ಅಮೆರಿಕದಲ್ಲಿ ಸರ್ಕಾರಿ ಸಂಸ್ಥೆಗಳು, ಸೇನೆಗಳೇ ಹೆಚ್ಚಾಗಿ ಬಳಸುವ Wickr ಆ್ಯಪ್ ಅನ್ನು ಇ ಕಾಮರ್ಸ್ ದೈತ್ಯ ಅಮೆಜಾನ್ ಖರೀದಿಸಿದೆ. ಆ ಮೂಲಕ ಕಂಪನಿ ತನ್ನದೇ ಸ್ವಂತ ಮೆಸೆಜಿಂಗ್ ಆ್ಯಪ್ ಅನ್ನು ಹೊಂದಿಂತಾಗಿದೆ. ಎಷ್ಟು ಮೊತ್ತದ ಸ್ವಾಧೀನ ಪ್ರಕ್ರಿಯೆ ನಡೆದಿದೆ ಎಂಬ ಮಾಹಿತಿಯನ್ನು ಅಮೆಜಾನ್ ನೀಡಿಲ್ಲ.
ಸರ್ಕಾರಿ ಸಂಸ್ಥೆಗಳೇ ಹೆಚ್ಚಾಗಿ ಬಳಸುತ್ತಿರುವ Wickr ಮೆಸೆಜಿಂಗ್ ಆಪ್ ಅನ್ನು ಇ- ಕಾಮರ್ಸ್ ದೈತ್ಯ ಅಮೆಜಾನ್ ಖರೀದಿಸಿದೆ. ಈ ಮೂಲಕ ಕಂಪನಿ ಮತ್ತೊಂದು ಸಾಹಸಕ್ಕೆ ಅಣಿಯಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಹೆಚ್ಚು ಗಮನ ಸೆಳೆದಿರುವ ಈ Wickr ಆಪ್ ಅನ್ನು ಅಮೆರಿಕದಲ್ಲಿ ಸರ್ಕಾರಿ ಸಂಸ್ಥೆಗಳೇ ಹೆಚ್ಚಾಗಿ ಬಳಸುತ್ತಿವೆ. ಎಷ್ಟು ಮೊತ್ತಕ್ಕೆ ಆಪ್ ಖರೀದಿಸಲಾಗಿದೆ ಎಂಬ ಮಾಹಿತಿಯನ್ನು ಅಮೆಜಾನ್ ಬಿಟ್ಟುಕೊಟ್ಟಿಲ್ಲ. Wickr ಖರೀದಿಯೊಂದಿಗೆ ಅಮೆಜಾನ್ ಸ್ವಂತ ತನ್ನದೇ ಆದ ಮೆಸೆಜಿಂಗ್ ಆಪ್ ಅನ್ನು ಹೊಂದಿದಂತಾಗಿದೆ.
Lenovo ThinkPad X1 ಮಡಿಚಿಟ್ಟರೆ ಲ್ಯಾಪ್‌ಟ್ಯಾಪ್, ಬಿಚ್ಚಿಟ್ಟರೆ ಟ್ಯಾಬ್ಲೆಟ್!
undefined
ಅಮೆರಿಕ ಮೂಲದ ಈ Wickr ಬಹು ಜನಪ್ರಿಯ ಮೆಸೆಜಿಂಗ್ ಆಪ್ ಆಗಿದೆ. ಇದು ಕೂಡ ಸಿಗ್ನಲ್ ಆಪ್ ರೀತಿಯ ಎನ್‌ಕ್ರಿಪ್ಟೆಡ್ ಮೆಸೆಜಿಂಗ್ ಸೇವೆಯನ್ನು ಒದಗಿಸುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಸಂಸ್ದೆಗಳೇ ಹೆಚ್ಚಾಗಿ ಈ ಆಪ್‌ನ ಸೇವೆಯನ್ನು ಬಳಸುತ್ತಿವೆ. ದೊಡ್ಡ ದೊಡ್ಡ ಕಂಪನಿಗಳು ಕೂಡ ಇದೇ ಆಪ್ ಬಳಸುತ್ತಿವೆ.
ಉದ್ಯಮದ ಅತ್ಯಂತ ಸುರಕ್ಷಿತ ಹಾಗೂ ಎಂಡ್ ಟು ಎಂಡ್ ಎನ್‌ಕ್ರಿಪ್ಟೆಡ್ ಸಂವಹನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ನವೀನ ಕಂಪನಿಯಾದ Wickr ಅನ್ನು ಎಡಬ್ಲ್ಯೂಎಸ್ ಸ್ವಾಧೀನಪಡಿಸಿಕೊಂಡಿದೆ ಎಂಬುದನ್ನು ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ. Wickrನೊಂದಿಗೆ, ಗ್ರಾಹಕರು ಮತ್ತು ಪಾಲುದಾರರು ಮೆಸೇಜಿಂಗ್, ಧ್ವನಿ ಮತ್ತು ವಿಡಿಯೋ ಕರೆ, ಫೈಲ್ ಹಂಚಿಕೆ ಮತ್ತು ಸಹಯೋಗದಾದ್ಯಂತ ಸಾಂಪ್ರದಾಯಿಕ ಸಂವಹನ ಸೇವೆಗಳೊಂದಿಗೆ ಸುಧಾರಿತ ಭದ್ರತಾ ವೈಶಿಷ್ಟ್ಯಗಳಿಂದ ಪ್ರಯೋಜನ ಪಡೆಯಲಿದ್ದಾರೆ. ಇದು ಭದ್ರತಾ ಉದ್ಯಮಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಪ್ರಮುಖ ಆಡಳಿತ ಮತ್ತು ಭದ್ರತಾ ನಿಯಂತ್ರಣಗಳನ್ನು ಕಾರ್ಯಗತಗೊಳಿಸುವ ಸಾಮರ್ಥ್ಯವನ್ನು ನೀಡುತ್ತದೆ ಮತ್ತು ಅವುಗಳ ಅನುಸರಣೆ ಅಗತ್ಯತೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಎಂದು ಅಮೆಜಾನ್ ತನ್ನ ಬ್ಲಾಗ್‌ನಲ್ಲಿ ಹೇಳಿದೆ.
Welcome to the family ! https://t.co/5HG2Dvtg5E
— AWS Security (@AWSSecurityInfo)
ಕೋವಿಡ್ 19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ವಿಚಿತ್ರ ಕಾರ್ಯನಿರ್ವಹಣೆಯ ಅಗತ್ಯಗಳಿಗೆ ಒಗ್ಗಿಕೊಳ್ಳಬೇಕಾಗಿದೆ. ಉದ್ಯಮಗಳು ಮತ್ತು ಸರ್ಕಾರಿ ಸಂಸ್ಥೆಗಳು ತಮ್ಮ ಸಂವಹನಗಳನ್ನು ಅನೇಕ ದೂರದ ಸ್ಥಳಗಳಲ್ಲಿ ರಕ್ಷಿಸುವ ಬಯಕೆಯನ್ನು ಹೊಂದಿವೆ. Wickr ಅವರ ಸುರಕ್ಷಿತ ಸಂವಹನ ಪರಿಹಾರಗಳು ಉದ್ಯಮಗಳು ಮತ್ತು ಸರ್ಕಾರಿ ಸಂಸ್ಥೆಗಳು ತಮ್ಮ ಕಾರ್ಯಪಡೆಯ ಈ ಬದಲಾವಣೆಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತವೆ. ಎಡಬ್ಲ್ಯೂಎಸ್ ಗ್ರಾಹಕರು ಮತ್ತು ಪಾಲುದಾರರಿಗೆ ನೀಡುವ ಸಹಯೋಗ ಮತ್ತು ಉತ್ಪಾದಕತೆ ಸೇವೆಗಳ ಹೆಚ್ಚುತ್ತಿರುವ ಗುಂಪಿಗೆ Wickr ಸ್ವಾಗತಾರ್ಹ ಸೇರ್ಪಡೆಯಾಗಿದೆ ಎಂದೂ ಬ್ಲಾಗ್‌ನಲ್ಲಿ ತಿಳಿಸಲಾಗಿದೆ.
Clubhouse app ಲೋಗೋದಲ್ಲಿರುವ ಆ ಮಹಿಳೆ ಯಾರು?
Wickr ಮೆಸೆಜಿಂಗ್ ಆಪ್ ಅನ್ನು ವಿನ್ಯಾಸ ಮಾಡಿದ್ದೇ ಸರ್ಕಾರಿ ಸಂಸ್ಥೆಗಳು, ಸೇನೆ, ಉದ್ಯಮಗಳಿಗೆ ನೆರವಾಗುವುದಕ್ಕೆ. ರಾಬರ್ಟ್ ಸ್ಟ್ಯಾಟಿಕಾ, ಕಾರಾ ಕೊಪ್ಪಾ, ಕ್ರಿಸ್ಟೋಫರ್ ಹಾವೆಲ್, ನಿಕೋ ಸೆಲ್, ಯಾರ್ಕ್ ಸೆಲ್ ಅವರು 2012ರಲ್ಲಿ ಈ ಸೆಕ್ಯುರ್ ಮೆಸೆಜಿಂಗ್ ಆಪ್ Wickr ಸ್ಥಾಪಿಸಿದರು. ಬಳಕೆದಾರರಿಗೆ ಎಂಡ್ ಟು ಎಂಡ್ ಎನ್‌ಕ್ರಿಪ್ಟೆಡ್ ಮತ್ತು ಕಂಟೆಂಟ್ ಎಕ್ಸ್‌ಪೈರಿಂಗ್ ಸಂದೇಶಗಳ ರವಾನೆಯ ಸೇವೆಯನ್ನು ಒದಗಿಸುತ್ತದೆ. ಈ ಸೇವೆಯಲ್ಲಿ ಫೋಟೋಗಳು, ವಿಡಿಯೋಗಳು ಮತ್ತು ಫೈಲ್ ಅಟ್ಯಾಚ್‌ಮೆಂಟ್‌ಗಳನ್ನು ರವಾನಿಸಬಹುದಾಗಿದೆ.
Wickr ಇನ್ನೂ ಹಲವು ಆಪ್‌ಗಳನ್ನು ಹೊಂದಿದೆ. ಈ ಪೈಕಿ Wickr ಪ್ರೋ, Wickr RAM ಮತ್ತು Wickr RAM ಎಂಟ್‌ಪ್ರೈಸಸ್ ಪ್ರಮುಖವಾದವು. ಸೇನೆಯನ್ನು ಗುರಿಯಾಗಿಸಿಕೊಂಡ ಕಂಪನಿ Wickr RAM ಆಪ್ ಅನ್ನು ಸಿದ್ಧಪಡಿಸಿದೆ. ಈ ಆಪ್ ಎಂಥದ್ದೇ ಪರಿಸ್ಥಿತಿಯಲ್ಲೂ ಗರಿಷ್ಠ ಸುರಕ್ಷತೆಯನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಅದೇ ಕಾಲಕ್ಕೆ ಕಂಪನಿಗಳಿಗಾಗಿಯೇ Wickr ಎಂಟರ್‌ಪ್ರೈಸಸ್ ಆಪ್ ವಿನ್ಯಾಸಗೊಳಿಸಲಾಗಿದೆ.
ಈ Wickr ಆಪ್‌ನ ವಿಶೇಷತೆ ಏನೆಂದರೆ, ಇದು ಕೇವಲ ಬಳಕೆದಾರರ ಸಂದೇಶಗಳು, ಡೇಟಾ ಮತ್ತು ಸಂಭಾಷಣೆಗಳನ್ನು ಎಂಡ್ ಟು ಎಂಡ್ ಎನ್‌ಕ್ರಿಪ್ಟೆಡ್ ಮಾಡುವುದು ಮಾತ್ರವಲ್ಲದೇ, ನೆಟ್ವರ್ಕ್ ಮೂಲಕ ಹಂಚಿಕೆಯಾಗುವ ಎಲ್ಲ ಕಂಟೆಂಟ್‌ಗಳ ಮೇಟಾಡೇಟಾ ತೆಗೆದು ಹಾಕುತ್ತದೆ. ಹಾಗಾಗಿ, ಹೆಚ್ಚು ಸುರಕ್ಷಿತ ಆಪ್ ಎನಿಸಿಕೊಂಡಿದೆ.
ಹೊಸ ಸೆನ್ಸೇಷನ್, ಕ್ಲಬ್‌ಹೌಸ್ ಹೌಸ್‌ಫುಲ್; ಏನಿದು ಆ್ಯಪ್? ಹೇಗೆ ಕೆಲಸ ಮಾಡುತ್ತದೆ?