ಅಫ್ಘಾನಿಸ್ತಾನದಲ್ಲಿ ಹಸಿವು, ನಿರುದ್ಯೋಗ ತಾಂಡವವಾಡುತ್ತಿದೆ. ಕೈಯಲ್ಲಿ ಹಣವಿಲ್ಲದೇ, ಬಡತನ ಜನರನ್ನು ಕಿತ್ತು ತಿನ್ನುತ್ತಿದೆ. ಇನ್ನು ತಾಲಿಬಾನ್ ಸರ್ಕಾರದಲ್ಲೂ ದುಡ್ಡಿಲ್ಲ. ಆರ್ಥಿಕವಾಗಿ ದಿವಾಳಿಯಾಗಿದ್ದಾರೆ.
ಕಾಬೂಲ್ (ಅ. 12): ಅಫ್ಘಾನಿಸ್ತಾನದಲ್ಲಿ ಹಸಿವು, ನಿರುದ್ಯೋಗ ತಾಂಡವವಾಡುತ್ತಿದೆ. ಕೈಯಲ್ಲಿ ಹಣವಿಲ್ಲದೇ, ಬಡತನ ಜನರನ್ನು ಕಿತ್ತು ತಿನ್ನುತ್ತಿದೆ. ಇನ್ನು ತಾಲಿಬಾನ್ ಸರ್ಕಾರದಲ್ಲೂ ದುಡ್ಡಿಲ್ಲ. ಆರ್ಥಿಕವಾಗಿ ದಿವಾಳಿಯಾಗಿದ್ದಾರೆ.
ತಾಲಿಬಾನ್ ಆಡಳಿತ ಶುರುವಾದಾಗಿನಿಂದ ಅನೇಕ ರಾಷ್ಟ್ರಗಳು ಸಹಾಯ ಮಾಡುವುದನ್ನು ನಿಲ್ಲಿಸಿದ್ದವು. ಇದರ ಎಫೆಕ್ಟ್ ತಾಲಿಬಾನ್‌ಗಿಂತ ಹೆಚ್ಚಾಗಿ ಅಲ್ಲಿನ ನಾಗರೀಕರ ಮೇಲಾಗಿತ್ತು. ಇದೀಗ ಮಾನವೀಯತೆ ಆಧಾರದ ಮೇಲೆ ಬೇರೆ ಬೇರೆ ದೇಶಗಳು ನಾಗರೀಕರ ಸಹಾಯಕ್ಕೆ ಬಂದಿವೆ.