Weekly Horoscope: ಸಿಂಹಕ್ಕೆ ಬದಲಾವಣೆಯ ವಾರ, ಮಕರಕ್ಕೆ ನೆಮ್ಮದಿ

By Suvarna News  |  First Published May 1, 2022, 9:23 AM IST

ತಾರೀಖು 1ರಿಂದ 7 ಏಪ್ರಿಲ್ 2022ರವರೆಗೆ ನಿಮ್ಮ ಭವಿಷ್ಯ ಹೇಗಿದೆ?
ನಿಮ್ಮ ರಾಶಿಗೆ ಈ ವಾರದ ಫಲ ಏನಿದೆ ನೋಡಿ
ಧನು ರಾಶಿಯ ಪ್ರಣಯ ಜೀವನಕ್ಕೆ ಹೊಸ ಬಣ್ಣ


ಮೇಷ(Aries)
ಹೊಸ ಕಾರ್ಯತಂತ್ರ ಹೆಣೆಯುವಿರಿ. ಈವರೆಗೆ ಮನಸ್ಸಿಗೆ ನೋವು ತರುತ್ತಿದ್ದ ಸಂಗತಿಗಳು ನಿಮ್ಮ ಬದುಕಿನಿಂದ ದೂರ ಹೋಗಲಿವೆ. ಹಿಂದೆ ಮುಂದೆ ಯೋಚಿಸದೇ ಸಡನ್ನಾಗಿ ತೆಗೆದುಕೊಳ್ಳುವ ನಿರ್ಧಾರದಿಂದ ಸಮಸ್ಯೆ ಉಂಟಾಗಬಹುದು. ರಾತ್ರಿ ಕಂಡ ಬಾವಿಯಲ್ಲಿ ಹಗಲು ಬೀಳುವ ಸನ್ನಿವೇಶ ಉಂಟಾಗಬಹುದು. ಆದರೆ ವಾರಾಂತ್ಯದಲ್ಲಿ ಬದುಕಿನಲ್ಲಿ ಕೆಲವು ಬದಲಾವಣೆಗಳಾಗಬಹುದು. ಮನಸ್ಸಿಗೆ ಕೊಂಚ ನೆಮ್ಮದಿ.

ವೃಷಭ(Taurus)
ಸಮಸ್ಯೆ ಎದುರಿಸುತ್ತಿರುವ ಕುಟುಂಬದ ಸದಸ್ಯರ ಪರವಾಗಿ ನಿಲ್ಲುತ್ತೀರಿ. ಕೆಲವೊಂದು ಸನ್ನಿವೇಶದಲ್ಲಿ ನೀವು ಹೇಳಬೇಕು ಅಂದುಕೊಂಡಿದ್ದನ್ನು ಮನಸ್ಸು ಬಿಚ್ಚಿ ಹೇಳಲಾಗದು. ಗೊಂದಲ, ಅಧೈರ್ಯ ಉಂಟಾಗಬಹುದು. ಆದರೆ ಆತಂಕವನ್ನು ದೂರ ಮಾಡಿ ನಿಮ್ಮ ಅಭಿಪ್ರಾಯವನ್ನು ಹೇಳುವುದು ನಿಮಗೆ ಉತ್ತಮ. ಬಂದ ಅವಕಾಶವನ್ನು ಬಳಸಿಕೊಳ್ಳಿ. ಬರದದ್ದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಹಣದ ಚಿಂತೆ ಆವರಿಸಬಹುದು.

Tap to resize

Latest Videos

undefined

ಮಿಥುನ(Gemini)
ಬಹಳ ಕಾಲದಿಂದ ಆವರಿಸಿದ್ದ ಚಿಂತೆ ಕಡಿಮೆಯಾಗಬಹುದು. ಮನಸ್ಸಿಗೆ ಹಿತವಾಗುವ ಕಾರ್ಯಗಳು ನಡೆಯಬಹುದು. ಹಂತ ಹಂತವಾಗಿ ನಿಮ್ಮ ಜನಪ್ರಿಯತೆ ಹೆಚ್ಚಲಿದೆ. ಸ್ನೇಹಿತರೊಂದಿಗೆ ಖುಷಿಯ ಕ್ಷಣಗಳನ್ನು ಕಳೆಯುವಿರಿ. ಈ ವಾರದುದ್ದಕ್ಕೂ ಸ್ನೇಹ ನಿಮಗೆ ಬೆಂಗಾವಲಾಗಿ ಇರಲಿದೆ. ನಿಮ್ಮ ಬಂಧುಗಳು, ಆತ್ಮೀಯರಿಂದ ನೆರವು ಸಿಗಲಿದೆ. ಪ್ರೀತಿಯ ಬಗ್ಗೆ ನಿಮ್ಮ ಯೋಚನೆಗಳು ಬದಲಾಗಬಹುದು. ಮನೆಯವರನ್ನು ನಿರ್ಲಕ್ಷಿಸಬೇಡಿ.

ಕರ್ಕಾಟಕ(Cancer)
ಉದ್ಯಮದಲ್ಲಿ ಉತ್ತಮ ಬೆಳವಣಿಗೆ ಕಾಣುವಿರಿ. ಈ ವಾರ ನಿಮ್ಮ ಜನಪ್ರಿಯತೆ ಹೆಚ್ಚಲಿದೆ. ಉದ್ಯಮದಲ್ಲಿ ಉತ್ತಮ ಬೆಳವಣಿಗೆಗಳಾಗಲಿವೆ. ವೃತ್ತಿ ಜೀವನದಲ್ಲಿ ಹೊಸ ಅವಕಾಶವನ್ನು ಸ್ವೀಕರಿಸಲು ಹಿಂಜರಿಕೆ ಬೇಡ. ಅಥವಾ ನೀವು ಪ್ರಸ್ತುತ ಕಾರ್ಯ ನಿರ್ವಹಣೆ ಮಾಡುವ ಸಂಸ್ಥೆಯಲ್ಲಿ ಹೊಸ ಅವಕಾಶವನ್ನು ಬರಬಹುದು. ಅದನ್ನು ಮುಕ್ತವಾಗಿ ಸ್ವೀಕರಿಸಿ. ಈ ವಾರ ಉತ್ತಮ ಫಲಗಳಿವೆ. ಹಣದ ಹರಿವು ಹೆಚ್ಚಲಿದೆ.

ಸಿಂಹ(Leo)
ನಿಮ್ಮ ಬದುಕಿನಲ್ಲೀಗ ಬದಲಾವಣೆಯ ಸಮಯ. ಸವಾಲುಗಳು ಹೆಚ್ಚಲಿವೆ. ಕೆಲಸದಲ್ಲಿ ಕೊಂಚ ಹಿನ್ನಡೆ ಉಂಟಾಗಬಹುದು. ನಿಮ್ಮ ಸರ್ವಾಧಿಕಾರಿ ಧೋರಣೆಗೆ ಹಿನ್ನಡೆ ಉಂಟಾಗಬಹುದು. ನೀವು ಕೈಗೊಳ್ಳುವ ನಿರ್ಧಾರದಿಂದ ಪ್ರಯೋಜನವಿದೆ ಎಂದು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರು ಭಾವಿಸುವುದಿಲ್ಲ. ಆದರೂ ಕೂಡಾ ನೀವು ಆಯ್ಕೆ ಮಾಡಿದ ಮಾರ್ಗವನ್ನು ಸ್ವೀಕರಿಸುವಿರಿ. ಇದು ಕೊಂಚ ತೊಂದರೆ ತರಬಹುದು.

ಕನ್ಯಾ(Virgo)
ಈ ವಾರ ಸಾಲದಿಂದ ಹೊರಬರುವ ಪ್ರಯತ್ನ ಮಾಡುವಿರಿ. ಆದರೆ ಮನಸ್ಸಿನ ಮೇಲೆ ನಿಗ್ರಹವಿಲ್ಲದೇ ಅಂದುಕೊಂಡ ಕೆಲಸ ಸೂಕ್ತ ಸಮಯಕ್ಕೆ ಮುಗಿಸಲಾಗುವುದಿಲ್ಲ. ನಿಮ್ಮ ಸಂಗಾತಿಯೊಂದಿಗೆ ಕೆಲವು ಹೂಡಿಕೆ ಮಾಡುವ ಬಗ್ಗೆ ಯೋಚಿಸುವಿರಿ. ಮನೆಯಲ್ಲಿ ಕಿರಿಕಿರಿ ಕಡಿಮೆ ಆಗಬಹುದು. ನಿದ್ರಾಹೀನತೆಯಿಂದ ಸಮಸ್ಯೆ. ಧನಲಾಭವಿಲ್ಲದಿದ್ದರೂ ನಷ್ಟವೂ ಇಲ್ಲ. ದೂರ ಪ್ರಯಾಣ ಮಾಡುವ ಸಾಧ್ಯತೆ.

ಸೂರ್ಯಗ್ರಹಣದ ಬೆನ್ನಲ್ಲೇ ಚಂದ್ರಗ್ರಹಣ: 1000 ವರ್ಷಗಳ ನಂತರ ಮಹಾ ವಿಚಿತ್ರ- ಇದು ಅಪಾಯದ ಮುನ್ಸೂಚನೆಯೇ?

ತುಲಾ(Libra)
ನಿಮ್ಮ ಕೆಲವು ನಡವಳಿಕೆಗಳು ಆತ್ಮೀಯರಿಗೆ ನೋವನ್ನುಂಟುಮಾಡಬಹುದು. ನಿಮ್ಮ ಪ್ರೀತಿ, ಪ್ರಣಯ ಜೀವನ ಸುಮಧುರವಾಗಲಿದೆ. ಪ್ರೇಮದ ವಿಚಾರದಲ್ಲಿ ನಿಮ್ಮ ಹಿಂದೇಟು, ಅವರೇ ಮುಂದುವರಿಯಲಿ ಅನ್ನೋ ಭಾವ ನಡೆಯದು. ನೀವೇ ಮುಂದುವರಿಯಬೇಕಾಗಿ ಬರಬಹುದು. ಆದರೆ ಇದರಿಂದ ಸಮಸ್ಯೆ ಏನೂ ಉಂಟಾಗದು. ಆದರೆ ಪ್ರೇಮದ ವಿಚಾರದಲ್ಲಿ ನಿಮ್ಮ ಕೆಲವು ನಿಲುವುಗಳು ಮನೆಯವರಿಗೆ ಬೇಸರ ತರಬಹುದು.

ವೃಶ್ಚಿಕ(Scorpio)
ಈ ವಾರ ನಿಮ್ಮ ಕೆಲಸ ಕಾರ್ಯಗಳಲ್ಲಿ ಕೆಲವು ಅನಿರೀಕ್ಷಿತ ಬೆಳವಣಿಗೆಗಳು ಉಂಟಾಗಬಹುದು. ನಿಮ್ಮ ಹೊಸ ಸಂಬಂಧಗಳು ನಿಮ್ಮ ಪೋಷಕರು, ನಿಮ್ಮ ಸಹೋದರಿ ಅಥವಾ ನಿಮ್ಮ ಆಪ್ತ ಸ್ನೇಹಿತರಿಗೆ ಸರಿ ಹೊಂದುವಂತೆ ಕಾಣುತ್ತಿಲ್ಲ. ಅವರಿಗೆ ಈ ಸಂಬಂಧದ ಬಗ್ಗೆ ಅಸಮಾಧಾನ ಇರುವ ಸಾಧ್ಯತೆ ಇದೆ. ಆದರೆ ನಿಮ್ಮ ಈ ನಿರ್ಧಾರದ ಬಗ್ಗೆ ನಿಮಗೆ ದೃಢತೆ ಇರುವುದು ಬಹಳ ಮುಖ್ಯ. ಗೊಂದಲ, ಹಿಂಜರಿಕೆ ಬೇಡ.

ಧನು(Sagittarius)
ಹೊಸ ಕೆಲಸದಿಂದ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಈ ವಾರ ನಿಮ್ಮ ಪ್ರಣಯ ಜೀವನಕ್ಕೆ ಹೆಚ್ಚಿನ ಸಮಯ ಸಿಗಲಿದೆ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಪ್ರೇಮ ಜೀವನ ರೋಮಾಂಚನಕಾರಿ ಆಗಲಿದೆ. ಮೌನದಿಂದ ಪರಿಸ್ಥಿತಿಯನ್ನು ನಿರ್ವಹಿಸಿ. ಯಾವ ಸಂಬಂಧದ ಬಗೆಗೂ ಉಡಾಫೆ ಬೇಡ. ಜನರನ್ನು ಬುದ್ಧಿವಂತಿಕೆಯಿಂದ ಅಳೆಯುವ ನಿಮ್ಮ ಗುಣ ಒಳ್ಳೆಯದೇ. ಆದರೆ ಅವರ ಪ್ರಾಮಾಣಿಕತೆಯನ್ನೂ ಗೌರವಿಸಿ.

ಮಕರ(Capricorn)
ಜೀವನದಲ್ಲಿ ಆನಂದದಿಂದ ಇರಲು ಈ ವಾರ ಸಾಧ್ಯವಾಗಲಿದೆ. ನಿಮ್ಮ ಮನಸ್ಸಿಗೆ ನೆಮ್ಮದಿ ತರುವ ಕಾರ್ಯ ಮಾಡುವಿರಿ. ಮನೆಯಲ್ಲಿ ಗಿಡ ನೆಡುವ ಕಾರ್ಯ, ಮನೆಯನ್ನು ಅಲಂಕರಿಸುವ ಕಾರ್ಯವನ್ನು ಶ್ರದ್ಧೆಯಿಂದ ಮಾಡುವಿರಿ. ಇದು ಮನಸ್ಸಿಗೆ ನೆಮ್ಮದಿ ನೀಡಲಿದೆ. ಜನರ ಜೊತೆಗೆ ಬೆರೆಯುವ ಮುನ್ನ ಅವರ ಸ್ವಭಾವವನ್ನು ಅರಿತು ಮುನ್ನಡೆಯಿರಿ. ಕೊಂಚ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ ಕಡಿಮೆಯಾಗುವುದು.

Vastu Tips : ಹೊಸ ಮನೆಯಲ್ಲಿ ಸಂತೋಷ ಉಳೀಬೇಕಂದ್ರೆ ಈ ವಸ್ತು ಬಳಸ್ಬೇಡಿ!

ಕುಂಭ(Aquarius)
ಮನೆಯ ನವೀಕರಣವನ್ನು ಮಾಡಬಹುದು. ನಿಮ್ಮ ಮನೆಗೆ ಅಗತ್ಯ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆ ಇದೆ. ಇದರಿಂದಾಗಿ ನಿಮ್ಮ ಸಂಗಾತಿ ಇಷ್ಟರವರೆಗೆ ಪಡುತ್ತಿದ್ದ ಕಷ್ಟಕ್ಕೆ ಕೊಂಚ ವಿರಾಮ ದೊರೆಯಲಿದೆ. ಈ ಸುಧಾರಣೆಯು ಬೇರೆಯವರಿಗೆ ದೊಡ್ಡ ವಿಚಾರ ಅಲ್ಲವಾದರೂ, ನಿಮ್ಮ ಸಂಗಾತಿಗೆ ಸಂತಸ ಉಂಟು ಮಾಡಲಿದೆ. ಮನಸ್ಸಿಗೆ ಖುಷಿ ನೀಡುವ ಕೆಲವು ಕೆಲಸದಲ್ಲಿ ತೊಡಗಿಸಿಕೊಳ್ಳುವಿರಿ. ಸಹೋದರಿಯಿಂದ ಸಹಕಾರ.

ಮೀನ(Pisces)
ನಿಮ್ಮೊಂದಿಗೆ ನೀವು ಸಮಯ ಕಳೆಯಿರಿ. ಕೆಲಸದ ನಡುವೆ ನಿಮ್ಮ ವೈಯಕ್ತಿಕ ಕಾರ್ಯಕ್ಕೆ ಸಮಯ ತೆಗೆದುಕೊಳ್ಳಿ. ನೀವು ಮಾಡಿರುವ ಹೆಚ್ಚಿನ ಕಾರ್ಯಗಳಿಗೆ ಇದೀಗ ಪ್ರತಿಫಲ ದೊರೆಯಲಿದೆ. ಇವೆಲ್ಲ ನಿರೀಕ್ಷಿತ ಅಥವಾ ನಿಧಾನವಾದ ಪ್ರಗತಿ ಎಂದು ಆ ಕ್ಷಣಕ್ಕೆ ಕಂಡರೂ, ಇದು ನಿಮ್ಮನ್ನು ಮತ್ತಷ್ಟುಗಟ್ಟಿಕೊಳಿಸಲಿದೆ. ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ ಇರೋದಿಲ್ಲ. ಸಂಗಾತಿಯ ಜೊತೆಗೆ ಉತ್ತಮ ಸಂಬಂಧವಿರುತ್ತದೆ.

click me!