Jul 20, 2020, 12:37 PM IST
ಮಾಸ್ಕೋ(ಜು.20): ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಚೀನಾದ ಹೆಮ್ಮಾರಿ ಕೊರೋನಾಗೆ ಮದ್ದು ಅರೆಯುವಲ್ಲಿ ರಷ್ಯಾ ಬಹುತೇಕ ಯಶಸ್ವಿಯಾಗಿದೆ. 7 ತಿಂಗಳಿನಿಂದ ಕೊರೋನಾಗೆ ಔಷಧಿ ಕಂಡು ಹಿಡಿಯಲು ನಿರಂತರ ಸಂಶೋಧನೆ ನಡೆಸುತ್ತಿದ್ದ ರಷ್ಯಾ ಇದೀಗ ಮೂರನೇ ಹಂತದ ಟ್ರಯಲ್ ನಡೆಸಲು ಮುಂದಾಗಿದೆ.
ಮುಂದಿನ ತಿಂಗಳೇ ಔಷಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ರಷ್ಯಾ ತಯಾರಿ ನಡೆಸುತ್ತಿದೆ. ಕೊನೆ ಹಂತದ ಕ್ಲಿನಿಕಲ್ ಪ್ರಯೋಗದ ರಿಸಲ್ಟ್‌ಗೂ ಮುನ್ನವೇ ಜನರ ಬಳಕೆಗೆ ಔಷಧಿ ಲಭ್ಯವಾಗುವ ಸಾಧ್ಯತೆಯಿದೆ.
ಸೋಂಕಿತ ತಂದೆಯನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾಳೆ ಮಗಳು..!
ಆಗಸ್ಟ್ 03ರಂದು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಪ್ರಾರಂಭವಾಗಲಿದೆ. ಸಾವಿರಾರು ಜನರ ಮೇಲೆ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಯಲಿದೆ. ರಷ್ಯಾದಲ್ಲೇ 30 ಮಿಲಿಯನ್ ಡೋಸ್ ಲಸಿಕೆ ತಯಾರಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.