ಉಕ್ರೇನ್ ಸುಮಿ ನಗದಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ನಿರಂತರ ನೆರವು ನೀಡುತ್ತಾ ಸೇವೆ ಮಾಡುತ್ತಿರುವ ಸೇವಾ ಯುಗಂ ಸ್ವಯಂ ಸೇವಕ ಸಂಘಟನೆ ತಮ್ಮ ಅನುಭವವನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. ಲಂಡನ್, ಉಕ್ರೇನ್, ಪೊಲೆಂಡ್ ಸೇರಿ ವಿವಿಧ ಭಾಗಗಳಿಂದ ಆಗಮಿಸಿರುವ ಸ್ವಯಂ ಸೇವಕರು ಭಾರತೀಯರ ನೆರವಿಗೆ ನಿಂತಿದ್ದಾರೆ. ಯುದ್ಧನಾಡಿನಿಂದ ಬರುತ್ತಿರುವ ವಿದ್ಯಾರ್ಥಿಗಳಿಗೆ ಆಶ್ರಯ ಸೇರಿದಂತೆ ಎಲ್ಲಾ ವಿಚಾರಗಳನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿರುವ ಸೇವಾ ಯುಗಂ ಸಂಘಟನೆ ಸದಸ್ಯರ ಮಾತುಗಳು ಇಲ್ಲಿವೆ.