Whatsapp ಹೊಸ ಫೀಚರ್ಸ್ , ಗ್ರೂಪ್ ಸದಸ್ಯರ ಮಿತಿ 1024ಕ್ಕೆ ಏರಿಕೆ, 32 ಮಂದಿಗೆ ವಿಡಿಯೋ ಕಾಲ್!

By Suvarna News  |  First Published Nov 3, 2022, 6:29 PM IST

Whatsapp‌ನಲ್ಲಿ ಹೊಸ ಫೀಚರ್ಸ್ ಪರಿಚಯಿಯಲಾಗಿದೆ. ಗ್ರೂಪ್ ಸದಸ್ಯರ ಮಿತಿಯನ್ನು 1024ಕ್ಕೆ ಏರಿಕೆ ಮಾಡಲಾಗಿದ್ದರೆ, ವಿಡಿಯೋ ಕಾಲ್ ಮಿತಿಯನ್ನು 32 ಮಂದಿಗೆ ವಿಸ್ತರಿಸಲಾಗಿದೆ. ಇದರ ಜೊತೆ ಅಭಿಪ್ರಾಯ ಸಂಗ್ರಹ ಸೇರಿದಂತೆ ಮತ್ತೂ ಕೆಲ ಫೀಚರ್ಸ್ ಸೇರಿಸಲಾಗಿದೆ. 


ನವದೆಹಲಿ(ನ.03):  Whatsapp ಕಾಲ ಕಾಲಕ್ಕೆ ತಕ್ಕಂತೆ ಹೊಸ ಹೊಸ ಫೀಚರ್ಸ್ ಸೇರಿಸುತ್ತಾ ಬಂದಿದೆ. ಬಳಕೆದಾರರ ಬೇಡಿಕೆ, ಅವಶ್ಯಕತೆ ತಕ್ಕಂತೆ ಹಲವು ಫೀಚರ್ಸ್ ಬದಲಿಸಿದೆ. ಇದೀಗ Whatsapp ಮತ್ತಷ್ಟು ಹೊಸ ಫೀಚರ್ಸ್ ನೀಡಿದೆ. ಬಳಕೆದಾರರ ಅವಶ್ಯಕತೆ ತಕ್ಕಂತೆ ನೂತನ ಫೀಚರ್ಸ್ ಡಿಸೈನ್ ಮಾಡಲಾಗಿದೆ. ಇದೀಗ ಹೊಸದಾಗಿ ನೀಡಿರುವ ಫೀಚರ್ಸ್ ಪೈಕಿ ಗ್ರೂಪ್ ಸದಸ್ಯರ ಮಿತಿಯನ್ನು 512ರಿಂದ ಇದೀಗ 1024ಕ್ಕೆ ಏರಿಕೆ ಮಾಡಲಾಗಿದೆ. ಇನ್ನು ಚಾಟ್ಸ್‌ನಲ್ಲಿ ಅಭಿಪ್ರಾಯ ಸಂಗ್ರಹಿಸುವ ಅವಕಾಶವನ್ನು ನೀಡಲಾಗಿದೆ. ಇಷ್ಟೇ ಅಲ್ಲ ಏಕಕಾಲಕ್ಕೆ ವಿಡಿಯೋ ಕಾಲ್ ಮಿತಿಯನ್ನು  ಇದೀಗ 32 ಮಂದಿಗೆ ಮಾಡಲು ಅವಕಾಶವಿದೆ. ಇಷ್ಟೇ ಅಲ್ಲ ವಿವಿಧ ಗ್ರೂಪ್‌ಗಳಿಗೆ ಸುಲಭವಾಗಿ ಸಂದೇಶ ಕಳುಹಿಸುವ, ಹಲವು ಗುಂಪುಗಳ ಜೊತೆ ಸುಲಭವಾಗಿ ಚಾಟ್ ಮಾಡುವ ಸೌಲಭ್ಯವನ್ನು ವ್ಯಾಟ್ಸ್ಆ್ಯಪ್ ನೀಡಿದೆ.

Whatsapp ಹೊಸ ಫೀಚರ್ಸ್ ಕುರಿತು ಮಾತ್ರ ಸಂಸ್ಥೆ ಸಿಇಒ ಮಾರ್ಕ್ ಜುಕರ್ಬರ್ಗ್ ಮಾಹಿತಿ ನೀಡಿದ್ದಾರೆ. ಹಲವು ಗ್ರೂಪ್‌ಗಳನ್ನು ಒಂದೇ ಸೂರಿನಡಿ ತರಲಾಗಿದೆ. ಇದರಿಂದ ಸಂವಹನ ಮತ್ತಷ್ಟು ಸುಲಭವಾಗಿದೆ. ಇದರಿಂದ ಒಂದೇ ಸೂರಿನಡಿ ಇರುವ ಎಲ್ಲಾ ಗ್ರೂಪ್‌ಗಳ ಅಪ್‌ಡೇಟ್, ಮೆಸೇಜ್ ಸೇರಿದಂತೆ ಯಾವುದೇ ಮಾಹಿತಿಗಳನ್ನು ಸುಲಭವಾಗಿ ಪಡೆಯಬಹುದು ಹಾಗೂ ಕಳುಹಿಸಬಹುದು ಎಂದು ಜುಕರ್ಬರ್ಗ್ ಹೇಳಿದ್ದಾರೆ. ಇನ್ನು ಗ್ರೂಪ್ ಅಡ್ಮಿನ್‌ಗಳಿಗೆ ಇಲ್ಲೂ ವಿಶೇಷ ಅಧಿಕಾರವನ್ನು ನೀಡಲಾಗಿದೆ. ಕಳುಹಿಸುವ ಸಂದೇಶ  ಯಾವ ಗುಂಪಿಗೆ ಕಳುಹಿಸಬೇಕು ಅನ್ನೋ ಅವಕಾಶವೂ ನೀಡಲಾಗಿದೆ.

Tap to resize

Latest Videos

undefined

WhatsApp Down: ವಾಟ್ಸ್‌ಆಪ್‌ ಡೌನ್‌ ಆದ್ರೆ, ಬೇರೆ ಯಾವ ಆಪ್‌ ಬಳಸಿದರೆ ಒಳ್ಳೇದು?

ಆರಂಭದಲ್ಲಿ 256 ಮಂದಿಯನ್ನು ಒಂದು ಗ್ರೂಪ್‌ನಲ್ಲಿ ಸೇರಿಸಲು ಅವಕಾಶವಿತ್ತು. ಬಳಿಕ ಈ ಮಿತಿಯನ್ನು 512ಕ್ಕೆ ಏರಿಸಲಾಗಿತ್ತು. ಇದೀಗ ಗ್ರೂಪ್ ಸದಸ್ಯರ ಮಿತಿಯನ್ನು 1024ಕ್ಕೆ ಏರಿಕೆ ಮಾಡಲಾಗಿದೆ. ವಿಡಿಯೋ ಕಾಲ್ ಮಿತಿಯನ್ನು ಏರಿಕೆ ಮಾಡಲಾಗಿದೆ. ಒಂದೇ ಬಾರಿಗೆ 32 ಮಂದಿಗೆ ವಿಡಿಯೋ ಕಾಲ್ ಮಾಡುವ ಅವಕಾಶ ನೀಡಲಾಗಿದೆ. ಈ ಮೂಲಕ ವಿಡಿಯೋ ಕಾಲ್ ಮಿತಿಯನ್ನು ಹೆಚ್ಚಿಸಲಾಗಿದೆ.

ಇನ್ನು ಅತೀ ಹೆಚ್ಚಿನ ಫೈಲ್ಸ್ ಕಳುಹಿಸಲು ವ್ಯಾಟ್ಸ್ಆ್ಯಪ್ ಅವಕಾಶ ಮಾಡಿದೆ. ದೊಡ್ಡ ಗಾತ್ರದ ಫೈಲ್ಸ್ ಸುಲಭವಾಗಿ ಕಳುಹಿಸಲು ಅವಕಾಶ ಮಾಡಿಕೊಡಲಾಗಿದೆ. ಇನ್ನು ಇಮೋಜಿ ರಿಯಾಕ್ಷನ್‌ನಲ್ಲಿ ಹೊಸತನ ಸೇರಿಸಲಾಗಿದೆ. ಗ್ರೂಪ್‌ನಲ್ಲಿ ಅಡ್ಮಿನ್ ಅಧಿಕಾರ ಹೆಚ್ಚಿಸಲಾಗಿದೆ. ಯಾವುದೇ ಸದಸ್ಯರು ಹಾಕಿದ ಸಂದೇಶಗಳನ್ನು ಡಿಲೀಟ್ ಮಾಡುವ ಅಧಿಕಾರವನ್ನು ಆಡ್ಮಿನ್‌ಗೆ ನೀಡಲಾಗಿದೆ. 

WhatsApp Down: ಟ್ವಿಟ್ಟರ್‌ಗೆ ಓಡೋಡಿ ಬಂದ ಜನ, ಮೀಮ್ಸ್‌ಗಳ ಹಬ್ಬ!

ಇತ್ತೀಚೆಗೆ ವ್ಯಾಟ್ಸ್ಆ್ಯಪ್ ಸೇವೆ ಕೆಲಕಾಲ ಸ್ಥಗಿತಗೊಂಡಿತ್ತು. ಇದರಿಂದ ಜನರು ಪರದಾಡಿದ್ದರು. ಸುಮಾರು  2 ಗಂಟೆಗಳ ಕಾಲ ವ್ಯತ್ಯಯ ಕಂಡು ಬಂದಿತ್ತು. ಭಾರತ ಸೇರಿದಂತೆ ವಿಶ್ವಾದ್ಯಂತ ಈ ಸಮಸ್ಯೆ ಕಾಣಿಸಿಕೊಂಡಿತ್ತು. ವಾಟ್ಸಾಪ್‌ ಸೇವೆಗಳಲ್ಲಿ ವ್ಯತ್ಯಯವಾಗಲು ಕಾರಣವೇನು ಎಂಬುದನ್ನು ವಾಟ್ಸಾಪ್‌ ಒಡೆತನ ಹೊಂದಿರುವ ಮೆಟಾ ಇನ್ನೂ ಸ್ಪಷ್ಟಪಡಿಸಿಲ್ಲ. ಆದರೆ ಮಧ್ಯಾಹ್ನ 2.15 ಗಂಟೆಯ ಬಳಿಕ ಮತ್ತೆ ವಾಟ್ಸಾಪ್‌ ಸೇವೆಗಳು ಆರಂಭಗೊಂಡವು. ಇದು 200 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸಾಪ್‌ನ ಇತಿಹಾಸದಲ್ಲೇ ಸುದೀರ್ಘ ವ್ಯತ್ಯಯ ಎನ್ನಲಾಗಿದೆ.
 

click me!