Modi In US: ಅಮೆರಿಕ ಉಪಾಧ್ಯಕ್ಷೆ ಕಮಲಾ ಭೇಟಿಯಾದ ಪ್ರಧಾನಿ ಮೋದಿ!

Sep 24, 2021, 9:08 AM IST

ವಾಷಿಂಗ್ಟನ್(ಸೆ.24) ಕೋವಿಡ್ 19(Covid 19) ಅವಾಂತರದ ಬಳಿಕ, ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ(narendra Modi), ಉಪಾಧ್ಯಕ್ಷೆ ಕಮಲಾ ಹ್ಯಾರಿಸ್(kamala Harris) ಅವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಭಯೋತ್ಪಾದನೆ(Terrorism) ಮತ್ತು ಕೊರೋನಾ ಬಿಕ್ಕಟ್ಟಿನಂತಹ ಪ್ರಮುಖ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು.

ಹ್ಯಾರಿಸ್ ಅವರನ್ನು ಭೇಟಿ ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು ಇಡೀ ಜಗತ್ತಿಗೆ ಸ್ಫೂರ್ತಿ. ಭಾರತ ಮತ್ತು ಅಮೆರಿಕ ನಡುವಿನ ಸ್ನೇಹವನ್ನು ಮತ್ತಷ್ಟು ಬಲಪಡಿಸುವ ಹಲವು ವಿಷಯಗಳನ್ನು ನಾವು ಚರ್ಚಿಸಿದ್ದೇವೆ. ಈ ವಿಷಯಗಳು ಮೌಲ್ಯಗಳು ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಆಧರಿಸಿವೆ ಎಂದಿದ್ದಾರೆ.

ಮೋದಿ ಜೊತೆಗಿನ ಸಭೆಯಲ್ಲಿ ಕಮಲಾ ಹ್ಯಾರಿಸ್ ಲಸಿಕೆ ರಫ್ತು ಮಾಡಿದ ವಿಚಾರವಾಗಿ ಭಾರತವನ್ನು ಶ್ಲಾಘಿಸಿದ್ದಾರೆ. ಭಾರತದಲ್ಲಿ ಪ್ರತಿದಿನ ಒಂದು ಕೋಟಿಗೂ ಹೆಚ್ಚು ಲಸಿಕೆಗಳನ್ನು ನೀಡಲಾಗುತ್ತಿದೆ ಎಂದು ಹ್ಯಾರಿಸ್ ಹೇಳಿದ್ದಾರೆ. ಭಾರತ ಮತ್ತು ಪೆಸಿಫಿಕ್ ಸಾಗರಗಳಲ್ಲಿ ಮುಕ್ತ ವ್ಯಾಪಾರ ಮತ್ತು ಮುಕ್ತ ಮಾರ್ಗಗಳ ಪ್ರಚಾರದ ಬಗ್ಗೆಯೂ ಮೋದಿ ಮತ್ತು ಹ್ಯಾರಿಸ್ ಭೇಟಿಯಲ್ಲಿ ಚರ್ಚಿಸಲಾಯಿತು. ಇದರ ಹೊರತಾಗಿ, ಇಬ್ಬರೂ ನಾಯಕರು ಹವಾಮಾನ ಬದಲಾವಣೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡಿದರು.