Kali Mandir in Dhaka: ಬಾಂಗ್ಲಾದಲ್ಲಿ ಭಾರತ ಕಟ್ಟಿದ ರಮಣಕಾಳಿ ಮಂದಿರ ಉದ್ಘಾಟನೆ

Dec 18, 2021, 1:20 PM IST

ಬೆಂಗಳೂರು (ಡಿ. 18): 1971ರಲ್ಲಿ ಪಾಕಿಸ್ತಾನಿ (Pakistan) ಪಡೆಗಳು ಧ್ವಂಸಗೊಳಿಸಿದ ಕಾಳಿಮಾತಾ (Kaali Mandir) ದೇವಾಲಯವನ್ನು 50 ವರ್ಷಗಳ ನಂತರ ಭಾರತದ ಸಹಾಯದೊಂದಿಗೆ ನವೀಕರಿಸಕಲಾಗಿದೆ. ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ (Ramnath Kovind)  ದೇವಾಲಯವನ್ನು ಉದ್ಘಾಟಿಸಿದರು.

Land Encroached: ಸಚಿವ ಬೈರತಿ 22 ಎಕರೆ ಜಮೀನು ಕಬಳಿಕೆ ಮಾಡಿದ್ದು ಸತ್ಯನಾ? ಗ್ರೌಂಡ್ ರಿಪೋರ್ಟ್

 1971ರಲ್ಲಿ ನಡೆದ ಯುದ್ದದಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿ ಅದರ ಹಿಡಿತದಿಂದ ಬಾಂಗ್ಲಾದೇಶವನ್ನು ಮುಕ್ತಗೊಳಿಸಿ ಬಾಂಗ್ಲಾದೇಶ ಉದಯಕ್ಕೆ ಕಾರಣವಾಯಿತು. ಈ ದಿನವನ್ನು 'ವಿಜಯ ದಿವಸ್' (Vijay Diwas) ಎಂದು ಆಚರಿಸಲಾಗುತ್ತದೆ. ಈ ಯುದ್ಧದಲ್ಲಿ ಕಾಳಿ ಮಂದಿರ ನೆಲಸಮಗೊಳ್ಳುತ್ತದೆ. ಈ ದೇವಾಲಯಕ್ಕೆ . ಬರೋಬ್ಬರಿ 600 ವರ್ಷಗಳ ಇತಿಹಾಸವಿದೆ . ಯುದ್ಧದ ಸಂದರ್ಭದಲ್ಲಿ ಈ ದೇವಾಲಯಕ್ಕೆ ನುಗ್ಗಿದ ಪಾಕಿಸ್ತಾನಿ ಸೈನಿಕರು ಆಪರೇಷನ್ ಸರ್ಚ್ ಲೈಟ್ ಹೆಸರಲ್ಲಿ ದೇವಾಲಯವನ್ನು ಧ್ವಂಸ ಮಾಡಿಬಿಟ್ಟರು. ದೇವಾಲಯದೊಳಗಿದ್ದ 250 ಹಿಂದೂಗಳನ್ನು ಅಮಾನುಷವಾಗಿ ಹತ್ಯೆ ಮಾಡಲಾಯಿತು.