Weekly Horoscope: ಈ ರಾಶಿಗೆ ಆಸ್ತಿ ವಿಚಾರದಲ್ಲಿ ಮಹತ್ತರ ಸುದ್ದಿ ಸಿಗಲಿದೆ..

By Suvarna News  |  First Published Jan 23, 2022, 5:46 AM IST

ದಿನಾಂಕ 23ರಿಂದ 29 ಜನವರಿ 2022ರವರೆಗಿನ ವಾರ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ? ಯಾವ ರಾಶಿಗೆ ಎಚ್ಚರ ಅಗತ್ಯ? ಯಾವ ರಾಶಿ ಬದಲಾವಣೆ ಕಾಣುತ್ತದೆ?
ಸಿಂಹಕ್ಕೆ ತಪ್ಪುವ ಶತ್ರುಬಾಧೆ, ಕುಂಭಕ್ಕೆ ತಾಯಿಯ ಸಹಕಾರದಿಂದ ಒಳಿತು


ಮೇಷ(Aries)
ಅದೃಷ್ಟದಿಂದ ಅನೇಕ ಕೆಲಸ ಕಾರ್ಯಗಳು ಆಗುತ್ತವೆ. ಸರ್ಕಾರಿ ಕೆಲಸಗಳಿಗೆ ಓಡಾಡುತ್ತಿದ್ದರೆ ಈ ವಾರ ಆ ಕಾರ್ಯಗಳೆಲ್ಲ ಕೈಗೂಡುತ್ತವೆ. ನಿಮ್ಮ ಮನೋಬಲವನ್ನು ರವಿ ಹೆಚ್ಚು ಮಾಡುತ್ತಾನೆ. ದೈಹಿಕ, ಮಾನಸಿಕ ದೃಢತೆ ಹೆಚ್ಚುವುದು. ಆತ್ಮಬಲದಿಂದ ಮಾಡಿದ ಕೆಲಸಗಳೆಲ್ಲ ಸಕ್ಸಸ್ ಆಗುತ್ತವೆ. ಸಮಾಧಾನ ಇರುತ್ತದೆ. ಸ್ವಂತ ಉದ್ಯೋಗ ಮಾಡುವವರಿಗೆ ಲಾಭ ಇರುತ್ತದೆ. ಬಹಳ ಶುಭವಿದೆ.

ವೃಷಭ(Taurus)
ಭಾಗ್ಯಸ್ಥಾನದಲ್ಲಿ ರವಿ ಇರುವುದರಿಂದ ಮನಸ್ಸಿಗೆ ಖುಷಿ. ವಾಹನ ಭಾಗ್ಯ ಇರುತ್ತದೆ. ಆಸ್ತಿ ತಗೊಳ್ಬೇಕು ಅಂದುಕೊಂಡಿರುವವರು, ಮನೆ ಕಟ್ಟಬೇಕು ಅಂದುಕೊಂಡಿರುವವರು ದೊಡ್ಡ ಮಟ್ಟದ ನಿರ್ಧಾರ ಮಾಡುತ್ತೀರಿ. ಕೆಲಸಗಳಲ್ಲಿ ಯಶಸ್ವಿಯಾಗುವುದಕ್ಕೆ ಬೇಕಾದ ಹಾಗೆ ನಿಮ್ಮ ಕಾರ್ಯಗಳಿರುತ್ತವೆ. ತಾಯಿಯ ಕಡೆಯಿಂದ ಬಹಳ ಸಹಕಾರ ಸಿಗಬಹುದು. ಒಳ್ಳೆಯ ಗೌರವ, ಮರ್ಯಾದೆ ಸಿಗುತ್ತದೆ.

Tap to resize

Latest Videos

ಮಿಥುನ(Gemini)
ವಿಪರೀತ ಚಿಂತೆಗಳಿಂದ ತಲೆನೋವು ಹೆಚ್ಚಾಗಬಹುದು. ಉದ್ವೇಗ, ಆತಂಕ ಇತ್ಯಾದಿ ಮಾನಸಿಕ ಸಮಸ್ಯೆ ಕಾಡಬಹುದು. ಸುಮ್ಮ ಸುಮ್ಮನೆ ಸಂಗಾತಿಯ ಜೊತೆಗೆ ಮಾತಿಗೆ ಮಾತು ಬೆಳೆದು ಕಲಹ ಉಂಟಾಗಬಹುದು. ನೀವೇ ಮನಸ್ಸಿಗೆ ಸಮಾಧಾನ ತಂದುಕೊಳ್ಳೋದು ಉತ್ತಮ. ಕಾಲುನೋವಿನ ಬಾಧೆ, ಕಣ್ಣು ಉರಿಯಬಹುದು, ಒಣಗಿದಂತೆ ಭಾಸವಾಗಬಹುದು. ದೈವಕಾರ್ಯ ಮಾಡುವಿರಿ. ಜವಾಬ್ದಾರಿ ನಿಭಾಯಿಸುವಿರಿ.

ಕಟಕ(Cancer)
ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಆದರೆ ನಿಮ್ಮ ಧೈರ್ಯ ಹೆಚ್ಚಲಿದೆ. ಧನಲಾಭ ಸಿಗಲಿದೆ. ಶತ್ರುಗಳು ನಿಮ್ಮ ಮುಂದೆ ಸೋತು ಹೋಗ್ತಾರೆ. ನಿಮಗಾಗುವ ತೊಂದರೆಗಳು ದೂರಾಗಬಹುದು. ಸಾಲಬಾಧೆ ಸ್ವಲ್ಪ ಕಡಿಮೆಯಾಗಬಹುದು. ಹಣಕಾಸಿನ ಸಮಸ್ಯೆಗಳು ಸರಿ ಹೋಗಬಹುದು. ಮನೆ ಕಟ್ಟುವಾಗಿನ ಆತಂಕಗಳು ಕಡಿಮೆಯಾಗಬಹುದು. ಬರಬೇಕಾದ ಹಣ ಕೈಸೇರಬಹುದು. ಮನೋಬಲ ವೃದ್ಧಿಯಾಗುತ್ತದೆ.

ಸಿಂಹ(Leo)
ಸ್ಥಾನಬಲವಿದೆ. ಶತ್ರುಗಳ ನಿವಾರಣೆಯಾಗುತ್ತದೆ. ಶತ್ರುಗಳು ನಿಮ್ಮ ಮುಂದೆ ಸೋತುಹೋಗುತ್ತಾರೆ. ಕೆಲಸ ಕಾರ್ಯಗಳಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಪರಿಶ್ರಮಕ್ಕೆ ತಕ್ಕ ಫಲ ಪಡೆಯುತ್ತೀರಿ. ಸಂಗಾತಿಯ ಸಹಕಾರ ಈ ವಾರ ನಿಮಗೆ ಸಿಗಲಿದೆ. ದೈವಾನುಗ್ರಹ ನಿಮ್ಮ ಮೇಲಿರುತ್ತದೆ. ಸಂಕಲ್ಪ ಶಕ್ತಿಯಿಂದ ಎಲ್ಲ ಕೆಲಸದಲ್ಲೂ ಜಯ ಪಡೆಯುತ್ತಾರೆ. ಆದರೆ ಹಣಕಾಸಿನ ವಿಚಾರದಲ್ಲಿ ಕೊಂಚ ಸಮಸ್ಯೆ ಆಗಬಹುದು.

Parenting Mistakes: ಈ ರಾಶಿಯವರು ಮುದ್ದಿನ ಹೆಸರಲ್ಲಿ ಮಕ್ಕಳನ್ನು ಹಾಳು ಮಾಡುತ್ತಾರೆ!

ಕನ್ಯಾ(Virgo)
ವಿದೇಶ ಪ್ರಯಾಣ ಮಾಡುವ ಯೋಜನೆ ಇದ್ದರೆ ಶುಭ ಫಲವಿದೆ. ನಿಮ್ಮ ಆಸೆಗಳನ್ನೆಲ್ಲ ಈಡೇರಿಸಿಕೊಳ್ಳುತ್ತೀರಿ. ಜೊತೆಗೆ ನಿಮ್ಮ ಆಸೆಗಳೆಲ್ಲ ಬೆಳೆಯುತ್ತಾ ಹೋಗಬಹುದು. ಅದಕ್ಕೆ ಸಂಬಂಧಿಸಿದ ಯೋಜನೆಯನ್ನು ಈ ವಾರ ರೂಪಿಸಿಕೊಳ್ಳುತ್ತಾರೆ. ಭೂಮಿಯ ಮೇಲೆ ಆಸೆ ಉಂಟಾಗಬಹುದು. ರಿಯಲ್ ಎಸ್ಟೇಟ್‌ನಲ್ಲಿರುವವರಿಗೆ ಶುಭಫಲವಿದೆ. ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪ ತೊಂದರೆಗಳಾಗುವ ಸಾಧ್ಯತೆ ಇದೆ.

Happy Journey ನಿಮ್ಮದಾಗ್ಬೇಕೆಂದ್ರೆ ಈ ಟಿಪ್ಸ್ ಪಾಲಿಸಿ

ತುಲಾ(Libra)
ಪದೇ ಪದೇ ಕೆಲಸದ ಒತ್ತಡ ಜಾಸ್ತಿಯಾಗುತ್ತದೆ. ನಿಮ್ಮ ಶಕ್ತಿಯನ್ನೂ ಮೀರಿ ನೀವು ಕೆಲಸ ಮಾಡುವಂಥಾ ಸಂದರ್ಭ, ಸನ್ನಿವೇಶಗಳು ಬರಬಹುದು. ಇದರಿಂದ ಮಾನಸಿಕವಾಗಿಯೂ ಬಳಲುವಿರಿ. ಆದರೆ ಶನಿಯ ಬಲದಿಂದ ಶಕ್ತಿ ಬರಬಹುದು. ಆದರೆ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುವುದು ವಿಳಂಬವಾಗಬಹುದು. ಅದೃಷ್ಟ ಕೈಕೊಡುವ ಕಾರಣ ಮನಸ್ಸಿಗೆ ವೇದನೆ. ಆದರೆ ದೈವದ ಬಗ್ಗೆ ನಂಬಿಕೆ ಹೆಚ್ಚಬಹುದು.

ವೃಶ್ಚಿಕ(Scorpio)
ಮನೋಬಲ ವೃದ್ಧಿಯಾಗುತ್ತೆ. ಕೆಲಸ ಕಾರ್ಯ ಯೋಜನೆಗಳಲ್ಲಿ ಜಯವಿದೆ. ಹಿಂದೆ ಕೈಬಿಟ್ಟ ಕೆಲಸಗಳನ್ನು ಪುನರಾರಂಭ ಮಾಡುತ್ತೀರಿ. ಅದು ಯಶಸ್ವಿಯಾಗಿ ಮುನ್ನಡೆಯುತ್ತದೆ. ಕಷ್ಟದಲ್ಲಿರುವ ಸಹೋದರ, ಸಹೋದರಿಯರಿಗೆ ಸಹಾಯ ಹಸ್ತ ಚಾಚುವಿರಿ. ಮಿತ್ರದ ಸಹಕಾರದಿಂದ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತದೆ. ಮನೆ ಕೊಂಡುಕೊಳ್ಳುವ ಬಗ್ಗೆ, ಆಸ್ತಿ ಖರೀದಿಯ ಬಗ್ಗೆ ಚಿಂತಿಸುವಿರಿ.

ಧನು(sagittarius)
ಬಹಳ ಅಹಂಕಾರದಿಂದ ಮಾತಾಡುತ್ತೀರಿ. ಆತುರ, ಕೋಪ, ಎದುರಿರುವವರಲ್ಲಿ ಯುದ್ಧ ಮಾಡುವವರಂತೆ ಮಾತನಾಡುವಿರಿ. ಇಂಥಾ ನಡೆಯಿಂದ ಮಿಶ್ರ ಭಾವವಿದೆ. ಮಾತನಾಡುವಾಗ ಬಹಳ ಎಚ್ಚರಿಕೆ ಇರಲಿ. ನಿಮ್ಮಿಂದ ಯಾವ ರೀತಿ ಹೊರಬರುತ್ತೆ ಅಂತ ಹೇಳೋಕ್ಕಾಗಲ್ಲ. ಬೇರೆಯವರಿಗೆ ದುಃಖ ಆಗುವಂತೆ ಮಾತಾಡುವ ಸಾಧ್ಯತೆ ಇದೆ. ಹಣ ಕೊಟ್ಟು ವಾಪಾಸು ಬರದೇ ಇರುವ ಸಾಧ್ಯತೆ ಇದೆ. ಹಣಕಾಸು ವ್ಯವಹಾರದಲ್ಲಿ ಎಚ್ಚರ ಇರಲಿ.

ಮಕರ(Capricorn)
ಏನೇ ಕಷ್ಟವಿದ್ದರೂ ಕೆಲಸ ಕಾರ್ಯದಲ್ಲಿ ತೊಂದರೆ ಇರಲ್ಲ. ಅರ್ಧಕ್ಕೆ ನಿಂತ ಕೆಲಸ ಕಾರ್ಯಗಳು ಇದೀಗ ಕೈಗೂಡುತ್ತದೆ. ಅನಾರೋಗ್ಯ ಸಮಸ್ಯೆ ಬಗೆಹರಿಯುತ್ತದೆ. ಆದರೆ ಬೆನ್ನುನೋವಿನ ಸಮಸ್ಯೆ ಕೊಂಚ ವೃದ್ಧಿಸಬಹುದು. ಮನೆ, ಆಸ್ತಿಗೆ ಸಂಬಂಧಿಸಿದ ಕಾರ್ಯಗಳನ್ನು ಈ ವಾರ ಮಾಡದೇ ಹೋದರೆ ಒಳ್ಳೆಯದು. ಇದರಲ್ಲಿ ಸಮಸ್ಯೆಗಳು ಉಂಟಾಗಬಹುದು. ಆತುರಪಟ್ಟರೆ ನಷ್ಟವಾಗಬಹುದು. ಮನಸ್ಸಿಗೆ ಬೇಸರ ಉಂಟಾಗಬಹುದು.

ಕುಂಭ(Aquarius)
ಕೆಲಸ ಕಾರ್ಯಗಳಲ್ಲೆಲ್ಲ ಲಾಭವೇ ಉಂಟಾಗುತ್ತದೆ. ಮನೆಯ ಕೆಲಸಗಳಲ್ಲಿ, ವಾಹನ ಖರೀದಿಯಲ್ಲಿ ಶುಭ ಫಲವಿದೆ. ತಾಯಿಯ ಸಹಕಾರ ಇಡೀ ವಾರ ನಿಮ್ಮನ್ನು ಕಾಯುತ್ತದೆ. ಉದ್ಯೋಗದಲ್ಲಿ ಓಡಾಟ ಹೆಚ್ಚಾಗಬಹುದು. ಸರ್ಕಾರಿ ನೌಕರರಿಗೆ ಕೆಲಸ ನಿಧಾನವಾಗಬಹುದು. ಸ್ವಂತ ಉದ್ಯೋಗಿಗಳಿಗೆ ಮಧ್ಯಮ ಯೋಗ. ಆದರೆ ಖಾಸಗಿ ಉದ್ಯೋಗಿಗೆ ಉತ್ತಮ. ಆದರೆ ಕೆಲಸದಲ್ಲಿ ಆಲಸ್ಯ ತಲೆದೋರಬಹುದು. ಶನಿಗೆ ಪರಿಹಾರ ಮಾಡಿ.

ಮೀನ(Pieces)
ನಿಮ್ಮ ಕೆಲಸಗಳಿಂದ ಲಾಭಗಳನ್ನು ಪಡೆಯುತ್ತೀರಿ. ಬಹಳ ಕಾಲದಿಂದ ನಿಮ್ಮ ಕಷ್ಟ, ಪರಿಶ್ರಮಗಳನ್ನು ಪಡುತ್ತಲೇ ಇದ್ದಿರಿ. ಆದರೆ ಫಲವಿಲ್ಲ ಎಂದು ಕೊರಗಿರುತ್ತೀರಿ. ಅದೆಲ್ಲ ಈ ವಾರ ಹೋಗಿ ಮನಸ್ಸಿಗೆ ಖುಷಿ ಆಗಬಹುದು. ಎಲ್ಲ ಕೆಲಸ ಕಾರ್ಯಗಳಲ್ಲಿ ಹೆಸರು, ಬಡ್ತಿ ಎಲ್ಲವೂ ಸಿಗಬಹುದು. ಧನಲಾಭ ಸಿಗಬಹುದು. ಸ್ವಂತ ಉದ್ಯೋಗದಲ್ಲಿರುವವರಿಗೆ ಉತ್ತಮ ಫಲವಿದೆ. ವೇಗ ಗತಿಯಲ್ಲಿ ಕೆಲಸ ಕಾರ್ಯಗಳಾಗಬಹುದು. ನೀವು ಅಂದುಕೊಂಡದ್ದೆಲ್ಲ ಈಡೇರಬಹುದು. 

click me!