
ಬೆಂಗಳೂರಿನ ಒಂದು ಸ್ಟಾರ್ಟ್ ಅಪ್ ಕಂಪನಿ ವರ್ಷಕ್ಕೆ 1 ಕೋಟಿ ರೂ. ಸಂಬಳದ ಸಾಫ್ಟ್‌ವೇರ್ ಕೆಲಸಕ್ಕೆ ನೇಮಕಾತಿ ನಡೆಸುತ್ತಿದೆ. ಡಿಗ್ರಿ, ರೆಸ್ಯೂಮೆಗಳ ಅಗತ್ಯವಿಲ್ಲ. ಸ್ಮಾಲೆಸ್ಟ್ AI ಸಂಸ್ಥಾಪಕ ಸುದರ್ಶನ್ ಕಾಮತ್ ಈ ಹುದ್ದೆಗೆ ನೇಮಕಾತಿ ಪ್ರಕಟಿಸಿದ್ದಾರೆ. ಇದು ಫುಲ್-ಸ್ಟಾಕ್ ಎಂಜಿನಿಯರಿಂಗ್ ಲೀಡ್ ಹುದ್ದೆಯಾಗಿದೆ.
ಈ ಕೆಲಸದ ವಿವರಗಳು:
ಈ ಹುದ್ದೆಯು 60 ಲಕ್ಷ ರೂಪಾಯಿಗಳ ನಿಗದಿತ ವೇತನ ಮತ್ತು 40 ಲಕ್ಷ ರೂಪಾಯಿಗಳ ಕಂಪನಿಯ ಇಕ್ವಿಟಿಯನ್ನು (ಷೇರುಗಳನ್ನು) ನೀಡಲಾಗುತ್ತದೆ. ಇದು ಬೆಂಗಳೂರಿನಲ್ಲಿ ಪೂರ್ಣಾವಧಿ ಸಮಯದ ಕೆಲಸವಾಗಿದ್ದು, ವಾರದಲ್ಲಿ ಐದು ದಿನಗಳ ಕಚೇರಿ ಕೆಲಸವನ್ನು ಮಾಡಬೇಕಾಗುತ್ತದೆ. ಇದು ಸಾಮಾನ್ಯ ಕಚೇರಿ ಅವಧಿಗಳಿಗೆ ಹೊಂದಿಕೊಳ್ಳುವ ಸಮಯವನ್ನು ಹೊಂದಿರುತ್ತದೆ. ಕೆಲಸ ಬಯಸುವ ಅಭ್ಯರ್ಥಿಗಳು Next.js, Python ಮತ್ತು React.js ನಲ್ಲಿ ಕೌಶಲ್ಯವನ್ನು ಹೊಂದಿರಬೇಕು. ಜೊತೆಗೆ, ಈಗಾಗಲೇ ಕನಿಷ್ಠ 4 ರಿಂದ 5 ವರ್ಷಗಳ ಕಾಲ ಇತರೆ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವವನ್ನು ಹೊಂದಿರಬೇಕು. ಶೂನ್ಯದಿಂದ ದೊಡ್ಡ ಪ್ರಮಾಣದವರೆಗೆ ಪ್ರಾಯೋಗಿಕ ಪರಿಣತಿ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಲಾಗಿದೆ.
ಚಿಕ್ಕ AI ಸ್ಟಾರ್ಟ್ ಅಪ್ ಆಗಿದ್ದು, ಇಲ್ಲಿ ರೆಸ್ಯೂಮ್ ಅಥವಾ ಕಾಲೇಜು ಪದವಿ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಸಾಫ್ಟ್‌ವೇರ್ ಇಂಜಿನಿಯರ್‌ಗಳನ್ನು ಕಂಪನಿ ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳುವ ಸಂಪ್ರದಾಯವನ್ನು ಮೀರಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗೆ ವ್ಯವಸ್ಥಾಪಕರ ಬದಲಿಗೆ ಪ್ರಾಯೋಗಿಕ ಡೆವಲಪರ್ ಅಗತ್ಯವಿದೆ ಎಂದು ಇಲ್ಲಿ ಒತ್ತಿ ಹೇಳಲಾಗಿದೆ. ಹುದ್ದೆಗೆ ಸೇರಬಯಸುವ ಅಭ್ಯರ್ಥಿಗಳು ತಮ್ಮ ಬಗ್ಗೆ 100 ಪದಗಳ ಸಂಕ್ಷಿಪ್ತ ಪರಿಚಯವನ್ನು ಮತ್ತು ಅವರ ಅತ್ಯುತ್ತಮ ಕೆಲಸಗಳ ಮಾದರಿಗಳನ್ನು [info@smallest.ai](mailto:info@smallest.ai) ಗೆ 'ಕ್ರ್ಯಾಕ್ಡ್ ಫುಲ್ ಸ್ಟ್ಯಾಕ್ ಲೀಡ್' (Cracked Full Stack Lead) ಎಂಬ ವಿಷಯದ ಸಾಲನ್ನು ಬಳಸಿಕೊಂಡು ಕಳುಹಿಸಬೇಕಾಗುತ್ತದೆ. ಈ ಪೋಸ್ಟ್ 60,000+ ವೀಕ್ಷಣೆಗಳನ್ನು ದಾಟಿದೆ ಮತ್ತು ಆನ್‌ಲೈನ್‌ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
ವಿಶ್ವ ಯುವ ಕೌಶಲ್ಯ ದಿನ (ಜುಲೈ 15) ಸಮೀಪಿಸುತ್ತಿರುವಂತೆ ಭಾರತೀಯ ಕಂಪನಿಗಳು ಪದವಿಗಳಿಂದ ದೂರ ಸರಿದು ನಿಜವಾದ ಕೌಶಲ್ಯಗಳತ್ತ ಹೇಗೆ ಸಾಗುತ್ತಿವೆ ಎಂಬುದನ್ನು ಈ ಉದ್ಯೋಗ ಪ್ರವೃತ್ತಿ ತೋರಿಸುತ್ತದೆ. ಸಾಂಪ್ರದಾಯಿಕ ವ್ಯವಸ್ಥೆಯ ಹೊರಗೆ ತಮ್ಮ ಪೋರ್ಟ್‌ಫೋಲಿಯೊಗಳನ್ನು ನಿರ್ಮಿಸಿಕೊಂಡಿರುವ ಯುವ ಐಟಿ ಉದ್ಯೋಗಿಗಳಿಗೆ, ಇದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಇದಲ್ಲದೆ, ಇದು ಕಂಪನಿಯ ಮೊದಲ ಧೈರ್ಯಶಾಲಿ ಕ್ರಮವಲ್ಲ. ಈ ವರ್ಷದ ಆರಂಭದಲ್ಲಿ ಸ್ಮಾಲೆಸ್ಟ್ ಎಐ ಎಂಬ ಹೊಸ ಡೆವಲಪರ್‌ಗಳಿಗೆ ಮತ್ತೊಂದು ಅನಧಿಕೃತ ಉದ್ಯೋಗದ ಪ್ರಸ್ತಾಪವನ್ನು ನೀಡಿತು. ಯಾವುದೇ ರೆಸ್ಯೂಮ್ ಅವಶ್ಯಕತೆಗಳಿಲ್ಲದೆ 40 ಲಕ್ಷ ರೂ. ಸಂಬಳ ನೀಡುವ ಆಫರ್ ಅನ್ನು ನೀಡಿತ್ತು. ಇದು ಕಂಪನಿಗಳು ನೇಮಕಾತಿಯನ್ನು ತ್ವರಿತಗೊಳಿಸಲು ಮತ್ತು ಕಾಗದ ಪತ್ರಗಳಿಗಿಂತ ಅಭ್ಯರ್ಥಿಗಳ ಸಾಮರ್ಥ್ ಮತ್ತು ಕೌಶಲ್ಯಯಕ್ಕೆ ಆದ್ಯತೆ ನೀಡಲು ಹೆಚ್ಚು ಹೆಚ್ಚು ಒತ್ತು ನೀಡುತ್ತಿರುವುದನ್ನು ತೋರಿಸುತ್ತದೆ.