
ಆ ಕತೆ ಶುರುವಾಗೋದು, 425 ವರ್ಷಗಳ ಹಿಂದೆ.. ಪೋರ್ಚುಗೀಸರು, ಡಚ್ಚರು ಭಾರತಕ್ಕೆ ಬಂದು ಸುಖವಾಗಿ ಸೆಟ್ಲ್ ಆದ ಮೇಲೆ, ಕ್ರಿಸ್ತಶಕ 1600ನೇ ಇಸ್ವಿಯ ಹೊತ್ತಿಗೆ, ಬಂದವರು ಈ ಬ್ರಿಟಿಷರು.
ಆ ಕತೆ ಶುರುವಾಗೋದು, 425 ವರ್ಷಗಳ ಹಿಂದೆ.. ಪೋರ್ಚುಗೀಸರು, ಡಚ್ಚರು ಭಾರತಕ್ಕೆ ಬಂದು ಸುಖವಾಗಿ ಸೆಟ್ಲ್ ಆದ ಮೇಲೆ, ಕ್ರಿಸ್ತಶಕ 1600ನೇ ಇಸ್ವಿಯ ಹೊತ್ತಿಗೆ, ಬಂದವರು ಈ ಬ್ರಿಟಿಷರು. ಅವರು ಬಂದ್ಮೇಲೆ, ಈಸ್ಟ್ ಇಂಡಿಯಾ ಕಂಪನಿ ಭಾರತದಲ್ಲಿ ವ್ಯಾಪಾರ ಮಾಡೋಕೆ ಶುರುಮಾಡ್ತು.. ಆದ್ರೆ, ಅವರ ಉದ್ದೇಶ ಬರೀ ವ್ಯಾಪಾರವಾಗಿ ಉಳಿದಿರ್ಲಿಲ್ಲ.. ಜಗತ್ತಿನ ಪಾಲಿನ ಬಂಗಾರದ ಹಕ್ಕಿಯಂತೆ ಕಣ್ಣುಕೂರೈಸ್ತಿದ್ದ ಭಾರತದ ಸಂಪತ್ತಿನ ಮೇಲೆ, ಈ ಬ್ರಿಟೀಷರ ವಕ್ರದೃಷ್ಟಿ ಬಿತ್ತು.. ಅಲ್ಲಿಂದ ಮುಂದಾಗಿದ್ದೆಲ್ಲಾ ಊಹಾತೀತ ಅನಾಹುತ. ಅಷ್ಟಕ್ಕೂ ಬ್ರಿಟೀಷರು ಭಾರತದ ಸಂಪತ್ತನ್ನೆಲ್ಲಾ ಲೂಟಿ ಮಾಡಿದ್ರು ಅಂತ, ನಮಗೆ ಅದ್ಯಾವುದೋ ವರದಿ ಹೇಳ್ಬೇಕಾ? ಕಣ್ಣೆದುರಲ್ಲೇ ಇರೋ ಸಾಕ್ಷಿಗೆ ರಿಪೋರ್ಟ್ ಯಾಕೆ ಬೇಕು? ಅಷ್ಟಕ್ಕೂ ಭಾರತದ ಸಂಪತ್ತು ಬ್ರಿಟನ್ ಸೇರಿದ್ದು ಹೇಗೆ?
ಅದರ ಬಗ್ಗೆ ಮತ್ತಷ್ಟು ಮಾಹಿತಿ ಕೊಡ್ತೀವಿ. ಒಂದು ಕಾಲದಲ್ಲಿ ಬ್ರಿಟನ್, ವಸಾಹತುಶಾಹಿ ಅನ್ನೋ ವಿಷವೃಕ್ಷದಿಂದ ರುಚಿಕಟ್ಟಾದ ಹಣ್ಣು ತಿಂತು.. ಅದರ ಫಲವಾಗಿ, ಆ ದೇಶ ಶ್ರೀಮಂತವಾಯ್ತು.. ಈ ಮಾತನ್ನ ಹೇಳ್ತಾ ಇರೋದು, ಆಕ್ಸ್ಫ್ಯಾಮ್ ವರದಿ.. ಅದೇ ವರದಿಲಿರೋ ಮಹತ್ತರ ಸಂಗತಿಗಳನ್ನ, ಅದರಾಚೆಗೂ ಇರೋ ಸಂಗತಿಗಳನ್ನ ನಾವ್ ತೋರಿಸ್ತೀವಿ ನೋಡಿ. ಈ ಪ್ರಶ್ನೆ ಏನಾದ್ರೂ ನಿಮ್ಮನ್ನ ಕಾಡ್ತಾ ಇದ್ರೆ, ಅದಕ್ಕೂ ಉತ್ತರ ಕೊಡೊ ಪ್ರಯತ್ನ ಮಾಡ್ತೀವಿ. ಬ್ರಿಟೀಷರು ಬರೀ ಭಾರತವನ್ನಷ್ಟೇ ಲೂಟಿ ಮಾಡಿಲ್ಲ.. ಎಲ್ಲೆಲ್ಲಿ ಅವರ ಕಂಪನಿ ಕಾಲಿಡ್ತೋ, ಅಲ್ಲಾಗಿದ್ದೆಲ್ಲಾ ಅನಾಹುತವೇ.. ಅನಾಚಾರವೇ.. ಆದ್ರೆ, ಈ ವರದಿ ಅದನ್ನೆಲ್ಲಾ ಈಗ ಜಗಜ್ಜಾಹೀರು ಮಾಡೋಕೆ ತಯಾರಾದ ಹಾಗಿದೆ.