ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಗದಾಪ್ರಹಾರಕ್ಕೆ ಟ್ರಂಪ್‌ ಸಜ್ಜು

Jun 14, 2020, 3:27 PM IST

ನವದೆಹಲಿ (ಜೂ. 14): ಕೊರೋನಾ ವೈರಸ್‌ ಹಾವಳಿಯಿಂದಾಗಿ ಅಮೆರಿಕದಲ್ಲಿ ನಿರುದ್ಯೋಗ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ವಿವಿಧ ದೇಶದ ಉದ್ಯೋಗಿಗಳ ಮೇಲೆ ಗದಾಪ್ರಹಾರ ಮಾಡಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದಾಗಿದ್ದಾರೆ. ಭಾರತೀಯ ಐಟಿ ಉದ್ಯೋಗಿಗಳ ಬಹುಬೇಡಿಕೆಯ ಎಚ್‌-1ಬಿ ಸೇರಿದಂತೆ ವಿವಿಧ ಔದ್ಯೋಗಿಕ ವೀಸಾಗಳನ್ನು ಅಮಾನತಿನಲ್ಲಿಡುವ ಪ್ರಸ್ತಾವವನ್ನು ಟ್ರಂಪ್‌ ಪರಿಶೀಲಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಅಮೆರಿಕ ಅಧ್ಯಕ್ಷ ಚುನಾವಣೆ: 73ರ ಟ್ರಂಪ್‌ ವರ್ಸಸ್‌ 77ರ ಬೈಡೆನ್‌!

ಈ ಕ್ರಮ ಈಗ ಜಾರಿಗೆ ಬಂದರೆ ಪ್ರಸಕ್ತ ಹಣಕಾಸು ವರ್ಷದ ಜೊತೆಗೆ, ಅ.1ರಿಂದ ಅಮೆರಿಕದಲ್ಲಿ ಆರಂಭವಾಗಲಿರುವ ಹೊಸ ಹಣಕಾಸು ವರ್ಷಕ್ಕೂ ಅದನ್ನು ವಿಸ್ತರಿಸುವ ಸಾಧ್ಯತೆ ಇದೆ. ಇದರಿಂದಾಗಿ, ಈಗಾಗಲೇ ಎಚ್‌-1ಬಿ ವೀಸಾ ಹೊಂದಿರುವ ನೌಕರರು ತಮ್ಮ ತವರಿಗೆ ತೆರಳಿದ್ದರೆ ವೀಸಾ ಅಮಾನತನ್ನು ಹಿಂಪಡೆಯುವವರೆಗೂ ಅಮೆರಿಕಕ್ಕೆ ಮರಳಲು ಆಗದು. ಈ ವೀಸಾದ ಮೇಲೆ ಹಾಲಿ ಅಮೆರಿಕದಲ್ಲಿರುವ ನೌಕರರಿಗೆ ಯಾವುದೇ ಸಮಸ್ಯೆಯಾಗದು ಎಂದು ವರದಿ ವಿವರಿಸಿದೆ.