Viral Video: ರೈಲಿನ ಬಾಗಿಲಲ್ಲಿ ನಿಂತು ರೀಲ್ಸ್ ಮಾಡ್ತಿದ್ದ ಮಗಳಿಗೆ ಅಮ್ಮನ ಕಪಾಳಮೋಕ್ಷ

Published : Jul 11, 2025, 03:11 PM ISTUpdated : Jul 11, 2025, 03:29 PM IST
Mother Slaps Daughter for Making Reels on Running Train

ಸಾರಾಂಶ

ಚಲಿಸುವ ರೈಲಿನಲ್ಲಿ ರೀಲ್ಸ್ ಮಾಡಲು ಹೋದ ಮಗಳಿಗೆ ತಾಯಿ ಧರ್ಮದೇಟು ನೀಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಾಯಿಯ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕೆಲವರು ಇದನ್ನು ಸ್ಕ್ರಿಪ್ಟೆಡ್ ವೀಡಿಯೋ ಎಂದೂ ಹೇಳಿದ್ದಾರೆ.

ಇದು ಸೋಶಿಯಲ್ ಮೀಡಿಯಾ ಯುಗ, ಸೋಶಿಯಲ್ ಮೀಡಿಯಾದಿಂದಲೂ ಹಣ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟ ಕಾಲಘಟ್ಟ ಇದು. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಅಧಿಕ ವೀವ್ಸ್ ಹಾಗೂ ಕಾಮೆಂಟ್‌ಗಳನ್ನು ಗಿಟ್ಟಿಸಿಕೊಳ್ಳುವುದಕ್ಕಾಗಿ ಕೆಲ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಏನೇನೋ ಮಾಡಬಾರದ ಸಾಹಸಗಳನ್ನು ಮಾಡುತ್ತಾರೆ. ಜೀವಕ್ಕಾಗುವ ಅಪಾಯವನ್ನೂ ಲೆಕ್ಕಿಸದೇ ಅಪಾಯಕಾರಿ ಸ್ಥಳಗಳಲ್ಲಿ ಸಾಹಸ ಮಾಡಲು ಪ್ರಯತ್ನಿಸುತ್ತಾರೆ.

ಹೀಗೆ ಸಾಹಸ ಮಾಡಲು ಹೋಗಿ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಒಬ್ಬರು ಇಬ್ಬರಲ್ಲ, ಪ್ರಪಂಚದೆಲ್ಲೆಡೆ ಬೆರಳೆಣಿಕೆಗೂ ಅಧಿಕ ಮಂದಿ ಇಂತಹ ಸಾಹಸ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಎಷ್ಟು ಬಾರಿ ಎಚ್ಚರಿಸಿದರು ಪೋಷಕರು ಹೇಳಿದರು, ಮಕ್ಕಳು ಕೇಳುವ ಸ್ಥಿತಿಯಲ್ಲಿ ಇಲ್ಲ, ಬಹುತೇಕ ಸೋಶಿಯಲ್ ಮೀಡಿಯಾವನ್ನು ಯುವ ಸಮುದಾಯವೇ ಆಳುತ್ತಿದ್ದು, ಅವರೇ ಇಂತಹ ಹುಚ್ಚು ಸಾಹಸ ಮಾಡಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದು ಪೋಷರಕರಿಗೆ ನುಂಗಲಾರದ ತುತ್ತಾಗುತ್ತಿದ್ದು, ಅನೇಕರು ಮಕ್ಕಳನ್ನು ಕಳೆದುಕೊಂಡು ಸಂಕಟ ಪಡುತ್ತಿದ್ದಾರೆ.

ಚಲಿಸುವ ರೈಲಿನ ಬಾಗಿಲಲ್ಲಿ ನೇತಾಡುತ್ತಾ ರೀಲ್ಸ್ ಮಾಡುವುದು, ಹರಿಯುವ ನೀರಿನ ನಡುವೆ ಹೋಗಿ ಅಪಾಯಕಾರಿಯಾಗಿ ವೀಡಿಯೋ ಮಾಡುವುದು ಹಾವಿಗೇ ಮುತ್ತಿಕ್ಕಲು ಹೋಗುವುದು, ಚಲಿಸುವ ಕಾರು ಬೈಕ್‌ಗಳಲ್ಲಿ ವೀಡಿಯೋಗಾಗಿ ಸ್ಟಂಟ್ ಮಾಡುವುದು ಹೀಗೆ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಮಾಡುವ ಅವಾಂತರಗಳು ಒಂದೆರಡಲ್ಲ, ಆದರೆ ಇಲ್ಲೊಂದು ಕಡೆ ಯುವತಿಯೊಬ್ಬಳು ಚಲಿಸುವ ರೈಲಿನ ಬಾಗಿಲಿನಲ್ಲಿ ನಿಂತುಕೊಂಡು ರೀಲ್ಸ್ ಮಾಡಲು ಮುಂದಾಗಿದ್ದು, ಇದನ್ನು ಆಕೆಯ ತಾಯಿಯೂ ಗಮನಿಸಿ ಆಕೆಗೆ ಅಲ್ಲೇ ಮಂಗಳಾರತಿ ಮಾಡಿದ್ದಾರೆ. ಆ ವೀಡಿಯೋ ಈಗ ವಿವಿಧ ಸಾಮಾಜಿಕ ಜಾಲತಾಗಳಲ್ಲಿ ಪೋಸ್ಟ್ ಆಗಿದ್ದು, ತಾಯಿಯ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಾಗಿದ್ರೆ ಆ ವೀಡಿಯೋದಲ್ಲೇನಿದೆ?

ವೀಡಿಯೋ ನೋಡಿ

ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಜೀನ್ಸ್ ಪ್ಯಾಂಟ್ ಟೀ ಶರ್ಟ್ ಧರಿಸಿ ಕೂದಲನ್ನು ಕಟ್ಟದೇ ಬಿಟ್ಟಿರುವ ಯುವತಿಯೊಬ್ಬಳು ಚಲಿಸುತ್ತಿರುವ ರೈಲಿನ ಬಾಗಿಲಲ್ಲಿ ನಿಂತುಕೊಂಡು ರೀಲ್ಸ್ ಮಾಡುವುದಕ್ಕೆ ಶುರು ಮಾಡಿದ್ದಾಳೆ. ಇದನ್ನು ಗಮನಿಸಿದ ಆಕೆಯ ತಾಯಿ ಕೂಡಲೇ ಅವರು ಕುಳಿತಿದ್ದ ಸೀಟಿನಿಂದ ಎದ್ದು ಬಂದು ಅದು ರೈಲು ಎಂಬುದನ್ನು ನೋಡದೇ ಮಗಳ ತಲೆಕೂದಲನ್ನು ಹಿಡಿದು ಆಕೆಯ ಕೆನ್ನೆಗೆ ಚೆನ್ನಾಗಿ ಬಾರಿಸಿದ್ದಾರೆ. ಇದರಿಂದ ಆಕೆ ಗಾಬರಿಯಾಗಿದ್ದು, ಆಕೆಗೆ ಮುಜುಗರವಾಗಿದೆ. ಆಕೆ ಯಾಕೆ ಹೀಗೆ ಮಾಡ್ತಿಯಾ ಅಂತ ಕೇಳ್ತಿದ್ರೆ ಆಕೆಯ ಅಮ್ಮ ಆಕೆಗೆ ಮತ್ತೆರಡು ಬಾರಿಸಿದ್ದಾಳೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಕೆಲವರು ಇದು ಸ್ಕ್ರಿಫ್ಟೆಡ್ ಎಂದು ಹೇಳ್ತಿದ್ದು, ಆದರೂ ಅಮ್ಮ ಮಾಡಿದ ಕೆಲಸ ಸರಿಯಾಗಿದೆ ಎಂದಿದ್ದಾರೆ.

ಕೆಲವರಿಗೆ ಮಾತ್ರ ಇದು ಸ್ಕ್ರಿಪ್ಟೆಡ್ ಅಂತ ಗೊತ್ತಾಗ್ತಿದೆ. ರೀಲ್ಸ್‌ನಲ್ಲೂ ಜನ ರೀಲ್ಸ್ ಮಾಡ್ತಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ತಾಯಿ ಅಮ್ಮನನ್ನೂ ರೀಲ್ಸ್ ಮಾಡುವುದಕ್ಕೆ ಸಿದ್ಧಪಡಿಸಿರುವುದನ್ನು ಮೆಚ್ಚಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇವರು ಒರಿಜಿನಲ್ ಮಮ್ಮಿ ಎಂದು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸ್ತಿದೆ ಕಾಮೆಂಟ್ ಮಾಡಿ.

 

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್