ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಮಿತಿ ಮೀರಿದ್ದು, IMF ಕಠಿಣ ಷರತ್ತಿಗೆ ಪಾಕಿಸ್ತಾನ ಕಂಗಾಲಾಗಿದೆ. ಷರತ್ತು ಒಪ್ಪಿದರೆ ರಾಜಕೀಯ ಬಿಕ್ಕಟ್ಟು, ಒಪ್ಪದಿದ್ದರೆ ಇಡೀ ಪಾಕಿಸ್ತಾನ ದಿವಾಳಿ.
ಇಡೀ ಪಾಕಿಸ್ತಾನ ಅಕ್ಷರಶಃ ದಿವಾಳಿ ಅಂಚಿಗೆ ತಲುಪಿ ಬಿಟ್ಟಿದ್ದು, ಹೊಟ್ಟೆಗೆ ಹಿಟ್ಟಿಲ್ಲದೆ ಅಲ್ಲಿನ ಜನ ಪರದಾಡ್ತಿದ್ದಾರೆ. ಮಿತಿಮೀರಿದ ಆರ್ಥಿಕ ಬಿಕ್ಕಟ್ಟಿನ ಹೊಡೆತಕ್ಕೆ ಪಾಕ್ ಕಂಗಾಲಾಗಿದೆ. ಇದೀಗ ಮತ್ತೊಂದೆಡೆ ದೊಡ್ಡ ಸಂಕಷ್ಟ ಎದುರಾಗಿದೆ. ಐಎಂಎಫ್ ಇದೀಗ ಪಾಕ್'ಗೆ ಸಾಲ ಕೊಡಲು ಮುಂದಾಗಿದ್ದು, ಆದ್ರೆ ಅದೇ ಈಗ ದೊಡ್ಡ ತಲೆನೋವು ತಂದೊಡ್ಡಿದೆ. ಸಾಲ ನೀಡಲು ಮುಂದಾಗಿರುವ IMF ಹಾಕಿರುವ ಕಠಿಣ ಷರತ್ತಿಗೆ, ಪಾಕ್ ಕಂಗಾಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.