Mar 2, 2022, 2:18 PM IST
ಕೀವ್(ಮಾ.02): ಉಕ್ರೇನ್ ಮೇಲಿನ ರಷ್ಯಾ ದಾಳಿ ಏಳನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್‌ನ ದೊಡ್ಡ ದೊಡ್ಡ ನಗರಗಳ ಮೇಲೆ ಕಣ್ಣಿಟ್ಟಿರುವ ರಷ್ಯಾ ಕೀವ್ ಜಹಾಗೂ ಖಾರ್ಕೀವ್ ಬಳಿಕ ಈಗ ಕೇರ್ಸನ್ ನಗರದ ಮೇಲೆ ದಾಳಿಗೆ ಮುಂದಾಗಿದೆ.
ಅತ್ತ ಕೆನಡಾ ರಷ್ಯಾದ ಹಡಗುಗಳಿಗೆ ಬಾಗಿಲು ಮುಚ್ಚಿದ್ದು, ಪುಟಿನ್ ದೇಶಕ್ಕೆ ಹಲವಾರು ದೇಶಗಳು ಅನೇಕ ಬಗೆಯ ನಿರ್ಬಂಧ ಹೇರಿವೆ. ರಷ್ಯಾದ ಈ ದಾಳಿ ಇಡೀ ವಿಶ್ವಕ್ಕೇ ಒಂದು ಬಗೆಯ ಆತಂಕ ಹುಟ್ಟು ಹಾಕಿದೆ. ಇಷ್ಟಿದ್ದರೂ ಉಕ್ರೇನ್ ಮಾತ್ರ ರಷ್ಯಾಗೆ ಶರಣಾಗಲು ಹಿಂದೇಟು ಹಾಕಿದೆ. ಕೊನೆಯ ಉಸಿರಿರೋವರೆಗೂ ತಾನು ಹೋರಾಡುವ ಛಲ ತೋರಿದೆ.