2021ರಲ್ಲಿ ಜೂಮ್ ಕಾಲ್‌ನಲ್ಲಿ 900 ಉದ್ಯೋಗಿಗಳ ಕಿತ್ತೆಸೆದ ಸಿಇಒ ವಿಶಾಲ್‌ಗೆ ಬಿಗ್ ಶಾಕ್, ಏನಾಯಿತು ಈಗ?

Published : Aug 15, 2026, 02:53 PM IST
Layoff

ಸಾರಾಂಶ

2021 ಕೋವಿಡ್ ಸಂಕಷ್ಟದ ನಡುವೆ ಜೂಮ್ ಕಾಲ್ ಮೂಲಕ 900 ಉದ್ಯೋಗಿಗಳನ್ನು ಕಿತ್ತಸೆದಿದ್ದರು. ಕನಿಷ್ಠ ಗೌರವ ನೀಡಿದೆ ಉದ್ಯೋಗ ಕಡಿತ ಮಾಡಿದ್ದರು. ಭಾರಿ ಸುದ್ದಿಯಾಗಿದ್ದ ಇದೇ ಸಿಇಒ ವಿಶಾಲ್ ಗರ್ಗ್‌ಗೆ ಇದೀಗ ಬಿಗ್ ಶಾಕ್ ಎದುರಾಗಿದೆ.

ನವದೆಹಲಿ (ಆ.15) ಐಟಿ ಕ್ಷೇತ್ರದ ಹಲವು ಕಂಪನಿಗಳು ಹಂತ ಹಂತವಾಗಿ ಈಗದಲೂ ಉದ್ಯೋಗ ಕಡಿತ ಮಾಡುತ್ತಲೇ ಇದೆ. ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಸೇರಿದಂತೆ ಹಲವು ಕಾರಣಗಳಿಂದ ಉದ್ಯೋಗ ಕಡಿತ ನಡೆಯುತ್ತಿದೆ. 2021ರಲ್ಲಿ ಕೋವಿಡ್ ಮಹಾಮಾರಿಯಿಂದ ಆಗಷ್ಟೇ ಚೇತರಿಕೆ ಬೆಳಕೊಂದು ಕಂಡಿತ್ತು. ಅದಾಗಲೇ ಹಲವು ಕಂಪನಿಗಳು ಅನಿವಾರ್ಯವಾಗಿ ಮುಚ್ಚಿ ಹೋಗಿತ್ತು.ಇದರ ನಡುವೆ ವರ್ಕ್ ಫ್ರಮ್ ಹೋಮ್‌ನಲ್ಲಿದ್ದ ಬೆಟರ್ ಹೋಮ್ ಆ್ಯಂಡ್ ಫಿನಾನ್ಸ್ ಕಂಪನಿಯ ಸಿಇಒ ವಿಶಾಲ್ ಗರ್ಗ್ ಜೂಮ್ ಕಾಲ್ ಮೂಲಕ ಬರೋಬ್ಬರಿ 900 ಉದ್ಯೋಗಿಗಳನ್ನು ಕೆತ್ತೆಸೆದಿದ್ದರು. ಈ ಮೂಲಕ 5 ವರ್ಷಗಳ ಹಿಂದೆ ವಿಶಾಲ್ ಗರ್ಗ್ ಭಾರಿ ಸುದ್ದಿಯಾಗಿದ್ದರು. ಇದೀಗ ಇದೇ ವಿಶಾಲ್ ಗರ್ಗ್‌ನ್ನು ಸಿಇಒ ಸ್ಥಾನದಿಂದ ಅದೇ ಕಂಪನಿ ವಜಾಗೊಳಿಸಿದೆ.

ನೀವು ಜೂಮ್ ಕಾಲ್‌ನಲ್ಲಿದ್ದರೆ, ನಿಮ್ಮ ಕೊನೆಯ ವರ್ಕಿಂಗ್ ಡೇ

ಕೋವಿಡ್ ನಿರ್ಬಂಧಗಳ ಕಾರಣ ವರ್ಕ್‌ ಫ್ರಮ್ ಹೋಮ್ ಸಿಬ್ಬಂದಿಗಳಿಗೆ ಪ್ರತಿ ದಿನ, ವಾರದ ವಿಡಿಯೋ ಕಾಲ್ ಮೀಟಿಂಗ್ ಸಾಮಾನ್ಯವಾಗಿತ್ತು. ಹೀಗೆ ಕಂಪನಿಯ ಉದ್ಯೋಗಿಗಳ ಪೈಕಿ 900 ಮಂದಿಗೆ ದಿಢೀರ್ ಜೂಮ್ ಕಾಲ್‌ನಲ್ಲಿ ಹಾಜಗಾರುವಂತೆ ವಿಶಾಲ್ ಗರ್ಗ್ ಇಮೇಲ್ ಮಾಡಿದ್ದಾರೆ. ಎಲ್ಲರೂ ವಿಡಿಯೋ ಕಾಲ್‌ನಲ್ಲಿ ಜಾಯಿನ್ ಆಗುತ್ತಿದ್ದಂತೆ ಯಾರೆಲ್ಲಾ ಈ ವಿಡಿಯೋ ಕಾಲ್‌ನಲ್ಲಿದ್ದೀರಾ ನಿಮ್ಮ ದುರಾದೃಷ್ಟ. ಕಾರಣ ನಿಮ್ಮ ಉದ್ಯೋಗವನ್ನು ತಕ್ಷಣಕ್ಕೆ ಜಾರಿಬರುವಂತೆ ವಜಾ ಮಾಡಲಾಗಿದೆ ಎಂದು ಜೂಮ್ ಕಾಲ್ ಮೂಲಕ ಹೇಳಿದ್ದರು. ಕೇವಲ 2 ನಿಮಿಷದಲ್ಲಿ 900 ಮಂದಿ ಉದ್ಯೋಗ ಕಳೆದುಕೊಂಡಿದ್ದರು. ಇದೀಗ 5 ವರ್ಷ ಉರುಳಿದೆ. ಪರಿಣಾಮ ಇದೇ ವಿಶಾಲ್ ಗರ್ಗ್ ಅದೇ ಕಂಪನಿಯ ಸಿಇಒ ಸ್ಥಾನದಿಂದ ವಜಾಗೊಂಡಿದ್ದಾರೆ.

ಆಡಳಿತ ಮಂಡಳಿಯ ಸರ್ವಾನುಮತದ ಕ್ರಮ

ವಿಶಾಲ್ ಗರ್ಗ್ ವಿರುದ್ದ ಆಡಳಿತ ಮಂಡಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇಷ್ಟೇ ಅಲ್ಲ ವಿಶಾಲ್ ಗರ್ಗ್ ವಜಾ ಮಾಡಲು ಎಲ್ಲಾ ಸದಸ್ಯರು ಸರ್ವಾನುಮತದಿಂದ ನಿರ್ಧಾರ ತೆಗೆದುಕೊಂಡಿದ್ದಾರೆ. ಬೆಟರ್ ಹೋಮ್ ಆ್ಯಂಡ್ ಫಿನಾನ್ಸ್ ಹೊಲ್ಡಿಂಗ್ ಕಂಪನಿಯ ಬೋರ್ಡ್ ಸದಸ್ಯರು ವಿಶಾಲ್ ಗರ್ಗ್ ಟರ್ಮಿನೇಶನ್ (ವಜಾ ಪತ್ರ) ಪತ್ರವನ್ನು ಬಿಡುಗಡೆ ಮಾಡಿದೆ.

ವಿಶಾಲ್ ಗರ್ಗ್ ವಜಾಗೆ ಕಾರಣವೇನು?

ವಿಶಾಲ್ ಗರ್ಗ್ ಕೋಪದ ಸ್ವಭಾವ, ವಿಶ್ವಾಸಾರ್ಹತೆ ಕುರಿತು ಗಂಭೀರ ಪ್ರಶ್ನೆಗಳು ಎದ್ದಿದೆ. 2022ರ ಬಳಿಕ ಕಂಪನಿ 12,500 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಷೇರುಗಳ ಮೌಲ್ಯ ಶೇಕಡಾ 90ರಷ್ಟು ಕುಸಿದಿದೆ. ವಿಶಾಲ್ ಗರ್ಗ್ ತೆಗೆದುಕೊಂಡ ಕೆಲ ತಪ್ಪು ನಿರ್ಧಾರಗಳು, ಕೋಪದಿಂದ ಮಾಡಿದ ಎಡವಟ್ಟುಗಳು ಕಂಪನಿಗೆ ತೀವ್ರ ನಷ್ಟನ್ನುಂಟು ಮಾಡಿದೆ ಎಂದು ಕಂಪನಿಯ ಬೋರ್ಡ್ ಸದಸ್ಯರು ಹಲವು ಕಾರಣ ನೀಡಿದೆ. ಇದೇ ವೇಳೆ ಕಂಪನಿಗಳ ಷೇರು ಮಾರುಕಟ್ಟೆಯ ಕಾನೂನು ಉಲ್ಲಂಘನೆ, ಅಗತ್ಯ ದಾಖಲೆಗಳಿಗೆ ಸಹಿ ಮಾಡದೇ ಅನಗತ್ಯ ವಿಳಂಬ ಸೇರಿದಂತೆ ಕೆಲ ಪ್ರಮುಖ ಕಾರಣಗಳನ್ನು ನೀಡಿ ವಿಶಾಲ್ ಗರ್ಗ್‌ರನ್ನು ವಜಾ ಮಾಡಲಾಗಿದೆ.

ಆಗಸ್ಟ್ 3 ರಂದು ಒಪ್ಪಂದ ಮೇರೆಗೆ ಸಿಇಒ ಸ್ಥಾನದಿಂದ ನಿರ್ಗಮಿಸುವಂತೆ ಬೋರ್ಡ್ ಸೂಚಿಸಿತ್ತು. ಆದರೆ ಆಗಸ್ಟ್ 13ರಂದು ಕಂಪನಿ ವಿರುದ್ದವೇ ವಿಶಾಲ್ ಗರ್ಗ್ ಕಾನೂನು ಹೋರಾಟ ಆರಂಭಿಸಿದ್ದಾರೆ. ಇದೀಗ ವಕೀಲರ ನೇಮಿಸಿಕೊಂಡಿರುವ ವಿಶಾಲ್ ಗರ್ಗ್ ಕಂಪನಿ ವಿರುದ್ದ ಕಾನೂನು ಹೋರಾಟ ಆರಂಭಿಸಿದ್ದಾರೆ. ಇಷ್ಟೇ ಅಲ್ಲ ತನ್ನ ಸಿಇಒ ಸ್ಥಾನ ಸಿಗುವವರೆಗೂ ಹೋರಾಟ ಮಾಡುವುದಾಗಿ ಹೇಳಿದ್ದಾರೆ.

PREV
Read more Articles on
click me!

Recommended Stories

Yash Toxic Exclusive: 'ಗಾಂಧಿ‌ನಗರದಲ್ಲಿ ಯಶ್ ಹೊಸ ದಾಖಲೆ.. ಈ ರೆಕಾರ್ಡ್ ಮಾಡಿದ ಏಕೈಕ ನಟ ರಾಕಿಂಗ್ ಸ್ಟಾರ್!
ಸ್ವಿಗ್ಗಿ ಡೆಲಿವರಿ ಕೆಲಸ ಮಾಡಿ ಕೂಡಿಟ್ಟ ದುಡ್ಡಲ್ಲಿ ಅಮ್ಮನಿಗೆ ಸ್ಮಾರ್ಟ್‌ ಟಿವಿ ಗಿಫ್ಟ್! ಮಗನ ಪ್ರೀತಿಗೆ ಕಣ್ಣೀರಾದ ಕುಟುಂಬ, ವಿಡಿಯೋ ವೈರಲ್