ಉಕ್ರೇನ್‌ಗೆ ಬೆಂಬಲಿಸಿ ಎನ್ನುವ ಅಮೆರಿಕಾ ಕರೆಗೆ ಮಿತ್ರ ರಾಷ್ಟ್ರಗಳೇ ಸ್ವಂದಿಸುತ್ತಿಲ್ಲ. ಸೌದಿ ಅರೇಬಿಯಾ, UAE ನಾಯಕರು, ಬೈಡೆನ್ ಜೊತೆ ಇನ್ನೂ ಮಾತುಕತೆ ನಡೆಸಲು ಸಿದ್ಧ ಇಲ್ಲ.
ಉಕ್ರೇನ್‌ಗೆ ಬೆಂಬಲಿಸಿ ಎನ್ನುವ ಅಮೆರಿಕಾ ಕರೆಗೆ ಮಿತ್ರ ರಾಷ್ಟ್ರಗಳೇ ಸ್ವಂದಿಸುತ್ತಿಲ್ಲ. ಸೌದಿ ಅರೇಬಿಯಾ, UAE ನಾಯಕರು, ಬೈಡೆನ್ ಜೊತೆ ಇನ್ನೂ ಮಾತುಕತೆ ನಡೆಸಲು ಸಿದ್ಧ ಇಲ್ಲ.
ಇನ್ನೊಂದೆಡೆ ರಷ್ಯಾಕ್ಕೆ ತೈಲ ಶಾಕ್ ನೀಡಲು ನಿರ್ಧರಿಸಿರುವ ಅಮೆರಿಕ, ರಷ್ಯಾದಿಂದ ಎಲ್ಲಾ ರೀತಿಯ ತೈಲೋತ್ಪನ್ನಗಳನ್ನು ನಿಷೇಧಿಸುವ ನಿರ್ಧಾರಕ್ಕೆ ಬಂದಿದೆ. ಈ ಕುರಿತು ಅಧ್ಯಕ್ಷ ಜೋ ಬೈಡೆನ್ ಅವರು ಶೀಘ್ರದಲ್ಲಿಯೇ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಯುರೋಪಿಯನ್ ಒಕ್ಕೂಟಗಳು ಕೂಡಾ ಇದೇ ಹಾದಿ ಹಿಡಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ರಷ್ಯಾ ಆದಾಯದ ಪ್ರಮಖ ಮೂಲವಾಗಿರುವ ಕಚ್ಚಾ ತೈಲದ ಆಮದನ್ನು ನಿರ್ಬಂಧಿಸಬೇಕು ಎಂಬ ಉಕ್ರೇನ್ ಅಧ್ಯಕ್ಷ ಜೆಲೆಸ್ಕಿ ಅವರ ಮನವಿಯ ನಂತರ ಈ ಬೆಳವಣಿಗೆ ನಡೆದಿದೆ.