Feb 7, 2023, 12:01 PM IST
ಮಹಾ ಭೂಕಂಪಕ್ಕೆ ಟರ್ಕಿ ಹಾಗೂ ಸಿರಿಯಾ ದೇಶಗಳು ತತ್ತರಿಸಿ ಹೋಗಿದ್ದು, 4000ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ತ್ರಿವಳಿ ಭೂಕಂಪಕ್ಕೆ ಮಧ್ಯಪ್ರಾಚ್ಯ ರಾಷ್ಟ್ರಗಳು ನಲುಗಿ ಹೋಗಿದ್ದು, ಸಾವಿರಾರು ಕಟ್ಟಡಗಳು ನೆಲಸಮ ಆಗಿವೆ. ಹಾಗೂ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಟರ್ಕಿ ಸಿರಿಯಾ ಸೇರಿ 8 ದೇಶಗಳಲ್ಲಿ ಭೂಕಂಪದ ದುಷ್ಪರಿಣಾಮ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯ ಭೂಕಂಪನ ದಾಖಲಾಗಿದೆ. ಟರ್ಕಿಯಲ್ಲಿ ಹೊತ್ತಿ ಉರಿದ ಪರಮಾಣು ಘಟಕ ಹೊತ್ತಿ ಉರಿದಿದೆ. ರಸ್ತೆಯಲ್ಲಿಯೇ ಜನರು ವಾಸ ಮಾಡಿದ್ದು, ಚಳಿಗೆ ಸಂತ್ರಸ್ತರು ತತ್ತರಿಸಿದ್ದಾರೆ.