Weekly Horoscope: ಮೇಷಕ್ಕೆ ಅಭಿವೃದ್ಧಿಯ ವಾರ, ಮಿಥುನಕ್ಕೆ ಚಿಂತೆಗಳ ಭಾರ

By Suvarna News  |  First Published Feb 6, 2022, 9:54 AM IST

ತಾರೀಖು 6ರಿಂದ 12 ಫೆಬ್ರವರಿ 2022ರವರೆಗೆ ನಿಮ್ಮ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ? ಯಾವ ರಾಶಿಯ ಅದೃಷ್ಟ ಹೇಗಿರಲಿದೆ?
ತುಲಾ ರಾಶಿಗೆ ಮಿಶ್ರಫಲ, ಮೀನಕ್ಕೆ ಲಾಭ


ಮೇಷ(Aries): ನಿಮ್ಮ ಕೆಲಸ ಕಾರ್ಯದಲ್ಲಿ ಅದರಲ್ಲೂ ಸ್ವಂತ ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕಂಥಾ ಲಾಭ(profit)ವನ್ನು ಪಡೆಯುವಿರಿ. ನಿಮ್ಮ ಇತರೇ ಕೆಲಸಗಳಲ್ಲೂ ಒಂದಾದರ ನಂತರ ಒಂದು ಸಕ್ಸಸ್ ಸಿಗುತ್ತಾ ಹೋಗುತ್ತದೆ. ಚಿನ್ನಾಭರಣ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಲ್ಲಿ ಸಾಕಷ್ಟು ಶುಭ ಫಲಗಳಿವೆ. ಭೂಮಿಯ ವ್ಯವಹಾರದಲ್ಲಿ ಅಭಿವೃದ್ಧಿ ಆಗುತ್ತದೆ. ಅಂದುಕೊಂಡದ್ದನ್ನು ಮಾಡುವುದು ಸಾಧ್ಯವಾಗುತ್ತದೆ. ಧರ್ಮಕಾರ್ಯ ಮಾಡುವಿರಿ.

ವೃಷಭ(Taurus): ಕೆಲಸ ಕಾರ್ಯಗಳಲ್ಲಿ ಉತ್ತಮ ಫಲಗಳಿವೆ. ಕುಟುಂಬದಲ್ಲಿ ಧನ ಉತ್ಪತ್ತಿ ಸಾಧ್ಯವಾಗುತ್ತೆ. ಸ್ವಂತ ಉದ್ಯೋಗದಲ್ಲಿರುವವರು ಅಭಿವೃದ್ಧಿ ಪಡೆಯುವಿರಿ. ಖಾಸಗಿ ಉದ್ಯೋಗಿಗಳಿಗೆ ನಿಧಾನ ಗತಿಯಲ್ಲಿ ಕೆಲಸ ಸಾಗುತ್ತದೆ. ಒತ್ತಡ ಹೆಚ್ಚುತ್ತದೆ. ಆದರೂ ತಾಳ್ಮೆಯಿಂದ ಸನ್ನಿವೇಶವನ್ನು ನಿಭಾಯಿಸುತ್ತೀರಿ. ನಿಮ್ಮ ತಂದೆ ವಿಚಾರದಲ್ಲಿ ಮನಸ್ಸಿಗೆ ಬೇಸರ ಆಗಬಹುದು. ಹಣ ಸಂಪಾದನೆಯ ಅನುಕೂಲಗಳು ಬರುತ್ತವೆ. ಪ್ರತಿಷ್ಠೆ ಹೆಚ್ಚುವುದು.

Tap to resize

Latest Videos

undefined

ಮಿಥುನ(Gemini): ವಿಪರೀತ ನೆಗೆಟಿವ್ ಯೋಚನೆ ಹೆಚ್ಚಬಹುದು. ಸಂಗಾತಿ ಬಗ್ಗೆ ಚಿಂತೆ ಹೆಚ್ಚಬಹುದು. ಭವಿಷ್ಯ(future)ದ ಬಗ್ಗೆ ಚಿಂತಿಸುವಿರಿ. ಇದರಿಂದ ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ಬುದ್ಧಿ ನಿಮ್ಮ ಸ್ಥಿಮಿತದಲ್ಲಿರಲ್ಲ. ನಿದ್ರಾಹೀನತೆ ಕಾಡಬಹುದು. ಆತಂಕ ಹೆಚ್ಚಾಗಬಹುದು. ಮಕ್ಕಳ ಓದಿನ ಬಗ್ಗೆ ಚಿಂತಿಸುವಿರಿ. ರಕ್ತದೊತ್ತಡ, ತಲೆನೋವು ಇತ್ಯಾದಿ ಬಾಧೆ ಉಂಟಾಗಬಹುದು. ಬೆನ್ನು ನೋವು ಬರಬಹುದು. ಉದ್ಯೋಗದಲ್ಲಿ ಶ್ರಮಪಟ್ಟರೆ ಪ್ರತಿಫಲ ಸಿಗಬಹುದು.

ಕಟಕ(Cancer): ಪಾಲುದಾರಿಕೆಯಲ್ಲಿ, ಸ್ವಂತ ಕೆಲಸ ಮಾಡುವವರಿಗೆ ಸಾಕಷ್ಟು ಅಭಿವೃದ್ಧಿ ಉಂಟಾಗಬಹುದು. ಧನಲಾಭವೂ ಆಗಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಹಣ(money)ದ ಮೂಲಗಳು ಹುಡುಕಿಕೊಂಡು ಬರಬಹುದು. ಹೊಸ ಉದ್ಯೋಗಾವಕಾಶ ಬರಬಹುದು. ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ ಆಗಬಹುದು. ಕೆಲಸದಲ್ಲಿ ನಿಧಾನವಾದರೂ ಯಶಸ್ವಿ ಆಗುತ್ತದೆ. ರವಿಯ ಕೃಪೆಯಿಂದ ಸಾಕಷ್ಟು ಉತ್ತಮ ಪ್ರಗತಿ ಉಂಟಾಗಬಹುದು.

Mantra Benefits: ಲಲಿತಾ ಸಹಸ್ರನಾಮ ಪಠಣದಿಂದ ಗ್ರಹದೋಷ ನಿವಾರಣೆ

ಸಿಂಹ(Leo): ಅದೃಷ್ಟ(Luck)ವನ್ನೇ ನಂಬಿ ಕೆಲಸಕ್ಕೆ ಇಳಿಯಬೇಡಿ. ಏಕೆಂದರೆ ಈ ವಾರ ಅದೃಷ್ಟ ಕೊಂಚ ಕೈಕೊಡುವ ಸಾಧ್ಯತೆ ಇದೆ. ಆದರೆ ಇದನ್ನೆಲ್ಲ ಎದುರಿಸುವುದು ನಿಮಗೆ ಕಷ್ಟವಾಗದು. ಒಡಹುಟ್ಟಿದವರೊಂದಿಗಿನ ವಿವಾದಗಳಿಂದಾಗಿ ನಿಮ್ಮ ಕುಟುಂಬ ಜೀವನದಲ್ಲಿ ಅಸ್ಥಿರತೆ ಉಂಟಾಗಬಹುದು. ಪ್ರೇಮ ಸಂಬಂಧಗಳು ನಿಮ್ಮ ಜೀವನೋತ್ಸಾಹ ಹೆಚ್ಚಿಸಬಹುದು. ಕಠಿಣ ಪರಿಶ್ರಮದಿಂದ ಮೇಲಧಿಕಾರಿಗಳನ್ನು ತೃಪ್ತಿಪಡಿಸುವಿರಿ. ಹೆಚ್ಚಿನ ಆರ್ಥಿಕ ಪ್ರಯೋಜನಗಳನ್ನು ಪಡೆಯಬಹುದು.

ಕನ್ಯಾ(Virgo): ಈ ವಾರ ನೀವು ಹೊಸ ಪಾಲುದಾರಿಕೆ(Partnership) ವ್ಯವಹಾರ ಆರಂಭಿಸುವಿರಿ. ವ್ಯಾಪಾರ ಯೋಜನೆಗಳ ಬಗ್ಗೆ ನೀವು ಉತ್ಸಾಹ ಮತ್ತು ಆತ್ಮವಿಶ್ವಾಸ(confidence)ವನ್ನು ಹೊಂದಿರುತ್ತೀರಿ. ಆದ್ದರಿಂದ ನೀವು ಭವಿಷ್ಯದಲ್ಲಿ ಸಂಪೂರ್ಣ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ಬಾಕಿ ಇರುವ ಕಾನೂನು ಪ್ರಕರಣಗಳಲ್ಲಿ ನಿಮಗೆ ಜಯ ಸಿಗುತ್ತದೆ. ಆದರೆ ಎಲ್ಲರೂ ನಿಮ್ಮ ಮಾತಿನಂತೆ ನಡೆಯಬೇಕು ಎಂಬ ಪ್ರವೃತ್ತಿಯಿಂದ ಅಸಹನೆ ಹೆಚ್ಚಬಹುದು.

Monthly Love Horoscope: ಈ ಪ್ರೀತಿಯ ತಿಂಗಳು ಯಾರಿಗುಂಟು ಯಾರಿಗಿಲ್ಲ ಪ್ರೇಮ?

ತುಲಾ(Libra): ಈ ವಾರ ಮಿಶ್ರ ಫಲವಿದೆ. ನ್ಯಾಯಾಲಯದ ಪ್ರಕರಣಗಳು ನಿಮ್ಮ ಪರವಾಗಿರುತ್ತವೆ. ನಿಷ್ಪ್ರಯೋಜಕ ಚಟುವಟಿಕೆಗಳಲ್ಲಿ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡಬೇಡಿ. ನಿಮ್ಮ ನಿರ್ಧಾರಗಳಿಗೆ, ಕೆಲಸ ಕಾರ್ಯಗಳಿಗೆ ಸರಿಯಾದ ಗಮನ ಕೊಡಿ. ನೀವು ಯಾವುದೇ ಹೂಡಿಕೆ(investment) ಮಾಡಲು ಬಯಸಿದರೆ ತಜ್ಞರಿಂದ ಮಾರ್ಗದರ್ಶನ ಪಡೆಯುವುದು ಸೂಕ್ತ. ಒಳ್ಳೆಯದನ್ನೇ ಚಿಂತಿಸಿ. ಮನೆ ದೇವರನ್ನು ಭಜಿಸಿ.

ವೃಶ್ಚಿಕ(Scorpio): ಧೈರ್ಯ, ಆತ್ಮಾಭಿಮಾನ ಹೆಚ್ಚಾಗಿರುತ್ತದೆ. ಆತ್ಮವಿಶ್ವಾಸ ಹೆಚ್ಚಿರುವುದರಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ ಇದೆ. ಪಟ್ಟ ಪರಿಶ್ರಮಕ್ಕೆ ಅಭಿವೃದ್ಧಿ, ಲಾಭ ಉಂಟಾಗಬಹುದು. ಕೆಲಸದಲ್ಲಿ ಬಹಳ ಲಾಭವನ್ನು ಪಡೆಯುವಿರಿ. ಹಣಕಾಸಿನ ಸ್ಥಿತಿ ಪ್ರಗತಿ ಆಗುತ್ತದೆ. ಹಣಕಾಸಿನ ಮೂಲಗಳು ಚೆನ್ನಾಗಿರುತ್ತದೆ. ಆದರೆ ಸಹೋದರರ ವಿಚಾರವಾಗಿ ಚಿಂತೆ ಬಾಧಿಸಬಹುದು. ಬಡ್ತಿ ಪಡೆಯಬಹುದು.

ಧನುಸ್ಸು(Sagittarius): ಈ ವಾರ ನಿಮ್ಮಲ್ಲಿ ಕೆಲವರು ವಿವಾದಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ. ಮನೆಗೆ ಸಾಕಷ್ಟು ಖರ್ಚು ಮಾಡುವಿರಿ. ಕೆಲವೊಮ್ಮೆ ಮೇಲಾಽಕಾರಿಗಳ ನಿರ್ಲಕ್ಷ್ಯ ಎದುರಿಸಬೇಕಾಗುತ್ತದೆ. ಸಹೋದ್ಯೋಗಿಗಳು ಈ ದೌರ್ಬಲ್ಯಗಳನ್ನು ತಮ್ಮ ಲಾಭಕ್ಕೆ ಬಹಳಸಬಹುದು. ಕೆಲಸದಲ್ಲಿ ನಿಮ್ಮ ಆತುರ ಹೆಚ್ಚಬಹುದು. ಕೋಪ ಹೆಚ್ಚಾಗಬಹುದು. ಆಸೆ ಹೆಚ್ಚಬಹುದು. ತಾಳ್ಮೆಯನ್ನು ಪ್ರಜ್ಞಾಪೂರ್ವಕವಾಗಿ ರೂಢಿಸಿಕೊಳ್ಳಿ.

ಮಕರ(Capricorn): ಧನಾನುಕೂಲಗಳು ಚೆನ್ನಾಗಿರುತ್ತದೆ. ಗುರುವಿನ ಮಾರ್ಗದರ್ಶನದಲ್ಲಿ ಮುಂದಡಿ ಇಡಿ. ಬಗೆಹರಿಯದೇ ಉಳಿದುಕೊಂಡ ಕೆಲಸಗಳು ಈಗ ಸಂಪೂರ್ಣಗೊಳ್ಳಬಹುದು. ತಂದೆಯಿಂದ ಅನುಕೂಲ ಆಗಬಹುದು. ನಿಮ್ಮ ಜವಾಬ್ದಾರಿಯನ್ನು ನಿಭಾಯಿಸುವಿರಿ. ಹೆತ್ತವರಿಗೆ ಅನಾರೋಗ್ಯ ಬಂದು ಆತಂಕ. ಕಾಲುನೋವು, ಬೆನ್ನು ನೋವು ಹೆಚ್ಚಾಗಬಹುದು. ಸ್ವಂತ ಉದ್ಯೋಗದಲ್ಲಿರುವವರಿಗೆ ಉತ್ತಮ ಫಲವಿದೆ.

Chanakya Niti: ಮಹಿಳೆಯರೇ ಸ್ಟ್ರಾಂಗು ಗುರು ಅಂತ ಹೇಳೋದು ಸುಮ್ಮನೇನಾ?

ಕುಂಭ(Aquarius): ಕೆಲಸದಲ್ಲಿ ಬೇಸರ ಉಂಟಾಗಬಹುದು. ಮೇಲಧಿಕಾರಿಗಳ ನಿರ್ಲಕ್ಷದಿಂದ ಉದ್ಯೋಗ ತೊರೆಯುವ ಯೋಚನೆ ಬರಬಹುದು. ಸಣ್ಣ ಪುಟ್ಟ ತಪ್ಪುಗಳೇ ದೊಡ್ಡದಾಗಬಹುದು. ಆಲಸ್ಯ(laziness) ಕಾಡಬಹುದು. ವಿವಾದಗಳಿಂದ ದೂರವಿರಿ. ದೈವಕಾರ್ಯವನ್ನು ಮಾಡುತ್ತೀರಿ. ದೇವರ ಮೇಲೆ ನಂಬಿಕೆ ಬರುವ ಸನ್ನಿವೇಶಗಳು ಸೃಷ್ಟಿಯಾಗುತ್ತದೆ. ಕಷ್ಟಪಟ್ಟು ಕೆಲಸ ಮಾಡಿದರೆ ಕೆಲಸಕ್ಕೆ ತಕ್ಕಂತ ಲಾಭ ವಾರದ ಕೊನೆಗೆ ಕೈ ಸೇರಬಹುದು.

ಮೀನ(Pisces): ಪ್ರತ್ಯಕ್ಷ ಅಥವಾ ಪರೋಕ್ಷ ರೀತಿಯಲ್ಲಿ ಸರ್ಕಾರದಿಂದ ಪ್ರಯೋಜನಗಳನ್ನು ಪಡೆಯಬಹುದು. ನೀವು ಸಮಯಕ್ಕೆ ಸರಿಯಾಗಿ ಅವಕಾಶವನ್ನು ಬಳಸಿದರೆ, ನಿಮ್ಮ ವೃತ್ತಿಪರ ಜೀವನವು ಭವಿಷ್ಯದಲ್ಲಿ ಅಪಾರ ಪ್ರಯೋಜನಗಳನ್ನು ನೀಡುತ್ತದೆ. ಸ್ವಂತ ಉದ್ಯೋಗ ಮಾಡುವವರಿಗೆ ಉತ್ತಮ ಫಲವಿದೆ. ಕೆಲಸ ಕಾರ್ಯಗಳಿಂದ ಅತ್ಯುತ್ತಮ ಲಾಭ ಪಡೆಯುವಿರಿ. ಭೂಮಿಗೆ ಸಂಬಂಧಿತ ಕೆಲಸ ಮಾಡುವವರಿಗೆ ಉತ್ತಮ ಫಲಗಳಿವೆ.
 

click me!