Jul 8, 2020, 6:12 PM IST
ನವದೆಹಲಿ (ಜು. 08): ಈಗಾಗಲೇ ಭಾರತದ ಜೊತೆ ಗಡಿ ತಂಟೆ ತೆಗೆದಿರುವ ಚೀನಾಗೆ ಒಂದಾದ ಮೇಲೊಂದು ಹೊಡೆತ ಬೀಳುತ್ತಲೇ ಇದೆ. ಪ್ರಧಾನಿ ಮೋದಿ ಬೇರೆ ಬೇರೆ ರೀತಿಯಲ್ಲಿ ತಕ್ಕ ಉತ್ತರ ನೀಡುತ್ತಿದ್ದಾರೆ. 59 App ಗಳನ್ನು ನಿಷೇಧಿಸಿ ಶಾಕ್ ನೀಡಿದ್ದಾರೆ. ಈಗ ಅಮೆರಿಕಾ ಕೂಡಾ ಚೀನಾಗೆ ಶಾಕ್ ನೀಡಿದೆ.
ಟಿಕ್‌ಟಾಕ್ ಸೇರಿದಂತೆ 59 ಚೀನಾ ಆ್ಯಪ್‌ಗಳಿಗೆ ಭಾರತ ನಿಷೇಧ ಹೇರಿದ ಬೆನ್ನಲ್ಲೇ, ಅಮೆರಿಕ ಕೂಡ ಇಂಥದ್ದೇ ಕ್ರಮಕ್ಕೆ ಮುಂದಾಗುವ ಸಾಧ್ಯತೆ ಇದೆ. ‘ಟಿಕ್‌ಟಾಕ್ ಸೇರಿದಂತೆ ಚೀನಾ ಆ್ಯಪ್‌ಗಳನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ’ ಎಂದು ಅಮೆರಿಕ ವಿದೇಶಾಂಗ ಸಚಿವ ಮೈಕ್ ಪಾಂಪೆಯೋ ಹೇಳಿದ್ದಾರೆ.
ಇದು ಕೆಂಪು ರಾಕ್ಷಸನ ಕ್ರೂರ ಸಾಮ್ರಾಜ್ಯ; ಚೀನಾದೊಳಗೆ ನಡೆಯುವ ಕತೆಯಿದು..!
ಅಲ್ಲದೆ, ‘ಟಿಕ್‌ಟಾಕ್ ಬಳಕೆ ಬಗ್ಗೆ ಅಮೆರಿಕನ್ನರು ಹುಷಾರಾಗಿರಬೇಕು. ಜನರ ಖಾಸಗಿ ಮಾಹಿತಿ ಚೀನಾ ಕಮ್ಯುನಿಸ್ಟ್ ಪಕ್ಷದ ಪಾಲಾಗಬಾರದು ಎಂಬುದು ಗಮನದಲ್ಲಿರಬೇಕು’ ಎಂದು ಪಾಂಪೆಯೋ ಸಲಹೆ ಮಾಡಿದರು.