Weekly Horoscope: ಮೇಷ, ವೃಶ್ಚಿಕಕ್ಕೆ ಈ ವಾರ ಧನಲಾಭ, ನಿಮ್ಮ ರಾಶಿಫಲವೇನು ನೋಡಿ..

By Suvarna News  |  First Published May 15, 2022, 10:22 AM IST

ತಾರೀಖು 15ರಿಂದ 21 ಮೇ 2022ರವರೆಗೆ ನಿಮ್ಮ ಭವಿಷ್ಯ ಹೇಗಿದೆ?
ನಿಮ್ಮ ರಾಶಿಗೆ ಈ ವಾರದ ಫಲ ಏನಿದೆ ನೋಡಿ


ಮೇಷ(Aries)
ಬರಬೇಕಿದ್ದ ಸಾಲದ ಮೊತ್ತ ನಿಮ್ಮ ಕೈ ಸೇರುವ ಕಾರಣ ಹಣದ ಪರಿಸ್ಥಿತಿ ಸುಧಾರಿಸುತ್ತದೆ. ಸಂಬಂಧಿಕರು ಮತ್ತು ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆಗಳು ಸಿಗಬಹುದು. ಪ್ರೀತಿಪಾತ್ರರೊಡನೆ ವೈಯಕ್ತಿಕ ಭಾವನೆಗಳು, ರಹಸ್ಯಗಳನ್ನು ಹಂಚಿಕೊಳ್ಳಲು ಇದು ಸರಿಯಾದ ಸಮಯವಲ್ಲ. ನಿಮ್ಮ ಪ್ರಯತ್ನ ಹಾಗೂ ಕುಟುಂಬದ ಸದಸ್ಯರ ಸಕಾಲಿಕ ಬೆಂಬಲ ಬಯಸಿದ ಫಲಿತಾಂಶಗಳು ತರುತ್ತದೆ. ವೈವಾಹಿಕ ಜೀವನದಲ್ಲಿ ಕಿರಿಕಿರಿ.

ವೃಷಭ(Taurus)
ಮಾನಸಿಕ ಶಾಂತಿಗಾಗಿ ನಿಮ್ಮ ಒತ್ತಡವನ್ನು ಪರಿಹರಿಸಿ. ವ್ಯಾಪಾರದಲ್ಲಿ ನಿಮ್ಮ ಅಜಾಗರೂಕತೆಯಿಂದ ಆರ್ಥಿಕ ನಷ್ಟಉಂಟಾಗಬಹುದು. ಮನೆಯ ವಾತಾವರಣ ಶಾಂತಿಯುತ ಮತ್ತು ಉತ್ತಮವಾಗಿರುತ್ತದೆ. ವೈಯಕ್ತಿಕ ಸಂಬಂಧಗಳು ಸೂಕ್ಷ್ಮ ಹಾಗೂ ಸಂವೇದನಾಶೀಲವಾಗಿವೆ. ಈ ವಾರ ಕೆಲಸದಲ್ಲಿ ತಲ್ಲೀನರಾಗಿರುತ್ತೀರಿ. ನೀವು ಇಷ್ಟಪಡುವ ಕೆಲಸಗಳಿಗಾಗಿಯೂ ನಿಮ್ಮ ಹತ್ತಿರ ಸಾಕಷ್ಟು ಸಮಯ ಉಳಿದಿರುತ್ತದೆ.

Tap to resize

Latest Videos

undefined

ಮಿಥುನ(Gemini)
ನಿಮ್ಮ ಲೆಕ್ಕಾಚಾರದ ಮನಸ್ಥಿತಿಗೆ ಘಾಸಿ ಉಂಟು ಮಾಡುವ ಘಟನೆ ನಡೆಯಬಹುದು. ಅದರಿಂದ ಪಾಠ ಕಲಿಯುವಿರಿ. ಜ್ಞಾನದಾಹ ನಿಮಗೆ ಹೊಸ ಸ್ನೇಹಿತರನ್ನು ಪಡೆಯಲು ಸಹಾಯ ಮಾಡುತ್ತದೆ. ತಂದೆಯ ಸಲಹೆ ಕೆಲಸದ ಸ್ಥಳದಲ್ಲಿ ಧನಲಾಭ ತರಬಹುದು. ವಾರದ ಆರಂಭದಲ್ಲಿ ನೀಡಿದ ಭರವಸೆಯನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ನಿಮ್ಮ ಪ್ರೀತಿಪಾತ್ರರು ನಿಮ್ಮ ಮೇಲೆ ಕೋಪಗೊಳ್ಳಬಹುದು.

ಕಟಕ(Cancer)
ನಿಮ್ಮ ಸಕಾರಾತ್ಮಕ ಗುಣಗಳಿಗೇ ಹೆಚ್ಚಿನ ಮಹತ್ವ ನೀಡಿ. ನಕಾರಾತ್ಮಕ ಯೋಚನೆಗಳನ್ನು ಕಡೆಗಣಿಸಿ. ಸಿಟ್ಟನ್ನು ನಿಯಂತ್ರಿಸಲು ಪ್ರಯತ್ನಿಸಿ. ಇಲ್ಲವಾದರೆ ವಾದ ಮತ್ತು ಘರ್ಷಣೆಗೆ ಕಾರಣವಾಗಬಹುದು. ಪೋಷಕರು ನೀಡಿದ ಬೆಂಬಲದಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾದಂತೆನಿಸುತ್ತವೆ. ಕುಟುಂಬದ ಸದಸ್ಯರ ಜೊತೆಗೆ ಪ್ರೀತಿಯ ಕ್ಷಣಗಳನ್ನು ಕಳೆಯುವಿರಿ. ನಿಮ್ಮ ಪ್ರೇಮ ನಿವೇದನೆಗೆ ಸಕಾಲ.

Buddha Purnima: ಬುದ್ಧ ಮಾನವತೆಯ ಮಂದಹಾಸ ತೊರೆದು ಹೋದವನು ತೋರಿದ ದಾರಿ

ಸಿಂಹ(Leo)
ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದು ಇದು ನಿಮ್ಮನ್ನು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಕ್ರಿಯಗೊಳಿಸುತ್ತದೆ. ಸಹೋದರ ಅಥವಾ ಸಹೋದರಿಯ ಸಹಾಯದಿಂದ ಹಣದ ಲಾಭವಾಗುವ ಸಾಧ್ಯತೆ ಇದೆ. ಸ್ನೇಹಿತರ ಜೊತೆಗಿನ ಚಟುವಟಿಕೆಗಳು ಆಹ್ಲಾದಕರವಾಗಿರುತ್ತವೆ. ಪ್ರೀತಿಪಾತ್ರರು ನಿಮ್ಮನ್ನು ಸಂತೋಷವಾಗಿರಿಸಲು ಕೆಲಸಗಳನ್ನು ಮಾಡುತ್ತಾರೆ. ಮಕ್ಕಳಿಂದ ಸಂತಸ.

ಕನ್ಯಾ(Virgo)
ಮಾನಸಿಕ ಧೃಢತೆ ಮತ್ತು ನಿರ್ಭಯತೆ ನಿಮ್ಮ ಮಾನಸಿಕ ಶಕ್ತಿ ವರ್ಧಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಇದರಿಂದ ಕುಟುಂಬದ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತದೆ. ದೀರ್ಘಕಾಲದ ದೃಷ್ಟಿಕೋನದಿಂದ ಹೂಡಿಕೆ ಮಾಡಬೇಕು. ಅದು ನಿಮ್ಮ ಕೈ ಹಿಡಿಯುತ್ತದೆ. ಸ್ವಾನುಕಂಪದಲ್ಲಿ ಸಮಯ ವ್ಯರ್ಥ ಮಾಡದೇ ಜೀವನದ ಪಾಠ ಕಲಿಯಲು ಪ್ರಯತ್ನಿಸಿ. ನೆಮ್ಮದಿಗಾಗಿ ತೀರ್ಥಯಾತ್ರೆ ಮಾಡುವಿರಿ.

ಐದೇ ದಿನದಲ್ಲಿ ನಾಲ್ಕು ರಾಶಿ ಪರಿವರ್ತನೆ, ಜೊತೆಗೆ ಗ್ರಹಣ, ಹಬ್ಬ ಹುಣ್ಣಿಮೆ..

ತುಲಾ(Libra)
ಕೆಲವು ಮಾನಸಿಕ ಒತ್ತಡಗಳ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ಮದುವೆಯಾಗುವವರು ತಮ್ಮ ಪ್ರೇಮಿಯ ಸಂತೋಷದ ಮೂಲವನ್ನು ಕಂಡುಕೊಳ್ಳುತ್ತಾರೆ. ಇದರಿಂದ ಪ್ರೀತಿ, ಧನಾತ್ಮಕ ಯೋಚನೆ ಹೆಚ್ಚಾಗುತ್ತದೆ. ಸಮಯವನ್ನು ಸರಿಯಾಗಿ ನಿರ್ವಹಿಸುವುದನ್ನು ಕಲಿಯಿರಿ. ಕ್ರಿಯೇಟಿವ್‌ ಆಗಿ ಏನಾದರೂ ಮಾಡಲು ಪ್ರಯತ್ನಿಸಿ. ಸಂಗಾತಿಯ ಜೊತೆಗೆ ಪ್ರೀತಿ, ಪ್ರಣಯದ ರಂಗು ಹೆಚ್ಚುವುದು. ಕೆಲಸದಲ್ಲಿ ಭತ್ಯೆ ಹೆಚ್ಚುವುದು.

ವೃಶ್ಚಿಕ(Scorpio)
ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರ ತಪ್ಪಿಸಿ. ಅಜ್ಞಾತ ಮೂಲಗಳಿಂದ ಹಣ ಪಡೆಯಬಹುದು, ಇದರಿಂದ ನಿಮ್ಮ ಅನೇಕ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಸ್ನೇಹಿತರು ರೋಮಾಂಚಕವಾದದ್ದನ್ನೇನಾದರೂ ಯೋಜಿಸಿ ನಿಮಗೆ ಆನಂದ ತರುತ್ತಾರೆ. ನಿಮ್ಮ ಪ್ರೀತಿಪಾತ್ರರೊಡನೆ ಪ್ರಯಾಣಕ್ಕೆ ಹೋಗುವ ಮೂಲಕ ನಿಮ್ಮ ಅಮೂಲ್ಯ ಕ್ಷಣಗಳನ್ನು ಆನಂದಿಸುತ್ತೀರಿ. ವಿವೇಚನೆಯಿಂದ ಮನೆಯ ಸದಸ್ಯರೊಂದಿಗೆ ಮಾತನಾಡಿ.

ಧನಸ್ಸು(Sagittarius)
ಉದ್ಯಮದ ಯಶಸ್ಸು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇತರರ ಮೇಲೆ ಹೆಚ್ಚು ಖರ್ಚು ಮಾಡಬಯಸುತ್ತೀರಿ. ಅನಿರೀಕ್ಷಿತ ಅತಿಥಿಗಳು ಮನೆಯಲ್ಲಿ ತುಂಬಿರುತ್ತಾರೆ. ನಿಮ್ಮ ಪ್ರೀತಿಪಾತ್ರರೊಡನೆ ಪ್ರಯಾಣಕ್ಕೆ ಹೋಗುವಿರಿ. ಇದರಿಂದ ಸಂಬಂಧ ಹೆಚ್ಚು ಆಪ್ತವಾಗುವುದು. ಹೊಸ ಆಲೋಚನೆಗಳನ್ನು ಪರೀಕ್ಷಿಸಲು ಪರಿಪೂರ್ಣ ದಿನ. ವೈಯುಕ್ತಿಕವಾಗಿ ಸಾಕಷ್ಟುಆನಂದ ಪಡುತ್ತೀರಿ. ಸಂಗಾತಿಯ ಜೊತೆಗೆ ಸರಸ.

ಮಕರ(Capricorn)
ಕೆಲಸದ ಒತ್ತಡ ನಿಮ್ಮನ್ನು ಉದ್ವಿಗ್ನಗೊಳಿಸುವಂತೆ ತೋರುತ್ತದೆ. ಕೋರ್ಟ್ ವ್ಯವಹಾರಗಳಲ್ಲಿ ಜಯ ಲಭಿಸುವುದು. ನಿಮ್ಮ ಆರ್ಥಿಕ ಹಣದ ಪರಿಸ್ಥಿತಿ ಸುಧಾರಿಸುತ್ತದೆ. ವೈಯಕ್ತಿಕ ಜೀವನದಲ್ಲಿ ಮುಖ್ಯ ಬೆಳವಣಿಗೆಯಾಗುತ್ತಿದ್ದು ಇಡೀ ಕುಟುಂಬಕ್ಕೆ ಸಂತೋಷ ತರುತ್ತದೆ. ಪ್ರೇಮ ಬದುಕಿನ ಆಸಕ್ತಿ ಹೆಚ್ಚಿಸುತ್ತದೆ. ಹಿರಿಯರು ನೀಡುವ ಸಲಹೆಗಳನ್ನು ಸ್ವೀಕರಿಸಿ. ಆಸಕ್ತಿಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಿರಿ. ಆರೋಗ್ಯ ಸುಧಾರಿಸುತ್ತದೆ.

Chandra Grahan ಸಮಯದಲ್ಲಿ ಹೀಗೆ ಮಾಡಿ, ಹಣದ ಸಮಸ್ಯೆಯಿಂದ ಮುಕ್ತರಾಗಿ!

ಕುಂಭ(Aquarius)
ಸಂಗಾತಿಯೊಂದಿಗೆ ಸೇರಿ ಭವಿಷ್ಯಕ್ಕೆ ಆರ್ಥಿಕ ಯೋಜನೆಯನ್ನು ಮಾಡಬಹುದು, ಈ ಯೋಜನೆ ಯಶಸ್ವಿಯಾಗಲಿದೆ. ಏನನ್ನಾದರೂ ಅಂತಿಮಗೊಳಿಸುವ ಮೊದಲು ನಿಮ್ಮ ಕುಟುಂಬದ ಸದಸ್ಯರ ಅಭಿಪ್ರಾಯ ತೆಗೆದುಕೊಳ್ಳಿ. ನಿಮ್ಮ ಏಕಪಕ್ಷೀಯ ನಿರ್ಧಾರ ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು. ಉತ್ತಮ ಫಲಿತಾಂಶಗಳನ್ನು ಪಡೆಯಲು ಕುಟುಂಬದಲ್ಲಿ ಸಾಮರಸ್ಯ ಸೃಷ್ಟಿಸಿ. ಆರ್ಥಿಕವಾಗಿ ಸಬಲರಾಗುವಿರಿ.

ಮೀನ(Pisces)
ನಿಮ್ಮ ಕೀಳರಿಮೆ ಕಡಿಮೆಯಾಗಿ ನಿಮ್ಮ ಬಗ್ಗೆ ನಿಮಗೇ ಉತ್ತಮ ಅಭಿಪ್ರಾಯ ಬರುವಂಥಾ ಕೆಲಸಗಳನ್ನು ಮಾಡುವಿರಿ. ಹಣಕಾಸು ಸ್ಥಿತಿಯಲ್ಲಿ ಹಠಾತ್‌ ಸುಧಾರಣೆ. ಯುವಕರು ಹೊಸ ಚಟುವಟಿಕೆಗಳಲ್ಲಿ ಗಮನನೆಡುವಿರಿ. ಪ್ರೇಮ ಜೀವನದಲ್ಲಿ ಯಶಸ್ಸು ಕಾಣುವಿರಿ. ಈ ವಾರದ ಆರಂಭ ಉತ್ತಮವಾಗಿರುತ್ತದೆ. ವಾರದ ಕೊನೆಯವರೆಗೂ ಉಲ್ಲಾಸ, ಉತ್ಸಾಹದಿಂದ ಕೆಲಸ ಮಾಡುವಿರಿ. ಖುಷಿ ಖುಷಿಯ ಮನಸ್ಥಿತಿ ನಿಮ್ಮದಾಗಿರುತ್ತದೆ.

click me!