Russia Ukraine Crisis: ಸಂಧಾನ ಸಭೆ ಅಪೂರ್ಣ: ಎರಡು ದೇಶಗಳ ನಡುವೆ 6ನೇ ದಿನವೂ ಘೋರಯುದ್ಧ

Russia Ukraine Crisis: ಸಂಧಾನ ಸಭೆ ಅಪೂರ್ಣ: ಎರಡು ದೇಶಗಳ ನಡುವೆ 6ನೇ ದಿನವೂ ಘೋರಯುದ್ಧ

Published : Mar 01, 2022, 11:05 AM ISTUpdated : Mar 01, 2022, 11:45 AM IST

5 ದಿನಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್‌ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಸೋಮವಾರ ನೆರೆಯ ಬೆಲಾರಸ್‌ನಲ್ಲಿ (Belarus) ಸಂಧಾನ ಮಾತುಕತೆ ನಡೆಸಿವೆ

ಕೀವ್‌  (ಮಾ 01): 5 ದಿನಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್‌ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಸೋಮವಾರ ನೆರೆಯ ಬೆಲಾರಸ್‌ನಲ್ಲಿ (Belarus) ಸಂಧಾನ ಮಾತುಕತೆ ನಡೆಸಿವೆ. ಸುಮಾರು ಮೂರೂವರೆ ಗಂಟೆಗಳ ಕಾಲ ಮಾತುಕತೆ ನಡೆದಿದೆಯಾದರೂ, ಎರಡೂ ನಿಯೋಗಗಳು ಪರಸ್ಪರ ಕೆಲವು ಷರತ್ತು ವಿಧಿಸಿಕೊಂಡ ಕಾರಣ ಚರ್ಚೆ ಅಪೂರ್ಣವಾಗಿದೆ. ಹೀಗಾಗಿ ರಷ್ಯಾ-ಉಕ್ರೇನ್‌ ನಡುವೆ 6ನೇ ದಿನವೂ ಘೋರ ಯುದ್ಧ ಮುಂದುವರೆದಿದೆ.

ಇದನ್ನೂ ಓದಿ: Russia Ukraine Crisis: ವಿಶ್ವಸಂಸ್ಥೆಯಲ್ಲೂ ಸಮರ: ಅಣ್ವಸ್ತ್ರ ಸನ್ನದ್ಧತೆ ಆತಂಕಕಾರಿ ಬೆಳವಣಿಗೆ ಎಂದ ಯುಎನ್!‌

ಇನ್ನು ಭಾನುವಾರ ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ‘ನ್ಯಾಟೋ ದೇಶಗಳ ಆಕ್ರಮಣಕಾರಿ ಹೇಳಿಕೆಗಳು ಮತ್ತು ನಮ್ಮ ಮೇಲೆ ಹೇರಲಾದ ಆರ್ಥಿಕ ದಿಗ್ಭಂದನಗಳು ನಾವು ಅಣ್ವಸ್ತ್ರಗಳನ್ನು ಸನ್ನದ್ಧ ಮಾಡಿಡಬೇಕಾದ ಸ್ಥಿತಿಗೆ ತಂದಿದೆ. ಹೀಗಾಗಿ ತಕ್ಷಣವೇ ನಮ್ಮ ಅಣ್ವಸ್ತ್ರ ಪಡೆಗಳನ್ನು ಸನ್ನದ್ಧ ಸ್ಥಿತಿಗೆ ತನ್ನಿ ಎಂದು ಸೂಚಿಸಿದ್ದರು. 

ಅದರ ಬೆನ್ನಲ್ಲೇ ರಷ್ಯಾದ ಸೇನೆ, ವಾಯುಪಡೆ ಮತ್ತು ನೌಕಾಪಡೆಗಳು ತಮ್ಮ ಬಳಿ ಇರುವ ಅಣ್ವಸ್ತ್ರಗಳನ್ನು ಯಾವುದೇ ಕ್ಷಣದಲ್ಲಿ ತಮ್ಮ ದೇಶದ ಮೇಲೆ ನಡೆಯುವ ದಾಳಿಯನ್ನು ತಡೆಯುವ ಅಥವಾ ಅಗತ್ಯ ಬಿದ್ದರೆ ದಾಳಿ ನಡೆಸುವ ಸ್ಥಿತಿಗೆ ಸನ್ನದ್ಧಗೊಳಿಸಿವೆ ಎಂದು ಮೂಲಗಳು ತಿಳಿಸಿವೆ.

98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?
Read more