ಸತತ ಸೋಲು, ಕಂಪನಿಗಳಿಂದ ರಿಜೆಕ್ಟ್, ಸಂಕಷ್ಟದಲ್ಲೇ ಬೆಳೆದ ಸ್ಲಂ ಯುವಕನಿಗೆ ಸಿಕ್ತು 33 ಲಕ್ಷ ರೂ ಜಾಬ್

Published : Aug 15, 2026, 04:39 PM IST
Job Offer

ಸಾರಾಂಶ

ಸ್ಲಂನ ಸಣ್ಣ ಕೋಣೆಯಲ್ಲಿ ಬೆಳದ . ಶ್ರಮಪಟ್ಟು ವಿದ್ಯಾಭ್ಯಾಸ ಮುಗಿಸಿ ಸಂದರ್ಶನಕ್ಕೆ ಹೋದರೆ ಕಂಪನಿಗಳಿಂದ ರಿಜೆಕ್ಟ್. ಆದರೆ ಸತತ ಪರಿಶ್ರಮದ ಮೂಲಕ ಇದೀಗ ಅದೇ ಸ್ಲಂ ಯುವಕ ವರ್ಷಕ್ಕೆ 33 ಲಕ್ಷ ರೂಪಾಯಿ ಪ್ಯಾಕೇಜ್ ಗಿಟ್ಟಿಸಿಕೊಂಡಿದ್ದಾನೆ.

ಬಡತನ, ಇರಲು ಸರಿಯಾದ ಮನೆ ಇಲ್ಲ. ತಂದೆ ಹಾಗೂ ತಾಯಿ ಇಬ್ಬರು ಕೂಲಿ ಕೆಲಸಗಾರರು. ಮೂರು ಹೊತ್ತು ಊಟ ಮಾಡುವುದೇ ದೊಡ್ಡ ಸಾಹಸವಾಗಿತ್ತು. ಇದರ ನಡುವೆ ತಂದೆ ತ್ಯಾಗ ಮಾಡಿ ಮಗನಿಗೆ ಶಿಕ್ಷಣ ಕೊಡಿಸಿದರೆ. ಉತ್ತಮ ವಿದ್ಯಾ ಸಂಸ್ಥೆಗಳಲ್ಲಿ ಶುಲ್ಕ ಕಟ್ಟಲು ಸಾಧ್ಯವಾಗಲಿಲ್ಲ. ಹೀಗಾಗಿ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ಹೊರಬಂದ ಸ್ಲಂ ಯುವಕ ಉದ್ಯೋಗ ಗಿಟ್ಟಿಸಿಕೊಳ್ಳಲು ಒಂದಷ್ಟು ಕಂಪನಿಗಳನ್ನು ಹತ್ತಿ ಇಳಿದಿದ್ದ. ಕೋಡಿಂಗ್ ಸೇರಿದಂತೆ ಇತರ ವಿಷಯಗಳಲ್ಲಿ ಕೋರ್ಸ್ ಪಡೆಯದ ಯುವಕನಿಗೆ ಕೆಲಸ ಸಿಗಲಿಲ್ಲ. ರಿಜೆಕ್ಟ್, ಫೇಲ್ ಅನ್ನೋ ಉತ್ತರ. ಆದರೆ ಮನೆಗೆ ಮರಳಿ ಸತತ ಪರಿಶ್ರಮದ ಮೂಲಕ ಇದೀಗ ಅದೇ ಯುವಕ ಫೋನ್‌ಪೇಯಲ್ಲಿ ವಾರ್ಷಿಕ 33 ಲಕ್ಷ ರೂಪಾಯಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾನೆ.

ಬಿಶಾಲ್ ಪಾಲ್ ಇದೀಗ ಫೋನ್‌ಪೇಯಲ್ಲಿ ಕೆಲಸ ಗಿಟ್ಟಿಸಿಕೊಂಡ ಖುಷಿಯನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಕೊಳಚೆ ಪ್ರದೇಶದ ಸಣ್ಣ ಮನೆಯಲ್ಲಿ ಬೆಳೆದ ಬಿಶಾಲ್ ಪಾಲ್ ಹೆಜ್ಜೆ ಹೆಜ್ಜೆಗೂ ಸಂಕಷ್ಟ ಅನುಭವಿಸಿದ್ದಾರೆ. ಒಂದೆಡೆ ಆರ್ಥಿಕ ಸಂಕಷ್ಟ, ಮತ್ತೊಂದೆಡೆ ಸಮಾಜ ನೋಡುವ ದೃಷ್ಟಿಕೋನ, ತಂದೆ ತಾಯಿ ಜೀವನಕ್ಕಾಗಿ ಪಡುವ ಕಷ್ಟ ಎಲ್ಲವನ್ನೂ ನೋಡಿ ಬೆಳೆದಿದ್ದ. ತಮ್ಮ ಈ ಕಷ್ಟಗಳು ನಮ್ಮಿಂದ ಅಂತ್ಯವಾಗಬೇಕು. ನಮ್ಮ ಮಗ ಉತ್ತಮ ಶಿಕ್ಷಣ ಪಡೆದು ಕೆಲಸ ಗಿಟ್ಟಿಸಿಕೊಳ್ಳಬೇಕು ಎಂದು ಬಿಶಾಲ್ ಪಾಲ್ ತಂದೆ ಹಂಬಲಿಸಿದ್ದರು. ಇದಕ್ಕಾಗಿ ಹಲವು ತ್ಯಾಗ ಮಾಡಿ ಮಗನಿಗೆ ಶಿಕ್ಷಣ ಕೊಡಿಸಿದ್ದರು.

ಕಂಪನಿಗಳಿಂದ ರಿಜೆಕ್ಟ್

ವಿದ್ಯಾಭ್ಯಾಸ ಮುಗಿಸಿ ಹಲವು ಕಂಪನಿಗಳ ಮುಂದೆ ರೆಸ್ಯೂಮ್ ಹಿಡಿದು ಸಾಗಿದ್ದ. ಕೆಲ ಕಂಪನಿಗಳು ಸಂದರ್ಶನ ನಡೆಸಿದರೆ, ಇನ್ನು ಕೆಲವೂ ಒಳಗೂ ಸೇರಿಸಿಕೊಳ್ಳಲಿಲ್ಲ. ಹಲವು ಕಂಪನಿ ಹತ್ತಿ ಇಳಿದರೂ ಉದ್ಯೋಗ ಸಿಗಲಿಲ್ಲ. ಕಂಪನಿಗಳು ಕೇಳು ಕೋಡಿಂಗ್, ಡೇಟಾ ಸ್ಟ್ರಕ್ಚರ್ಸ್ ಸೇರಿದಂತೆ ಇತರ ಕೌಶಲ್ಯಗಳು ತಾನು ಕಲಿತ ಕಾಲೇಜಿನಲ್ಲಿ ಪರಿಣಾಮಕಾರಿಯಾಗಿ ಇರಲಿಲ್ಲ. ಕಂಪನಿಗಳು ತಿರಸ್ಕರಿಸುತ್ತಲೇ ಹೋದಾಗ ಮನೆಗೆ ಬಂದು ಕಣ್ಣೀರಿಟ್ಟಿದ್ದ.

ಕೊನೆಗೆ ತನಗೆ ಕೊರತೆ ನೀಗಿಸಲು ಪ್ರತಿ ದಿನ ಅಧ್ಯಯನಕ್ಕೆ ಕುಳಿತುಕೊಂಡ. ಕೋರ್ಸ್ ಪಡೆಯುವ ಶಕ್ತಿ ಇರಲಿಲ್ಲ. ಮತ್ತ ಪೋಷಕರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಲು ಇಷ್ಟರವಿಲ್ಲ. ಹೀಗಾಗಿ ಒಂದಷ್ಟು ಪುಸ್ತಕ, ವಿಡಿಯೋಗಳ ಮೂಲಕ ಮತ್ತೆ ಅಧ್ಯಯನ ಆರಂಭಗೊಂಡಿತು. ಇದರ ಪರಿಣಾಮ ಇದೀಗ ಫೋನ್‌ಪೇಯಲ್ಲಿ ವಾರ್ಷಿಕ 33 ಲಕ್ಷ ರೂಪಾಯಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾನೆ.

ಕುಟುಂಬಗಳ ತಲೆಮಾರುಗಳ ಕಷ್ಟ ಇಲ್ಲಿಗೆ ಕೊನೆ

ಬಿಶಾಲ್ ಪಾಲ್ ಸೋಶಿಯಲ್ ಮೀಡಿಯಾದಲ್ಲಿ ಭಾವುಕರಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ. ನನ್ನ ಪೋಷಕರು, ನನ್ನ ಅಜ್ಜ ಸೇರಿದಂತೆ ಇಡೀ ಕುಟುಂಬ ಇದೇ ಸ್ಲಂನಲ್ಲಿ ವಾಸ. ಇದೀಗ ನಮ್ಮ ತಲೆಮಾರುಗಳ ಕಷ್ಟ ಇಲ್ಲಿಗೆ ಕೊನೆಯಾಗಿದೆ. ಇಷ್ಟು ವರ್ಷ ಕಷ್ಟಪಟ್ಟ ಪೋಷಕರಿಗೆ ಉತ್ತಮ ಬದುಕು ನೀಡಬೇಕು ಎಂದು ಬಿಶಾಲ್ ಪಾಲ್ ಬರೆದುಕೊಂಡಿದ್ದಾರೆ.

PREV
Read more Articles on
click me!

Recommended Stories

'ವಿಲನ್ ರೋಲ್'ನ ಲೀಸ್ ತೆಗೆದುಕೊಂಡಿದ್ದಾರಾ ಯಶ್? ಈ ಪ್ರಶ್ನೆಗೆ ಮಾರ್ಮಿಕ ಉತ್ತರ ಇಲ್ಲಿದೆ ನೋಡಿ!
2021ರಲ್ಲಿ ಜೂಮ್ ಕಾಲ್‌ನಲ್ಲಿ 900 ಉದ್ಯೋಗಿಗಳ ಕಿತ್ತೆಸೆದ ಸಿಇಒ ವಿಶಾಲ್‌ಗೆ ಬಿಗ್ ಶಾಕ್, ಏನಾಯಿತು ಈಗ?