ವಾರಕ್ಕೆ ಮೂರು ಸಲ ಆಫೀಸಿಗೆ ಬನ್ನಿ; ಆ್ಯಪಲ್ ಇ-ಮೇಲ್!

By Suvarna NewsFirst Published Jun 4, 2021, 2:45 PM IST
Highlights
  • ವರ್ಕ್ ಫ್ರಮ್ ಹೋಮ್‌ನಲ್ಲಿರುವ ಉದ್ಯೋಗಿಗಳಿಗೆ ಆ್ಯಪಲ್ ಸೂಚನೆ
  • ವಾರಕ್ಕೆ 3 ದಿನ ಆಫೀಸ್‌ಗೆ ಬರಲು ಆ್ಯಪಲ್ ಸೂಚನೆ
  • ಸೆಪ್ಟೆಂಬರ್ ತಿಂಗಳಿನಿಂದ ಕಚೇರಿಗೆ ಬಂದು ಕೆಲಸ ಮಾಡುಲು ಸೂಚನೆ 
     

ಕ್ಯಾಲಿಫೋರ್ನಿಯಾ(ಜೂ.04): ಕೊರೋನಾ ವೈರಸ್ ಕಾರಣ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಿತ್ತು. ಪ್ರತಿಷ್ಠಿತ ಆ್ಯಪಲ್ ಕಂಪನಿ ತಮ್ಮ ಉದ್ಯೋಗಿಗಳಿಗೆ ವರ್ಕ್‌ ಫ್ರಮ್ ಹೋಮ್ ನೀಡಿ ವರ್ಷಗಳೇ ಉರುಳಿವೆ. ಇದೀಗ ಮತ್ತೆ ಕಚೇರಿಯಲ್ಲಿ ಕೆಲಸ ಮಾಡಲು ಆ್ಯಪಲ್ ತನ್ನ ಉದ್ಯೋಗಿಗಳಿಗೆ ಸೂಚನೆ ನೀಡಿದೆ.

ಡಾರ್ಕ್‌ ಸರ್ಕಲ್‌ ಹೋಗಿದೆ.. ಜೀನ್ಸ್..ಬ್ರಾ .. ಪ್ಯಾಕ್ ಮಾಡಿ ಇಟ್ಟಿದ್ದೇನೆ.. ಆಫೀಸ್‌ಗೆ  ಬರಲ್ಲ!

ಸೆಪ್ಟೆಂಬರ್ ತಿಂಗಳಿನಿಂದ ವಾರದಲ್ಲಿ 3 ದಿನ ಆ್ಯಪಲ್ ಉದ್ಯೋಗಿಗಳು ಕಚೇರಿಗೆ ಆಗಮಿಸಿ ಕೆಲಸ ಮಾಡಬೇಕು ಎಂದು ಆ್ಯಪಲ್ ಸಿಇಒ ಟಿಮ್ ಕೂಕ್ ಇಮೇಲ್ ಕಳುಹಿಸಿದ್ದಾರೆ.  ಸಾಂಕ್ರಾಮಿಕ ರೋಗದ ಕಾರಣ ಎಲ್ಲರೂ ಒಟ್ಟಿಗೆ ಕೆಲಸ ಮಾಡುವ ಅವಕಾಶ ಕೈತಪ್ಪಿತು. ಆದರೆ  ವರ್ಕ್ ಫ್ರಮ್ ಹೋಮ್‌‌ನಲ್ಲಿ ವಿಡಿಯೋ ಮೀಟಿಂಗ್ ನಮ್ಮ ಅಂತರವನ್ನು ಕಡಿಮೆ ಮಾಡಿದೆ ಎಂದು ಕುಕ್ ಹೇಳಿದ್ದಾರೆ.

ಹೆಚ್ಚಿನ ಉದ್ಯೋಗಿಗಳಿಗೆ ಸೋಮವಾರ, ಮಂಗಳವಾರ ಹಾಗೂ ಗುರವಾರ ಕಚೇರಿಗೆ ಬಂದು ಕೆಲಸ ಮಾಡಲು ಸೂಚಿಸಲಾಗುತ್ತದೆ. ಇನ್ನುಳಿದ ಬುಧವಾರ, ಗುರುವಾರ ಹಾಗೂ ಶುಕ್ರವಾರ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಕುಕ್ ಹೇಳಿದ್ದಾರೆ.

ವರ್ಕ್‌ ಫ್ರಂ ಹೋಮ್ ಮಾಡಲು ಸೈ ಎಂದ ಸುದೀಪ್!.

ಇದರ ನಡುವೆ ಆ್ಯಪಲ್ ಉದ್ಯೋಗಿಗಳಿಗೆ ಮತ್ತೊಂದು ಸೌಲಭ್ಯ ನೀಡಿದೆ. ವರ್ಷದಲ್ಲಿ 2 ವಾರ ವರ್ಕ್ ಫ್ರಮ್ ಹೋಮ್ ಮಾಡಲು ಅವಕಾಶ ನೀಡಿದೆ. ಈ ಮೂಲಕ ಕುಟುಂಬದ ಸದಸ್ಯರೊಂದಿಗೆ ಕಳೆಯಲು, ಕಚೇರಿಗೆ ಆಗಮಿಸುವ ಟ್ರಾಫಿಕ್ ಕಿರಿಕಿರಿಯಿಂದ ದೂರವಿರಲು ಅವಕಾಶ ಮಾಡಿಕೊಟ್ಟಿದೆ.

ವಾರಕ್ಕೆ 3 ದಿನ ಕಚೇರಿಯಿಂದ ಕೆಲಸ ಮಾಡವು ನಿರ್ಧಾರ ದಿಢೀರ್ ತೆಗೆದುಕೊಂಡಿಲ್ಲ. ಈ ಕುರಿತು ಎಲ್ಲಾ ಅಭಿಪ್ರಾಯ ಸಂಗ್ರಹಿಸಲಾಗಿದೆ. ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಕಂಪನಿ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಉದ್ಯೋಗಿಗಳು ಕಚೇರಿಯ ಹಲವು ಚಟುವಟಿಕೆಗಳಿಂದ ವಂಚಿತರಾಗಿದ್ದಾರೆ. ಆದರೆ ಸೆಪ್ಟೆಂಬರ್ ಎಲ್ಲವೂ ಸಹಜ ಸ್ಥಿತಿಗೆ ಬರಲಿದೆ ಎಂದು ಟಿಮ್ ಕುಕ್ ಹೇಳಿದ್ದಾರೆ.

ವರ್ಕ್ ಫ್ರಮ್ ಹೋಮ್ ಮುಂದುವರಿಸಲು ರೆಡಿನಾ? ಅಧ್ಯಯನ ವರದಿಯ ಕುತೂಹಲ ಮಾಹಿತಿ ಪ್ರಕಟ!.

ವಾರಕ್ಕೆ 3 ದಿನ ಆಫೀಸ್‌ಗೆ ಬನ್ನಿ ಎಂಬ ಮೇಲ್‌ನಲ್ಲಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತೆ ಕುಕ್ ಮನವಿ ಮಾಡಿದ್ದಾರೆ. ಲಸಿಕೆಯಿಂದ ಮತ್ತಷ್ಟು ಸುರಕ್ಷಿತ ಸಿಗಲಿದೆ. ಹೀಗಾಗಿ ಕಚೇರಿಗೆ ಆಗಮಿಸುವ ಮೊದಲು ಲಸಿಕೆ ಹಾಕಿಸಿ ಎಂದಿದ್ದಾರೆ. 

ವರ್ಕ್ ಫ್ರಮ್ ಹೋಮ್ ಮುಂದುವರಿಸುವ ಕುರಿತು ಆ್ಯಪಲ್ ಹೆಚ್ಚು ಆಸಕ್ತಿ ತೋರಿಲ್ಲ. ಇತರ ಟೆಕ್ ಕಂಪನಿಗಳು ಈಗಾಗಲೇ ವರ್ಕ್ ಫ್ರಮ್ ಹೋಮ್‌ಗೆ ಹೆಚ್ಚಿನ ಆದ್ಯತೆ ನೀಡಿದೆ.  ಗೂಗಲ್ ಶೇಕಡಾ 20 ರಷ್ಟು ಉದ್ಯೋಗಿಗಳಿಗೆ ಶಾಶ್ವತವಾಗಿ ವರ್ಕ್ ಫ್ರಮ್ ಹೋಮ್ ಅವಕಾಶ ನೀಡಿದೆ. ಫೇಸ್‌ಬುಕ್ ಕೂಡ ವರ್ಕ್ ಫ್ರಮ್ ಹೋಮ್ ಮುಂದುವರಿಸಿದೆ. ಇಷ್ಟೇ ಅಲ್ಲ ವರ್ಕ್ ಫ್ರಮ್ ಹೋಮ್ ಭವಿಷ್ಯದ ಪದ್ಧತಿ ಎಂದಿದ್ದಾರೆ.

click me!