Weekly Horoscope: ಮಕರಕ್ಕೆ ಆಸ್ತಿ ಖರೀದಿಗೆ ಸಕಾಲ, ಉಳಿದ ರಾಶಿಗಳ ವಾರ ಭವಿಷ್ಯ ಏನಿದೆ?

By Suvarna News  |  First Published Jan 31, 2022, 9:14 AM IST

ದಿನಾಂಕ 30 ಜನವರಿಯಿಂದ 5 ಫೆಬ್ರವರಿ 2022ರವರೆಗಿನ ವಾರ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ? ಯಾವ ರಾಶಿಗೆ ಎಚ್ಚರ ಅಗತ್ಯ? ಯಾವ ರಾಶಿ ಬದಲಾವಣೆ ಕಾಣುತ್ತದೆ?
ವೃಷಭಕ್ಕೆ ಈ ವಾರ ಸಿಹಿಫಲ, ತುಲಾ ರಾಶಿಗೆ ಕುಟುಂಬದಲ್ಲಿ ಸಮನ್ವಯ


ಮೇಷ(Aries)
ಮನೆಯಲ್ಲಿ ಮಂಗಳ ಕಾರ್ಯಕ್ರಮ ನಡೆಸಬಹುದು. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಯಾವುದೇ ಪ್ರಯತ್ನಿಸುತ್ತಿದ್ದರೆ ಹೆಚ್ಚಿನ ಏಕಾಗ್ರತೆಯಿಂದ ಶ್ರಮಪಟ್ಟು ಕೆಲಸ ಮಾಡಿ. ಹಣಕಾಸಿನ ದೃಷ್ಟಿಯಿಂದ ಮಿಶ್ರಫಲವಿದೆ. ಈ ಅವಧಿಯಲ್ಲಿ ನೀವು ಬಯಸಿದ ಉಳಿತಾಯವನ್ನು ಮಾಡಲು ಸಾಧ್ಯವಾಗದಿರಬಹುದು. ಆರೋಗ್ಯದಿಂದಿರಲು ಆಹಾರದ ಜೊತೆಗೆ ನಿಯಮಿತವಾಗಿ ವ್ಯಾಯಾಮವನ್ನೂ ಮಾಡಿ.

ವೃಷಭ(Taurus)
ವ್ಯಾಪಾರಸ್ಥರಿಗೆ ಲಾಭದಾಯಕ ಸ್ಥಿತಿ ಇದೆ. ಈ ಹಿಂದಿನ ಕಹಿ ಎಲ್ಲ ದೂರ ಹೋಗಬಹುದು. ಮಕ್ಕಳೂ ಕಲಿಕೆಯಲ್ಲಿ ಪ್ರಗತಿ ಹೊಂದುತ್ತಾರೆ. ನೀವು ತುಂಬಾ ಸಂತೋಷವಾಗಿರುತ್ತೀರಿ. ಹಣಕ್ಕೆ ಸಂಬಂಧಿಸಿದ ನಿಮ್ಮ ನಿರಂತರ ಪ್ರಯತ್ನಗಳಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ಹಣ ಗಳಿಸಲು ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ಈ ಅವಧಿಯಲ್ಲಿ ಆರೋಗ್ಯದ ಬಗ್ಗೆ ಯಾವುದೇ ರೀತಿಯ ನಿರ್ಲಕ್ಷ್ಯ ಮಾಡಬೇಡಿ.

Tap to resize

Latest Videos

undefined

ಮಿಥುನ(Gemini)
ಧಾರ್ಮಿಕ ಕಾರ್ಯಗಳಿಗೆ ಸಾಕಷ್ಟು ಹಣವನ್ನು ಖರ್ಚು ಮಾಡುವಿರಿ. ವ್ಯಾಪಾರಸ್ಥರು ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ದೊಡ್ಡ ಹೂಡಿಕೆ ಮಾಡುವುದೂ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಉದ್ಯೋಗಿಗಳಿಗೆ ಅದೃಷ್ಟ ತರುವ ವಾರ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಸ್ಥಾನ ಬಲಗೊಳ್ಳುತ್ತದೆ. ಕುಟುಂಬ ಜೀವನದ ಒತ್ತಡ ಕೊನೆಗೊಳ್ಳುತ್ತದೆ. ಪ್ರೀತಿಪಾತ್ರರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ಕುಟುಂಬದಲ್ಲಿ ವಿವಾಹದ ಮಾತುಕತೆ ನಡೆಯಬಹುದು. ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದರೆ ಅದರಿಂದ ಕೊಂಚ ಬಿಡುಗಡೆ ಸಿಗುವುದು.

ಪ್ರೇಮ ಸಂಬಂಧ ಸದಾ ಸೌಖ್ಯವಾಗಿರಲು ಇಲ್ಲಿವೆ vastu Tips
 
ಕಟಕ(Cancer)

ಉದ್ಯೋಗಿಗಳಿಗೆ ಕೆಲಸದಲ್ಲಿ ದೊಡ್ಡ ಅಡೆತಡೆಗಳು ಇರಬಹುದು. ಕಠಿಣ ಪರಿಶ್ರಮ ಮತ್ತು ಧೈರ್ಯದಿಂದ ಈ ತೊಂದರೆಗಳನ್ನು ನಿವಾರಿಸುವಿರಿ. ಈ ಅವಧಿಯಲ್ಲಿ ಕೆಲವು ಉತ್ತಮ ಅವಕಾಶಗಳನ್ನೂ ಪಡೆಯಬಹುದು. ಸ್ವಂತ ವ್ಯವಹಾರ ಆರಂಭಿಸುವ ಯೋಚನೆ ಇದ್ದರೆ ಈ ಬಗ್ಗೆ ಸರಿಯಾಗಿ ತಿಳಿದುಕೊಂಡು ಮುಂದುವರಿಯಿರಿ. ಕುಟುಂಬ ಜೀವನ  ಅನುಕೂಲಕರವಾಗಿರುತ್ತದೆ. ಕೋಪವನ್ನು ನಿಯಂತ್ರಿಸಿ, ತಾಳ್ಮೆಯಿಂದಿರಿ.
 
ಸಿಂಹ(Leo)
ಹಣಕಾಸಿನ ವಹಿವಾಟುಗಳನ್ನು ಬಹಳ ಎಚ್ಚರಿಕೆಯಿಂದ ನಿಭಾಯಿಸುವಿರಿ. ಯೋಚಿಸದೆ ಸಾಲ ನೀಡುವುದನ್ನು ತಪ್ಪಿಸುವುದು ಉತ್ತಮ. ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯಬಹುದು. ಉದ್ಯೋಗ ಹಾಗೂ ಸ್ವಂತ ವ್ಯಾಪಾರ, ವ್ಯವಹಾರಗಳಲ್ಲಿ ನಿಮ್ಮ ಪ್ರಯತ್ನಗಳು ಯಶಸ್ವಿಯಾಗುವ ಸಾಧ್ಯತೆಯಿದೆ. ವ್ಯಾಪಾರಸ್ಥರು ಹೊಸ ಯೋಜನೆಯಲ್ಲಿ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ, ಸವಾಲುಗಳನ್ನು ಎದುರಿಸಬೇಕಾಗಬಹುದು.

ಕನ್ಯಾ(Virgo)
 ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ, ಈ ವಾರದ ಕೊನೆಯಲ್ಲಿ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ವ್ಯಾಪಾರಸ್ಥರಿಗೆ ಕೆಲಸಗಳಲ್ಲಿ ಹಣಕಾಸಿನ ತೊಂದರೆ ಎದುರಾಗುವ ಸಾಧ್ಯತೆ ಇದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ಜನರಿಗೆ ತೊಂದರೆ ಬರಬಹುದು. ಸ್ವಲ್ಪ ಸಮಯ ಕುಟುಂಬದಿಂದ ದೂರವಿರಬೇಕಾಗಬಹುದು.  ಕೆಲಸಕ್ಕೆ ಸಂಬಂಧಿಸಿ ಪ್ರಯಾಣ ಮಾಡಬೇಕಾಗಬಹುದು.

ಕ್ರಶ್ ಎದುರು ಬಂದಾಗ feelings ಮುಚ್ಚಿಡಲಾಗದವರು ಇವರು!

ತುಲಾ(Libra)
 ಜೀವನ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಬಲಗೊಳ್ಳಬಹುದು. ನಿಮ್ಮ ನಡುವೆ ಉತ್ತಮ ಸಮನ್ವಯವಿರುತ್ತದೆ ಮತ್ತು ಪರಸ್ಪರರಲ್ಲಿ ನಿಮ್ಮ ನಂಬಿಕೆಯೂ ಹೆಚ್ಚಾಗುತ್ತದೆ.  ಮಕ್ಕಳು ಯಶಸ್ಸು ಪಡೆಯುತ್ತಾರೆ. ಇದರಿಂದಾಗಿ ನೀವು ಸಂತೋಷವಾಗಿರುತ್ತೀರಿ.ಈಗ ಆದಾಯ ಹೆಚ್ಚಿಸಲು ಪ್ರಯತ್ನಿಸಬೇಕು, ಇಲ್ಲದಿದ್ದರೆ ನೀವು ಭವಿಷ್ಯದಲ್ಲಿ ತೊಂದರೆಗೆ ಸಿಲುಕಬಹುದು. ಉದ್ಯೋಗಿಗಳಿಗೆ ಈ ಸಮಯ ಏರಿಳಿತಗಳಿಂದ ತುಂಬಿರುತ್ತದೆ.

ವೃಶ್ಚಿಕ(Scorpio)
 ನಿಮ್ಮ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ವಿದೇಶಕ್ಕೆ ಹೋಗಿ ಉದ್ಯೋಗ ಮಾಡುವ ಹಾದಿ ಸುಗಮವಾಗಿರುತ್ತದೆ. ನಿರುದ್ಯೋಗಿಗಳಾಗಿದ್ದರೆ ಈ ಅವಧಿಯಲ್ಲಿ ಉದ್ಯೋಗ ಪಡೆಯುವ ಯೋಗವಿದೆ. ವ್ಯಾಪಾರಿಗಳಿಗೆ ಉತ್ತಮ ಫಲಗಳಿವೆ. ಬಟ್ಟೆ ವ್ಯಾಪಾರಿಗಳಿಗೆ ಹೆಚ್ಚು ಲಾಭದಾಯಕ. ಕೌಟುಂಬಿಕ ಭಿನ್ನಾಭಿಪ್ರಾಯಗಳು ಸರಿಹೋಗುತ್ತವೆ. ಸಂಗಾತಿಯ ಬೆಂಬಲ ನಿಮಗಿರುತ್ತದೆ. ಮೂಳೆಗೆ ಸಂಬಂಧಿಸಿದ ಸಮಸ್ಯೆ ಬರುತ್ತದೆ.

Parenting Challenge: ರಾಶಿಯ ಅನುಸಾರ, ತಾಯಿಯಾಗಿ ನೀವು ಹೇಗಿರಲಿದ್ದೀರಿ?

ಧನು(Sagittarius)
ಹಣಕಾಸಿನ ಸಮಸ್ಯೆಗಳು ಕೊನೆಗೊಳ್ಳಬಹುದು. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಸುಧಾರಣೆ ಸಾಧ್ಯವಾಗಬಹುದು. ಕಡಿಮೆ ಪ್ರಯತ್ನದಿಂದ ಉತ್ತಮ ಯಶಸ್ಸನ್ನು ಪಡೆಯಬಹುದು. ಉದ್ಯೋಗಸ್ಥರು ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು. ಆದರೂ ಉತ್ತಮ ಪ್ರಗತಿ ಸಾಧಿಸುವುದು ಸಾಧ್ಯವಾಗುತ್ತದೆ. ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರೆ, ಕೊಂಚ ನಿರಾಸೆಯಾಗುತ್ತದೆ. ಆದರೆ ಇದು ತಾತ್ಕಾಲಿಕ ಅನ್ನುವುದು ತಿಳಿದಿರಲಿ.
 
ಮಕರ(Capricorn)

ಹೊಸ ಆಸ್ತಿ ಖರೀದಿಸಲು ಬಯಸಿದರೆ ಈಗ ನೀವದರಲ್ಲಿ ಯಶಸ್ಸನ್ನು ಪಡೆಯಬಹುದು. ಅಂದರೆ ಆಸ್ತಿ ಖರೀದಿ ಮಾಡಲು ಇದು ಸಕಾಲ. ಕೆಲವು ಪ್ರಮುಖ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಲಾಟರಿ, ಬೆಟ್ಟಿಂಗ್‌ನಿಂದ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ. ಕಚೇರಿಯಲ್ಲಿ ಕೆಲವು ಕಷ್ಟಕರ ಸಂದರ್ಭಗಳನ್ನು ಎದುರಿಸಬೇಕಾಗಬಹುದು. ಏಕಾಗ್ರತೆಯ ಕೊರತೆ ಉಂಟಾಗಬಹುದು. ವ್ಯಾಪಾರಸ್ಥರಿಗೆ ಮಿಶ್ರ ಸ್ಥಿತಿ ಮುಂದುವರಿಯುವುದು.

ಕುಂಭ(Aquarius)
ದೀರ್ಘಕಾಲದ ಏರಿಳಿತ, ತೊಂದರೆಗಳು ಕೊನೆಗೊಳ್ಳಬಹುದು. ಮಾನಸಿಕ ಶಾಂತಿ ಅನುಭವಿಸುವಿರಿ. ಜೀವನದಲ್ಲಿ ಸ್ಥಿರತೆ ಇರುತ್ತದೆ. ಕಷ್ಟಪಟ್ಟು ಕೆಲಸ ಮಾಡುವ ಸಮಯ ಇದು, ವಿಶೇಷವಾಗಿ ನೀವು ಉನ್ನತ ಸ್ಥಾನವನ್ನು ಪಡೆಯಲು ಬಯಸಿದರೆ, ಅದಕ್ಕೆ ಪೂರ್ವಭಾವಿ ತಯಾರಿಯನ್ನು ನಡೆಸಿ. ನಿಮ್ಮ ಆದಾಯವು ಈ ಹೊತ್ತಿಗೆ ಹೆಚ್ಚಾಗಬಹುದು. ವ್ಯಾಪಾರಸ್ಥರಿಗೆ ಸುವರ್ಣ ಅವಕಾಶಗಳಿರುತ್ತವೆ. ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ.
 
ಮೀನ(Pieces)
ಉದ್ಯೋಗಸ್ಥರು ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ ಇದು ಸಕಾಲ. ದೊಡ್ಡ ಕಂಪನಿಯಿಂದ ಸಂದರ್ಶನಕ್ಕೆ ಕರೆ ಬರುವ ಸಾಧ್ಯತೆ ಇದೆ. ಕಷ್ಟಪಟ್ಟು ಕೆಲಸ ಮಾಡಿ, ಯಶಸ್ಸು ಇಂದಲ್ಲ ನಾಳೆ ಸಿಕ್ಕೇ ಸಿಗುತ್ತದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರುತ್ತವೆ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡಿ. ನಿಮ್ಮ ಸ್ವಭಾವದಲ್ಲಿ ಬೇರೂರಿರುವ ಅಸಹನೆ, ಕೋಪ ಕಡಿಮೆ ಮಾಡಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. 
 

click me!