿಸುತ್ತಿದ್ದೇವೆ. ಇದರಲ್ಲಿ ಪ್ರಮುಖವಾದ ಉಪಕ್ರಮವೆಂದರೆ ಪ್ರೀ-ಬುಕ್ ಸ್ಟೋರ್. ಇದರ ಮೂಲಕ ಗ್ರಾಹಕರಿಗೆ ಅರ್ಥಪೂರ್ಣವಾದ ಶಾಪಿಂಗ್ ಅನುಭವವನ್ನು ನೀಡಲಿದ್ದೇವೆ. ಗ್ರಾಹಕರು ಕೇವಲ ಬಿಗ್ ಬಿಲಿಯನ್ ಡೇಸ್ ನ ಆಫರ್ ನಲ್ಲಿ ಸ್ನೀಕ್ –ಪೀಕ್ ಪಡೆಯುವುದಷ್ಟೇ ಅಲ್ಲ, ಕೇವಲ 1 ರೂಪಾಯಿ ಪಾವತಿ ಮಾಡಿ ತಮ್ಮ ನೆಚ್ಚಿನ ಉತ್ಪನ್ನಗಳ ಖರೀದಿಗೆ ಯೋಜನೆ ರೂಪಿಸಬಹುದಾಗಿದೆ ಎಂದು ಫ್ಲಿಪ್ ಕಾರ್ಟ್ ನ ಈವೆಂಟ್ಸ್, ಎಂಗೇಜ್ಮೆಂಟ್ & ಮರ್ಚೆಂಡೈಸಿಂಗ್ ನ ಉಪಾಧ್ಯಕ್ಷ ನಂದಿತಾ ಸಿನ್ಹಾ ಹೇಳಿದರು.
ಗ್ರಾಹಕರ ಅನುಕೂಲಕ್ಕಾಗಿ ಪೇಟಿಎಂ ಜೊತೆ ಒಪ್ಪಂದ ಮಾಡಿದ ಫ್ಲಿಪ್‌ಕಾರ್ಟ್!
ಇತ್ತೀಚಿನ ಉದ್ಯಮದ ವರದಿ ಪ್ರಕಾರ ಈ ವರ್ಷ ಹಬ್ಬದ ಸೀಸನ್ ನಲ್ಲಿ 45 ರಿಂದ 50 ದಶಲಕ್ಷ ಗ್ರಾಹಕರು ಆನ್ ಲೈನ್ ನಲ್ಲಿ ಶಾಪಿಂಗ್ ಮಾಡುವ ಮೂಲಕ ಭಾರೀ ಪ್ರಮಾಣದ ಬೇಡಿಕೆಯನ್ನು ಕಾಣಬಹುದಾಗಿದೆ. ಎಂಎಸ್ಎಂಇಗಳು, ಮಾರಾಟಗಾರರು, ಕುಶಲಕರ್ಮಿಗಳು, ನೇಕಾರರು ಮತ್ತು ಕರಕುಶಲಕರ್ಮಿಗಳು ಹಬ್ಬದ ಸೀಸನ್ ನ ಬೇಡಿಕೆಯನ್ನು ಪೂರೈಸಲು ಸಜ್ಜುಗೊಂಡಿದ್ದಾರೆ. ಇದಲ್ಲದೇ, ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಮಾರ್ಕೆಟ್ ಪ್ಲೇಸ್ ನಲ್ಲಿ ತಮ್ಮ ಉತ್ಪನ್ನಗಳಿಗೆ ಬರುವ ಬೇಡಿಕೆ ಸಾಧ್ಯತೆಗಳನ್ನು ವೀಕ್ಷಿಸಲು ಮಾರಾಟಗಾರರಿಗೆ ಈ ಪ್ರೀ-ಬುಕ್ ಸ್ಟೋರ್ ನೆರವಾಗುತ್ತದೆ. ಇದರ ಪ್ರಕಾರ ಮಾರಾಟಗಾರರು ಬೇಡಿಕೆಗಳಿಗೆ ಅನುಗುಣವಾಗಿ ಪರಿಣಾಮಕಾರಿಯಾಗಿ ಸ್ಟಾಕ್ ಗಳನ್ನು ಮಾಡಿಕೊಳ್ಳಬಹುದು ಮತ್ತು ವಿತರಣೆಯನ್ನು ಮಾಡಬಹುದಾಗಿದೆ.
ಕೊರೋನಾದಿಂದ ಸಂಕಷ್ಟದಲ್ಲಿರುವವರಿಗೆ ಫ್ಲಿಪ್‌ಕಾರ್ಟ್ ಆರ್ಥಿಕ ನೆರವು!
ನಮ್ಮ ಮಾರಾಟಗಾರ ಪಾಲುದಾರರು ಭಾರತೀಯ ಗ್ರಾಹಕರಿಗೆ ವಿಶಾಲವಾದ ಶ್ರೇಣಿಯ ಉತ್ಪನ್ನಗಳನ್ನು ನೀಡುವತ್ತ ಕಾರ್ಯಪ್ರವೃತ್ತರಾಗಿದ್ದಾರೆ. ಗ್ರಾಹಕರ ಬೇಡಿಕೆಯನ್ನು ಅರ್ಥ ಮಾಡಿಕೊಂಡು ನಾವು ನಮ್ಮ ಮಾರಾಟಗಾರರನ್ನು ಸಜ್ಜುಗೊಳಿಸಿದ್ದೇವೆ ಮತ್ತು ಹಬ್ಬದ ಸೀಸನ್ ನಲ್ಲಿ ಪರಿಣಾಮಕಾರಿಯಾಗಿ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಉತ್ಪನ್ನಗಳನ್ನು ನೀಡುವ ಅವಕಾಶಗಳನ್ನು ಕಲ್ಪಿಸಿದ್ದೇವೆ. ಪ್ರೀ-ಬುಕ್ ಸ್ಟೋರ್ ನೊಂದಿಗೆ ಮಾರಾಟಗಾರರು, ಕುಶಲಕರ್ಮಿಗಳು ಮತ್ತು ನೇಕಾರರು ಈ ಮಾರಾಟ ಉತ್ಸವದ ವೇಳೆ ಬರುವ ಬೇಡಿಕೆಗಳ ಪ್ರಮಾಣವನ್ನು ಅಂದಾಜು ಮಾಡಿ ಅದಕ್ಕೆ ತಕ್ಕಂತೆ ಉತ್ಪನ್ನಗಳನ್ನು ಪೂರೈಸಲು ಸಾಧ್ಯವಾಗಿಸುತ್ತದೆ. ಈ ಮೂಲಕ ಬಿಗ್ ಬಿಲಿಯನ್ ಡೇಸ್ ಕಾರ್ಯಕ್ರಮದಲ್ಲಿ ಗ್ರಾಹಕರಿಗೆ ಅತ್ಯಂತ ಸಂತಸದ ಶಾಪಿಂಗ್ ಅನುಭವವನ್ನು ನೀಡಬಹುದಾಗಿದೆ ಎಂದು ಫ್ಲಿಪ್ ಕಾರ್ಟ್ ಮಾರ್ಕೆಟ್ ಪ್ಲೇಸ್ ನ ಹಿರಿಯ ನಿರ್ದೇಶಕ ಮತ್ತು ಮುಖ್ಯಸ್ಥ ಜಗಜೀತ್ ಹರೋಡೆ ಹೇಳಿದರು.`
ಗ್ರಾಹಕರು ಗೃಹಬಳಕೆ, ಲೈಫ್ ಸ್ಟೈಲ್, ಸೌಂದರ್ಯ, ಬೇಬಿಕೇರ್ ಮತ್ತು ಎಲೆಕ್ಟ್ರಾನಿಕ್ ಅಕ್ಸೆಸರಿಗಳು ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಲಕ್ಷಾಂತರ ಉತ್ಪನ್ನಗಳನ್ನು ಪಡೆಯಬಹುದಾಗಿದೆ. ಇವುಗಳನ್ನು ಪ್ರೀ-ಬುಕ್ ಸ್ಟೋರ್ ಮೂಲಕವೂ ಆರ್ಡರ್ ಮಾಡಬಹುದಾಗಿದೆ.