ಜಿಂಕೆ ಕೊಂಬಿನ ರಕ್ತದ ಶಕ್ತಿ! ಪುಟಿನ್ ಸುತ್ತ ಹುಟ್ಟಿಕೊಂಡಿರುವ ಕಥೆ

Apr 4, 2022, 2:18 PM IST

ಕ್ಲಿಯೋಪಾತ್ರ ಅನ್ನೋ ಈಜಿಪ್ಟ್ ಸುಂದರಿಯ ಕಥೆ ಕೇಳದವರಾದರೂ ಯಾರು? ಅವಳ ಸೌಂದರ್ಯದ ಬಗ್ಗೆ ಸಾವಿರಾರು ದಂತಕಥೆಗಳಿವೆ. ತನ್ನ ಸೌಂದರ್ಯಕ್ಕಾಗಿ ಕ್ಲಿಯೋಪಾತ್ರ ಮಾಡುತ್ತಿದ್ದಳೆನ್ನಲಾದ ಎಷ್ಟೋ ದಂತ ಕಥೆಗಳಲ್ಲಿ ಒಂದು.. ಯೌವ್ವನದಲ್ಲಿರೋ ಚೆಲುವೆಯರ ರಕ್ತದಲ್ಲಿ ಸ್ನಾನ ಮಾಡೋದು. ನಿಜವೋ.. ಸುಳ್ಳೋ.. ಕಂಡವರಿಲ್ಲ. ಅಂಥದ್ದೇ ಒಂದು ಕಥೆ ಈಗ ಪುಟಿನ್ ಸುತ್ತ ಹುಟ್ಟಿಕೊಂಡಿದೆ.  

ಕ್ಲಿಯೋಪಾತ್ರ ಸುಂದರಿ ಹೌದೋ.. ಅಲ್ಲವೋ.. ಎಂಬ ಬಗ್ಗೆಯೇ ಇತಿಹಾಸಕಾರರಲ್ಲಿ ಭಿನ್ನಾಭಿಪ್ರಾಯಗಳಿವೆ. ಆದರೆ, ಪುಟಿನ್ ವಿಷಯ ಹಾಗಲ್ಲ. ಸುಂದರ ಅನ್ನೋದ್ರಲ್ಲಿ ಎರಡು ಮಾತಿಲ್ಲ.  ಆದ್ರೆ ಗೊತ್ತಿರ್ಲಿ, ಪುಟಿನ್ ಯುವಕ ಅಲ್ಲ. 69 ವಯಸ್ಸಿನ ಅಜ್ಜ. ಆ ಅಜ್ಜನ ಯೌವ್ವನದ ಮಿಸ್ಟರಿ ಸ್ಟೊರಿಯೇ ಇದು.

ವರ್ಷಕ್ಕೊಂದ್ಸಲ ಕೊಂಬು ಉದುರಿಸಿಕೊಳ್ಳೋ. ಜಿಂಕೆಗಳದ್ದೂ ಒಂಥರಾ ಹಾವಿನ ಜೀವನ. ಹಾವೂ ಕೂಡಾ ಪೊರೆ ಕಳಚಿಕೊಳ್ಳುತ್ತೆ. ಹಾವಿನ ಪೊರೆಯ ಬಗ್ಗೆ ಇರೋ ನಂಬಿಕೆಗಳಂತೆಯೇ ಜಿಂಕೆ ಕೊಂಬಿನ ನಂಬಿಕೆ ಕಥೆಗಳಿವೆ.  ಈ ಜಿಂಕೆ ಕೊಂಬಿನ ರಕ್ತ ಸ್ನಾನ, ಇಂಜಕ್ಷನ್, ಜ್ಯೂಸ್ ಚಿಕಿತ್ಸೆಗೆ 20 ಶತಮಾನಗಳ ಇತಿಹಾಸವಿದೆ ಅನ್ನೋವ್ರೂ ಇದ್ದಾರೆ.  ಆದರೆ, 2ನೇ ಮಹಾಯುದ್ಧದ ನಂತರ ಈ ಚಿಕಿತ್ಸೆ ಯೂರೋಪ್ನ ಕೆಲವು ದೇಶಗಳಲ್ಲಿ ಜನಪ್ರಿಯವಾಗಿದ್ದಂತೂ ಸತ್ಯ.

ಯಾರ್ ಏನೇ ಹೇಳ್ಲೀ.. ಜಗತ್ತಿನ ಪುರುಷ ಸಮಾಜ ರೋಮಾಂಚನವಾಗ್ತಿರೋದು.. ರೊಮ್ಯಾಂಟಿಕ್ ಆಗಿ ಥ್ರಿಲ್ ಆಗ್ತಿರೋದು ಮಾತ್ರ.. ಆ ಕೊಂಬಿನ ರಕ್ತದ ಆ ಒಂದು ಶಕ್ತಿಗೆ. ಈ ಜಗತ್ತನ ರೂಲ್ ಮಾಡೋದು ಹಣ ಮತ್ತು ಅಧಿಕಾರ ಅಷ್ಟೇ ಅಲ್ಲ. ಅದು ಕಾಮ. ಈ ಜಿಂಕೆ ಕೊಂಬಿನ ರಕ್ತಕ್ಕೂ, ಕಾಮಕ್ಕೂ ಇರೋ ಸೀಕ್ರೆಟ್ ರಿಲೇಷನ್ ಶಿಪ್ಪೇ ಈ ಸುದ್ದಿಗೆ ಚಿನ್ನದ ಬೆಲೆ ಬರೋಕೆ ಕಾರಣ. ಅಷ್ಟೆಲ್ಲ ಆಗಿ ಪುಟಿನ್ ಅಜ್ಜನ ಫಿಸಿಕ್ ನೋಡಿದವ್ರಿಗೆ ಇದ್ದರು ಇರಬಹುದು ಅನ್ನಿಸಿದ್ರೆ.. ಆಶ್ಚರ್ಯ ಪಡೋಂಥದ್ದಾದರೂ ಏನಿದೆ.. ಅಲ್ವಾ.. ಆ ರೋಮಾಂಚನವೇ ಅಲ್ವಾ.. ಈ ಜಗತ್ತನ್ನ  ಮುಂದೆ ಮುಂದೆ ತಗೊಂಡ್ ಹೋಗ್ತಾ ಇರೋದು.