Weekly Horoscope: ಧನಸ್ಸಿಗೆ ಬದಲಾವಣೆಯ ಪರ್ವ, ನಿಮ್ಮ ಪಾಲಿಗೆ ಈ ವಾರ ಹೇಗಿರಲಿದೆ?

By Suvarna News  |  First Published Apr 18, 2022, 2:20 PM IST

ತಾರೀಖು 17ರಿಂದ 24 ಏಪ್ರಿಲ್ 2022ರವರೆಗೆ ನಿಮ್ಮ ಭವಿಷ್ಯ ಹೇಗಿದೆ?
ನಿಮ್ಮ ರಾಶಿಗೆ ಈ ವಾರದ ಫಲ ಏನಿದೆ ನೋಡಿ
ಕಟಕಕ್ಕೆ ಹಿತಶತ್ರುಗಳ ಕಾಟ


ಮೇಷ(Aries): ಅಂದುಕೊಂಡದನ್ನು ಸಾಧಿಸುವವರೆಗೆ ನಿದ್ರಿಸುವವರಲ್ಲ ನೀವು. ಈ ಛಲ ನಿಮ್ಮ ಬದುಕಿನಲ್ಲಿ ಮಹತ್ವದ ಬದಲಾವಣೆ ತರಲಿದೆ. ಜವಾಬ್ದಾರಿ(responsibility) ಹೊರುವ ವಿಚಾರದಲ್ಲಿ ಹೆಚ್ಚು ಕಾಳಜಿ ವಹಿಸುತ್ತೀರಿ. ಆದರೆ ಬದುಕಿನಲ್ಲಾಗುವ ಕೆಲವು ಏರಿಳಿತಗಳನ್ನು ನೀವು ರೂಪಿಸಿರುವ ಯೋಜನೆ ಮೇಲೆ ಪರಿಣಾಮ ಬೀರಬಹುದು. ಆದರೆ ದೊಡ್ಡ ಅವಕಾಶವೊಂದು ನಿಮಗಾಗಿ ಎದುರು ನೋಡುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಿ.

ವೃಷಭ(Taurus): ಒಂದಿಷ್ಟು ಒತ್ತಡ(stress), ಕೆಲವೊಂದು ನಿಷ್ಟ್ರಯೋಜಕ ಕಾರ್ಯಗಳನ್ನು ಮಾಡಬೇಕಾದ ಅನಿವಾರ್ಯತೆ, ತಲೆನೋವು ಇತ್ಯಾದಿಗಳು ಈ ವಾರ ಕಾಡಬಹುದು. ಅಂದುಕೊಂಡ ಹಾಗೆ ಈ ಮೊದಲು ಯೋಚಿಸಿದಂಥಾ ಹಾದಿಯಲ್ಲಿ ನೀವು ಸಾಗದೆ ಇರಬಹುದು. ಆದರೆ ನೀವು ಈ ಎಲ್ಲ ಅಡೆತಡೆಗಳ ನಡುವೆ ಮಾಡುವ ಕೆಲಸಕ್ಕೆ ಸಾಕಷ್ಟುಪ್ರಶಂಸೆ ವ್ಯಕ್ತವಾಗಬಹುದು. ಉತ್ತಮ ಫಲಗಳು ಸಿಗಬಹುದು.

Tap to resize

Latest Videos

undefined

ಮಿಥುನ(Gemini): ನಿಮಗೆ ಆತುರ ಜಾಸ್ತಿ, ಸಹನೆ ಕಡಿಮೆ. ಆದರೆ ನೀವೀಗ ಬದುಕಿನ ಮಹತ್ತರ ಘಟ್ಟದಲ್ಲಿದ್ದೀರಿ. ಇಂಥಾ ಸಮಯ ಬದುಕಿಗೆ ಅಡಿಪಾಯ ಹಾಕಲು ಗಡಿಬಿಡಿ, ಆತಂಕ ಮಾಡಿದರೆ ಅದರ ಮೇಲೇಳುವ ಬದುಕು ಹೇಗಿರಬಹುದು. ಹೀಗಾಗಿ ಇದು ನಿಮ್ಮ ಶ್ರದ್ಧೆ ಬೇಡುವ ಸಮಯ. ಸಾವಧಾನದಿಂದ ಕೆಲಸ ಕೈಗೆತ್ತಿಕೊಳ್ಳಿ. ತಾಳ್ಮೆಯಿಂದ ಮುಗಿಸಿ. ವ್ಯಾಪಾರದಲ್ಲಿ ಮಿಶ್ರ ಫಲ. ಸ್ವಂತ ಉದ್ಯೋಗದಲ್ಲಿರುವವರಿಗೆ ಉತ್ತಮ ಫಲಗಳಿವೆ.

ಕಟಕ(Cancer): ನಿಮ್ಮ ವೃತ್ತಿಪರ ಸಾಧನೆ, ವೈಯಕ್ತಿಕ ಗೆಲುವು ಆತ್ಮೀಯರ ಹೊಟ್ಟೆಕಿಚ್ಚಿಗೆ ಕಾರಣ ಆಗಬಹುದು. ಹಿತ ಶತ್ರುಗಳ ಕಾಟ ಕಾಡಬಹುದು, ವ್ಯಂಗ್ಯ ಮನಸ್ಸಿಗೆ ಇರಿಯಬಹುದು. ಆದರೆ ಇದಕ್ಕೆ ತಲೆ ಕೆಡಿಸಿಕೊಂಡರೆ ನಿಮಗೇ ನಷ್ಟ. ನಿಮ್ಮ ಪಾಡಿಗೆ ನೀವು ಸಮಾಧಾನದಿಂದಿದ್ದರೆ ಅವರಿಗೆ ಮೈ ಪರಚಿಕೊಳ್ಳುವ ಹಾಗಾಗುತ್ತದೆ. ನಿಮ್ಮ ಕಾರ್ಯನಿರ್ವಹಣೆ ವೃದ್ಧಿಯಾಗುತ್ತದೆ. ಈ ವಾರ ಕೆಲಸ ಕಾರ್ಯಗಳಲ್ಲಿ ಶುಭ ಫಲವಿದೆ.

ಸಿಂಹ(Leo): ಹೂಡಿಕೆ, ಪಾಲುದಾರಿಕೆ ವಿಷಯದಲ್ಲಿ ಈ ವಾರ ಎಚ್ಚರದ ಹೆಜ್ಜೆ ಇಡಿ. ಇತರರನ್ನು ಈವರೆಗೆ ಸುಲಭವಾಗಿ ಮೆಚ್ಚಿಸುತ್ತಿದ್ದಿರಿ. ಆದರೆ ಈ ವಾರ ನಿಮ್ಮ ಈ ಸ್ವಭಾವವೇ ನಿಮ್ಮನ್ನು ಅವಮಾನಕ್ಕೆ ದೂಡುವ ಸಾಧ್ಯತೆ ಇದೆ. ಒಂದು ಆತಂಕದ ವಾತಾವರಣ ಸೃಷ್ಟಿಯಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಸ್ಫೂರ್ತಿ ನೀಡುವಂಥಾ ಘಟನೆಗಳು ನಡೆಯಲಿವೆ. ಕಸದಿಂದಲೂ ರಸ ತೆಗೆಯುವ ನಿಮ್ಮ ಚಾಣಾಕ್ಷತೆಗೆ ಬೆಲೆ ಬರುತ್ತದೆ.

30 ವರ್ಷಗಳ ಬಳಿಕ ಕುಂಭಕ್ಕೆ ಶನಿ ಪ್ರವೇಶ, ನಿಮ್ಮ ರಾಶಿ ಮೇಲೇನು ಪರಿಣಾಮ?

ಕನ್ಯಾ(Virgo): ಹೊಸದನ್ನು ಕಲಿಯಲು ಈ ವಾರ ಉತ್ತಮವಾಗಿದೆ. ಸರಳವಾಗಿ ಹೂಡಿಕೆ ಕ್ಷೇತ್ರದಲ್ಲಿ ಏನನ್ನಾದರೂ ಪ್ರಾರಂಭಿಸುವುದರ ಬಗ್ಗೆ ನೀವು ತುಂಬಾ ಉತ್ಸುಕರಾಗಬಹುದು. ಆದರೆ ಈ ಕಾರ್ಯ ಆರಂಭವಾಗುವ ಮುನ್ನವೇ ಅದರಿಂದ ಹಿಂದೆ ಸರಿಯುವ ಸಾಧ್ಯತೆ ಇದೆ. ಆದರೆ ಜವಾಬ್ದಾರಿಯುತ ಸ್ನೇಹಿತರು ನೀವು ಜೀವನದಲ್ಲಿ ಸೋಲದಂತೆ ಕಾಪಾಡುತ್ತಾರೆ. ಹಠಮಾರಿ ಸ್ವಭಾವದಿಂದ ಆ ಸ್ನೇಹಿತರ ಸಿಟ್ಟಿಗೂ ಕಾರಣವಾಗುವಿರಿ.

ತುಲಾ(Libra): ನೀವು ಸಂಬಂಧಗಳನ್ನು ಹೇಗೆ ನಿಭಾಯಿಸುವಿರಿ ಅನ್ನೋದರ ಬಗ್ಗೆ ಈ ವಾರ ಪರೀಕ್ಷಾ ಕಾಲದಂತೆ ತಲೆದೋರಬಹುದು. ಪ್ರಣಯದಲ್ಲಿ ಕಳೆದುಹೋಗಿದ್ದರೆ, ನಿಜವಾಗಿ ಸಂಬಂಧ ಎಂದರೆ ಏನು ಎಂದು ತಿಳಿಯಲು ಈ ವಾರ ಅವಕಾಶ ನೀಡಲಿದೆ. ಈ ವಾರ ಸಾಮಾನ್ಯ ವಾರಕ್ಕಿಂತ ಕೊಂಚ ವಿಭಿನ್ನವಾಗಿರಲಿದೆ. ಮದುವೆ ಬಗ್ಗೆ ಅಹಿತಕರ ಮಾತುಗಳು ಕೇಳಿಬರಬಹುದು. ಆದರೆ ನಿಮ್ಮ ಸಂಬಂಧ ಗಟ್ಟಿಯಾಗಲಿದೆ.

ವೃಶ್ಚಿಕ(Scorpio): ವೃತ್ತಿಪರತೆ ಮತ್ತು ವೈಯುಕ್ತಿಕತೆ ಇವೆರಡನ್ನೂ ಸಮತೋಲನ ಮಾಡಲು ಹೆಣಗುವಿರಿ. ಒಂದೋ ನಿಮ್ಮ ಸಂಬಂಧಗಳಲ್ಲಿ ಮುಳುಗಿ ಹೋಗಿ ಅದನ್ನೇ ಪ್ರಪಂಚ ಎಂದು ಭಾವಿಸುವಿರಿ, ಕೆಲಸದ ಬಗೆಗೆ ನಿರ್ಲಕ್ಷ್ಯ ಮಾಡುವಿರಿ. ಇಲ್ಲವಾದರೆ ಕೆಲಸದಲ್ಲೇ ಮುಳುಗಿ ಸಂಬಂಧ ನಿರ್ಲಕ್ಷಿಸುವಿರಿ. ಇದರಿಂದ ಕೊಂಚ ಪರಿಣಾಮವಾದರೂ ಸರಿ ಹೋಗಬಹುದು. ಬಹುಕಾಲದಿಂದ ಕಾಯುತ್ತಿದ್ದ ಕಾರ್ಯ ನೆರವೇರುವುದು.

ಕಪ್ಪು ದಾರ ಕಾಲಿಗೆ ಕಟ್ಟೋದು ಒಳ್ಳೆಯದು, ಆದರೆ ಈ 2 ರಾಶಿಯವರು ಕಟ್ಟಕೂಡದು!

ಧನುಸ್ಸು(Sagittarius): ಬದುಕಿನಲ್ಲಿ ಅನೇಕ ಬದಲಾವಣೆಗಳಾಗುವ ಸಮಯ ಇದೀಗ ಬಂದಿದೆ. ಮನೆ ಬದಲಾಯಿಸಬೇಕಾಗಬಹುದು. ಈ ವಾರವಿಡೀ ಹೊಸ ಮನೆಯ ಓರಣ ಅಥವಾ ಹೊಸ ಕೆಲಸಗಳ ತಯಾರಿಯಲ್ಲೇ ಕಳೆದುಹೋಗಲಿದೆ. ಆಫೀಸ್‌ನಲ್ಲಿ ಕೆಲಸ ಕಾರ್ಯಗಳಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಳ್ಳುವಿರಿ. ಹೊಸತನದ ಚೈತನ್ಯ ನಿಮ್ಮೆಲ್ಲ ಕೆಲಸದಲ್ಲಿ ಉತ್ತಮ ಫಲವನ್ನೇ ನೀಡುವುದು. ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ.

ಮಕರ(Capricorn): ಮನಸ್ಸು ಭಾರವಾಗುವುದು, ನಾನೇನೂ ಮಾಡಲಿಲ್ಲವಲ್ಲ ಅನ್ನುವ ರೀತಿಯ ನಿಷ್ಪ್ರಯೋಜಕತೆ ಆವರಿಸುವುದು, ಬದುಕಿರೋದೂ ವೇಸ್ಟು ಎಂಬ ಖಿನ್ನತೆ ಆವರಿಸೋದು.. ಇವೆಲ್ಲ ಈ ವಾರ ನಡೆಯಬಹುದು. ಹೊಸ ಜಾಗಕ್ಕೆ ಭೇಟಿ, ಹೊಸ ವ್ಯಕ್ತಿಗಳ ಒಡನಾಟ ಇತ್ಯಾದಿಗಳಿಂದ ಈ ಮನಸ್ಥಿತಿ ದೂರಾಗಬಹುದು. ವ್ಯಾಪಾರ, ವ್ಯವಹಾರಗಳಲ್ಲಿ, ಉದ್ಯೋಗದಲ್ಲಿ ಮಿಶ್ರ ಫಲ. ಸ್ನೇಹಿತರ ಸಹಕಾರ ದೊರೆಯುತ್ತದೆ.

ಕುಂಭ(Aquarius): ಕಳೆದ ವಾರ ನಿಮ್ಮ ಮೇಲೆ ಸಾಕಷ್ಟುಒತ್ತಡ ಬಿದ್ದಿತ್ತು. ಆದರೆ ಇದೇ ಒತ್ತಡವನ್ನು ನೀವು ನಿಭಾಯಿಸಿದ ರೀತಿಯಿಂದ ಉತ್ತಮ ಅವಕಾಶ ಸಿಕ್ಕಿದೆ. ಬದುಕಿಗೆ ಉತ್ತಮವಾದದ್ದನ್ನು ನೀವೀಗ ಆಯ್ಕೆ ಮಾಡಲೇ ಬೇಕಿದೆ. ಆತಂಕಕ್ಕೆ ಗುರಿಯಾಗಿ ತಪ್ಪು ನಿರ್ಧಾರಕ್ಕೆ ಬರಬೇಡಿ. ಇಂದಿನ ಸನ್ನಿವೇಶವನ್ನು ನಿಮ್ಮೊಳಗಿನ ಭಯವಾಗಿ ಪರಿವರ್ತನೆ ಮಾಡಿಕೊಳ್ಳಬೇಡಿ. ಸಣ್ಣ ಹೆಜ್ಜೆಗಳನ್ನೂ ಆತ್ಮವಿಶ್ವಾಸದಿಂದಲೇ ಇಡಿ. ಶುಭವಾಗುವುದು.

ಮೀನ(Pisces): ನಿಮ್ಮ ದುಡುಕು, ಮುಂಗೋಪ, ನಿರ್ಧಾರದಲ್ಲಿ ವಿಫಲತೆ ಈ ವಾರ ನಿಮ್ಮನ್ನು ಕಾಡಬಹುದು. ಆದರೆ ಈಗಲಾದರೂ ನೀವು ನಿಮ್ಮೊಳಗಿನ ಶಕ್ತಿಯನ್ನು ಪ್ರದರ್ಶಿಸಲೇ ಬೇಕು. ಇಲ್ಲವಾದರೆ ಸನ್ನಿವೇಶ ನಿಮ್ಮ ಕೈ ಮೀರಿ ಹೋಗಬಹುದು. ಸ್ನೇಹದಿಂದ ವರ್ತಿಸುವ ನಿಮ್ಮ ಸ್ವಭಾವವನ್ನು ಮತ್ತೆ ಪ್ರಕಟಪಡಿಸಿ. ಸ್ನೇಹಿತರು, ಕುಟುಂಬದ ಕೊತೆಗೆ ಸಿಹಿಯಾಗಿ ಮಾತನಾಡುವ ಮೂಲಕ ಮನ ಒಲಿಸಿ. ಆರ್ಥಿಕತೆ ಸುಧಾರಿಸಲಿದೆ.

click me!